Raja yoga: ಸೆಪ್ಟೆಂಬರ್‌ನಲ್ಲಿ 4 ರಾಜಯೋಗ: ಈ 5 ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ, ವೃತ್ತಿಜೀವನದಲ್ಲಿ ಭರ್ಜರಿ ಯಶಸ್ಸು!

September Lucky Zodiac Sign : ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಸಂಚಾರದಿಂದ ನಾಲ್ಕು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದು ಐದು ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡುವುದು. ಜ್ಯೋತಿಷ್ಯ ದೃಷ್ಟಿಕೋನದಿಂದ, ಸೆಪ್ಟೆಂಬರ್ ತಿಂಗಳು ತುಂಬಾ ವಿಶೇಷವಾಗಿರುವುದು. ಈ ಮಾಸದಲ್ಲಿ ಮೂರು ಪ್ರಮುಖ ಗ್ರಹಗಳು ತಮ್ಮದೇ ಆದ ರಾಶಿಯಲ್ಲಿ ಸಂಚಾರ ಮಾಡಿಕೊಂಡು ರಾಜಯೋಗವನ್ನು ಸೃಷ್ಟಿಸುತ್ತವೆ. ಸೂರ್ಯ, ಮಂಗಳ, ಬುಧ ಮತ್ತು ಶುಕ್ರ ಸೆಪ್ಟೆಂಬರ್‌ನಲ್ಲಿ ತಮ್ಮ ರಾಶಿಯನ್ನು ಬದಲಿಸುತ್ತವೆ. ಈ ಮೂಲಕ ನಾಲ್ಕು ರಾಜಯೋಗಗಳು ಸೃಷ್ಟಿಯಾಗುತ್ತವೆ. ಈ ರಾಜಯೋಗಗಳು ಐದು ರಾಶಿಯವರಿಗೆ ಹೆಚ್ಚು ಶುಭ ಫಲವನ್ನು ನೀಡುವುದು.

ಸೂರ್ಯ, ಮಂಗಳ, ಬುಧ ಮತ್ತು ಶುಕ್ರ ಸಂಚಾರದಿಂದ ರಾಜಯೋಗ :

ಸೆಪ್ಟೆಂಬರ್ 2ಕ್ಕೆ ಶುಕ್ರನು ತನ್ನದೇ ಅಧಿಪತ್ಯದ ತುಲಾ ರಾಶಿಗೆ ಸಾಗುತ್ತಾನೆ. ಇದು ಮಾಳವ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಮಾಳವ್ಯ ರಾಜಯೋಗವು ಸಂಪತ್ತು, ಸೌಂದರ್ಯ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ನೀಡುವುದು. ಇದರ ನಂತರ, ಸೆಪ್ಟೆಂಬರ್ 7 ರಂದು, ಬುಧನು ತನ್ನದೇ ಆದ ಕನ್ಯಾ ರಾಶಿಯಲ್ಲಿ ಸಂಚಾರ ಆರಂಭಿಸುತ್ತಾನೆ (September Rajayoga). ಇದರಿಂದ ಭದ್ರ ರಾಜಯೋಗ ರೂಪುಗೊಳ್ಳುವುದು. ಇದು ಸಂವಹನ ಕೌಶಲ್ಯ ಮತ್ತು ತಾರ್ಕಿಕತೆಯನ್ನು ಸುಧಾರಿಸುವುದರ ಜೊತೆಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

September Lucky Zodiac Sign Raja yoga in September Aries cancer Virgo Libra Capricorn To Get Success

ಸೆಪ್ಟೆಂಬರ್ 17 ರಂದು, ಕನ್ಯಾ ರಾಶಿಗೆ ಸೂರ್ಯನ ಪ್ರವೇಶವಾಗುತ್ತಾ ಇದ್ದ ಹಾಗೆ ಬುಧ-ಸೂರ್ಯ ಸಂಯೋಗವನ್ನು ನಿರ್ಮಾಣವಾಗುವುದು. ಇದರಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುವುದು. ಈ ಯೋಗವು ಬುದ್ಧಿವಂತಿಕೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಹೆಚ್ಚಿಸುವುದು. ಉನ್ನತ ಸ್ಥಾನ ಸಿಗುವುದು. ಸೆಪ್ಟೆಂಬರ್ 26 ರಂದು, ಬುಧನು ತುಲಾ ರಾಶಿಗೆ ಕಾಲಿಡುತ್ತಾನೆ. ಇದರಿಂದ ಬುಧ-ಶುಕ್ರ ಸಂಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಲಕ್ಷ್ಮೀ ನಾರಾಯಣ ಯೋಗ ಸೃಷ್ಟಿಯಾಗುವುದು. ಈ ಯೋಗವು ಲಕ್ಷ್ಮಿ ದೇವಿಯ ಆಶೀರ್ವಾದದ ಮೂಲಕ ಆರ್ಥಿಕ ಲಾಭದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಯೋಗಗಳ ಪ್ರಯೋಜನ ಪಡೆಯುವ ರಾಶಿಗಳು ಯಾವುವು ಎಂದು ನೋಡುವುದಾದರೆ..

