30 ವರ್ಷಗಳ ನಂತರ ಶನಿ ಸಂಚಾರ ಬದಲಾವಣೆ: ಈ 3 ರಾಶಿಗೆ ಶುಭಕಾಲ, ಯಾರಿಗೆ ಸಾಡೇ ಸಾತಿ ಆತಂಕ?
ಜ್ಯೋತಿಷ್ಯದಲ್ಲಿ, ಶನಿ ದೇವನನ್ನು ಕರ್ಮ ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯ ಚಲನೆ ಅತ್ಯಂತ ನಿಧಾನವಾಗಿರುತ್ತದೆ. ಅವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಈ ಪ್ರಕಾರ ಇಡೀ ರಾಶಿ ಚಕ್ರವನ್ನು ಪೂರ್ಣಗೊಳಿಸಲು ಬರೋಬ್ಬರಿ 30 ವರ್ಷ ಬೇಕಾಗುತ್ತದೆ. ಆದ್ದರಿಂದ, ಶನಿಯ ರಾಶಿ ಬದಲಾವಣೆಗಳು ಎಲ್ಲಾ 12 ರಾಶಿಯವರ ಜೀವನ, ವೃತ್ತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಆಗುವುದು.
ಶನಿ ಸಂಚಾರದಿಂದ ಬದಲಾಗುವುದು ಜಾತಕ ಫಲ
ಪಂಚಾಂಗ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಜೂನ್ 3, 2027 ರಂದು, ಶನಿದೇವ ಸುಮಾರು 30 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮಹತ್ವದ ಶನಿಯ ಸಂಚಾರದೊಂದಿಗೆ, ಎಲ್ಲಾ ರಾಶಿಯವರ ಸಾಡೇ ಸಾತಿ ಮತ್ತು ಧೈಯ್ಯಾದ ಸಂಪೂರ್ಣ ಲೆಕ್ಕಾಚಾರ ಬದಲಾಗುವುದು. ಈ ಸಂಚಾರದಿಂದಾಗಿ ಕೆಲವು ರಾಶಿಯವರು ಶನಿದೆಸೆಯಿಂದ ಪರಿಹಾರ ಪಡೆದರೆ ಇನ್ನು ಕೆಲವರಿಗೆ ಶನಿದೆಸೆ ಆರಂಭವಾಗುವುದು.

ಈ ರಾಶಿಯವರಿಗೆ ಯಶಸ್ಸು
ಕುಂಭ ರಾಶಿ (Aquarius): ಶನಿ ಮೇಷ ರಾಶಿಗೆ ಪ್ರವೇಶಿಸಿದ ತಕ್ಷಣ, ಕುಂಭ ರಾಶಿಯವರು ಶನಿಯ ಸಾಡೇ ಸಾತಿಯಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾರೆ. ಈ ಮೂಲಕ ಬಹಳ ದಿನಗಳಿಂದ ಕಾಡುತ್ತಿದ್ದ ಆರ್ಥಿಕ ತೊಂದರೆಗಳು ಮತ್ತು ಮಾನಸಿಕ ಒತ್ತಡವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇನ್ನು ಕೆಲಸ ಕಾರ್ಯಗಳಿಗೆ ಯಶಸ್ಸು ಸಿಗುವುದು.
ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಅಷ್ಟಮ ಶನಿ ಕೊನೆಗೊಳ್ಳುವುದು. ಈ ಮೂಲಕ ನಿಂತು ಹೋಗಿರುವ ಕೆಲಸಗಳು ಮತ್ತೆ ಚುರುಕು ಪಡೆಯುವುದು. ವೃತ್ತಿಜೀವನದ ಸ್ಥಿರತೆ ಹೆಚ್ಚಾಗುತ್ತದೆ. ಸಿಕ್ಕಿ ಹಾಕಿಕೊಂಡಿರುಬ ಹಣ ಕೂಡಾ ಕೈ ಸೇರುವುದು.
ಧನು ರಾಶಿ (Sagitarius): ಧನು ರಾಶಿಯವರು ಕೂಡಾ ಶನಿಯ ಧೈಯದಿಂದ ಪರಿಹಾರ ಪಡೆಯುತ್ತಾರೆ. ಕೆಲಸ ಮತ್ತು ಕುಟುಂಬ ಜೀವನದಲ್ಲಿ ಸುಧಾರಣೆ ಇರುವುದು. ಹೊಸ ಕೆಲಸ ಆರಂಭಿಸಬಹುದು. ಇನ್ನು ಎಲ್ಲಾ ಕೆಲಸ ಕಾರ್ಯಗಳಲ್ಲಿ ಲಾಭವಾಗುವುದು.
ಈ ರಾಶಿಗಳ ಮೇಲೆ ಶನಿದೆಸೆಯ ಪರಿಣಾಮ
ವೃಷಭ ರಾಶಿ (Taurus): ವೃಷಭ ರಾಶಿಯವರಿಗೆ ಶನಿಯ ಸಾಡೇ ಸಾತಿಯ ಮೊದಲ ಹಂತವು ಜೂನ್ 3, 2027 ರಂದು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾಗುವುದು. ಈ ಸಂದರ್ಭಗಳಲ್ಲಿ ತಾಳ್ಮೆ ಬಹಳ ಮುಖ್ಯವಾಗುವುದು.
ಕನ್ಯಾ (Vigro)ಮತ್ತು ಮಕರ ರಾಶಿ (capricorn): ಈ ಎರಡೂ ರಾಶಿಯವರಿಗೆ ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿದೆಸೆ ಆರಂಭವಾಗಲಿದೆ. ಉದ್ಯೋಗ, ವ್ಯವಹಾರ ಮತ್ತು ಕುಟುಂಬ ವಿಷಯಗಳಲ್ಲಿ ಹೆಚ್ಚಿನ ಕಠಿಣ ಪರಿಶ್ರಮ ಮತ್ತು ಶಿಸ್ತು ಅಗತ್ಯವಿರುತ್ತದೆ.
ಮೀನ, ಮೇಷ, ರಾಶಿ ಮೇಲೆಯೂ ಪರಿಣಾಮ?
ಮೀನ ರಾಶಿ (Pisces): ಶನಿಯು ಮೇಷ ರಾಶಿಗೆ ಪ್ರವೇಶ ಮಾಡಿದ ಮೇಲೆ ಮೀನ ರಾಶಿಯವರಿಗೆ ಸಾಡೇ ಸಾತಿಯ ಮೂರನೇ ಮತ್ತು ಅಂತಿಮ ಹಂತ ಪ್ರಾರಂಭವಾಗುವುದು. ಇದು ಕ್ರಮೇಣ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಲ್ಲಿವರೆಗಿನ ನಷ್ಟ ಸರಿದೂಗಿಕೊಂಡು ಬರುವುದು.
ಮೇಷ ರಾಶಿ (Aries): ಈ ರಾಶಿಯವರ ಸಾಡೇ ಸಾತಿಯ ಎರಡನೇ ಹಂತ ಬರುತ್ತದೆ. ಮೇಷ ರಾಶಿಯಲ್ಲಿ ಶನಿಯು ನೀಚ ಸ್ಥಾನದಲ್ಲಿರುವುದರಿಂದ, ಆರೋಗ್ಯ ಮತ್ತು ನಿರ್ಧಾರಗಳ ವಿಷಯಳಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕಾಗುವುದು.


Click it and Unblock the Notifications
