ಸಂಖ್ಯಾ ಶಾಸ್ತ್ರ: 5ರ ಸಂಖ್ಯೆ ಗುಣ ವಿಶೇಷಗಳು

ಇವರ ಪಾಲಿಗೆ ಮದುವೆ ಮತ್ತು ಸಂಬಂಧಗಳು ತುಂಬ ಮುಖ್ಯವಾಗುತ್ತವೆ. ಇವರ ಪ್ರಕಾರದ ಪ್ರೀತಿ ವ್ಯಾಖ್ಯಾನವೇ ಬೇರೆಯಾಗಿರುತ್ತದೆ. ಭಾವನೆಗಳ ಭಾರದಲ್ಲಿ ಇರಬಯಸದ ಸಂಖ್ಯೆ ಐದು ಹೊಸ ಸಂಬಂಧಗಳನ್ನು ಬೇಗ ಮಾಡಿಕೊಳ್ಳುತ್ತದೆ.

ಈ ಬಾರಿ ಸಂಖ್ಯೆ 5ರ ಗುಣ, ವಿಶೇಷಗಳ ಬಗ್ಗೆ ತಿಳಿಯೋಣ. ಯಾವುದೇ ತಿಂಗಳ 5, 14, 23ನೇ ತಾರೀಕಿನಲ್ಲಿ ಹುಟ್ಟಿದವರ ಜನ್ಮಸಂಖ್ಯೆ 5 ಆಗುತ್ತದೆ. ಬುಧ ಇವರ ಅಧಿಪತಿ. ಸ್ವತಂತ್ರವಾಗಿ ಬದುಕಬೇಕು ಎಂಬುದು ಇವರ ಸ್ವಭಾವ. ಇಡೀ ಜಗತ್ತನ್ನೇ ಸುತ್ತಿ ಬರಬೇಕೆಂದರೂ ಎರಡು ಜೊತೆ ಬಟ್ಟೆ ಇಟ್ಟುಕೊಂಡು ತಕ್ಷಣವೇ ಸಿದ್ಧವಾಗಿ ಬಿಡ್ತಾರೆ. ಒಟ್ಟಿನಲ್ಲಿ ಇವರಿಗೆ ಕಿರಿಕಿರಿ ಆಗಬಾರದು, ಹೀಗ್ಯಾಕೆ ಮಾಡಿದೆ ಅಂತ ಕೇಳಬಾರದು.

ಜೀವನದ ಪ್ರತಿ ಕ್ಷಣವನ್ನೂ ಆಸ್ವಾದಿಸಬೇಕು ಅನ್ನೋದು ಇವರ ನಂಬಿಕೆ. ತೀರಾ ಗಂಭೀರ ಸ್ವಭಾವದವರಲ್ಲದ ಇವರಿಗೆ ಸ್ನೇಹಿತರು ಅಂದರೆ ಸ್ವಲ್ಪ ಜಾಸ್ತಿಯೇ ಹತ್ತಿರ. ಜೊತೆಗೆ ಕಾಳಜಿ ಕೂಡ. ಆ ಕಾರಣದಿಂದಲೇ ಇವರಿಗಿರುವ ಸ್ನೇಹಿತರ ಸಂಖ್ಯೆಯೂ ಜಾಸ್ತಿ. ಎಲ್ಲರಿಗೂ ಒಂದು ದಾರಿ ಅಂತ ಇರುತ್ತಲ್ಲಾ ಅವುಗಳನ್ನು ಅನುಸರಿಸುವ ಪೈಕಿ ಇವರಲ್ಲ. ಅದರೆ ಬಹಳ ಕ್ರಿಯಾಶೀಲರು. ಕ್ರಿಯೇಟಿವಿಟಿ ಬಳಸುವಂಥ ಕ್ಷೇತ್ರಗಳು ಇವರಿಗೆ ಸೂಕ್ತವಾದದ್ದು.

Number 5

ಆದರೆ, ಬಲೇ ಚಂಚಲ ಸ್ವಭಾವದವರು. ಆದ್ದರಿಂದ ಇವರ ಬಗ್ಗೆ ಒಂದು ಗೊಂದಲ ಇದ್ದೇ ಇರುತ್ತೆ. ಈ ಸಂಖ್ಯೆಯವರು ತಮ್ಮ ಭಾವಾವೇಶವನ್ನು ನಿಗ್ರಹಿಸಲೇಬೇಕು. ತೀರಾ ಕಟ್ಟುನಿಟ್ಟಾಗಿ ಇರಬೇಕು ಅಂದುಕೊಳ್ಳುವವರೇನಾದರೂ ಇಂತಹವರಿಗೆ ಜತೆಯಾದರೆ ಅವರ ನೆಮ್ಮದಿಗೆ ಎಳ್ಳುನೀರು ಬಿಟ್ಟಹಾಗೆ. ಐದರ ಸಂಖ್ಯೆಯವರು ಮೊದಲು ತಮಗೆ ಬೇಕಾದಂತೆ ಬದುಕೋರು. ಹೀಗೇ ಇರಬೇಕು, ಹಾಗೇ ನಡೆದುಕೊಳ್ಳಬೇಕು ಅನ್ನೋದೆಲ್ಲ ಇವರಿಗೆ ಸಹಿಸೋದಿಕ್ಕೆ ಆಗಲ್ಲ.

