Vruschika Rashi Bhavishya 2025: ವೃಶ್ಚಿಕ ರಾಶಿ 2025 ವರ್ಷ ಭವಿಷ್ಯ- ಹೊಸ ವರ್ಷ ವೃತ್ತಿಯಲ್ಲಿ ಸುಯೋಗ
ವೃಶ್ಚಿಕ ರಾಶಿಯವರು ಹೊಸ ವರ್ಷ ತುಂಬಾ ಅದೃಷ್ಟವನ್ನು ಹೊಂದಿದ್ದಾರೆ. ವಿಶೇಷವಾಗಿ ವೃತ್ತಿ ಜೀವನದಲ್ಲಿ ಹಾಗೂ ಆಸ್ತಿ, ಭೂಮಿ, ವಾಹನ ಖರೀದಿ ವಿಷಯದಲ್ಲಿ ವೃಶ್ಚಿಕ ರಾಶಿಯವರಿಗೆ ಅದ್ಭುತವಾದ ವರ್ಷ 2025. ಹಾಗಾದರೆ ವೃಶ್ಚಿಕ ರಾಶಿ 2025 ವರ್ಷ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ.
ವೃಶ್ಚಿಕ ರಾಶಿಯವರಿಗೆ 2025ರಲ್ಲಿ ಶನಿ ಹಾಗೂ ಗುರು ಬಲ ಇಲ್ಲ. ಇದರಿಂದಾಗಿ ಕೆಲ ವಿಷಯಗಳಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ರಾಹು ಮೇ ತಿಂಗಳಲ್ಲಿ ವೃಶ್ಚಿಕ ರಾಶಿಯವರ ನಾಲ್ಕನೇ ಮನೆಗೆ ಪ್ರಯಾಣ ಮಾಡಲಿದೆ. ಇದು ಸುಖ ಸ್ಥಾನದಲ್ಲಿ ಕೊರತೆ ತರುತ್ತದೆ. ಇದಲ್ಲದೆ ಬೇರೆ ಬೇರೆ ಗ್ರಹಗಳ ಕಾಟ ಕೂಡ ಹೆಚ್ಚಾಗಲಿದೆ. ಆದರೆ ಕೆಲವು ತಿಂಗಳು ವೃಶ್ಚಿಕ ರಾಶಿಯವರಿಗೆ ತುಂಬಾ ಅದ್ಭುತವಾಗಿವೆ.
ವೃಶ್ಚಿಕ ರಾಶಿಯವರಿಗೆ ಮಾರ್ಚ್‌ನಲ್ಲಿ ಪಂಚಮ ಶನಿಯ ಪೀಡೆ ಶುರುವಾಗುತ್ತದೆ. ಜೊತೆಗೆ ನಾಲ್ಕನೇ ಸ್ಥಾನದಲ್ಲಿ ರಾಹುವು ಸಂಚಾರ ಮಾಡಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ಆರೋಗ್ಯವನ್ನು ತುಂಬಾ ಜಾಗೃತವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಅದರಲ್ಲೂ ಹೊಗಿನ ಆಹಾರ ತ್ಯಜಿಸಿ ಬಿಡಿ. ವ್ಯಾಯಾಮ ಮಾಡಿ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಇದನ್ನು ಬಿಟ್ಟರೆ ವೃಶ್ಚಿಕ ರಾಶಿಯವರ ಶೈಕ್ಷಣಿಕ, ವೃತ್ತಿ, ವಿವಾಹ, ಕುಟುಂಬ, ಆರ್ಥಿಕ ಜೀವನ ಹೇಗಿದೆ ಎಂದು ತಿಳಿಯೋಣ.

