Ugadi Horoscope 2025: ಮೀನ ರಾಶಿಯ ಯುಗಾದಿ ಜಾತಕ- ಮೀನ ರಾಶಿಯವರಿಗೆ ಸವಾಲುಗಳ ಸುರಿಮಳೆ- ಪರಿಹಾರ ಇಲ್ಲಿದೆ
ಮಾರ್ಚ್ ತಿಂಗಳು ಶನಿಯು ಮೀನ ರಾಶಿಯನ್ನು ಪ್ರವೇಶ ಮಾಡಲಿದೆ. ಇದರಿಂದಾಗಿ ಮೀನ ರಾಶಿಯ ಯುಗಾದಿ ಭವಿಷ್ಯ ಹೇಗಿರಲಿದೆ ಎಂದು ತಿಳಿಯುವುದು ತುಂಬಾ ಮುಖ್ಯ. ನೀವೇನಾದರೂ ಮೀನ ರಾಶಿಯವರಾಗಿದ್ದರೆ ಯುಗಾದಿ ಭವಿಷ್ಯವನ್ನು ತಿಳಿದುಕೊಂಡ ನಂತರವೇ ನಿಮ್ಮ ಯೋಜನೆಗಳನ್ನು ಮಾಡಿಕೊಳ್ಳುವುದು ಉತ್ತಮ. ಹಾಗಾದರೆ ವಿಶ್ವವಾಸು ನಾಮ ಸಂವತ್ಸರದಲ್ಲಿ ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎಂದು ಈಗ ತಿಳಿಯೋಣ.
2025 ಯುಗಾದಿಯಿಂದ 2026 ಯುಗಾದಿಯವರೆಗೆ ದ್ವಾದಶಿ ರಾಶಿಗಳ ಭವಿಷ್ಯವನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ಕೊನೆಯದಾಗಿ ಮೀನ ರಾಶಿಯ ಭವಿಷ್ಯ ತಿಳಿಯುವುದು ಬಾಕಿ ಇದೆ. ಹಾಗಾದರೆ ಈ ಯುಗಾದಿ ಮೀನ ರಾಶಿಯವರಿಗೆ ಸಿಹಿ ತರಲಿದಿಯಾ ಅಥವಾ ಕಹಿ ನೀಡಲಿದಿಯಾ ಎಂದು ತಿಳಿಯೋಣ.

ಗ್ರಹಗಳ ಸ್ಥಾನಪಲ್ಲಟ
ಮೀನ ರಾಶಿಯ ಯುಗಾದಿ ಭವಿಷ್ಯ ತಿಳಿಯಲು ಗ್ರಹಗಳ ಸ್ಥಾನ ತಿಳಿಯುವುದು ತುಂಬಾ ಮುಖ್ಯ. ಯಾವುದೇ ರಾಶಿ ಭವಿಷ್ಯ ತಿಳಿಯಲು ನವಗ್ರಹಗಳಲ್ಲಿ ಶನಿ, ಗುರು, ರಾಹು, ಕೇತುಗಳ ಸ್ಥಾನ ತುಂಬಾ ಅವಶ್ಯಕವಾಗಿದೆ. ಮೀನ ರಾಶಿಯ ಒಂದನೇ ಮನೆಯಲ್ಲಿ ಶನಿ ಸಂಚಾರ ಮಾಡುತ್ತದೆ. ಗುರು ಮೀನ ರಾಶಿಯ 3ರಿಂದ 4ನೇ ಮನೆಗೆ ಸಂಚಾರ ಮಾಡಲಿದೆ. ರಾಹು 1ರಿಂದ 12ನೇ ಮನೆಗೆ, ಕೇತು 7ರಿಂದ 6ಕ್ಕೆ ಸಂಚಾರ ಮಾಡಲಿದೆ. ಈ ಗ್ರಹ ಸ್ಥಾನದಿಂದಾಗಿ ಈ ವರ್ಷ ಮೀನ ರಾಶಿಯ ಜನರಿಗೆ ಹೇಗಿದೆ ಎಂದು ತಿಳಿಯಬಹುದು.
ಮೀನ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ
ವಿಶ್ವವಾಸು ನಾಮ ಸಂವತ್ಸರ ಮೀನ ರಾಶಿಯವರಿಗೆ ಉತ್ತಮವಾಗಿಲ್ಲ. ಯಾಕೆಂದರೆ ಮೀನ ರಾಶಿಗೆ ಶನಿಯು ಯುಗಾದಿಯಂದು ಪ್ರವೇಶಿಸುತ್ತಾನೆ. ಶನಿಯ ಪ್ರಭಾವದಿಂದಾಗಿ ಮೀನ ರಾಶಿಯವರಿಗೆ ಆರ್ಥಿಕ ತೊಂದರೆಗಳು ಎದುರಾಗಲಿವೆ. ಆರ್ಥಿಕ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಸಾಲ ಮಾಡುವುದು, ಹಣ ವೆಚ್ಚ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ದುಡಿದ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ಹೂಡಿಕೆ ಮಾಡುವುದು, ಸಾಲ ನೀಡುವುದರಿಂದ ದೂರವಿರಿ.

