Shani Sade Sati 2024: 3 ರಾಶಿಯವರಿಗೆ ಸಾಡೇಸಾತಿ ಪ್ರಭಾವ: ಶನಿಯನ್ನು ಒಲಿಸಿಕೊಳ್ಳಲು 5 ಪರಿಹಾರಗಳು ಇಲ್ಲಿದೆ
ಶನಿಯ ಸಾಡೇಸಾತಿ ಹೆಸರು ಕೇಳಿದ ಮೇಲೆ ಹೆಚ್ಚಿನ ಜನರು ಚಿಂತಿತರಾಗುತ್ತಾರೆ. ಏಕೆಂದರೆ ಶನಿಯ ಸಾಡೇಸಾತಿಯು ಮೇಲುಗೈ ಸಾಧಿಸುವ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ಮಾತ್ರವಲ್ಲದೆ ತಮ್ಮ ಪ್ರೇಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದೆ. ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿಯು ಜನವರಿ 17, 2023 ರಿಂದ ತನ್ನದೇ ಆದ ಕುಂಭ ರಾಶಿಯಲ್ಲಿದೆ. ಶನಿ ದೇವನು 29 ಮಾರ್ಚ್ 2025 ರವರೆಗೆ ಇಲ್ಲಿಯೇ ಇರುತ್ತಾನೆ. ಪ್ರಸ್ತುತ ಮೂರು ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದೆ.

ಈ ಶನಿಯ ಸಾಡೇಸಾತಿ ಯ ಪರಿಣಾಮಗಳನ್ನು ತಪ್ಪಿಸಲು, ಶನಿದೇವನನ್ನು ಒಲಿಸಿಕೊಳ್ಳಲು ಕೆಲವು ವಿಷಯಗಳನ್ನು ಅನುಸರಿಸಬೇಕು. ಹಾಗಾದರೆ ಪ್ರಸ್ತುತ ಯಾವ 3 ರಾಶಿಗಳು ಶನಿಯ ಸಾಡೇಸಾತಿಯಿಂದ ಬಳಲುತ್ತಿದ್ದಾರೆ ಎಂದು ತಿಳಿಯೋಣ.
ಮಕರ ರಾಶಿಯವರಿಗೆ ಸಾಡೇಸಾತಿ ಪರಿಣಾಮ
ಮಕರ ರಾಶಿಯ ಜನರು ತಮ್ಮ ವೈವಾಹಿಕ ಜೀವನದಲ್ಲಿ ನಿರಂತರವಾಗಿ ಅಡೆತಡೆಗಳನ್ನು ಎದುರಿಸುತ್ತಾರೆ. ಶನಿಯ ಸಾಡೇಸಾತಿಯ ಪ್ರಭಾವದಿಂದ ಪತಿ-ಪತ್ನಿಯರ ನಡುವೆ ಸಮನ್ವಯದ ಕೊರತೆ ಕಾಡುತ್ತದೆ.
ಶನಿಯ ಸಾಡೇಸಾತಿಯ ಒಂದು ಋಣಾತ್ಮಕ ಪರಿಣಾಮವೆಂದರೆ ವ್ಯಕ್ತಿಯು ತುಂಬಾ ಕೋಪಗೊಳ್ಳುತ್ತಾನೆ ಮತ್ತು ಅಹಂಕಾರವನ್ನು ಹೊಂದಿರುತ್ತಾನೆ. ಇದರಿಂದಾಗಿ ಶನಿಯ ಸಾಡೇಸಾತಿಯಿಂದ ಬಳಲುತ್ತಿರುವ ವ್ಯಕ್ತಿಯು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲದರಲ್ಲೂ ಕೋಪಗೊಳ್ಳುತ್ತಾನೆ.

ಈ ಕಾರಣದಿಂದಾಗಿ, ವೈವಾಹಿಕ ಮತ್ತು ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗುತ್ತದೆ. ಸಂಬಂಧಗಳು ಹದಗೆಡುತ್ತವೆ. ಮಕರ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಯಾವುದೇ ವಿಶೇಷ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂಥಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಏನು ಮಾಡಬೇಕು ಕೊನೆಯಲ್ಲಿ ತಿಳಿಯಿರಿ.
ಕುಂಭ ರಾಶಿಯವರಿಗೆ ಸಾಡೇಸಾತಿ ಪರಿಣಾಮ
ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದೆ. ಇದು ಶನಿಯ ಸ್ವಂತ ರಾಶಿಯೂ ಹೌದು. ಕುಂಭ ರಾಶಿಯವರ ಮೇಲೆ ಶನಿಯ ಸಾಡೇಸಾತಿ ಪ್ರಭಾವದಿಂದಾಗಿ ಕುಂಭ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಉದ್ಯೋಗಿಗಳ ಸಮಸ್ಯೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಕೆಲಸ ಇಲ್ಲದವರಿಗೆ ಹೊಸ ಉದ್ಯೋಗ ಸಿಗುತ್ತಿಲ್ಲ, ಉದ್ಯೋಗದಲ್ಲಿರುವವರು ಕಷ್ಟಪಟ್ಟು ದುಡಿದರೂ ಪ್ರಗತಿ ಕಾಣುತ್ತಿಲ್ಲ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಸಹ ನಿರಂತರ ನಷ್ಟವನ್ನು ಎದುರಿಸುತ್ತಿದ್ದಾರೆ. ಶನಿಯ ಸಾಡೇ ಸತಿಯ ಪ್ರಭಾವದಿಂದ ಕುಂಭ ರಾಶಿಯವರಿಗೆ ಇದೆಲ್ಲಾ ಆಗುತ್ತಿದೆ. ಹಾಗಾದರೆ ಇಂತೆಲ್ಲ ಸಮಸ್ಯೆಗಳಿಂದ ದೂರ ಬರಲು ನೀವು ಏನು ಮಾಡಬೇಕು ಎಂದು ಕೆಳಗೆ ನೀಡಲಾಗಿದೆ.

ಮೀನ ರಾಶಿಯವರಿಗೆ ಸಾಡೇಸಾತಿ ಪರಿಣಾಮ
ಶನಿಯ ಸಾಡೇಸಾತಿ ವ್ಯಾಪಾರ, ಉದ್ಯೋಗ, ಆದಾಯ, ವೈವಾಹಿಕ ಜೀವನದ ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಸಮಸ್ಯೆಯೂ ಕಾಡುತ್ತಿದೆ. ಶನಿಯ ಋಣಾತ್ಮಕ ಪ್ರಭಾವದಿಂದಾಗಿ ಮೀನ ರಾಶಿಯವರು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಶನಿಯ ಸಾಡೇಸಾತಿ ಸಮಯದಲ್ಲಿ ಯಾವುದೇ ಗಂಭೀರ ಕಾಯಿಲೆ ಅಥವಾ ಹಳೆಯ ಕಾಯಿಲೆಗಳು ಸಹ ನೋವು ನೀಡಲು ಪ್ರಾರಂಭಿಸಬಹುದು. ಮೀನ ರಾಶಿಯ ಜನರು ಈ ಸಮಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗಿಗಳಿಗೆ ನಿರೀಕ್ಷೆಗೆ ತಕ್ಕಂತೆ ಬಡ್ತಿ ಅಥವಾ ಪ್ರಗತಿ ಸಿಗುತ್ತಿಲ್ಲ. ಅಂಥಹ ಸಮಸ್ಯೆ ಎದುರಿಸುತ್ತಿರುವವರು ಏನು ಮಾಡಬೇಕು ಕೊನೆಯಲ್ಲಿ ತಿಳಿಯೋಣ.
ಶನಿಯ ಸಾಡೇಸಾತಿಯ ಪರಿಣಾಮ ಎಷ್ಟು ಕಾಲ ಇರುತ್ತದೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಚಲನೆಯನ್ನು ಅತ್ಯಂತ ನಿಧಾನ ಎಂದು ಪರಿಗಣಿಸಲಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತದೆ. ಜನ್ಮ ರಾಶಿಯಿಂದ ಅಂದರೆ ಜಾತಕದಲ್ಲಿ ಚಂದ್ರನ ರಾಶಿಯಿಂದ 12ನೇ ಸ್ಥಾನದಲ್ಲಿ ಶನಿಯ ಸಂಕ್ರಮಣ ಪ್ರಾರಂಭವಾದಾಗ ಆ ಸಮಯದಿಂದ ಸಾಡೇಸಾತಿ ಆರಂಭವಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶನಿಯ ಸಾಡೇಸಾತಿಯ ಮೂರು ಹಂತಗಳಿವೆ. ಶನಿಯ ಸಾಡೇಸಾತಿಯ ಪರಿಣಾಮಕ್ಕೆ ಒಳಗಾದ ರಾಶಿಯವರು ವೃತ್ತಿ, ವೈಯಕ್ತಿಕ ಜೀವನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ.
ಶನಿಯ ಸಾಡೇಸಾತಿಯನ್ನು ತಪ್ಪಿಸಲು ಪರಿಹಾರಗಳು:-
*ಪ್ರತಿದಿನ ವಿಶೇಷವಾಗಿ ಶನಿವಾರದಂದು 'ಓಂ ಪ್ರಾಂ ಪ್ರೀಂ ಪ್ರೌಂ ಸ: ಶನೈಶ್ಚರಾಯ ನಮಃ' ಶನಿ ಮಂತ್ರ ಜಪಿಸಿ. ಇದು ಶನಿಯ ಸಾಡೇಸಾತಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
*ಶನಿಯ ಸಾಡೇಸಾತಿಯನ್ನು ತಪ್ಪಿಸಲು, ನೀವು ಶನಿವಾರದಂದು ಶನಿದೇವನ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಬೇಕು.
*ಶನಿವಾರದಂದು ಶನಿ ಚಾಲೀಸವನ್ನು ಪಠಿಸಲು ಮರೆಯದಿರಿ. ಹಾಗೆಯೇ ಶನಿವಾರದಂದು 21 ಬಾರಿ ಶನಿ ಸ್ತೋತ್ರವನ್ನು ಪಠಿಸುವುದರಿಂದ ಶನಿಯ ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ.
*ನೀವು ಯಾವುದೇ ಕೆಲಸಗಾರರಿಗೆ, ಬಡವರಿಗೆ, ಪ್ರಾಣಿಗಳಿಗೆ ಅಥವಾ ಅಸಹಾಯಕರಿಗೆ ಕಿರುಕುಳ ನೀಡಬಾರದು. ಇದರಿಂದ ಶನಿಯ ಸಾಡೇಸಾತಿ ಇನ್ನಷ್ಟು ಬಲಶಾಲಿಯಾಗಬಹುದು.
*ಶನಿವಾರದ ಸಾಡೇಸಾತಿಯ ಪರಿಣಾಮಗಳನ್ನು ಕಡಿಮೆ ಮಾಡಲು ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಮಹಾದೇವನನ್ನು ಪೂಜಿಸಿ.












Click it and Unblock the Notifications