ಸೆಪ್ಟೆಂಬರ್ ತಿಂಗಳ 5 ಅದೃಷ್ಟ ರಾಶಿಗಳು (September Lucky Zodiac Sign)

September Lucky Zodiac Sign :ಮೇಷ ರಾಶಿ (Aries) : ಮೇಷ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಕೊಡುವುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮುಂದುವರಿಸಿದರೆ ದೊಡ್ಡ ಮಟ್ಟದ ಲಾಭವಾಗುವುದು. ಒಂದು ಪ್ರಮುಖ ಕೆಲಸಕ್ಕೆ ಕೈ ಹಾಕುವಿರಿ. ಅದರಲ್ಲಿ ಯಶಸ್ಸನ್ನೂ ಪಡೆಯುವಿರಿ. ವ್ಯವಹಾರ ಮಾಡುವವರಿಗೆ ಉತ್ತಮ ಡೀಲ್‌ ಸಿಗುವುದು. ಆರ್ಥಿಕ ಲಾಭವಾಗುವುದು. ಹಣಕಾಸಿನ ಸ್ಥಿತಿ ಸದೃಢವಾಗುವುದು.

September Lucky Zodiac Sign : ಕರ್ಕಾಟಕ ರಾಶಿ (Cancer) : ಸೆಪ್ಟೆಂಬರ್ ಕರ್ಕಾಟಕ ರಾಶಿಯವರಿಗೂ ಲಕ್ಕಿ ತಿಂಗಳು. ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗಿಗಳು ತಮ್ಮ ಪ್ರತಿಭೆಯಿಂದಲೇ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವರು. ಅವರಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಕೆಲಸಗಳನ್ನು ಅಂದುಕೊಂಡ ಸಮಯದೊಳಗೆ ಮುಗಿಸುವಿರಿ. ಹೊಸ ಅವಕಾಶಗಳು ಒದಗಿ ಬರುವುದು. ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು.

September Lucky Zodiac Sign: ಕನ್ಯಾ ರಾಶಿ (Virgo) : ಕನ್ಯಾರಾಶಿಯಲ್ಲಿಯೇ ಭದ್ರ ರಾಜಯೋಗ ರೂಪುಗೊಳ್ಳುತ್ತಿದೆ. ಇದು ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದು. ಆಸ್ತಿ ಅಥವಾ ಷೇರುಗಳಲ್ಲಿನ ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ಪೂರ್ವಜರ ಆಸ್ತಿ ಆನುವಂಶಿಕವಾಗಿ ಸಿಗುವುದು. ಹಣ ಉಳಿತಾಯ ಮಾಡುವುದು ಸಾಧ್ಯವಾಗುವುದು.

September Lucky Zodiac Sign: ತುಲಾ ರಾಶಿ (Libra) : ಸೆಪ್ಟೆಂಬರ್ ತಿಂಗಳು ತುಲಾ ರಾಶಿಯವರಿಗೆ ಸುವರ್ಣಯುಗವನ್ನು ತರಬಹುದು. ನಿಮ್ಮ ರಾಶಿಯಲ್ಲಿ ರೂಪುಗೊಳ್ಳುವ ಮಾಳವ್ಯ ರಾಜ್ಯಯೋಗದಿಂದ ಉನ್ನತ ಸ್ಥಾನಕ್ಕೆ ಏರುವಿ ಹೊಸ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಹೊಸ ಮೂಲಗಳಿಂದ ಹಣವನ್ನು ಗಳಿಸಲು ಅವಕಾಶ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು.

September Lucky Zodiac Sign: ಮಕರ ರಾಶಿ (Capricorn): ಸೆಪ್ಟೆಂಬರ್ ತಿಂಗಳು ಮಕರ ರಾಶಿಯವರಿಗೆ ಆರ್ಥಿಕವಾಗಿ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಉತ್ತಮ ತಿಂಗಳು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಬೇರೆ ನಗರ ಅಥವಾ ದೇಶಕ್ಕೆ ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಸಮಯ ಅನುಕೂಲಕರವಾಗಿರುವುದು. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+