ಮೀನ ರಾಶಿಯ ಯುಗಾದಿ ಕೌಟುಂಬಿಕ ಜಾತಕ
ಮೀನ ರಾಶಿಯವರು ಯುಗಾದಿ ನಂತರ ಕೌಟುಂಬಿಕ ಕಲಹಗಳಿಂದ ಬೇಸರಗೊಳ್ಳಬಹುದು. ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬದಲ್ಲಿ ಮನಸ್ತಾಪ, ಮೋಸ, ಜಗಳ, ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆಗಳು ಇವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಆದಷ್ಟು ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಮೀನ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ
ಯುಗಾದಿ ನಂತರ ಮೀನ ರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ವಿದೇಶದಲ್ಲಿ ಉನ್ನತ ಅಭ್ಯಾಸ ಹಾಗೂ ಉನ್ನತ ಉದ್ಯೋಗ ಸ್ಥಾನ ಸಿಗಲಿದೆ. ನಿಮ್ಮ ಬುದ್ಧಿಶಕ್ತಿ ಹೆಚ್ಚಾಗಲಿದೆ. ಮನೆಯವರ ಮಾತುಗಳನ್ನು ಆಲಿಸುವಿರಿ. ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತಾಳ್ಮೆಯಿಂದ ಯೋಚನೆ ಮಾಡುವುದು ಎಲ್ಲದಕ್ಕೂ ಉತ್ತರ ನೀಡಲಿದೆ.

ಮೀನ ರಾಶಿಯ ಯುಗಾದಿ ವೃತ್ತಿ ಭವಿಷ್ಯ
2025ರ ಯುಗಾದಿ ಹೊಸ ವರ್ಷದಲ್ಲಿ ಮೀನ ರಾಶಿಯ ಉದ್ಯೋಗಾಕಾಂಕ್ಷಿಗಳು ಕಠಿಣ ಸಮಯವನ್ನು ಹೊಂದಿರುತ್ತಾರೆ. ರಾಜಕೀಯ ಒತ್ತಡ ಮತ್ತು ಉದ್ಯೋಗದಲ್ಲಿ ತೊಂದರೆಗಳು ಉಂಟಾಗಲಿವೆ. ಮೀನ ರಾಶಿಯ ಉದ್ಯಮಿಗಳು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯವಹಾರದಲ್ಲಿ ನಷ್ಟ ಮತ್ತು ಆರ್ಥಿಕ ಸಮಸ್ಯೆಗಳಿರುತ್ತವೆ.
ನಿಮ್ಮ ಬುದ್ದಿ ಚಂಚಲವಾಗಿ ಇರುತ್ತದೆ. ಅದನ್ನು ಸಕ್ರಮವಾಗಿ ಇಟ್ಟುಕೊಳ್ಳಿ. ಕಷ್ಟದಲ್ಲಿ ಧೈರ್ಯದಿಂದ ಇರಬೇಕು. ತುಂಬಾ ನಂಬಿದವರು ಮೋಸ ಮಾಡಬಹುದು. ಅದೃಷ್ಟ ತುಂಬಾ ಚೆನ್ನಾಗಿ ಇರುತ್ತದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಬೇರೆಯವರನ್ನು ಅನುಸರಿಸಿ ಹಣವನ್ನು ಕಳೆದುಕೊಳ್ಳಬಹುದು. ಸಂಪಾದನೆಯ ಹಣ ವಿನಾಕಾರಣ ಖರ್ಚಾಗಲಿದೆ.
ಮೀನ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ
ಮೀನ ರಾಶಿಯವರಿಗೆ ಸಾಡೇಸಾತ್ ಇದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಇವೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುವುದು. ಹೀಗಾಗಿ ಉತ್ತಮ ಆಹಾರ ಸೇವನೆ ಮಾಡಿ. ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ. ಉತ್ತಮ ಆರೋಗ್ಯಕ್ಕಾಗಿ ಧ್ಯಾನ, ಯೋಗ, ವ್ಯಾಯಾಮ ಮಾಡುವುದು ಒಳ್ಳೆಯದು. ಸಣ್ಣ ತಪ್ಪು ಹೆಜ್ಜೆ ಜೀವನ ಪರಿಯಂತ ಕೊರಗುವಂತೆ ಮಾಡಬಹುದು ಎಚ್ಚರದಿಂದಿರಿ. ಮದ್ಯಪಾನ, ಧೂಮಪಾನ, ದುಶ್ಚಟಗಳಿಂದ ದೂರವಿರಿ.
