Numerology : ಈ ದಿನಾಂಕಗಳಲ್ಲಿ ಜನಿಸಿದವರಿಗೆ ಹಠಾತ್ ಹಣದ ಸುರಿಮಳೆ; ವ್ಯವಹಾರದಲ್ಲಿ ಭಾರೀ ಲಾಭ!

Numerology:ನಾವು ಹುಟ್ಟಿದ ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಜ್ಯೋತಿಷ್ಯದಲ್ಲಿ ಭವಿಷ್ಯ ಹೇಳಲಾಗುತ್ತದೆ. ಆದರೆ ಸಂಖ್ಯಾಶಾಸ್ತ್ರದಲ್ಲಿ (Nemerology) ನಮ್ಮ ಹುಟ್ಟಿದ ದಿನಾಂಕವನ್ನು ಒಟ್ಟಿಗೆ ಲೆಕ್ಕ ಹಾಕಿ ಬರುವ ಸಂಖ್ಯೆಗೆ ಆಧರಿಸಿ ಭವಿಷ್ಯವನ್ನು ಅಂದಾಜು ಮಾಡಲಾಗುತ್ತದೆ. ಸಂಖ್ಯಾ ಶಾಸ್ತ್ರದಲ್ಲಿ ಒಂದರಿಂದ ಒಂಭತ್ತು ನಂಬರ್‌ವರೆಗೆ ಇರುತ್ತದೆ. ಹಾಗಿದ್ದರೆ ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಹೇಗಿದೆ ನೋಡೋಣ ನಿಮ್ಮ ಮುಂದಿನ ದಿನಗಳ ಭವಿಷ್ಯ .

Numerology: ನಂಬರ್‌ 1

ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರ ನಂಬರ್‌ ಒಂದಾಗಿರತ್ತದೆ. ಇವರು ಹಠಮಾರಿಗಳು. ಅಂದುಕೊಂಡ ಕೆಲಸವನ್ನು ಸಾಧಿಸಿಯೇ ಬಿಡುವವರು. ಇವರು ಜೀವನದಲ್ಲಿ ಮುಂದೆ ಬರಲು ಯಾರ ನೆರವಿನ ಅವಶ್ಯಕತೆಯೂ ಇರುವುದಿಲ್ಲ. ಹುಟ್ಟು ಪ್ರತಿಭಾವಂತರು ಇವರು. ತಂದೆ ತಾಯಿಯರ ಪಾಲಿಗೆ ಅದೃಷ್ಟ ಹೊತ್ತು ತರುವರು. ವೃದ್ದಾಪ್ಯದಲ್ಲಿ ತಂದೆ-ತಾಯಿಗೆ ಬೆನ್ನೆಲುಬಾಗಿ ನಿಲ್ಲುವರು. ಶೀಘ್ರದಲ್ಲೇ ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕಾರ್ಯಕ್ಕೆ ಸರಿಯಾದ ಮನ್ನಣೆ ಮತ್ತು ಪ್ರತಿಫಲ ಸಿಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವಿರಿ.

Numerology How Date Of Birth Can Change Your Future Some Dates May Get Money And Success Lucky Dates

Numerology: ನಂಬರ್‌ 2

ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದವರು ನಂಬರ್‌ 2ರ ಅಡಿಯಲ್ಲಿ ಬರುತ್ತಾರೆ. ಇವರಿಗೆ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಇವರ ಮಾತಿಗೆ ಸಾಮಾನ್ಯವಾಗಿ ಎಲ್ಲಾ ಕಡೆ ಮನ್ನಣೆ ಇರುವುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಹೊಟ್ಟೆ ಅಥವಾ ಜೀರ್ಣಕಾರಿ ಸಮಸ್ಯೆಗಳು ಎದುರಾಗುವ ಅಪಾಯವಿದೆ. ಹಣದ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಬಹುದು. ಸಂಗಾತಿಯ ಬೆಂಬಲ ನಿಮ್ಮ ಜೊತೆ ಇರುವುದು. ಸಂಗಾತಿ ನಿಮ್ಮನ್ನು ಅತಿಯಾಗಿ ಪ್ರೀತಿಸುವರು, ವಾತ್ಸಲ್ಯ ತೋರುವರು.

