October Horoscope: ಅಕ್ಟೋಬರ್ ತಿಂಗಳು ಈ ರಾಶಿಗಳಿಗೆ ಅದೃಷ್ಟ..ಅನಿರೀಕ್ಷಿತ ಧನಲಾಭ
ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಶರದ್ ಋತು ಆಶ್ವಯುಜಮಾಸ
ಮಾಸವಿಶೇಷ: 02.10.24: ಗಾಂಧಿಜಯಂತಿ, ಮಹಾಲಯ ಅಮಾವಾಸ್ಯೆ
03.10.24: ನವರಾತ್ರಿ ಆರಂಭ
11.10.24: ಆಯುಧ ಪೂಜೆ
12.10.24: ವಿಜಯದಶಮಿ
17.10.24: ವಾಲ್ಮೀಕಿ ಜಯಂತಿ
31.10.24: ನರಕ ಚತುರ್ದಶಿ
17.10.24: ಸೂರ್ಯ ತುಲಾರಾಶಿಗೆ ಪ್ರವೇಶ

ಮೇಷ ರಾಶಿಯ ಮಾಸ ಭವಿಷ್ಯ
ಶುಕ್ರ ಏಳನೇ ಮನೆಯಲ್ಲಿ ಬುಧ, ಕೇತು ಆರನೇ ಮನೆಯಲ್ಲಿ ಎರಡನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ಮಂಗಳ, ಹನ್ನೊಂದನೇ ಮನೆಯಲ್ಲಿ ಶನಿ ಇದ್ದಾರೆ. 11 ನೇ ತಾರೀಖು ಬುಧ ಏಳನೇ ಮನೆಗೆ 13 ನೇ ತಾರೀಖು ಶುಕ್ರ ಎಂಟನೇ ಮನೆಗೆ, ಪ್ರವೇಶವಾಗುತ್ತಾರೆ. ಇದು ನಿಮಗೆ ಶುಭ ಸಂಗತಿಗಳನ್ನು ನೀಡುತ್ತದೆ. ಶನಿ ಧನ ಲಾಭ ಸೂಚಿಸುತ್ತಾನೆ. ಗುರು ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತಾನೆ.
17ರ ವರೆಗೂ ಸೂರ್ಯ ಕೇತು ಆರನೇ ಮನೆಯಲ್ಲಿ ಇರುತ್ತಾರೆ. ಇದು ನಿಮಗೆ ಧೈರ್ಯ ಸಾಹಸಗಳನ್ನು ಹೆಚ್ಚು ಮಾಡುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಮನೆ ಕೊಳ್ಳುವುದು, ಕಟ್ಟುವುದು ಮುಂತಾದ ಶುಭಕಾರ್ಯಗಳು ಪ್ರಾರಂಭ ಮಾಡಲು ಈಗ ಸುಸಮಯ. ಇನ್ನೂ ಆರು ತಿಂಗಳು ನೀವು ಮುಟ್ಟಿದ್ದೆಲ್ಲ ಚಿನ್ನವಾಗುವಂಥ ಸಮಯ. ಯಾವುದೇ ಅಭಿವೃದ್ಧಿಯ ಕೆಲಸಗಳನ್ನು ಮಾಡಬಹುದು. ಹೊಸ ಯೋಜನೆಗಳ ಕರಡು ಸಿದ್ಧ ಮಾಡಿಕೊಳ್ಳಬಹುದು.

ವೃಷಭ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ರಾಹುಬಲ ಇದೆ. ಇದು ನಿಮಗೆ ಅಪರಿಮಿತ ಶಕ್ತಿಯನ್ನೂ ಸಾಮರ್ಥ್ಯವನ್ನು ಕೊಡುತ್ತದೆ. ಹೊಸ ಕೆಲಸಗಳನ್ನು ಮಾಡುವ ಹಿಡಿದ ಕೆಲಸದಲ್ಲಿ ಜಯಶಾಲಿ ಆಗುವ ಪರಾಕ್ರಮ ಕೊಡುತ್ತದೆ. ಹಣದ ಹರಿವನ್ನು ಬಲಪಡಿಸುತ್ತದೆ. 17ರ ನಂತರ ಸೂರ್ಯ ಆರನೇ ಮನೆಗೆ ಪ್ರವೇಶಿಸಿದಾಗ ಕೂಡ ನಿಮಗೆ ಒಳ್ಳೆಯ ಫಲಗಳೇ ಸಿಗುತ್ತದೆ. ಬುಧ ಆರನೇ ಮನೆಗೆ ಬಂದಾಗ ಕೂಡ ಶುಭಫಲಗಳು ಇವೆ.
