Navratri 2024: ನವರಾತ್ರಿಯಲ್ಲಿ ಇವರಿಗೆ ಎಲ್ಲಾ ಕಷ್ಟಗಳಿಂದ ಮುಕ್ತಿ ನೀಡಲಿದ್ದಾಳೆ ದುರ್ಗಾದೇವಿ
ನವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಕ್ಟೋಬರ್ 3 ರಿಂದ 12ರವರೆಗೂ ದುರ್ಗಾದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥಗಳನ್ನು ನೆರವೇರಿಸಲು ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜೆ ಮಾಡಲಾಗುತ್ತದೆ. ಅಂದಹಾಗೆ ಈ ವಿಜಯದಶಮಿಯಂದು ಗ್ರಹಗಳ ಸ್ಥಾನಗಳು ಅನೇಕ ಮಂಗಳಕರ ಫಲವನ್ನು ನೀಡಲಿದೆ. ಹಾಗಾದರೆ ಯಾವ ಗ್ರಹಗಳಿಂದ ಯಾವ ರಾಶಿಗೆ ಅನುಕೂಲಕರ ಫಲ ಸಿಗಲಿದೆ ಎಂದು ತಿಳಿಯೋಣ.
ಜ್ಯೋತಿಷ್ಯದ ಪ್ರಕಾರ, ಗುರು, ಸೂರ್ಯ ಹಾಗೂ ಚಂದ್ರನ ಸಂಕ್ರಮಣ ಕೆಲ ರಾಶಿಯವರಿಗೆ ನವರಾತ್ರಿಯ ಸಮಯದಲ್ಲಿ ಅದ್ಬುತ ಫಲವನ್ನು ನೀಡಲಿದೆ. ಉದ್ಯೋಗದಲ್ಲಿ ಧನಲಾಭ, ಅಧ್ಯನಯದಲ್ಲಿ ಅದೃಷ್ಟ ಹೆಚ್ಚಾಗಲಿದೆ. ಶತ್ರುಗಳ ಕಾಟದಿಂದ ಪರಿಹಾರ ಸಿಗಲಿದೆ. ಶತ್ರುಗಳ ಕಾಟದಿಂದ ನೀವು ದೂರವಾಗುವಿರಿ. ಅನಿರೀಕ್ಷಿತ ಲಾಭದಿಂದ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಲಿದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ವಿಜಯದಶಮಿ ಎಲ್ಲಾ ಕ್ಷೇತ್ರದಲ್ಲೂ ಜಯ ತಂದುಕೊಡಲಿದೆ. ನವರಾತ್ರಿಯಲ್ಲಿ ಗುರುವು ಮೀನರಾಶಿಯಲ್ಲಿ ಸಾಗುವುದರಿಂದ ಅದರ ಲಾಭಗಳು ಹೆಚ್ಚಾಗಿ ಮೇಷ ರಾಶಿಯವರಿಗೆ ಸಿಗಲಿದೆ. ಸ್ನೇಹಿತರಲ್ಲಿ ಮಾತ್ರವಲ್ಲದೆ ಸಂಬಂಧಿಕರಲ್ಲಿಯೂ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉನ್ನತ ಸಾಧನೆ ಮಾಡಬಹುದು.
ಮೇಷ ರಾಶಿಯವರ ಸಂಪತ್ತು ಹೆಚ್ಚಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಬಡ್ತಿ ಸಿಗುವ ಲಕ್ಷಣಗಳು ಇವೆ. ನಿಮ್ಮನ್ನು ಶತ್ರುಗಳಂತೆ ಕಾಣುತ್ತಿದ್ದ ಸಂಬಂಧಿಕರು ಈಗ ನಿಮ್ಮ ಸ್ನೇಹಿತರಾಗುತ್ತಾರೆ. ಅವರು ನಿಮ್ಮನ್ನು ಮೆಚ್ಚಿಸಲು ತಮ್ಮ ದಾರಿಯಲ್ಲಿ ಹೋಗುತ್ತಾರೆ. ಈ ಸಮಯದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗಿರುತ್ತದೆ.

ಕರ್ಕ ರಾಶಿ
ಕಟಕ ರಾಶಿಯವರಿಗೆ ವಿಜಯದಶಮಿ ಅಥವಾ ನವರಾತ್ರಿಯ ಸಮಯದ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಚಂದ್ರನು ನಾಲ್ಕನೇ ಮನೆಯಲ್ಲಿರುವುದರಿಂದ ಕರ್ಕ ರಾಶಿಯವರು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸಂಗಾತಿಯೊಂದಿಗಿನ ನಿಮ್ಮ ಜೀವನ ಮಧುರವಾಗಿರುತ್ತದೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.
ಕರ್ಕ ರಾಶಿ ಅವರು ತಮ್ಮ ಗುರಿಗಳನ್ನು ವಿಳಂಬವಿಲ್ಲದೆ ಸುಲಭವಾಗಿ ಸಾಧಿಸಬಹುದು. ಕೆಲವು ದೃಢವಾದ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಹೆಚ್ಚಿನ ಲಾಭ ತಂದುಕೊಡಲಿದೆ. ಅಧ್ಯಯನದಲ್ಲಿ ಹೊಸ ಬದಲಾವಣೆ ಕಂಡು ಬರಲಿದೆ. ಅಂದುಕೊಂಡ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ಕೆಲಸದಲ್ಲಿ ಒತ್ತಡವನ್ನು ಕಡಿಮೆ ಆಗಿ, ಉದ್ಯೋಗಾಕಾಂಕ್ಷಿಗಳಿಗೆ ಈ ಅವಧಿಯಲ್ಲಿ ಹೊಸ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗಲಿದೆ.

ಸಿಂಹ ರಾಶಿ
ನವರಾತ್ರಿಯಲ್ಲಿ ಸಿಂಹ ರಾಶಿಯವರಿಗೆ ಶುಭ ಫಲಗಳನ್ನು ಸೂರ್ಯ ನೀಡಲಿದ್ದಾನೆ. ಸೂರ್ಯ ಐದನೇ ಮನೆಯಲ್ಲಿ ಕುಳಿತಿರುವುದರಿಂದ ಸಿಂಹ ರಾಶಿಯವರಿಗೆ ಈ ನವರಾತ್ರಿಯಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ. ಹೂಡಿಕೆಯ ಕ್ಷೇತ್ರವು ಹೆಚ್ಚಿನ ಆದಾಯ ಸಿಗಲಿದೆ. ಸಿಂಹ ರಾಶಿಯವರ ಜಾತಕದಲ್ಲಿ ಮಂಗಳ ಗ್ರಹದ ಸ್ಥಾನ ಉತ್ತಮವಾಗಿದ್ದು, ಇದು ಅನೇಕ ಅಸಾಮಾನ್ಯ ಕೆಲಸಗಳನ್ನು ಮಾಡುವ ಧೈರ್ಯವನ್ನು ಹೆಚ್ಚಿಸುತ್ತದೆ.
ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ. ಮಂಗಳನ ಅನುಕೂಲಕರ ಸ್ಥಾನ ಅನೇಕ ಅಸಾಮಾನ್ಯ ಕೆಲಸಗಳನ್ನು ಮಾಡುವ ಧೈರ್ಯವನ್ನು ಹೆಚ್ಚಿಸುತ್ತದೆ. ಹೊಸ ಭೂಮಿ ಅಥವಾ ವಾಹನ ಖರೀದಿಸಲು ಇದು ಸೂಕ್ತ ಸಮಯ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications