ಮುಂದಿನ ನೂರು ದಿನ ಈ ರಾಶಿಯವರ ಮೇಲಿರುವುದು ಶನಿ ಕೃಪೆ: ಹಣ, ಖ್ಯಾತಿ, ಗೌರವ ಪ್ರಾಪ್ತಿ

ಡಿಸೆಂಬರ್ 2026 ರವರೆಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯ ಪ್ರಭಾವವು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಶನಿಯ ಸಂಚಾರದಿಂದಾಗಿ, ಕೆಲವು ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. ಶನಿಯ ಸಂಚಾರದ ಫಲವಾಗಿ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುವುದು. ಹೊಸ ಅವಕಾಶಗಳು ಒಲಿದು ಬರುವುದು. ಮನೆ ಅಥವಾ ವಾಹನವನ್ನು ಖರೀದಿಸುವ ಯೋಗವಿದೆ ಎನ್ನಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ ನಕ್ಷತ್ರ ಬದಲಾವಣೆಯು ಕೆಲವು ರಾಶಿಯವರ ಜೀವನದ ಮೇಲೆ ನಿರ್ಣಾಯಕ ಪರಿಣಾಮ ಬೀರುವುದು.

ಜ್ಯೋತಿಷ್ಯದ ಪ್ರಕಾರ, ಶನಿಯು ಮಾರ್ಚ್ 2025 ರಲ್ಲಿ ತನ್ನದೇ ರಾಶಿಯಿಂದ ಹೊರ ಬಂದು ಗುರುವಿನ ಅಧಿಪತ್ಯದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹ. ಅಂದರೆ ಇದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರಲು ಸುಮಾರು ಎರಡೂವರೆ ವರ್ಷಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಜುಲೈ 27, 2026 ರಂದು ಶನಿಯ ಹಿನ್ಮುಖ ಚಲನೆ ಆರಂಭವಾಗಿದೆ. ಶನಿಯ ಹಿಮ್ಮುಖ ಚಲನೆಯ ಪರಿಣಾಮವು ಎಲ್ಲಾ 12 ರಾಶಿಯವರ ಮೇಲೂ ಇರುವುದು. ಆದರೆ, ಜ್ಯೋತಿಷ್ಯದ ಪ್ರಕಾರ ಈ ಅವಧಿಯು ನಿರ್ದಿಷ್ಟವಾಗಿ ಮೂರು ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು. ಶನಿಯ ಹಿಮ್ಮುಖ ಚಲನೆಯ ಪರಿಣಾಮ ಡಿಸೆಂಬರ್ 10, 2026 ರವರೆಗೆ ಮುಂದುವರಿಯುತ್ತದೆ.

Shani Gochara 2026

ಕನ್ಯಾ ರಾಶಿ (Virgo) : ಕನ್ಯಾರಾಶಿಯವರಿಗೆ ಈ ಸಮಯ ಅನುಕೂಲಕರವಾಗಿರುವುದು. ಉತ್ತಮ ಆರ್ಥಿಕ ಅವಕಾಶಗಳಿಂದಾಗಿ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಗ್ರಹ ಸಂಚಾರಗಳ ಪ್ರಭಾವದಿಂದ ಇಲ್ಲಿಯವೆರೆಗೆ ಎದುರಿಸಿದ ಕೆಲವು ಸಮಸ್ಯೆಗಳು ಕಡಿಮೆಯಾಗಬಹುದು. ಜೀವನದಲ್ಲಿ ಮತ್ತೆ ಶಾಂತಿ, ನೆಮ್ಮದಿ ಮನೆ ಮಾಡುವುದು. ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುವುದು. ಮಾಡಬೇಕು, ಸಾಧಿಸಬೇಕು ಅಂದುಕೊಂಡಿರುವ ಎಲ್ಲಾ ಕೆಲಸಗಳು ಸರಾಗವಾಗಿ ಕೈಗೂಡುವುದು. ಜೊತೆಗೆ, ಹಣ ಗಳಿಸುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಅವಕಾಶಗಳು ಸಿಗುವುದು.

ತುಲಾ ರಾಶಿ (Libra) : ತುಲಾ ರಾಶಿಯವರಿಗೆ ಶನಿಯ ಪ್ರಭಾವವು ಆರ್ಥಿಕವಾಗಿ ಪ್ರಯೋಜನಕಾರಿಯಾಗಬಹುದು. ಸ್ವಲ್ಪ ಸಮಯದಿಂದ ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆಗಳು ಕ್ರಮೇಣ ಬಗೆಹರಿಯುವುದು. ಸಾಲದ ಹೊರೆ ಕೂಡಾ ಕಡಿಮೆಯಾಗಬಹುದು. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಈ ಹೊತ್ತಿನಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ ಹೆಚ್ಚಿದೆ. ಬಹು ಕಾಲದ ಕನಸು ನನಸಾಗುವುದು. ನಿಮ್ಮ ಹಣಕಾಸಿನ ಸ್ಥಿತಿ ಹೆಚ್ಚು ಸ್ಥಿರವಾಗಿರುವುದು. ಉದ್ಯೋಗ ಮತ್ತು ವ್ಯವಹಾರದಂತಹ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ಸಿಗುವುದು.

ಕುಂಭ ರಾಶಿ(Aquarius) : ಶನಿಯು ಕುಂಭ ರಾಶಿಯ ಅಧಿಪತಿ. ಈ ರಾಶಿಯವರಿಗೆ ಕೊನೆಯ ಹಂತದ ಶನಿ ಸಾಡೇಸಾತಿ ಕೂಡಾ ನಡೆಯುತ್ತಿದೆ. ಶನಿಯ ನಡೆಯಲ್ಲಿನ ಬದಲಾವಣೆಗಳು ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅದೃಷ್ಟ ಜೊತೆಗಿರುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದಾಗುವ ಸಾಧ್ಯತೆ ಹೆಚ್ಚು. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ವ್ಯಾಪಾರ ಮಾಡುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. ಆರ್ಥಿಕ ಸಮಸ್ಯೆಗಳು ಒಂದೊಂದಾಗಿಯೇ ಬಗೆಹರಿಯುವುದು. ಜೊತೆಗೆ, ಮಾನಸಿಕ ಒತ್ತಡ ಮತ್ತು ತೊಂದರೆಗಳು ಕೂಡಾ ಕ್ರಮೇಣ ಕಡಿಮೆಯಾಗುವುದು. ಒಟ್ಟಾರೆಯಾಗಿ ಹೇಳುವುದಾದರೆ ಈ ಅವಧಿಯು ಕುಂಭ ರಾಶಿಯವರ ಭವಿಷ್ಯ ಬೆಳಗುವುದು.

ಇನ್ನು ಜಾತಕದಲ್ಲಿ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ಸಿಗುವ ಫಲ ಬದಲಾಗಬಹುದು. ಗ್ರಹ, ನಕ್ಷತ್ರಗಳ ಪಾದವನ್ನು ಅವಲಂಬಿಸಿ ಸಿಗುವ ಫಲ ಬೇರೆ ಬೇರೆಯಾಗಿರುವುದು. ನಿಖರವಾಗಿ ನಿಮಗೆ ಶನಿಯ ಹಿಮ್ಮುಖ ಚಲನೆಯ ಫಲ ಹೇಗಿದೆ ಎಂದು ತಿಳಿದುಕೊಳ್ಳಲು ನಿಮ್ಮದೇ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+