ನಂಬರ್‌ 3 : ಯಾವುದೇ ತಿಂಗಳ 3, 12, 21, 30 ರಂದು ಜನಿಸಿದವರ ನಂಬರ್‌ 3 ಆಗಿರುವುದು. ಇವರು ಒಡಹುಟ್ಟಿದವರು ಅಥವಾ ಆಪ್ತ ಸ್ನೇಹಿತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಅನಗತ್ಯ ವಾದಗಳಿಗೆ ಇವರು ಹೋಗುವುದಿಲ್ಲ. ಕಣ್ಣಿನ ಆರೋಗ್ಯಕ್ಕೆ ವಿಶೇಷ ಗಮನ ಕೊಡಬೇಕು. ಆತ್ಮವಿಶ್ವಾಸದಿಂದ ಸರಿಯಾದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಭವಿಷ್ಯದ ಶುಭ ಕಾರ್ಯಕ್ರಮಗಳು ಅಥವಾ ಪ್ರಮುಖ ಯೋಜನೆಗಳನ್ನು ಹಾಕಿಕೊಳ್ಳಲು ಇದು ಸರಿಯಾದ ಸಮಯ.

ನಂಬರ್‌ 4 : ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದವರ ನಂಬರ್‌ 4 ಆಗಿರುವುದು. ನಿಮ್ಮ ಪ್ರಾಮಾಣಿಕತೆ ಮತ್ತು ನೇರ ನಡೆಯ ಸ್ವಭಾವವು ಸಮಾಜದಲ್ಲಿ ಒಳ್ಳೆಯ ಹೆಸರನ್ನು ತಂದುಕೊಡುವುದು. ಕೆಲವೊಮ್ಮೆ ಸೋಮಾರಿಯಂತೆ ಇರುವಿರಿ. ಇದರಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವ ಭಯ ಇರುವುದು. ಜ್ವರ ಅಥವಾ ಸೀಸನಲ್‌ ಹೆಲ್ತ್‌ ಸಮಸ್ಯೆಯಿಂದ ಆಲಸ್ಯ ಕಾಡಬಹುದು. ಯಾವಾಗಲೂ ನಗುತ್ತಲೇ ಇರುವ ನಿಮ್ಮ ಮನೋಭಾವನೆ ಎಲ್ಲರ ಮೆಚ್ಚುಗೆಗೆ ಕಾರಣವಾಗುವುದು.

ನಂಬರ್‌ 5 : ಯಾವುದೇ ತಿಂಗಳ 5, 14, 23 ರಂದು ಜನಿಸಿದವರ ನಂಬರ್‌ 5 ಆಗಿರುತ್ತದೆ. ಇವರು ಪ್ರತೀ ದಿನವನ್ನು ಸಾಹಸಮಯವಾಗಿ ಮತ್ತು ಉತ್ಸಾಹದಿಂದ ಕಳೆಯುವರು. ದೂರದಿಂದ ಬರುವ ಸಂದೇಶಗಳು ಲಾಭದಾಯಕವಾಗುತ್ತವೆ. ಹೊಟ್ಟೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆ ಕಾಡಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆಗಳು ಉಂಟಾಗುವುದು. ಆದರೆ ನೀವು ಧೈರ್ಯದಿಂದ ಎಲ್ಲವನ್ನೂ ಎದುರಿಸಿ ನಿಲ್ಲುವಿರಿ. ಆಕಸ್ಮಿಕ ಪರಿಚಯವು ಬಲವಾದ ಪ್ರೇಮ ಬಂಧವಾಗಿ ಬದಲಾಗುವ ಸಾಧ್ಯತೆಯಿದೆ.

ನಂಬರ್‌ 6 : ಯಾವುದೇ ತಿಂಗಳ 6, 15 ಅಥವಾ 24 ನೇ ತಾರೀಕಿಗೆ ಜನಿಸಿದರೆ ಅವರ ನಂಬರ್‌ 6. ಕಚೇರಿ ನಿರ್ವಹಣೆಯಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಗುವುದು. ವಾದಗಳಿಂದ ದೂರವಿರುವುದು ಉತ್ತಮ. ಪ್ರತಿಸ್ಪರ್ಧಿಗಳು ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸುವರು.ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಒಳ್ಳೆಯದು. ಹಠಾತ್ ಆರ್ಥಿಕ ಲಾಭವಾಗುವುದು. ಹಣಕಾಸಿನ ಕೊರತೆ ನೀಗುವುದು. ಪ್ರೇಮ ವ್ಯವಹಾರಗಳಲ್ಲಿ ನೆಮ್ಮದಿ ಇರುವುದು.

ನಂಬರ್‌ 7 : ಯಾವುದೇ ತಿಂಗಳ 7, 16, 25 ರಂದು ಜನಿಸಿದವರು ನಂಬರ್‌ 7 ರ ಅಡಿಯಲ್ಲಿ ಬರುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ತೃಪ್ತಿಯನ್ನು ಪಡೆಯುವರು. ಶತ್ರುಗಳ ಬಗ್ಗೆ ಯಾವತ್ತೂ ಎಚ್ಚರದಿಂದಿರಿ. ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯಗಳೊಂದಿಗೆ ಉತ್ಸಾಹದಿಂದ ಕೆಲಸಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗುವುದು. ಅದೃಷ್ಟವು ನಿಮ್ಮೊಂದಿಗೆ ಇರುವುದು. ಸಂಗಾತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವುದು.

ನಂಬರ್‌ 8 : ಯಾವುದೇ ತಿಂಗಳ 8, 17 ಮತ್ತು 26 ನೇ ತಾರೀಕಿಗೆ ಜನಿಸಿದವರ ನಂಬರ್‌ 8 ಆಗಿರುವುದು. ಸರ್ಕಾರಿ ಕಚೇರಿಗಳಿಂದ ಆಗಬೇಕಾಗಿರುವ ಕೆಲಸ ಮುಗಿಯುವುದು. ಅನಿರೀಕ್ಷಿತ ಘರ್ಷಣೆಗಳು ಕೆಲವು ಗೊಂದಲಗಳಿಗೆ ಕಾರಣವಾಗುವುದು. ವಿದ್ಯುತ್ ಉಪಕರಣಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ದಿನನಿತ್ಯದ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಅಪರಿಚಿತರಿಂದ ಪ್ರಶಂಸೆಯನ್ನು ಪಡೆಯುವಿರಿ.

ನಂಬರ್‌ 9 : ಯಾವುದೇ ತಿಂಗಳ 9, 18 ಮತ್ತು 27 ನೇ ತಾರೀಜಿನಂದು ಜನಿಸಿದವರ ನಂಬರ್‌ 9. ನಿಮಗೆ ಸಂಬಂಧಿಸದ ವಿವಾದಗಳಲ್ಲಿ ಭಾಗಿಯಾಗಬೇಡಿ. ಒಂದು ಸಣ್ಣ ಚಿಂತೆ ಮನಸ್ಸಿಗೆ ಕಿರಿಕಿರಿ ಉಂಟು ಮಾಡಬಹುದು. ಪ್ರಯಾಣ ಮಾಡುವಾಗ ರಸ್ತೆ ಅಪಘಾತಗಳ ಬಗ್ಗೆ ಬಹಳ ಜಾಗರೂಕರಾಗಿರಿ. ಆದಾಯಕ್ಕಿಂತ ವೆಚ್ಚಗಳು ಹೆಚ್ಚಾಗುವುದು. ಆಳವಾಗಿ ಪ್ರೀತಿಸುವ ವ್ಯಕ್ತಿಯೊಂದಿಗಿನ ಬಾಂಧವ್ಯವು ಹೆಚ್ಚು ಅರ್ಥಪೂರ್ಣವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+