ನಿಮ್ಮ ಮುಂದಿನ ದಿನಗಳು ಬಹಳ ಶುಭದಾಯಕವಾಗಿ ಇರುವುದರಿಂದ ಈಗಿನಿಂದಲೇ ನೀವು ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಿಕೊಳ್ಳಬಹುದು. ಯೋಜನೆಗಳನ್ನು ರೂಪಿಸಿಕೊಂಡರೆ ನಂತರದ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತದೆ. ಎರಡನೇ ಮನೆಯಲ್ಲಿ ಮಂಗಳ, ಹತ್ತನೇ ಮನೆಯಲ್ಲಿ ಶನಿ ನಿಮಗೇನೂ ತೊಂದರೆ ಮಾಡಲಾರರು. ವೃತ್ತಿಜೀವನದಲ್ಲಿ ಯಶಸ್ಸು ಇದೆ. ಹಣದ ಹರಿವು ಎಲ್ಲ ರೀತಿಯಿಂದಲೂ ಉತ್ತಮವಾಗಿದೆ.

ಮಿಥುನ ರಾಶಿಯ ಮಾಸ ಭವಿಷ್ಯ
ಈ ತಿಂಗಳ 21 ರವರೆಗೂ ಕುಜ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಇದರಿಂದ ನಿಮಗೆ ಕೋಪತಾಪಗಳು ಹೆಚ್ಚು ಹಾಗೂ ಯಾವುದಾದರೂ ಅಡಚಣೆ ಎದುರಾಗುತ್ತ ಇರುತ್ತದೆ. 21 ರ ನಂತರ ಕುಜ ಎರಡನೇ ಮನೆಗೆ ಪ್ರವೇಶವಾದಾಗ ಹೆಚ್ಚಿನ ಲಾಭಾಂಶ ಇಲ್ಲದಿದ್ದರೂ ಕೊಂಚ ನಿರಾಳತೆಯಂತೂ ಸಿಗುತ್ತದೆ. ಬುಧ ಶುಕ್ರ ರು ಈ ತಿಂಗಳ ಪೂರ್ತಿ ಅನುಕೂಲ ಸ್ಥಳಗಳಲ್ಲಿ ಇದ್ದು ನಿಮಗೆ ಹಣದ ಹರಿವನ್ನು ಉತ್ತಮಪಡಿಸುತ್ತಾರೆ.
ವೃತ್ತಿ ಸಂಬಂಧವಾಗಿ ತಿರುಗಾಟ ಇರುತ್ತದೆ. 12 ನೇ ಮನೆಯಲ್ಲಿ ಗುರು ಇರುವುದು ಸಂಸಾರದಲ್ಲಿ ಕೊಂಚ ಅಡಚಣೆ, ಅಶಾಂತಿ ಇರುವುದನ್ನು ತೋರಿಸುತ್ತದೆ. ಮನೆಯಲ್ಲಿನ ಸದಸ್ಯರ ಜೊತೆ ಸೌಹಾರ್ದ ಸಂಬಂಧ ಇರುವುದಿಲ್ಲ. ಮನಸ್ಸಿನಲ್ಲಿ ನಾನಾ ಕಾರಣದಿಂದ ನೋವು ಕಿರಿಕಿರಿ ಉಂಟಾಗುತ್ತಿರುತ್ತದೆ. ನಿಮ್ಮ ಇಷ್ಟದೇವರ ಪ್ರಾರ್ಥನೆ ಮಾಡಿ. ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ. ಧ್ಯಾನದಿಂದ ಏಕಾಗ್ರತೆ ಸಾಧಿಸಿ. ಕೆಲವು ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆತು ನಿರಾಳವಾಗುತ್ತೀರಿ.

ಕಟಕ ರಾಶಿಯ ಮಾಸ ಭವಿಷ್ಯ
ಈಗ ಗುರು ಲಾಭಸ್ಥಾನದಲ್ಲಿ ಇರುವುದು ನಿಮಗೆ ಅಪರಿಮಿತ ಶಕ್ತಿಯನ್ನೂ ಮನಸ್ಸಿಗೆ ನೆಮ್ಮದಿಯನ್ನೂ ಕೊಡುತ್ತದೆ. ಮನೆಯಲ್ಲಿ ಮಂಗಳಕರ ವಾತಾವರಣ ಇರುತ್ತದೆ. ಶುಭಸಮಾರಂಭಗಳು ನಡೆಯುತ್ತದೆ. ಮೂರನೇ ಮನೆಯಲ್ಲಿ ಸೂರ್ಯ ಕೇತು ಇರುವುದು ನಿಮ್ಮ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. 11 ನೇ ತಾರೀಖು ಬುಧ ನಾಲ್ಕನೇ ಮನೆಗೆ 13 ಶುಕ್ರ ಐದನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಯಶಸ್ಸು ಸಿಗುತ್ತದೆ.