ತುಂಬ ಕುತೂಹಲ ಸ್ವಭಾವದ ಇವರಿಗೆ ಎಲ್ಲವನ್ನೂ ತಿಳಿದುಕೊಳ್ಳುವ ಅಪೇಕ್ಷೆ. ಅದು ಸುದ್ದಿ, ಗಾಸಿಪ್, ಹೊಸ ಟ್ರೆಂಡ್ ಏನೇ ಆಗಿರಲಿ ತಿಳಿದುಕೊಳ್ಳಬೇಕು. ಓದುವುದು ಕೂಡ ಅಷ್ಟೇ ಇಷ್ಟದ ವಿಚಾರ. ನಾನು ಹೇಳಿದ್ದೇ ಆಗಬೇಕು ಅನ್ನೋ ಅಂಥವರಲ್ಲ ಎಂಬುದು ಇವರ ವಿಚಾರದಲ್ಲಿ ಪ್ಲಸ್. ಸರಿಯಾದ ಸಲಹೆ, ವಿಚಾರ ಯಾರಿಂದ ಬಂದರೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ.

ಅದರೆ, ಇವರ ಪಾಲಿಗೆ ಮದುವೆ ಮತ್ತು ಸಂಬಂಧಗಳು ತುಂಬ ಮುಖ್ಯವಾಗುತ್ತವೆ. ಇವರ ಪ್ರಕಾರದ ಪ್ರೀತಿ ವ್ಯಾಖ್ಯಾನವೇ ಬೇರೆಯಾಗಿರುತ್ತದೆ. ಭಾವನೆಗಳ ಭಾರದಲ್ಲಿ ಇರಬಯಸದ ಸಂಖ್ಯೆ ಐದು ಹೊಸ ಸಂಬಂಧಗಳನ್ನು ಬೇಗ ಮಾಡಿಕೊಳ್ಳುತ್ತದೆ. ಹಾಗಂತ ಏಕಕಾಲದಲ್ಲಿ ಹಲವರ ಜತೆಗೆ ಚೆನ್ನಾಗಿರ್ತಾರೆ ಅಂತಲೂ ಅಲ್ಲ. ಸಂಬಂಧದಿಂದ ಬೇಗ ಆಚೆಗೆ ಬರುತ್ತಾರೆ ಅಂತಷ್ಟೇ.

Amir Khan

ಈ ಸಂಖ್ಯೆಯವರಿಗೆ ಕೆಲ ವಿಚಾರದಲ್ಲಿ ಬೇಜವಾಬ್ದಾರಿ ಇರುತ್ತದೆ. ತುಂಬ ಒರಟಾದ ಉತ್ತರಗಳನ್ನು ಹೇಳ್ತಾರೆ. ಕೆಲವು ಬಾರಿಯಂತೂ ತಾವೇನು ಮಾಡುತ್ತಿದ್ದೀವಿ ಎಂಬ ಪರಿವೆ ಇರೋದಿಲ್ಲ. ಇಂಥ ಗುಣಗಳನ್ನು ತಿದ್ದುಕೊಂಡರೆ ತುಂಬ ಎತ್ತರದ ಸ್ಥಾನವನ್ನು ತಲುಪಿಕೊಳ್ತಾರೆ. ಹ್ಞಾಂ, ಇನ್ನೊಂದು ವಿಷಯ. ಕೆಲಸದ ವಿಚಾರಕ್ಕೆ ಬಂದಾಗ ಒಂದು ಕಡೆ ಕೆಲ ವರ್ಷಗಳಾದರೂ ಕೆಲಸ ಮಾಡಬೇಕು. ಪದೇ ಪದೇ ಬದಲಾಯಿಸುವುದು ಒಳ್ಳೆಯದಲ್ಲ.

3,5,9ರ ಸಂಖ್ಯೆಯಲ್ಲಿ ಹುಟ್ಟಿದವರು ಒಳ್ಳೆ ಬಿಜಿನೆಸ್ ಪಾರ್ಟನರ್ ಆಗ್ತಾರೆ.

1,3,5,9ರ ಸಂಖ್ಯೆಯಲ್ಲಿ ಹುಟ್ಟಿದವರ ಜೊತೆ ಮದುವೆಯಾದರೆ ಹೊಂದಾಣಿಕೆ ಚೆನ್ನಾಗಿರತ್ತೆ.

ನಂಬರ್ 5ರಲ್ಲಿ ಹುಟ್ಟಿದವರು- ಜವಾಹರ್ ಲಾಲ್ ನೆಹರೂ, ವಿಲಿಯಂ ಶೇಕ್ ಸ್ಪಿಯರ್, ಸಂಜಯ ಗಾಂಧಿ, ಮಾರ್ಕ್ ಜುಕರ್ ಬರ್ಗ್, ಅಮೀರ್ ಖಾನ್

ಶುಭ ದಿನ: ಬುಧವಾರ, ಶುಕ್ರವಾರ

ಶುಭ ಬಣ್ಣ: ಹಸಿರು, ತಿಳಿ ಕಂದು, ಹೊಗೆ ಬಣ್ಣದ ಬೂದು

ಶುಭ ದಿನಾಂಕ: 5,14,23,9,18,27

ಶುಭ ರತ್ನ: ಪಚ್ಚೆ, ವಜ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+