Ayushman Yoga 2024: ನವೆಂಬರ್ 1 ಪ್ರೀತಿ ಯೋಗ: ಈ ರಾಶಿಯವರು ಗಂಡಾಂತರದಿಂದ ಪಾರು
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನ (ನವೆಂಬರ್ 1) ಚಂದ್ರನು ಶುಕ್ರ, ತುಲಾ ರಾಶಿಯಲ್ಲಿ ಸಾಗಲಿದ್ದಾನೆ. ಈ ದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇಂದು ಕೆಲ ಯೋಗಗಳು ರೂಪಗೊಳ್ಳುತ್ತವೆ. ಮಂಗಳಕರ ಪ್ರೀತಿ ಯೋಗ, ಆಯುಷ್ಮಾನ್ ಯೋಗ ಈ ದಿನ ಕೆಲ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಹಾಗಾದರೆ ಆಯುಷ್ಮಾನ್ ಯೋಗದಿಂದ ಯಾವ ರಾಶಿಗೆ ಒಳಿತಾಗಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಇಂದು ರೂಪಗೊಳ್ಳುವ ಆಯುಷ್ಮಾನ್ ಯೋಗ ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ದೀಪಾವಳಿಯ ಕಾರಣ ಕುಟುಂಬದ ಎಲ್ಲಾ ಸದಸ್ಯರು ತುಂಬಾ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯುತ್ತೀರಿ. ಹೊಸ ಉದ್ಯೋಗ ಪ್ರಾರಂಭಿಸಲು ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುವಿರಿ. ಈ ಶೂಬ ದಿನ ಮನೆ, ಭೂಮಿ, ವಾಹನ ಖರೀದಿ ಮಾಡಬಹುದು. ಈ ದಿನ ಮಾಡುವ ಪೂಜೆಗೆ ಅದೃಷ್ಟ ಲಕ್ಷ್ಮೀ ನಿಮ್ಮೊಂದಿಗೆ ಸದಾ ಇರುತ್ತಾಳೆ.
ಈ ದಿನ ಶುಭ ಮುಹೂರ್ತದಲ್ಲಿ ನೀವು ಮನೆಗೆ ತರುವ ಹೊಸ ವಸ್ತುಗಳ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಇರಲಿದೆ. ನಿಮ್ಮ ಶ್ರಮಕ್ಕೆ ಮೇಲಾಧಿಕಾರಿಗಳು ನಿಮ್ಮನ್ನು ಗುರಿತಿಸುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಮನೆಯ ಎಲ್ಲಾ ಸಮಸ್ಯೆಗಳು ದೂರಾಗಿ ನಿಮ್ಮ ಜೀವನ ಆನಂದದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ
ಆಯುಷ್ಮಾನ್ ಯೋಗ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಬದಲಾವಣೆಯನ್ನು ತರಲಿದೆ. ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಸಂಪತ್ತು ಹೆಚ್ಚಾಗುವುದರೊಂದಿಗೆ ಲಾಭದಾಯಕ ಕೆಲಸಗಳನ್ನು ನೀವು ಆರಂಭಿಸುವಿರಿ. ಮನೆಯಲ್ಲಿ ಹಬ್ಬದ ವಾತಾವರಣ ಸಂತಸದಿಮದ ಕೂಡಿರುತ್ತದೆ. ನಿಮ್ಮ ಮನೆಗೆ ಸಂಪತ್ತಿನ ಲಕ್ಷ್ಮೀ ಆಗಮಿಸುತ್ತಾಳೆ.
ಹೂಡಿಕೆಯಿಂದ ಲಾಭ ಸಿಗಲಿದೆ. ಎಲ್ಲಾ ಕಾರ್ಯಗಳು ಅಡೆತಡೆ ಇಲ್ಲದೆ ಪೂರ್ಣಗೊಂಡು ನಿಮಗೆ ಖುಷಿ ನೀಡಲಿವೆ. ಧಾರ್ಮಿಕ ಸ್ಥಳಕ್ಕೆ ಪ್ರವಾಸವನ್ನು ಯೋಜಿಸಬಹುದು. ವ್ಯಾಪಾರಸ್ಥರಿಗೆ ಅಧಿಕ ಲಾಭ ಗಳಿಸುವ ಅವಕಾಶಗಳಿವೆ. ಇದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ದೀಪಾವಳಿಯಂದು ಕುಟುಂಬದ ಸದಸ್ಯರೆಲ್ಲರೂ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ.

ಧನು ರಾಶಿ
ಧನು ರಾಶಿಯವರಿಗೆ ಆಯುಷ್ಮಾನ್ ಯೋಗ ಜೀವನದ ಎಲ್ಲಾ ಸಮಸ್ಯೆಗಳಿಂದ ಪಾರು ಮಾಡಲಿದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಎಲ್ಲವನ್ನೂ ಪಡೆಯುವಿರಿ. ಅನೇಕ ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷ ತರಲಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಜೀವನದಲ್ಲಿ ಅಂದುಕೊಂಡ ಎಲ್ಲಾ ಕಾರ್ಯಗಳು ಸುಗಮವಾಗಲಿದೆ. ನಿಮ್ಮ ಶ್ರಮ ಮಾತ್ರ ನಿಮ್ಮ ಕೈಹಿಡಿಯಲಿದೆ. ಎಲ್ಲಾ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಇರುವ ಸಮಸ್ಯೆಗಳು ಪರಿಹಾರವಾಗುತ್ತವೆ. ಯಾವುದೇ ಅವಿವಾಹಿತರು ಮನೆಯಲ್ಲಿದ್ದರೆ ಅವರ ಜೀವನಕ್ಕೆ ಸಂಗಾತಿ ಸಿಗುವರು. ಮನೆಯಲ್ಲಿ ಶುಭ ಕಾರ್ಯಗಳಿಂದಾಗಿ ಮನಸ್ಸು ಖುಷಿಯಾಗಿರುತ್ತದೆ.












Click it and Unblock the Notifications