ಅಷ್ಠಮಶನಿಯ ಪ್ರಭಾವ ಇದ್ದರೂ ಗುರುಬಲ ಇರುವುದರಿಂದ ಅಷ್ಟು ತೀವ್ರವಾಗಿ ಕಾಡುವುದಿಲ್ಲ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ಮನೆ ಕಟ್ಟುವುದು, ಕೊಳ್ಳುವುದು, ವಾಹನ ಖರೀದಿ ಮೊದಲಾದ ಶುಭಸಂಗತಿಗಳು ಇವೆ. ನಿಮ್ಮ ಬಹುಕಾಲದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸುಸಮಯ. ಈಗ ಪ್ರಾರಂಭಿಸುವ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯುತ್ತದೆ. ಮನಸ್ಸಿನ ಚಿಂತೆ ದೂರವಾಗಿ ನಿಮ್ಮ ಹವ್ಯಾಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಉಲ್ಲಾಸ ಅನುಭವಿಸುತ್ತೀರಿ. ಹಣದ ಹರಿವು ಉತ್ತಮವಾಗಿದೆ.

ಸಿಂಹ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರು ದಶಮಸ್ಥಾನದಲ್ಲಿ ಇರುವುದು ಸ್ವಲ್ಪ ಹಿನ್ನಡೆ. ಯಾವ ಕೆಲಸಗಳಿಗೂ ಮುಂದುವರೆಯುವ ಭಾಗ್ಯ ಇಲ್ಲದೆ ನಿಂತಲ್ಲೇ ನಿಲ್ಲುತ್ತದೆ. 13 ನೇ ತಾರೀಕಿನ ನಂತರ ನಿಮಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಬುಧ ಮೂರನೇ ಮನಗೆ, ಶುಕ್ರ ನಾಲ್ಕನೇ ಮನೆಗೆ ಬಂದಾಗ ಕೊಂಚ ಅಭಿವೃದ್ಧಿ ಕೆಲಸಗಳು ನಡೆಯುತ್ತದೆ. ಸೂರ್ಯ 17ರ ನಂತರ ಮೂರನೇ ಮನೆಗೆ ಬರುತ್ತಾನೆ. ಆಗ ನಿಮ್ಮ ಮಾನಸಿಕ ಶಕ್ತಿ ಬಲವರ್ಧನೆಯಾಗಿ ಯಾವ ಕೆಲಸ ಮಾಡಲೂ ಹುರುಪು ಮೂಡುತ್ತದೆ.
ಈಗ ಸಪ್ತಮದಲ್ಲಿ ಇರುವ ಶನಿಯಿಂದಲೂ ನಿಮಗೆ ಪ್ರಯೋಜನ ಇಲ್ಲ. ಶನಿ ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ಆರೋಗ್ಯಕ್ಕೆ ತೊಂದರೆ. ಮುಂದಿನ ದಿನಗಳಲ್ಲಿ ಶನಿ ಅಷ್ಟಮಕ್ಕೆ ಬರುವುದರಿಂದ ನಿಮ್ಮ ಇನ್ನೂ ಹೆಚ್ಚಿನ ನಷ್ಟಗಳು ಸಂಭವಿಸಬಹುದು. ಆದ್ದರಿಂದ ಯಾವುದೇ ಯೋಜನೆಯನ್ನು ಜಾರಿಮಾಡುವ ಮೊದಲು ಸೂಕ್ತವಾಗಿ ಯೋಚಿಸಿ. ಯಾವುದೇ ಯೋಜನೆ ನಿಮ್ಮ ಸಮಯ ಹಣ ಹಾಳುಮಾಡದಂತೆ ಎಚ್ಚರಿಕೆ ವಹಿಸಿ. ಸಾಲ ಮಾಡಬೇಡಿ. ನಂಬಿಕೆ ಇಲ್ಲದ ಕಡೆ ಹಣ ಹೂಡಬೇಡಿ.