ವೃಶ್ಚಿಕ ರಾಶಿ 2025 ಶೈಕ್ಷಣಿಕ ಜೀವನ
ವೃಶ್ಚಿಕ ರಾಶಿಯವರು 2025ರ ಮೇವರೆಗೂ ಚೆನ್ನಾಗಿ ಶಿಕ್ಷಣ ಪಡೆಯಲಿದ್ದಾರೆ. ಕಾರಣ ಗುರುವಿನ ದೃಷ್ಟಿ ವಿದ್ಯಾಭ್ಯಾಸದಲ್ಲಿ ಬೀಳುತ್ತದೆ. ಹೀಗಾಗಿ ಹೊಸ ವರ್ಷದ ಆರಂಭದಿಂದ ಐದು ತಿಂಗಳು ಶಿಕ್ಷಣದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆದರೆ ಇದಾದ ನಂತರ ಶಿಕ್ಷಣದಲ್ಲಿ ಸಮಸ್ಯೆಗಳು ಎದುರಾಗಲಿವೆ. ಈ ಸಮಯದಲ್ಲಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವಂತವರಿಗೆ ಸಾಕಷ್ಟು ಉತ್ತಮ ಅವಧಿ ಇದು. ಯಾಕೆಂದರೆ ರಾಹು ನಿಮ್ಮ ರಾಶಿಗೆ ಬರುತ್ತಾನೆ. ರಾಹು ನಿಮ್ಮ ರಾಶಿಗೆ ಪ್ರವೇಶವಾದ ಮೇ ನಂತರದಲ್ಲಿ ಶುಭವಾಗಲಿದೆ.
ಇದನ್ನು ಹೊರತುಪಡಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಂತವರಿಗೆ ಅಥವಾ ಬೇರೆ ಬೇರೆ ರೀತಿಯಾದ ದೊಡ್ಡ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅಷ್ಟೋಂದು ಯೋಗಕಾರಕ ಸಮಯ ಇದು ಅಲ್ಲ.

ವೃಶ್ಚಿಕ ರಾಶಿ 2025 ವ್ಯಾಪಾರ ವ್ಯವಹಾರ
ವ್ಯಾಪಾರ ವ್ಯವಹಾರದ ವಿಚಾರದಲ್ಲಿ ವೃಶ್ಚಿಕ ರಾಶಿಯವರಿಗೆ 2025 ತುಂಬಾ ಅದ್ಭುತವಾಗಿದೆ. ಯಾವುದೇ ಸಮಸ್ಯೆಗಳು ಇಲ್ಲ. ಆದರೆ ಮೇ ನಂತರದಲ್ಲಿ ತುಂಬಾ ದೊಡ್ಡ ಹೊಡೆತ ಬೀಳಬಹುದು. ಅಂಗಡಿಯನ್ನೇ ಮುಚ್ಚುವ ಸಂದರ್ಭ ಬರಬಹುದು. ಹೊಸ ವ್ಯವಹಾರ ಆರಂಭಿಸಲು ನೀವು ಯೋಚನೆ ಮಾಡಬಹುದು. ಆದರೆ ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಆರಂಬಿಸುವುದು ಉತ್ತಮವಲ್ಲ.
ನಿಮ್ಮಗೆ ತುಂಬಾ ತೊಂದರೆಯಾದರೆ ವ್ಯವಹಾರವನ್ನು ನಿಲ್ಲಿಸಿಬಿಡಿ. ಆದರೆ ಹೊಸ ವ್ಯವಹಾರವನ್ನು ಮಾತ್ರ ಆರಂಭಿಸಬೇಡಿ. ಯಾಕೆಂದರೆ ಇದರಲ್ಲೂ ನಿಮಗೆ ಲಾಭ ಇರುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಯಾವುದೇ ಬಂಡವಾಳ ರಹಿತ ಕೆಲಸ ಮಾಡಿ ಸಂಪಾದನೆ ಮಾಡುವುದು ಉತ್ತಮ. ಕಾರಣ ನಿಮಗೆ ಗುರು ಹಾಗೂ ಶನಿ ಬಲವಿಲ್ಲ. ಜೊತೆಗೆ ಪಂಚಮ ಶನಿ ಜೊತೆಗೆ ಅರ್ಧಾಷ್ಟಮಿ ಶನಿಯ ಪೀಡೆ ವರ್ಷ ಪೂರ್ತಿಯಾಗಿ ಇರುತ್ತದೆ.

ವೃಶ್ಚಿಕ ರಾಶಿ 2025 ವೃತ್ತಿ ಜೀವನ
2025ರಲ್ಲಿ ವೃಶ್ಚಿಕ ರಾಶಿಯವರು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮಿಶ್ರ ಫಲವನ್ನು ಪಡೆಯುತ್ತಾರೆ. ಹೊಸ ವರ್ಷ ಹೆಚ್ಚಿನ ಫಲಗಳು ಮಂಗಳ ಗ್ರಹದಿಂದ ಸಿಗುತ್ತವೆ. ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಬೆಳವಣಿಗೆ ಕಂಡು ಬರುತ್ತದೆ. ವೃತ್ತಿಯಲ್ಲಿ ಏಳಿಗೆ ಇದ್ದು ಅದಕ್ಕೆ ತಕ್ಕಂತೆ ಸಂಬಳ ಕೂಡ ಹೆಚ್ಚಾಗುತ್ತದೆ. ಆದರೆ ಕಲಸದ ಒತ್ತಡ ಹೆಚ್ಚಾಗಲಿದೆ. ಹೀಗಾಗಿ ನಿಮ್ಮ ಮನಸ್ಸು ಗೊಂದಲಗೊಳ್ಳಬಹುದು. ನೆಮ್ಮದಿ ಕಳೆದುಕೊಳ್ಳಬಹುದು. ಮನಸ್ಸನ್ನ ಶಾಂತಿವಾಗಿಟ್ಟುಕೊಳ್ಳಲು ಪ್ರಯತ್ನಿಸಿ.
ವೃಶ್ಚಿಕ ರಾಶಿ 2025 ಆರ್ಥಿಕ ಜೀವನ
ವೃಶ್ಚಿಕ ರಾಶಿಯವರಿಗೆ ಹೊಸ ವರ್ಷದಲ್ಲಿ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ನೀವು ಯಾವುದೇ ತೊಂದರೆ ಇಲ್ಲದೆ ಸಂಪಾದನೆ ಮಾಡುವಿರಿ. ಆದರೆ ಹೆಚ್ಚು ಗಳಿಕೆ ಮಾಡಲು ತೊಂದರೆ ಆಗುತ್ತದೆ. ಹೊಸ ವರ್ಷದಲ್ಲಿ ಸಾಮಾನ್ಯ ಜೀವನ ನಡೆಸುವಿರಿ. ಯಾಕೆಂದರೆ ವೃಶ್ಚಿಕ ರಾಶಿಯವರ ಧನ ಸ್ಥಾನದಲ್ಲಿ ಗುರು ದೃಷ್ಟಿ ಬೀಳುತ್ತದೆ. ಅಲ್ಲದೆ ವ್ಯಯ ಸ್ಥಾನದಲ್ಲೂ ಗುರು ದೃಷ್ಟಿ ಬೀಳುವುದರಿಂದ ಸಂಪಾದನೆಯೊಂದಿಗೆ ಖರ್ಚು ಕೂಡ ಹೆಚ್ಚಾಗುತ್ತದೆ. ಹೀಗಾಗಿ ಸಾಮಾನ್ಯವಾದ ಆರ್ಥಿಕ ಜೀವನ ಹೊಸ ವರ್ಷದಲ್ಲಿ ಇರಲಿದೆ.
ವೃಶ್ಚಿಕ ರಾಶಿ 2025 ಪ್ರೀತಿ ಜೀವನ
ರಾಹು ಕೇತುಗಳ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯವರ ಪ್ರೇಮ ಜೀವನದಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಾಗಲಿದೆ. ಹೀಗಾಗಿ ಈ ವರ್ಷ ಪ್ರೇಮ ವಿವಾಹ ಅಥವಾ ಪ್ರೇಮ ಪ್ರಸ್ತಾಪಕ್ಕೆ ಉತ್ತಮವಾದ ವರ್ಷವಲ್ಲ. ನಿಮ್ಮ ಐದನೇ ಮನೆಗೆ ಶನಿ ಹೋಗುವುದರಿಂದ, ನಿಮ್ಮ ಪ್ರೇಮಾಧಿಪತಿಯಾದ ಗುರು ಅಷ್ಟಾಮ ಸ್ಥಾನಕ್ಕೆ ಹೋಗುವುದರಿಂದ ವಿವಾಹಕ್ಕೆ ಸೂಕ್ತವಾದ ವಾತಾವರಣ ಇಲ್ಲ. ಹೀಗಾಗಿ ನಿಮ್ಮ ಜನ್ಮ ಜಾತಕ ತೋರಿಸಿಕೊಂಡು ನಂತರ ಯೋಗ ಇದ್ದರೆ ವಿವಾಹವಾಗಬಹುದು.
ವೃಶ್ಚಿಕ ರಾಶಿ 2025 ವೈವಾಹಿಕ ಜೀವನ
ವೃಶ್ಚಿಕ ರಾಶಿಯವರ ವೈವಾಹಿಕ ಜೀವನ ತುಂಬಾ ಕಹಲಗಳಿಂದ ಕೂಡಿರುತ್ತದೆ. ದೊಡ್ಡ ಸಮಸ್ಯೆಗಳು ಇರುವುದಿಲ್ಲ. ಕಲಹಗಳು ಎಲ್ಲರ ಜೀವನದಲ್ಲಿ ಬಂದು ಹೋಗುವಂತೆ ಬಂದು ಹೋಗುತ್ತವೆ. ಹೀಗಾಗಿ ಮುಮದಿನ ವರ್ಷ ದೊಡ್ಡ ಸಮಸ್ಯೆಗಳೇನು ವೈವಾಹಿಕ ಜೀವನದಲ್ಲಿ ಕಂಡು ಬರುವುದಿಲ್ಲ.
ವೃಶ್ಚಿಕ ರಾಶಿ 2025 ಆಸ್ತಿ, ಭೂಮಿ, ವಾಹನ ವಿಚಾರ
ವೃಶ್ಚಿಕ ರಾಶಿಯವರಿಗೆ ಹೊಸ ವರ್ಷದಲ್ಲಿ ಆಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಅನುಕೂಲವಿದೆ. ಮಿಶ್ರಫಲ ಸಿಗಲಿದೆ. ಯಾಕೆಂದರೆ ಆಸ್ತಿ ಮಾರಾಟ ಮಾಡಿದರೆ ಹಣ ಪಡೆಯುವಿರಿ ಆದರೆ ಆಸ್ತಿಯನ್ನು ಕಳೆದುಕೊಳ್ಳುವಿರಿ. ಇದರಿಂದ ಇದು ಲಾಭವೂ ಹೌದು ನಷ್ಟವೂ ಹೌದು. ಉದಾಸೀನ ಮಾಡಬೇಡಿ. ಹೀಗೆ ವೃಶ್ಚಿಕ ರಾಶಿಯವರಿಗೆ 2025ರಲ್ಲಿ ಮಿಶ್ರಫಲ ಸಿಗಲಿದೆ. ಇನ್ನೂ ಪರಿಹಾರಗಳನ್ನು ತಿಳಿಯೋಣ.
ಪರಿಹಾರಗಳು
ಪ್ರತಿಯೊಂದು ವಿಚಾರದಲ್ಲಿ ಒಳಿತಾಗಬೇಕು ಅಂದರೆ 'ಓಂ ಬಂ ಭೈರವಾಯ ನಮ:' ಎಂಬ ಈ ಮಂತ್ರವನ್ನು 108 ಬಾರಿ ನಿತ್ಯ ಪಠಣ ಮಾಡಿ. ಜೊತೆಗೆ ನಿಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿ ಬಿಳಿ ಸಾಸಿವೆ ಹಾಗೂ ಉಪ್ಪನ್ನು ಹರಿಯುವ ನೀರಿನಲ್ಲಿ ಬಿಡಿ.












Click it and Unblock the Notifications