Monthly Horoscope: ಸೆಪ್ಟೆಂಬರ್‌ನಲ್ಲಿ 6 ರಾಶಿಯವರಿಗೆ ಶುಭಯೋಗ: ಉದ್ಯೋಗ, ಹಣಕಾಸಿನಲ್ಲಿ ಭರ್ಜರಿ ಲಾಭ!
ವೈದಿಕ ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ ತಿಂಗಳು ಗ್ರಹ ಸಂಚಾರದ ವಿಷಯದಲ್ಲಿ ಬಹಳ ಮುಖ್ಯವಾಗಿರಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ಚಲನೆಯನ್ನು ಬದಲಾಯಿಸುತ್ತವೆ. ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಯು ನಾಲ್ಕು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಸೆಪ್ಟೆಂಬರ್ ತಿಂಗಳ ಮಾಸಿಕ ಜಾತಕ ಫಲದ ಪ್ರಕಾರ ಯಾವ ರಾಶಿಯವರಿಗೆ ಅದೃಷ್ಟ ತರುತ್ತದೆ ಎಂದು ನೋಡೋಣ.
ಮೇಷ ರಾಶಿ (Aries)
ಶನಿಯು ಪ್ರಸ್ತುತ ಹಿಮ್ಮುಖ ಚಲನೆಯಲ್ಲಿದ್ದಾನೆ. ಇದರ ಜೊತೆಗೆ ಗುರು ಗ್ರಹದ ನೀಚ ದೃಷ್ಟಿಯೂ ನಿಮ್ಮ ರಾಶಿಯ ಮೇಲೆ ಬೀಳುತ್ತಿದೆ. ಹೀಗಾಗಿ ಸೆಪ್ಟೆಂಬರ್ 18 ರವರೆಗೆ ನಿಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆ ಎದುರಾಗಬಹುದು. ಹೊಸ ಸವಾಲುಗಳು ಸೃಷ್ಟಿಯಾಗಬಹುದು. ಆದರೆ ಸೆಪ್ಟೆಂಬರ್ 18ರ ನಂತರ ನಿಮಗೆ ಶುಭ ಫಲಿತಾಂಶಗಳು ದೊರೆಯಲು ಪ್ರಾರಂಭವಾಗುತ್ತವೆ.ಯಾವುದೇ ಕೆಲಸವನ್ನು ಮಾಡುವಾಗಲೂ ಎಚ್ಚರಿಕೆಯಿಂದ ಇರಿ. ಪ್ರಮುಖ ನಿರ್ಧಾರಗಳನ್ನು ಸ್ವಲ್ಪ ಮುಂದೂಡಿದರೆ ಒಳ್ಳೆಯದು.

ವೃಷಭ ರಾಶಿ (Taurus)
ಸೆಪ್ಟೆಂಬರ್ ಆರಂಭದ ಅವಧಿಯಲ್ಲಿ ಭಾವನಾತ್ಮಕವಾಗಿ ಸ್ವಲ್ಪ ಏರಿಳಿತಗಳಾಗಬಹುದು. ಈ ತಿಂಗಳು ಉತ್ಸಾಹದಿಂದ ಕೂಡಿದ್ದು ಹೊಸ ಆರಂಭಕ್ಕೆ ಸಾಕ್ಷಿಯಾಗುವುದು. ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಆರೋಗ್ಯ ಉತ್ತಮವಾಗಿರುವುದು. ಆದರೂ ಸೆಪ್ಟೆಂಬರ್ ಮಧ್ಯದಲ್ಲಿ ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು. ಕೋಪದ ಕೈಗೆ ಬುದ್ದಿ ಕೊಡಬೇಡಿ. ತಾಳ್ಮೆಯಿಂದ ಇರಿ. ಸೆಪ್ಟೆಂಬರ್ 18ರ ನಂತರ ಪರಿಸ್ಥಿತಿ ಸುಧಾರಿಸುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಬಹುದು. ವಾಹನ ಚಾಲನೆ ಮಾಡುವಾಗ ಜಾಗೃತೆ ಅಗತ್ಯ.
ಮಿಥುನ ರಾಶಿ (Gemini)
ಇದು ನಿಮ್ಮ ಪಾಲಿನ ಅದೃಷ್ಟದ ತಿಂಗಳು. ಹೊಸ ಯೋಜನೆಗಳಲ್ಲಿ ಉತ್ತಮ ಫಲಿತಾಂಶಗಳು ಸಿಗುವುದು.ಹೂಡಿಕೆಗೆ ಉತ್ತಮ ಸಮಯ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ವೃತ್ತಿ ಜೀವನದಲ್ಲಿ ಮೇಲಕ್ಕೇರಲು ಉತ್ತಮ ಅವಕಾಶಗಳು ಸಿಗುವುದು.ಹಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದು. ವಿದ್ಯಾರ್ಥಿಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರುವುದು. ಹೊಸ ಸಂಬಂಧಗಳು ಬೆಳೆಯಬಹುದು, ಮನೆಯಲ್ಲಿ ಮದುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಚೆನ್ನಾಗಿರುವುದು. ಆದರೂ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತಿರಬಹುದು.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರಿಗೂ ಇದು ಅದೃಷ್ಟದ ಮಾಸ. ಮನೆ ನಿರ್ಮಾಣ, ವಾಹನ ಖರೀದಿಯ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ತಿಂಗಳ ಮಧ್ಯದಿಂದ ನಿಂತು ಹೋಗಿರುವ ಕೆಲಸಗಳು ಮತ್ತೆ ಆರಂಭವಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಕಠಿಣ ಪರಿಶ್ರಮದಿಂದ ಲಾಭ ಸಿಗುವುದು. ಆರೋಗ್ಯ ಉತ್ತಮವಾಗಿರುವುದು.
ಸಿಂಹ ರಾಶಿ (Leo)
ಸೆಪ್ಟೆಂಬರ್ ತಿಂಗಳು ಸಿಂಹ ರಾಶಿಯವರಿಗೆ ಅತ್ಯಂತ ಲಾಭದಾಯಕವಾಗಿರಲಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸುವಿರಿ. ವೃತ್ತಿಯಲ್ಲಿ ಸ್ಥಾನಮಾನ ಹೆಚ್ಚಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿಯಾಗುವುದು. ವ್ಯವಹಾರ ವಿಸ್ತರಣೆಗೂ ಅವಕಾಶ ಸಿಗುವುದು. ಹೆಚ್ಚಿನ ಧನ ಲಾಭವಾಗಿ ಸಂಪತ್ತು ವೃದ್ಧಿಯಾಗುವುದು. ತಿಂಗಳ ಮಧ್ಯದದಲ್ಲಿ ವಾಹನ, ಭೂಮಿ ಅಥವಾ ಮನೆ ಖರೀದಿಸಲು ಶುಭ ಸಮಯವಾಗಿದೆ. ಈ ಬಗ್ಗೆ ನಿರ್ಧಾರ ತೆಗೆದುಕೊಂಡರೆ ಲಾಭವಾಗುವುದು. ವಿದ್ಯಾರ್ಥಿಗಳಿಗೂ ಸಮಯ ಅನುಕೂಲಕರವಾಗಿರುವುದು.
ಕನ್ಯಾ ರಾಶಿ (Virgo)
ಈ ತಿಂಗಳಿಂದ ನಿಮ್ಮ ಜೀವನದ ಹೊಸ ಆರಂಭ. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದು. ಬಡ್ತಿಗೆ ಅವಕಾಶವಿದೆ. ದೊಡ್ಡ ಜವಾಬ್ದಾರಿ ಹೆಗಲೇರುವುದು. ಕೆಲಸ ಬದಲಾಯಿಸುವ ನಿರ್ಧಾರ ಸದ್ಯಕ್ಕೆ ಬೇಡ. ವ್ಯವಹಾರದಲ್ಲಿ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮಗೆ ಬರಬೇಕಾಗಿದ್ದ ಬಾಕಿ ಹಣ ಕೈಸೇರುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರಿ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು.ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಸೆಪ್ಟೆಂಬರ್ ಅದೃಷ್ಟ ಮತ್ತು ಯಶಸ್ಸನ್ನು ಹೊತ್ತು ತರುವ ಮಾಸವಾಗಿರಲಿದೆ. ಶುಕ್ರನಿಂದಾಗಿ ಅದೃಷ್ಟ ನಿಮ್ಮ ಪರವಾಗಿ ಇರುವುದು. ವೃತ್ತಿಜೀವನದಲ್ಲಿ ಒಳ್ಳೆಯ ಅವಕಾಶಗಳು ಸಿಗುವುದು. ಹೊಸ ಉದ್ಯೋಗಕ್ಕೆ ಸೇರಬಹುದು. ಪ್ರಮೋಷನ್ ಸಿಗುವ ಸಾಧ್ಯತೆಯೂ ಇದೆ. ಆದಾಯದಲ್ಲಿ ಹೆಚ್ಚಳವಾಗುವುದು. ಭವಿಷ್ಯಕ್ಕಾಗಿ ಹಣ ಕೂಡಿಡುವುದು ಸಾಧ್ಯವಾಗುವುದು. ಪ್ರೇಮ ಮತ್ತು ದಾಂಪತ್ಯ ಜೀವನ ಸುಖಕರವಾಗಿರುವುದು.ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.
ವೃಶ್ಚಿಕ ರಾಶಿ (Scorpio)
ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಬಡ್ತಿ ಸಿಗುವ ಅವಕಾಶವಿದೆ. ಆರ್ಥಿಕ ಲಾಭ ಪಡೆಯಲು ಉತ್ತಮ ಅವಕಾಶಗಳು ಸಿಗುವುದು. ಬಾಕಿ ಇರುವ ಎಲ್ಲಾ ಕೆಲಸಗಳು ಸರಾಗವಾಗಿ ಮುಗಿಯುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಗೂ ಬಡ್ತಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ (Sagittarius)
ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಪ್ರಗತಿಯಾಗುವುದು. ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಿಗುವುದು. ತಿಂಗಳ ಮಧ್ಯದಲ್ಲಿ ಐಶಾರಾಮಿ ವಸ್ತುಗಳನ್ನು ಖರೀದಿಸುವಿರಿ. ವೈವಾಹಿಕ ಜೀವನ ಸುಖಮಯವಾಗಿರುವುದು. ಆದಾಯದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಬಹುದು. ಆದರೂ ಸ್ನೇಹಿತರು ಸರಿಯಾದ ಸಮಯಕ್ಕೆ ಸಹಾಯ ಮಾಡುವರು.
ಮಕರ ರಾಶಿ (Capricorn)
ವೃತ್ತಿಯಲ್ಲಿ ನೀವಂದುಕೊಂಡಂತೆ ಪ್ರಗತಿ ಸಿಗುವುದು. ಬಾಕಿ ಇರುವ ಕೆಲಸಗಳು ಮುಗಿಯುವುದು. ಹಣಕಾಸಿನ ವಿಚಾರದಲ್ಲಿಯೂ ಪ್ರಗತಿಯಾಗುವುದು. ಹಣಕಾಸಿನ ಸಮಸ್ಯೆ ನೀಗುವುದು. ಆದಾಯ ಹೆಚ್ಚಾಗುವುದು. ಅದರ ಜೊತೆಗೆ ಖರ್ಚೂ ಏರುವುದು. ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ಕೌಟುಂಬಿಕ ಸಮಸ್ಯೆಗೂ ಪರಿಹಾರ ಸಿಗುವುದು.
ಕುಂಭ ರಾಶಿ (Aquarius)
ಹೊಸ ಕೆಲಸಕ್ಕೆ ಪ್ರಯತ್ನಿಸುವವರಿಗೆ ಇದು ಶುಭ ಸಮಯ. ಹೊಸ ಉದ್ಯೋಗಾವಕಾಶ ಸಿಗುವುದು. ನಿಮ್ಮ ನಿರೀಕ್ಷೆಯಂತೆ ನಿಮಗೆ ಬೇಕಾಗಿರುವ ಕೆಲಸ ಸಿಗುವುದು. ಬೇಡವಾದ ವಸ್ತುಗಳಿಗೆ, ವಿಷಯಗಳಿಗೆ ಹಣ ಖರ್ಚು ಮಾಡದೇ ಇದ್ದರೆ ಒಳ್ಳೆಯದು. ಯಾವುದೇ ವಸ್ತುವನ್ನು ಖರೀದಿ ಮಾಡುವುದಕ್ಕೂ ಮುನ್ನ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಪ್ರೇಮ ಸಂಬಂಧ ಸಂತೋಷದಿಂದ ಇರುವುದು.
ಮೀನ ರಾಶಿ (Pisces)
ಈ ತಿಂಗಳು ನಿಮ್ಮ ಪಾಲಿಗೆ ಅಷ್ಟೇನೂ ಶುಭ ಫಲ ನೀಡುವುದಿಲ್ಲ. ಕೆಲವೊಂದು ಸಂಬಂಧಗಳ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಹಳೆಯ ಸಮಸ್ಯೆಗಳು ಮತ್ತೆ ಮರುಕಳಿಸಬಹುದು. ಆರ್ಥಿಕ ಸ್ಥಿತಿ ತಕ್ಕ ಮಟ್ಟಿಗೆ ಇರುವುದು. ತಿಂಗಳ ಅಂತ್ಯದ ವೇಳೆಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗಲಿದೆ.


Click it and Unblock the Notifications