ಕನ್ಯಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ, ಶನಿಬಲ ಇರುವುದರಿಂದ ನಿಮ್ಮ ಯೋಜನೆಗಳೆಲ್ಲ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮುನ್ನಡೆಯುತ್ತದೆ. ನಿಮ್ಮ ರಾಶಿಯಲ್ಲೇ ಬುಧ ಉಚ್ಛನಾಗಿ 11ನೇ ತಾರೀಖಿನವರೆಗೂ ಇರುತ್ತಾನೆ ಶುಕ್ರ ಎರಡನೇ ಮನೆಯಲ್ಲಿ 13 ರ ವರೆಗೂ ಇರುತ್ತಾನೆ. ನಂತರ ಈ ತಿಂಗಳ ಕೊನೆವರೆಗೆ ಬುಧ ಹಾಗೂ ಶುಕ್ರ ಎರಡನೇ ಹಾಗೂ ಮೂರನೆಯಲ್ಲಿ ಇರುತ್ತಾರೆ. ಇದು ನಿಮಗೆ ಯಶಸ್ಸನ್ನು ಅಭಿವೃದ್ಧಿಯನ್ನೂ ಸೂಚಿಸುತ್ತದೆ.
ಮಕ್ಕಳಿಂದ ಸಂತೋಷ ಇದೆ. ಮಕ್ಕಳ ಅಭಿವೃದ್ಧಿ ನಿಮಗೆ ಮುದ ನೀಡುತ್ತದೆ. ಹತ್ತನೇ ಮನೆಯಲ್ಲಿ ಕುಜ ಇರುವುದು ಕೆಡುಕೇನೂ ಇಲ್ಲದಿದ್ದರೂ 21 ರನಂತರ ಕುಜ ಲಾಭಸ್ಥಾನಕ್ಕೆ ಬಂದಾಗ ನಿಮಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಧನಾಗಮನ ಇದೆ. ವಿದೇಶಿ ಹೂಡಿಕೆಗಳಲ್ಲಿ ಲಾಭ ಇದೆ. ನಿಮ್ಮ ವ್ಯಾಪಾರ ವ್ಯವಹಾರಗಳು ಕೈಗೆ ಹತ್ತುತ್ತವೆ. ಲಾಭದ ಮುಖ ನೋಡುತ್ತೀರಿ. ಸಾಲಗಳನ್ನು ತೀರಿಸಿಕೊಳ್ಳಲು ಸಹಾಯವಾಗುತ್ತದೆ. ಆರೋಗ್ಯದ ಕಡೆ ಕೊಂಚ ಗಮನ ಇರಲಿ.

ತುಲಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ ಇಲ್ಲದಿರುವುದರಿಂದ ನಾನಾ ರೀತಿಯ ಯೋಚನೆಗಳು ಸಮಸ್ಯೆಗಳು ಎದುರಾಗುತ್ತದೆ. ಪಂಚಮ ಶನಿ ನಡೆಯುತ್ತಿರುವುದು ಸಹ ನಿಮ್ಮ ಅಭಿವೃದ್ಧಿಗೆ ತೊಡಕಾಗಿದೆ. ಮನೆಯಲ್ಲಿ ವಿರೋಧ, ತಂದೆತಾಯಿಗಳಿಂದ ಬೇಸರ, ಅಥವಾ ತಂದೆತಾಯಿಗಳ ಅನಾರೋಗ್ಯ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ತಾಪತ್ರಯ ಮೊದಲಾದ ಸಮಸ್ಯೆಗಳು ಇರುತ್ತದೆ. ನಿಮ್ಮ ಅಗ್ನಿಪರೀಕ್ಷೆ ಎಂದೇ ತಿಳಿಯಿರಿ. ನಿಮ್ಮ ಇಷ್ಟದೇವರ ಮನೆದೇವರ ಜಪ ಪ್ರಾರ್ಥನೆ ಮಾಡಿ. ದತ್ತಾತ್ರೇಯ ಸ್ತವನ ಹೇಳಿಕೊಳ್ಳಿ. ರಾಹು ಆರನೇ ಮನೆಯಲ್ಲಿ ಇರುವುದರಿಂದ ನಿಮಗೆ ಧೈರ್ಯಸಾಹಸಗಳು ಹೆಚ್ಚಾಗಿ ಇರುತ್ತದೆ, ಸಮಸ್ಯೆಯನ್ನು ಎದುರಿಸುವ ಶಕ್ತಿ ಇರುತ್ತದೆ.
ಈ ತಿಂಗಳ 13ರ ವರೆಗೂ ಶುಕ್ರ ನಿಮ್ಮ ರಾಶಿಯಲ್ಲೇ ಇರುತ್ತಾನೆ ನಂತರ ಎರಡನೇ ಮನೆಗೆ ಪ್ರವೇಶವಾಗುತ್ತಾನೆ. ಬುಧ ನಿಮ್ಮ ರಾಶಿಯಲ್ಲಿ ಇರುತ್ತಾನೆ. ಈ ಎರಡೂ ಬದಲಾವಣೆಯೂ ನಿಮಗೆ ಶುಭಫಲಗಳನ್ನು ನೀಡುತ್ತದೆ. ಒಂಬತ್ತನೇ ಮನೆಯಲ್ಲಿ ಕುಜ ಇರುವುದು ಕೂಡ ನಿಮಗೆ ಅನುಕೂಲಕರವೇ ಆಗಿದೆ. ಫ್ಯಾಷನ್ ವಸ್ತುಗಳಿಂದ ನಿಮಗೆ ಲಾಭ ಇರುತ್ತದೆ. ನೀವು ವ್ಯಾಪಾರ ಮಾಡಿದರು ಫ್ಯಾಷನ್ ವಸ್ತುಗಳು, ಬಟ್ಟೆ, ಒಡವೆ ಸುಗಂಧದ್ರವ್ಯ, ವಾಹನ ಇಂಥವಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರ ಮಾಡಿದರೆ ಉತ್ತಮಲಾಭ ಪಡೆಯುತ್ತೀರಿ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ ಇದೆ. ನಿಮ್ಮ ಕೆಲಸಗಳೆಲ್ಲ ಸಲೀಸಾಗಿ ನೆರವೇರುತ್ತದೆ. ಇದುವರೆಗೂ ಇದ್ದ ಅಡೆತಡೆಗಳು ಮಾಯವಾಗುತ್ತದೆ. ನೀವು ಅಭಿವೃದ್ಧಿ ಹೊಂದಲು ಬೇಕಾಗುವ ಅವಕಾಶ ಸಿಗುತ್ತದೆ. ವೃತ್ತಿಜೀವನದಲ್ಲಿ ಯಶಸು ಇದೆ. ಬಡ್ತಿ, ವಿದೇಶ ಯಾತ್ರೆ ಮೊದಲಾದ ಅವಕಾಶಗಳು ಸಿಗುತ್ತವೆ. ಆದರೆ ನಿಮಗೆ ಈಗ ಐದನೇ ಮನೆಯಲ್ಲಿ ರಾಹು ಇರುವುದರಿಂದ ಸಂತಾನಕ್ಕೆ ಅಡ್ಡಿ ಇದೆ. ಬೆಳೆದ ಮಕ್ಕಳು ಇರುವವರು ಮಕ್ಕಳಿಂದ ವಿರೋಧ ಅನುಭವಿಸುತ್ತೀರಿ.
ನಾಲ್ಕನೇ ಮನೆಯಲ್ಲಿ ಶನಿ ಇರುವುದು ನಿಮಗೆ ಈಗ ಯಶಸ್ಸು ಸಿಗುವಂತೆಯೇ ಒತ್ತಡಗಳೂ ಇರುತ್ತದೆ. ವೃಥಾ ಅಲೆದಾಟ, ವಾಹನದಿಂದ ನಷ್ಟ, ದೈಹಿಕ ಆಯಾಸ, ಕೊಂಚ ಅನಾರೋಗ್ಯ ಮೊದಲಾದ ತೊಂದರೆಗಳು ಇರುತ್ತದೆ. ಈ ತಿಂಗಳ 13 ರಂದು ಶುಕ್ರ ನಿಮ್ಮ ರಾಶಿಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಮನಸ್ಸಿಗೆ ಉಲ್ಲಾಸ, ದೈಹಿಕ ಆರಾಮ ಎಲ್ಲವೂ ಅನುಭವಕ್ಕೆ ಬರುತ್ತದೆ. ಏಳನೇ ಮನೆಯ ಗುರು ನಿಮ್ಮ ರಾಶಿಯನ್ನು ನೋಡುವುದರಿಂದ ಏನೇ ತೊಂದರೆ ಎದುರಾದರೂ ನೀವು ಅದನ್ನು ನಿಭಾಯಿಸಿಕೊಂಡು ಮುಂದುವರೆಯುತ್ತೀರಿ.