ಮೀನ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ
ಮೀನ ರಾಶಿಯವರಿಗೆ ಪ್ರೇಮ ವ್ಯವಹಾರದಲ್ಲಿ ಕಂಟಕ ಇದೆ. ಮಕ್ಕಳ ವಿವಾಹದಲ್ಲಿ ಎಚ್ಚರಿಕೆಯಿಂದ ಇರಿ. ಯಾರನ್ನಾದರೂ ನಂಬುವ ಮುನ್ನ ನೂರು ಬಾರಿ ಯೋಚಿಸಿ. ನಿಮ್ಮ ಜೀವನ ಹಾಳು ಮಾಡುವವರು ನಿಮ್ಮ ಸುತ್ತಲು ಇರುತ್ತಾರೆ. ಯಾರೊಂದಿಗೂ ಹೆಚ್ಚು ಆತ್ಮೀಯತೆಯಿಂದ ವರ್ತಿಸುವುದನ್ನು ತಪ್ಪಿಸಿ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಮನಸ್ತಾಪಗಳು ಉಂಟಾಗಬಹುದು. ಯಾವುದೇ ಸಮಸ್ಯೆ ಎದುರಾದರೂ ಕೂಡ ತಾಳ್ಮೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.
ಮೀನ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ
ಮೀನ ರಾಶಿಯವರಿಗೆ ಯುಗಾದಿ ನಂತರ ಹೆಚ್ಚು ಕೆಟ್ಟ ಫಲಿತಾಂಶಗಳಿವೆ. ಆದರೂ ಕೂಡ ವಾಹನ ಯೋಗ ಚೆನ್ನಾಗಿದೆ. ಆದರೆ ಯಾವುದೇ ದುಬಾರಿ ವಸ್ತು ಖರೀದಿಯಿಂದಲೂ ನೀವು ಮೋಸ ಹೋಗಬಹುದು. ಹೀಗಾಗಿ ಈ ಸಮಯದಲ್ಲಿ ಯಾವುದೇ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಿ. ದುಬಾರಿ ವಸ್ತುಗಳಿಗಾಗಿ ಹಣವನ್ನು ವ್ಯಯಿಸಬೇಡಿ. ದುಂದುವೆಚ್ಚದಿಂದ ದೂರವಿರಿ.
ಒಟ್ಟಾರೆಯಾಗಿ ಈ ವರ್ಷ ಮೀನ ರಾಶಿಯವರಿಗೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಮೀನ ರಾಶಿಯ ಜನರು ಈ ವರ್ಷ ಹೆಚ್ಚು ಶುಭ ಫಲಿತಾಂಶಗಳನ್ನು ಬಯಸಿದರೆ, ಭಾನುವಾರ ನವಗ್ರಹ ಸ್ತೋತ್ರ ಪಠಿಸುವುದು, ಶನಿವಾರ ಶನಿಗೆ ಎಣ್ಣೆ ಅಭಿಷೇಕ ಮಾಡುವುದು, ಗುರುವಾರ ದಕ್ಷಿಣಾಮೂರ್ತಿಯನ್ನು ಪೂಜಿಸುವುದು ಮತ್ತು ಶನಿವಾರ ಶಿವ ಅಭಿಷೇಕ ಮಾಡುವುದು ಉತ್ತಮ.
ಅಲ್ಲದೆ ಶಿವಸಹಸ್ರನಾಮ, ಹನುಮನ ಸ್ತ್ರೋತ್ರ, ದುರ್ಗಾರಾಧನೆ, ತ್ರಿದೈವಗಳ ಪೂಜೆ ಮಾಡುವುದು, ಓಂ ನಮ: ಶಿವಾಯ: ಎನ್ನುವುದು, ಓಂ ಕಾಲಭೈರವಾಯ ನಮ: ಎನ್ನುವುದು, ನವಗ್ರಹ ಶಾಂತಿ ಮಾಡಿಸುವುದು ಕೂಡ ತುಂಬಾ ಒಳ್ಳೆಯದು. ಈ ಸಮಯದಲ್ಲಿ ಹಸಿರು ನೀಲಿ ಬಣ್ಣ ಬಳಸಿದರೆ ಉತ್ತಮ. ಸಾಧ್ಯವಾದರೆ ನವಗ್ರಹಗಳಿಗೆ ಅಮವಾಸ್ಯೆ ಹುಣ್ಣಿಮೆಯ ದಿವಸ ಪೂಜೆ ಮಾಡುವುದು ಒಳಿತಾಗುತ್ತದೆ.












Click it and Unblock the Notifications