ಧನಸ್ಸು ರಾಶಿಯ ಮಾಸ ಭವಿಷ್ಯ
ನಿಮಗೆ ಈಗ ಶನಿಬಲ ಮಾತ್ರವೇ ಇದೆ. ಹಣಕಾಸು ಸ್ಥಿತಿ ಚೆನ್ನಾಗಿದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹಣದ ಹರಿವು ಉತ್ತಮವಾಗಿ ಇದ್ದರೂ ಖರ್ಚು ಕೂಡಾ ವಿಪರೀತವಾಗಿ ಇರುತ್ತದೆ. ಶತ್ರುಕಾಟ ಇದೆ. ಯಾರೊಂದಿಗೂ ಏನೂ ವೈಮನಸ್ಸು ಬೇಡ. ಎಲ್ಲರೊಂದಿಗೆ ಉತ್ತಮ ವ್ಯವಹಾರ ಇರಲಿ. ನಿಮ್ಮನ್ನು ಯಾರಾದರೂ ಕೆರಳಿಸಿದರೂ ತಾಳ್ಮೆ ಸಹನೆಯಿಂದ ಪರಿಸ್ಥಿತಿ ನಿಭಾಯಿಸಿ. ಏಳನೇ ಮನೆಯಲ್ಲಿ ಇರುವ ಕುಜ ನೇರವಾಗಿ ನಿಮ್ಮ ರಾಶಿಯನ್ನು ನೋಡುತ್ತಾನೆ ಹೀಗಾಗಿ ಕೋಪತಾಪ ತುಸು ಹೆಚ್ಚೇ ಇರುತ್ತದೆ.
ಕೋಪದಿಂದ ಯಾವುದನ್ನೂ ಸಾಧಿಸಲೂ ಆಗುವುದಿಲ್ಲ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡು ಮುಂದುವರೆಯಿರಿ. ಈಗ ಹನ್ನೊಂದನೇ ಮನೆಯಲ್ಲಿ ಶುಕ್ರ ಇದ್ದಾನೆ. ಇದು ನಿಮಗೆ ಒಳ್ಳೆಯ ಸ್ನೇಹಿತರನ್ನೂ, ಧನಲಾಭವನ್ನೂ ಮನಸ್ಸಿಗೆ ಉಲ್ಲಾಸವನ್ನೂ ಕೊಡುತ್ತದೆ. 11 ರ ನಂತರ ಬುಧ ಲಾಭಸ್ಥಾನಕ್ಕೆ ಪ್ರವೇಶವಾಗುತ್ತಾನೆ. ಇದು ಕೂಡ ನಿಮಗೆ ಧನಲಾಭ ಯಶಸ್ಸು ತೋರಿಸುತ್ತದೆ. 17 ರ ನಂತರ ಸೂರ್ಯ ಹತ್ತನೇ ಮನೆಯಿಂದ 11 ನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಇದೆ.

ಮಕರ ರಾಶಿಯ ಮಾಸ ಭವಿಷ್ಯ
ಏಳು ವರ್ಷದಿಂದ ನೀವು ಸಾಡೆಸಾತಿಯ ಪ್ರಭಾವದಲ್ಲಿ ಇದ್ದಿರಿ. ಈ ಸಮಯದಲ್ಲಿ ಏನು ಕಳೆದುಕೊಂಡಿದ್ದೀರೋ ಏನೇನು ನಷ್ಟ ಅನುಭವಿಸಿದ್ದೀರೋ ನಿಮಗೇ ಗೊತ್ತು. ಹಣನಷ್ಟ, ನೆಮ್ಮದಿನಷ್ಟ, ವೃತ್ತಿಗೆ ಹಾನಿ, ಕುಟುಂಬದಲ್ಲಿ ಅಸೌಖ್ಯ, ಅಶಾಂತಿ, ಯಾವ ಕೆಲಸವೂ ಮುಂದುವರೆಯದೇ ತಲೆ ತುಂಬಾ ಯೋಚನೆಗಳು ಒತ್ತಡಗಳು ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ನಿಮ್ಮ ಸಾಡೆಸಾತಿಯ ಅವಧಿ ಮುಗಿದಿದೆ. ಮಾರ್ಚ್ 2025ಕ್ಕೆ ಸಂಪೂರ್ಣ ಬಿಡುಗಡೆ ಸಿಕ್ಕಿದರೂ ಈಗಿನಿಂದಲೇ ಶನಿಯ ಬಿಡುಗಡೆಯ ಪರಿಣಾಮವನ್ನು ನೀವು ಕಾಣುತ್ತೀರಿ.
ಹೊಸ ನೌಕರಿಗೆ ಅವಕಾಶಗಳು, ಉನ್ನತ ಪದವಿ ಅಧಿಕಾರ ಪ್ರಾಪ್ತಿ, ಗೃಹ ನಿರ್ಮಾಣ ಅಥವಾ ಖರೀದಿ, ಮಕ್ಕಳ ಮದುವೆಯ ಮಾತುಕತೆ, ಮನೆಯಲ್ಲಿ ಸಂಭ್ರಮದ ವಾತಾವರಣ ಎಲ್ಲವೂ ನಿಮಗೆ ಈಗ ಅನುಭವಕ್ಕೆ ಬರುತ್ತದೆ. ಹಣದ ಹರಿವು ಉತ್ತಮಗೊಳ್ಳುತ್ತದೆ. ಶತ್ರುಗಳು ನಿಮ್ಮಿಂದ ದೂರವಾಗಿ ನಿಮಗೆ ನಿರಾಳಭಾವ ಆವರಿಸುತ್ತದೆ. ನೀವು ಅಂದುಕೊಂಡ ಯಾವುದೇ ಕೆಲಸ ವೇಗವಾಗಿ ಸಾಗಿ ಮನಸ್ಸಿಗೆ ಹುರುಪು ಉತ್ಸಾಹ ಮೂಡುತ್ತದೆ. ಈಗ ನಿಮಗೆ ರಾಹು ಮೂರನೇ ಮನೆಯಲ್ಲಿ ಗುರು ಐದನೇ ಮನೆಯಲ್ಲಿ ಇರುವುದು ಅನೇಕ ಶುಭ ಸಂದರ್ಭಗಳಿಗೆ ಅವಕಾಶವಾಗುತ್ತದೆ. ಜೀವನ ಹೊಸ ತಿರುವಿನಲ್ಲಿ ತಿರುಗಿ ನಿಮಗೆ ಅಭಿವೃದ್ಧಿ ಯಶಸು ತಂದುಕೊಡುತ್ತದೆ.

ಕುಂಭ ರಾಶಿಯ ಮಾಸ ಭವಿಷ್ಯ
ಈಗ ನೀವು ಸಾಡೆಸಾತಿಯ ಮಧ್ಯಭಾಗದಲ್ಲಿ ಇದ್ದೀರಿ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ. ಸಾಡೆಸಾತಿ ಶನಿ ಮುಗಿಯಲು ಇನ್ನೂ ಎರಡೂವರೆ ವರ್ಷ ಬೇಕು, ಗುರು ನಾಲ್ಕನೇ ಮನೆಯಲ್ಲಿ ರಾಹು ಎರಡನೇ ಮನೆಯಲ್ಲಿ ಇದ್ದಾರೆ. ಪ್ರಬಲವಾದ ಈ ಮೂರೂ ಗ್ರಹಗಳು ನಿಮಗೆ ವ್ಯತಿರಿಕ್ತ ಸ್ಥಾನದಲ್ಲಿ ಇರುವುದರಿಂದ ಬಹಳ ನಷ್ಟಗಳನ್ನು ಹಣಕಾಸಿನ ಅಭಾವವನ್ನೂ, ಮನೆಯಲ್ಲಿ ಆಶಾಂತಿಯನ್ನೂ, ಅಪವಾದಗಳನ್ನೂ ಎದುರಿಸುತ್ತೀರಿ. ಮಾನ ಮರ್ಯಾದೆ ಗೌರವಗಳಿಗೆ ಧಕ್ಕೆ ಬರಲಿದೆ. ಯಾವುದಕ್ಕೂ ಸಹನೆ ಕಳೆದುಕೊಳ್ಳಬೇಡಿ.
ಯಾರೊಂದಿಗೂ ಹೆಚ್ಚು ಮಾತಾಡಬೇಡಿ. ಅದರಲ್ಲೂ ದೊಡ್ಡ ಅಧಿಕಾರ ಪದವಿಯಲ್ಲಿ ಇರುವವರು ಆದಷ್ಟು ಮೌನವಹಿಸಬೇಕು. ನಿಮ್ಮ ಮಾನ ಮರ್ಯಾದೆಗೆ ಧಕ್ಕೆ ಬರುವಂಥ ಮಾತು ಕೇಳಿದರೂ ಕೇಳದಂತೆ ಇರಬೇಕು. ನೀವು ಒಂದು ಮಾತಾಡಿದರೆ ಅದಕ್ಕೆ ರೆಕ್ಕೆಪುಕ್ಕ ಹಚ್ಚಿ ಪ್ರಸಾರ ಮಾಡುವ ಶತ್ರುಗಳು ನಿಮ್ಮ ಸುತ್ತಲೂ ಇದ್ದಾರೆ. ಹೀಗಾಗು ಮೈಯೆಲ್ಲಾ ಕಣ್ಣಾಗಿ ಇರಿ. ಪರಿಸ್ಥಿತಿ ಹೀಗೇ ಇರುವುದಿಲ್ಲ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಈ ತಿಂಗಳ 11 ರಂದು ಬುಧ ಭಾಗ್ಯಸ್ಥಾನಕ್ಕೆ, ಶುಕ್ರ 13 ರಂದು ವೃತ್ತಿಸ್ಥಾನಕ್ಕೆ ಬಂದಾಗ ಕೊಂಚ ಮಟ್ಟಿಗೆ ರಿಲೀಫ್ ಸಿಗುತ್ತದೆ.

ಮೀನ ರಾಶಿಯ ಮಾಸ ಭವಿಷ್ಯ
ನಿಮಗೂ ಕುಂಭರಾಶಿಗೂ ಹೆಚ್ಚು ವ್ಯತ್ಯಾಸ ಇಲ್ಲ, ಆದರೆ ನೀವು ಶಾಡೆಸಾತಿಯ ಮೊದಲ ಭಾಗದಲ್ಲೇ ಇದ್ದೀರಿ. ಕಷ್ಟಗಳು ಚಿಂತೆಗಳು ಹೆಚ್ಚು ಕಾಡಿಸುತ್ತಿವೆ. ನಿಮ್ಮ ರಾಶಿಯಲ್ಲೇ ರಾಹು ಇದ್ದಾನೆ, ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಗಂಡ ಹೆಂಡಿರ ನಡುವೆ ಬಿಕ್ಕಟ್ಟು, ಹಣಕಾಸಿನ ಅಭಾವ, ವಿಪರೀತವಾದ ಖರ್ಚುಗಳು, ಅಪವಾದ ನಮ್ಮವರಿಂದಲೇ ನಮಗೆ ಭತ್ರ್ಸನೆ ಇವೆಲ್ಲವನ್ನೂ ಅನುಭವಿಸುತ್ತಿದ್ದೀರಿ. ಇನ್ನೂ ಐದು ವರ್ಷಗಳ ಕಾಲ ಪರಿಸ್ಥಿತಿ ನಿಮಗೆ ವಿರುದ್ಧವಾಗಿಯೇ ಇರುತ್ತದೆ. ಈಗ ನಿಮ್ಮನ್ನು ಕಾಪಾಡುವುದು ದೇವರ ಧ್ಯಾನ, ಸತ್ಸಂಗ, ಗುರುಗಳ ಆಶಿರ್ವಾದ, ದಾನಧರ್ಮ ಮೊದಲಾದವು. ಕರಿಯ ಹಸುವಿಗೆ ಗೋಗ್ರಾಸ ಕೊಡಿ.
ಸಹನೆಯಿಂದ ನಡೆದುಕೊಳ್ಳಿ. ಯಾರೊಂದಿಗೂ ಚರ್ಚೆ ವಾದ ಮಾಡಬೇಡಿ. ವೃತ್ತಿಯಲ್ಲೂ ಒತ್ತಡಗಳು ಇರುತ್ತದೆ. ಜಾಗರೂಕತೆಯಿಂದ ನಿಭಾಯಿಸಿಕೊಳ್ಳಿ. ಮನೆಯಲ್ಲಿ ಸಂಗಾತಿ ಅಥವಾ ಮಕ್ಕಳು ನಿಮಗೆ ವಿರೋಧವಾಗಿ ನಡೆದುಕೊಳ್ಳಬಹುದು, ಆದಷ್ಟು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿಮ್ಮ ಕರ್ತವ್ಯ ಮಾಡಿ ನಿರ್ಲಿಪ್ತರಾಗಿರಿ. ಸಮಯ ಬಂದಾಗ ನಿಮ್ಮ ಬೆಲೆ ಅವರಿಗೆ ಗೊತ್ತಾಗುತ್ತದೆ. ಈಗ ನೀವು ಎಲೆ ಮರೆಯ ಕಾಯಂತೆ ಇರಬೇಕು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications