June Horoscope: ಈ ರಾಶಿಗಳಿಗೆ ಅದೃಷ್ಟದ ಕಾಲ; ರಾಜಕಾರಣಿಗಳಿಗೆ ಅಧಿಕಾರ ಸಿಗುವ ಸಮಯ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ-ಗ್ರೀಷ್ಮ ಋತು ವೈಶಾಖಮಾಸದ ಬಹುಳ ನವಮಿಯಿಂದ ಜ್ಯೇಷ್ಠ ಮಾಸದ ಬಹುಳ ನವಮಿಯ ವರೆಗೆ. ಈ ಅವಧಿಯಲ್ಲಿ ಚಂದ್ರನ ಸಂಚಾರ ಉತ್ತರಾಭಾದ್ರ ನಕ್ಷತ್ರದಿಂದ ರೇವತಿಯವರೆಗೆ
ತಿಂಗಳ ವಿಶೇಷ
15/06/2024:ಸೂರ್ಯ ಮತ್ತು ಬುಧ ಮಿಥುನರಾಶಿಗೆ ಪ್ರವೇಶ.
14/06/2024: ಶುಕ್ರ ಮಿಥುನರಾಶಿಗೆ ಪ್ರವೇಶ.
17/06/2024: ಬಕ್ರಿದ್

ಮೇಷ ರಾಶಿಯ ಮಾಸ ಭವಿಷ್ಯ
ನಿಮಗೆ ಈಗ ಗುರುಬಲ ಇದೆ. ಗುರುಬಲ ಇದ್ದರೆ ಒಂಬತ್ತು ಗ್ರಹಗಳ ಬಲವೂ ಇದ್ದಂತೆ. ಆದರಲ್ಲೂ ಈಗ ನಿಮ್ಮ ಎರಡನೇ ರಾಶಿಯಾದ ವೃಷಭದಲ್ಲಿ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಇದು ಗೃಹದಲ್ಲಿ ಶಾಂತಿ ನೆಮ್ಮದಿಯನ್ನು ತೋರಿಸುತ್ತದೆ. ಮನೆಯಲ್ಲಿ ಮಂಗಳಕಾರ್ಯ ನಡೆಯುವ ಸೂಚನೆ ಇದೆ.
ಎಲ್ಲಾ ಕಡೆಯಿಂದಲೂ ಧನಲಾಭ ಇದೆ. ಸಂಗಾತಿಯಿಂದಲೂ ಲಾಭ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ. ವಿದೇಶ ಪ್ರಯಾಣ ಯೋಗ ಇದೆ. ವಿದೇಶದಲ್ಲಿ ನೌಕರಿ ಸಿಗುವ ಸಾಧ್ಯತೆ ಇದೆ. ಕಲಾವಿದರಿಗೂ ಈ ಮಾಸದಲ್ಲಿ ಒಳ್ಳೆಯ ಫಲಿತಾಂಶ ಇದೆ. ರಾಜಕೀಯ ನಾಯಕರಿಗೆ ಪದವಿ ಅಧಿಕಾರ ಸಿಗುವ ಯೋಗ ಇದೆ.
ಈ ಮಾಸಪೂರ್ತಿ ನಿಮ್ಮ ರಾಶಿಯ ಅಧಿಪತಿ ಮಂಗಳ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಇದು ನಿಮಗೆ ಒಂದು ವಿಧದ ಆಕ್ರಮಣಕಾರಿ ಗುಣವನ್ನು ಕೊಡುತ್ತದೆ. ಇದನ್ನು ನೀವು ಒಳ್ಳೆಯ ಕೆಲಸಗಳಿಗೆ ಹಾಗೂ ನಿಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಿ. ಜೂನ್ 14ರ ನಂತರ ಸೂರ್ಯ ಮಿಥುನ ರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಬಲ ಬರುತ್ತದೆ. ಈ ಮಾಸದಲ್ಲಿ ನೀವು ಸಾಕಷ್ಟು ಗುಣಾತ್ಮಕ ಅಂಶಗಳನ್ನು ಅನುಭವಿಸುತ್ತೀರಿ. ಶನಿ ಸಹ ನಿಮ್ಮ ಲಾಭ ಸ್ಥಾನದಲ್ಲಿ ಇದ್ದು ಕಾರ್ಯ ಸಿದ್ಧಿಯನ್ನೂ ಧನಲಾಭವನ್ನೂ ಕೊಡುತ್ತಾನೆ.

ವೃಷಭ ರಾಶಿಯ ಮಾಸ ಭವಿಷ್ಯ
ನಿಮಗೆ ಈಗ ಗುರುಬಲ ಇಲ್ಲ ಆದರೆ ರಾಹುಬಲ ಇದೆ. ಮತ್ತು ಶನಿ ನಿಮಗೆ ಹತ್ತನೇ ಮನೆಯಲ್ಲಿ ಸ್ವಂತ ಮನೆಯಾದ ಕುಂಭರಾಶಿಯಲ್ಲಿ ಇದ್ದು ವೃತ್ತಿಬದುಕಿಗೆ ಭದ್ರತೆ ಒದಗಿಸುತ್ತಾನೆ. ಮತ್ತು ಹೆಚ್ಚಿನ ಒಳ್ಳೆಯದು ಇಲ್ಲದಿದ್ದರೂ ಕೆಡಕು ಮಾಡಲಾರ. ರಾಹು ನಿಮಗೆ ಲಾಭಸ್ಥಾನದಲ್ಲಿ ಇದ್ದು ಹಣಬಲವನ್ನೂ ಧೈರ್ಯವನ್ನೂ ಕೆಲಸ ಸಾಧಿಸಿಕೊಂಡು ಬರುವ ಛಾತಿಯನ್ನೂ ಹೋರಾಟಮಾಡುವ ಗುಣವನ್ನೂ ಕೊಡುತ್ತಾನೆ. ಗುರುಬಲ ಇಲ್ಲವಾದರೂ ಹೆಚ್ಚಿನ ತೊಂದರೆ ಇಲ್ಲದೆ ಕಳೆಯುತ್ತದೆ.
ಶುಭಕಾರ್ಯಕ್ಕೆ ಖರ್ಚುಮಾಡುತ್ತೀರಿ. ಕೊಂಚ ಒತ್ತಡಗಳಿ ಇರುತ್ತದೆ. ಮನಸ್ಸಿಗೆ ಕಿರಿಕಿರಿ ಆಗುವ ಸಂದರ್ಭಗಳು ಇರುತ್ತದೆ. ಯಾವುದೋ ಎಲ್ಲೋ ನಡೆದ ಸಂಗತಿಗಳು ಕೂಡ ನಿಮ್ಮ ಮಾನಸಿಕ ನೆಮ್ಮದಿಗೆ ಧಕ್ಕೆ ತರುತ್ತದೆ. ಬೇರೆಯವರ ವಿಷಯಕ್ಕಾಗಿ ನೀವು ಕೊರಗುತ್ತೀರಿ, ತಲೆಕಡಿಸಿಕೊಳ್ಳುತ್ತೀರಿ. ಈ ಮಾಸದ ೧೪ರಿಂದ ಅಂತ್ಯದವರೆಗೂ ನಿಮ್ಮ ಎರಡನೇ ರಾಶಿಯಾದ ಮಿಥುನದಲ್ಲಿ ನಿಮ್ಮ ರಾಶಿಯ ಅಧಿಪತಿ ಶುಕ್ರ ಮೂರುಗ್ರಹಗಳೊಂದಿಗೆ ಇರುತ್ತಾನೆ.
ಐದನೇ ಮನೆಯ ಅಧಿಪತಿ ಬುಧ ಕೂಡಾ ಶುಕ್ರನ ಜೊತೆಯಲ್ಲಿ ಈ ಮಾಸಾಂತ್ಯದ ವರೆಗೂ ಇರುತ್ತಾನೆ. ಇದು ನಿಮಗೆ ಬಹಳ ಶುಭಫಲಗಳನ್ನೂ ರಕ್ಷಣೆಯನ್ನೂ ಕೊಡುತ್ತದೆ. ಈ ಮಾಸಾಂತ್ಯದವರೆಗೂ ಮಂಗಳ ೧೨ನೇ ಮನೆಯಲ್ಲಿ ಇರುವುದರಿಂದ ಜಮೀನಿಗೆ ಸಂಬಂಧಪಟ್ಟ ಕೊಡು-ಕೊಳ್ಳುವ ವ್ಯವಹಾರ ಮಾಡಬೇಡಿ. ಯಾವುದೋ ಒಂದು ರೀತಿಯಲ್ಲಿ ನಷ್ಟ ಸಂಭವಿಸುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಗುರು ಏಳನೇ ಮನೆಯನ್ನು ನೋಡುವುದರಿಂದ ನಿಮ್ಮ ಸಂಗಾತಿಗೆ ಲಾಭ ಇದೆ.

ಮಿಥುನ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರು ೧೨ನೇ ಮನೆಯಲ್ಲಿ ಇರುವುದರಿಂದ ಖರ್ಚು ಹೆಚ್ಚು ಹಾಗೂ ಸ್ಥಾನ ಬದಲಾವಣೆ ಸಾಧ್ಯವಿದೆ. ೧೧ನೇ ಮನೆಯಲ್ಲಿ ಮಂಗಳ ಭೂಮಿಯಿಂದ ಲಾಭ ಕೊಡಿಸುತ್ತಾನೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಲಾಭ ಇದೆ. ಹತ್ತನೇ ಮನೆಯಲ್ಲಿ ರಾಹು ನಾಲ್ಕನೇ ಮನೆಯಲ್ಲಿ ಕೇತು ಅಲ್ಪಫಲವನ್ನು ನೀಡುತ್ತಾರೆ. ವೃತ್ತಿಸ್ಥಾನದಲ್ಲಿ ರಾಹು ಇರುವುದು ರಾಸಾಯನಿಕ, ಕ್ಲೀನಿಂಗ್ ವಸ್ತುಗಳು, ಔಷಧೀಯ ಈ ಭಾಗದಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ.
ನಾಲ್ಕರಲ್ಲಿ ಕೇತು ತಾಯಿಗೆ ಒತ್ತಡವನ್ನು ಕೊಡುತ್ತಾನೆ. ನೀವು ತಾಯಿಯ ಮನಸ್ಸನ್ನು ಸಂತೋಷ ಪಡಿಸಲು ಸೋಲುತ್ತೀರಿ. ನಿಮ್ಮ ಯಾವುದೋ ದೌರ್ಬಲ್ಯ ನಿಮ್ಮ ತಾಯಿಗೆ ವ್ಯಥೆ ತರುತ್ತದೆ. ತಾಯಿ ನಿಮಗಾಗಿ ನಿಮ್ಮ ಒಳಿತಿಗಾಗಿ ಸದಾ ಪ್ರಾರ್ಥನೆ ಮಾಡುತ್ತಾರೆ. ಈ ಮಾಸದ ಶುರುವಿನಿಂದ ಮಾಸಾಂತ್ಯದವರೆಗೂ ನಿಮ್ಮ ರಾಶಿಯ ಅಧಿಪತಿ ಬುಧ ಶುಕ್ರ ಹಾಗೂ ಸೂರ್ಯನ ಜೊತೆ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಇದು ನಿಮಗೆ ಅನೇಕ ಶುಭಫಲಗಳನ್ನೂ ರಕ್ಷಣೆಯನ್ನೂ ಕೊಡುತ್ತದೆ.

ಕಟಕ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಶನಿಯ ಎಂಟನೇ ಮನೆಯ ಕಿರುಕುಳ ಇದ್ದರೂ ಗುರು ಲಾಭಸ್ಥಾನಕ್ಕೆ ಬಂದಿರುವುದರಿಂದ ಎಷ್ಟೋ ಕಿರುಕುಳ ಖರ್ಚು ಕಡಿಮೆಯಾಗಲಿದೆ. ೧೦ನೇ ಮನೆಯಲ್ಲಿ ಮಂಗಳ ಈ ಮಾಸದ ಅಂತ್ಯದವರೆಗೂ ಇರುತ್ತಾನೆ. ಇದು ವೃತ್ತಿಯಲ್ಲಿ ಅಭಿವೃದ್ಧಿ ತೋರಿಸುತ್ತದೆ. ಲಾಭಸ್ಥಾನದಲ್ಲಿ ಗುರು ನಿಮಗೆ ಇದುವರೆಗೂ ಮುಂದುವರೆಯಲು ಅಥವಾ ಅಭಿವೃದ್ಧಿಗೆ ಇದ್ದ ತೊಡಕುಗಳನ್ನು ನಿವಾರಿಸಿ ನಿಮ್ಮ ದಾರಿಯನ್ನು ಸಲೀಸು ಮಾಡಿಕೊಡುತ್ತಾನೆ. ಧನಲಾಭ ಒದಗಿಸುತ್ತಾನೆ.
ಅಷ್ಟಮ ಶನಿಯ ಪ್ರಭಾವ ನಿಮ್ಮನ್ನು ಆಗಾಗ ಧೃತಿಗೆಡಿಸಿದರೂ ಗುರುಬಲ ನಿಮ್ಮ ಪೊರೆಯುತ್ತದೆ. ಹೆಚ್ಚಿನ ತೊಂದರೆಗಳಾಗದಂತೆ ನಿಮ್ಮನ್ನು ಕಾಪಾಡುತ್ತದೆ. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುತ್ತದೆ. ವೃತ್ತಿಯಲ್ಲಿ ಬಡ್ತಿ, ವಿದೇಶ ಪ್ರಯಾಣ ಯೋಗ ಎಲ್ಲವೂ ಇದೆ. ನಿಮ್ಮ ಹೀಗಳೆದವರು ನಿಮ್ಮ ಮುಂದೆ ಈಗ ಕುಬ್ಜರಾಗುತ್ತಾರೆ. ನಿಮ್ಮ ಸಹಾಯಕ್ಕೆ ಯಾಚಿಸುತ್ತಾರೆ, ನಮ್ಮ ಶತ್ರುಗಳು ನಿಮ್ಮಿಂದ ದೂರ ಸರಿಯುತ್ತಾರೆ. ಮೂರನೇ ಮನೆಯ ಕೇತು ಸಹ ಇದಕ್ಕೆ ಪೂರಕವಾಗಿ ಇದ್ದಾರೆ. ಕೇತು ನಿಮಗೆ ಬಲವನ್ನೇ ಅಲ್ಲದೆ ರಕ್ಷಣೆಯನ್ನೂ ಧನಲಾಭವನ್ನೂ ಕೊಡುತ್ತಾನೆ. ಸಾಧು ಸಂತರ ಆಶೀರ್ವಾದ ಸಿಗುತ್ತದೆ.

ಸಿಂಹ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಗುರುಬಲ ಇಲ್ಲ. ಹತ್ತನೇ ಮನೆಯ ಗುರು ಅಧಿಕಾರ ಕಳೆಯುತ್ತಾನೆ, ಅವಮಾನ ಮಾಡಿಸುತ್ತಾನೆ. ಅನಾರೋಗ್ಯ ಕೊಡುತ್ತಾನೆ. ನಿಮ್ಮವರೇ ನಿಮಗೆ ಬೆನ್ನ ಹಿಂದೆ ಚೂರಿ ಹಾಕುತ್ತಾರೆ. ವೃತ್ತಿ ಬದುಕಿನಲ್ಲಿ ಸಂಕಷ್ಟಗಳು ಸವಾಲುಗಳು ಎದುರಾಗಲಿವೆ. ಕೌಟುಂಬಿಕ ವಿರೋಧಗಳು ತಲೆದೋರಲಿದೆ. ಯಾವುದಾದರೂ ಕೆಲಸ ನೀವು ಪ್ರಾರಂಭ ಮಾಡಿದ್ದು ಇದುವರೆಗೂ ಸರಿಯಾಗಿ ನಡೆದು ಬಂದು ಈಗ ವಿಘ್ನಗಳು ತಲೆದೋರಿ ಕೆಲಸ ಅರ್ಧಕ್ಕೆ ನಿಲ್ಲಬಹುದು.
ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ. ಅವರ ಅಭಿರುಚಿಗೆ ತಕ್ಕಂತ ವಿಭಾಗಗಳು ಸಿಗದೆ ಸಿಕ್ಕಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ. ಇದರಿಂದ ನಿರಾಶೆ. ಅವಿವಾಹಿತರಿಗೆ ಈಗ ವಿವಾಹ ನಿಷ್ಕರ್ಷೆ ಕಷ್ಟ, ಈಗಾಗಲೇ ನಿಷ್ಕರ್ಷೆ ಆಗಿರುವವರಿಗೆ ವಿವಾಹ ಜರುಗುತ್ತದೆ. ಶನಿ ಏಳನೇ ಮನೆಅಲ್ಲಿ ಇದ್ದು ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ನಿಮಗೆ ಕೋಪತಾಪಗಳು ದುಡುಕು ಹೆಚ್ಚಾಗಬಹುದು.
ಯಾವುದೇ ಕೆಲಸ ನಾಲ್ಕಾರು ಬಾರಿ ಯೋಚಿಸಿ ಕೈಗೆತ್ತಿಕೊಳ್ಳಿ. ಮಾತು ಸಹ ನಾಲ್ಕಾರು ಬಾರಿ ಯೋಚಿಸಿ ಮಾತನಾಡಿ. ಎಂಟನೇ ಮನೆಯಲ್ಲಿ ರಾಹು ವಿಷವಸ್ತುಗಳಿಂದ ತೊಂದರೆ ಕೊಡುತ್ತಾನೆ. ಆಹಾರದಲ್ಲಿ ಎಚ್ಚರಿಕೆ ವಹಿಸಿ. ಈ ತಿಂಗಳ ೧೪ರ ನಂತರ ಬುಧ ಹಾಗೂ ಶುಕ್ರ ನಿಮ್ಮ ರಾಶಿಯಿಂದ ೧೧ನೇ ಮನೆ ಅಂದರೆ ಮಿಥುನರಾಶಿಗೆ ಪ್ರವೇಶವಾದಾಗ ನಿಮಗೆ ಕೊಂಚಮಟ್ಟಿಗೆ ಲಾಭ ಇದೆ.

ಕನ್ಯಾ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಅದೃಷ್ಟದ ಕಾಲ. ಇದುವರೆಗೂ ಗುರುಬಲ ಇಲ್ಲದೇ ಬಹಳ ಕಷ್ಟ ಅನಾರೋಗ್ಯ ನಾನಾ ವಿಧದ ಹಿಂಸೆಗಳನ್ನು ಅನುಭವಿಸಿದ್ದೀರಿ. ಈಗ ಗುರುಬಲ ಬಂದಿದೆ. ನಿಮ್ಮ ಗುರಿ ಸಾಧಿಸುವ ಸಮಯ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಬಡ್ತಿ ನಿರೀಕ್ಷೆ ಮಾಡುತ್ತಿರುವವರಿಗೆ ಬಡ್ತಿ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಆರೋಗ್ಯ ಸುಧಾರಿಸುತ್ತದೆ. ಈಗ ನಿಮಗೆ ಶನಿ ಆರನೇ ಮನೆಯಲ್ಲಿ ಇರುವುದರಿಂದ ಧನಲಾಭವೂ ಆಗಲಿದೆ. ನಾನಾ ಮೂಲಗಳಿಂದ ಧನಲಾಭ ಒದಗಿಬರಲಿದೆ.
ಈ ತಿಂಗಳ ೧೪ರ ವರೆಗೂ ೯ನೇ ಮನೆಯಲ್ಲಿ ಗುರು ಶುಕ್ರ ಬುಧ ಇದ್ದು ನಿಮಗೆ ಭಾಗ್ಯೋದಯವನ್ನು ಉಂಟು ಮಾಡುತ್ತಾರೆ. ಪ್ರವಾಸ, ದೇವರ ದರ್ಶನ ಮೊದಲಾದ ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ಇವೆ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಪದವಿ ಅಧಿಕಾರ ದೊರೆಯುವ ಸಮಯ. ಕಲಾವಿದರಿಗೂ ಶುಭಕಾಲ. ಪ್ರಶಸ್ತಿ ಗೌರವಗಳು ಅರಸಿ ಬರುತ್ತದೆ.
ಸಾಮಾಜಿಕ ಗೌರವ ಸಿಗುತ್ತದೆ. ಜನ ನಿಮ್ಮ ಮಾತನ್ನು ಗೌರವಿಸುತ್ತಾರೆ. ವ್ಯಾಪಾರ ವಹಿವಾಟು ಮೊದಲಾದ ಎಲ್ಲಾ ವ್ಯವಹಾರಗಳಲ್ಲಿ ಧನಲಾಭ ಯಶಸ್ಸು ಇದೆ. ಆಸ್ತಿ ಖರೀದಿ ಮಾಡುತ್ತೀರಿ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿದೆ.

ತುಲಾ ರಾಶಿಯ ಮಾಸ ಭವಿಷ್ಯ
ಈಗ ನೀವು ಕೊಂಚ ಎಚ್ಚರಿಕೆಯಿಂದ ಇರಬೇಕಾದ ಕಾಲ. ಆರೋಗ್ಯ ಕೈಕೊಡಬಹುದು ಅಥವಾ ನಿಮ್ಮವರಿಂದಲೇ ನಿಮಗೆ ಅಪಮಾನ ಆಗಬಹುದು, ಹಣಕಾಸಿನ ಖರ್ಚು ಇರುತ್ತದೆ. ಹಣ ಸುಲಲಿತವಾಗಿ ಹರಿದು ಬರುವುದಿಲ್ಲ. ಖರ್ಚುಗಳು ನಾನಾರೀತಿಯಲ್ಲಿ ಇರುತ್ತದೆ. ಈ ತಿಂಗಳ ೧೪ ನಂತರ ಬುಧ ಶುಕ್ರ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಇರುತ್ತಾರೆ. ಇದು ನಿಮಗೆ ಸ್ವಲ್ಪ ಮಟ್ಟಿನ ಸಂತೋಷದ ವಿಚಾರಗಳನ್ನು ಕೊಡುತ್ತದೆ. ಪಂಚಮ ಶನಿ ಕೊಂಚ ಒತ್ತಡಗಳನ್ನು ಕೊಡುತ್ತಾನೆ.
ನಿಮಗೆ ಕೊಂಚ ಹಠದ ಸ್ವಭಾವ, ಸುಲಭವಾಗಿ ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದು ಮಾಡುತ್ತೀರಿ ಹಾಗೂ ನೀವು ಕಂಡದ್ದೇ ನಿಜ ಎಂದುಕೊಳ್ಳುವಿರಿ. ಇದು ಈಗ ಸ್ವಲ್ಪ ವ್ಯತಿರಿಕ್ತ ಪರಣಾಮಗಳನ್ನು ಕೊಡುತ್ತದೆ. ಯಾವ ಕೆಲಸ ಮಾಡಬೇಕಾದರೂ ಕೊಂಚ ಯೋಚಿಸಿ ನಿರ್ಧರಿಸಿ. ನಿಮ್ಮಿಂದ ನಿಮ್ಮ ಮನೆಯವರಿಗೆ ತೊಂದರೆಯಾಗದಂತೆ ಅವರು ತಲೆತಗ್ಗಿಸದಂತೆ ನಿಮ್ಮ ವ್ಯವಹಾರ ಇರಲಿ. ಬಂಧುಬಾಂಧವರೊಡನೆ ಸ್ನೇಹ ಇರಲಿ ಸಲಿಗೆ ಬೇಡ. ಈ ಸಲಿಗೆ ನಿಮಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ. ನಿಮ್ಮ ಗುರುಗಳ ಪ್ರಾರ್ಥನೆ ಮಾಡಿಕೊಳ್ಳಿ. ವೃತ್ತಿಯಲ್ಲಿ ಏರುಪೇರುಗಳು ಇವೆ. ಸಂಭಾಳಿಸಿಕೊಳ್ಳಿ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಅದೃಷ್ಟ ಒಲಿದು ಬಂದಿದೆ. ಕಳೆದ ದಿನಗಳು ನಿಮ್ಮ ಪಾಲಿಗೆ ನೀರಸವಾಗಿದ್ದವು. ಆದರೆ ಈಗ ನಿಮ್ಮ ರಾಶಿಯಿಂದ ಏಳನೇ ಮನೆಗೆ ಗುರು ಪ್ರವೇಶವಾಗಿದ್ದಾನೆ. ಹಾಗಾಗಿ ನಿಮ್ಮ ಕೆಲಸಗಳೆಲ್ಲ ಈಗ ನಿರ್ವಿಘ್ನವಾಗಿ ನೆರವೇರುತ್ತದೆ. ಮಾನಸಿಕ ಚಿಂತಯಿಂದ ಬಹಳ ಬಳಲಿದ್ದೀರಿ. ಈಗ ಮಾನಸಿಕ ಚಿಂತೆ, ಹಣಕಾಸು ಅಡಚಣೆ ಎಲ್ಲವೂ ದೂರವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಬೇರೆ ಬೇರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ಅರ್ಹರಿಗೆ ವಿವಾಹಯೋಗ ಇದೆ. ಆರನೇ ಮನೆಯಲ್ಲಿ ಮಂಗಳ ಇದ್ದು ನಿಮ್ಮಮತ್ತಷ್ಟು ಶಕ್ತಿ ಸಾಮರ್ಥ್ಯಗಳನ್ನು ಕೊಡುತ್ತಾನೆ. ಭೂಮಿಯಿಂದ ಲಾಭ ಇದೆ. ವಿದ್ಯುತ್‌ಗೆ ಸಂಬಂಧ ಪಟ್ಟ ಕೆಲಸ ಮಾಡುವವರಿಗೆ ಲಾಭ ಇದೆ. ಹೊಸ ನೌಕರಿ ಹುಡುಕುತ್ತಿರುವವರಿಗೆ ಲಾಭ ಇದೆ. ವೃತ್ತಿಯಲ್ಲಿ ಬಡ್ತಿ, ಮೇಲಧಿಕಾರಿಗಳ ಪ್ರಶಂಸೆ ಎಲ್ಲವೂ ಸಿಗುತ್ತದೆ. ಆದರೆ ಐದನೇ ಮನೆ ಸಂತಾನ ಸ್ಥಾನದಲ್ಲಿ ರಾಹು ಇರುವುದರಿಂದ ಈ ರಾಶಿಯ ಸಂತಾನಾಪೇಕ್ಷಿಗಳಿಗೆ ಈಗಲೇ ಶುಭಸುದ್ದಿ ಇಲ್ಲ. ಹಾಗೂ ಮಕ್ಕಳಿಂದ ಮನಸ್ಸಿಗೆ ಕಿರಿಕಿರಿ ಆಗುತ್ತದೆ. ಮಕ್ಕಳ ನಡವಳಿಕೆ ನಿಮಗೆ ದುಃಖ ತರುತ್ತದೆ. ರಾಹು ಮೀನ ರಾಶಿಯನ್ನು ಬಿಟ್ಟು ಕುಂಭರಾಶಿಗೆ ಪ್ರವೇಶವಾಗುವವರೆಗೂ ನೀವು ಕಾಯಬೇಕು.

ಧನಸ್ಸು ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಇಲ್ಲಿಯವರೆಗೂ ಐದನೇ ಮನೆಯಲ್ಲಿ ಇದ್ದ ಗುರು ಆರನೇ ಮನೆಗೆ ಪ್ರವೇಶವಾಗಿದ್ದಾನೆ. ಹಾಗೂ ಗುರುಬಲ ಕಡಿಮೆ. ಮಾನಸಿಕ ಕಿರುಕುಳ ಇರುತ್ತದೆ. ಮನಸ್ಸಿಗೆ ಆಘಾತವಾಗುವ ಅಥವಾ ಮನಸ್ಸು ನೊಂದುಕೊಳ್ಳುವ ಸಂಗತಿಗಳು ನಡೆಯುತ್ತಿರುತ್ತದೆ. ರಾಹು ನಾಲ್ಕನೇ ಮನೆಯಲ್ಲಿ ಇರುವುದರಿಂದ ಸುಖ ನೆಮ್ಮದಿಗೆ ಕುತ್ತು, ನಿದ್ರಾಹೀನತೆ, ವೃಥಾ ಅಲೆದಾಟ ಇರುತ್ತದೆ. ತಾಯಿಯೊಂದಿಗೆ ವಿರೋಧ ಏರ್ಪಡಬಹುದು. ಅಥವಾ ತಾಯಿಯಿಂದ ದೂರ ಇರುವ ಸಂಭವ ಬರಬಹುದು.
ವಿದ್ಯಾರ್ಥಿಗಳಾದರೆ ಓದುವ ಸಲುವಾಗಿ ದೂರದೂರಿನಲ್ಲಿ ನೆಲೆಸಬೇಕಾಗಬಹುದು. ಮೂರನೇ ಮನೆಯಲ್ಲಿ ಶನಿ ಬಲಿಷ್ಠನಾಗಿದ್ದು ನಿಮಗೆ ಯಾವುದೇ ಸಮಸ್ಯೆಯನ್ನು ಎದುರಿಸುವ ತಾಕತ್ತನ್ನು ಕೊಡುತ್ತಾನೆ. ಹಣದ ಹರಿವು ಉತ್ತಮವಾಗಿದೆ. ಸಹೋದರರಿಂದ ಅನುಕೂಲ ಇದೆ. ಐದನೇ ಮನೆಯಲ್ಲಿ ಮಂಗಳ ಇದ್ದು ಗಂಡು ಮಕ್ಕಳಿದ್ದವರಿಗೆ ಮಕ್ಕಳ ಏಳ್ಗೆ ಅಭಿವೃದ್ಧಿ ಮನಸ್ಸಿಗೆ ಖುಷಿಕೊಡುತ್ತದೆ.
ಈ ತಿಂಗಳ ೧೪ರ ನಂತರ ಬುಧಶುಕ್ರ ಏಳನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ಸಿಗುತ್ತವೆ. ಈಗ ಸದ್ಯಕ್ಕೆ ಯಾವುದೇ ಮುಖ್ಯ ಕೆಲಸಗಳನ್ನು ಮಾಡಬೇಡಿ. ಮುಂದಕ್ಕೆ ಹಾಕಿ. ಅಡೆತಡೆಗಳು ಬರುತ್ತವೆ ಹಾಗಾಗಿ ಮುಖ್ಯ ತೀರ್ಮಾನಗಳನ್ನು ಮುಂದೆ ಹಾಕಿ. ಆರೋಗ್ಯದಲ್ಲಿ ಕಾಳಜಿ ತೆಗೆದುಕೊಳ್ಳಿ.

ಮಕರ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಸಂಪೂರ್ಣ ಗುರುಬಲ ಇದೆ. ಇದರಿಂದ ನೀವು ಅಂದುಕೊಂಡ ಕೆಲಸಗಳು ಶೀಘ್ರಗತಿಯಲ್ಲಿ ನೆರವೇರುತ್ತದೆ. ಹನ್ನೊಂದನೇ ಮನೆಯಲ್ಲಿ ರಾಹು ನಿಮಗೆ ಶಕ್ತಿ ಸಾಮರ್ಥಗಳನ್ನು ಕೊಟ್ಟು ಕಾಪಾಡುತ್ತಾನೆ. ಧನಲಾಭವನ್ನೂ ಕೊಡುತ್ತಾನೆ. ಕೆಲಸಗಳು ಶೀಘ್ರವಾಗಿ ನೆರವೇರುವಂತೆ ಪ್ರಚೋದಿಸುತ್ತಾನೆ. ನಾಲ್ಕನೇ ಮನೆಯಲ್ಲಿ ಕುಜ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಲಾಭ ಕೊಡಿಸುತ್ತಾನೆ. ಐದನೇ ಮನೆಯಲ್ಲಿ ಶುಕ್ರಹಾಗೂ ಗುರು ಇದ್ದು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಸುತ್ತಾರೆ.
ವಾಹನಗಳಿಂದ ಲಾಭ ಇದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಅರ್ಹರಿಗೆ ವಿವಾಹಯೋಗ ಇದೆ. ನೌಕರಿಯಲ್ಲಿ ಬಡ್ತಿ, ಪದವಿ ಅಧಿಕಾರ ಪ್ರಾಪ್ತಿ ಮೊದಲಾದ ಶುಭಸಂಗತಿಗಳು ನಡೆಯುತ್ತವೆ. ಈ ರಾಶಿಯ ರಾಜಕೀಯ ವ್ಯಕ್ತಿಗಳು ಹಾಗೂ ಕಲಾವಿದರಿಗೆ ತುಂಬಾ ಶುಭಫಲಗಳು ಇವೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ ಸಿಗುವ ಸಮಯ. ಕಲಾವಿದರಿಗೆ ಅವರ ಕಲೆಗೆ ಗೌರವ ಸನ್ಮಾನಗಳು ಸಿಗುವ ಸಮಯ. ಅನಾರೋಗ್ಯ ಅನುಭವಿಸುತ್ತಿರುವವರು ಈಗ ಆರೋಗ್ಯ ಚೇತರಿಕೆಯಾಗಿ ನೆಮ್ಮದಿ ಸಿಗುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ಈ ತಿಂಗಳ ೧೫ನೇ ತಾರೀಖು ಸೂರ್ಯ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಫಲಗಳು ದೊರೆಯುತ್ತದೆ. ಗುರುಬಲದ ಜೊತೆಗೆ ರಾಹುಬಲ ಹಾಗೂ ಸೂರ್ಯ ಅನುಗ್ರಹವೂ ಸಿಕ್ಕು ನಿಮ್ಮ ಕಷ್ಟಗಳಿಗೆ ಕೊನೆ ಸಿಗುತ್ತದೆ.

ಕುಂಭ ರಾಶಿಯ ಮಾಸ ಭವಿಷ್ಯ
ನಿಮಗೆ ಈಗ ಕೊಂಚ ಗಂಭೀರದ ಸಮಯ. ಸಾಡೆಸಾತಿಯು ಇನ್ನೂ ಮೂರು ವರ್ಷ ಇರುವುದರಿಂದ ನೀವು ಮಧ್ಯಭಾಗದಲ್ಲಿ ಇದ್ದೀರಿ. ಈಗ ಸಾಡೆಸಾತಿ ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ವೈದ್ಯರ ಸಲಹೆ ಸೂಚನೆಯಂತೆ ನಡೆಯಿರಿ. ಯಾವುದೂ ಕಾಯಿಲೆ ಉಲ್ಬಣವಾಗದಂತೆ ಜಾಗ್ರತೆ ವಹಿಸಿ. ಸರಕಾರದಿಂದ ತೊಂದರೆ ಬರುತ್ತದೆ. ನಿಮ್ಮವರಿಂದಲೇ ನಿಮಗೆ ನೋವು ಅಪಮಾನ ಆಗುವ ಸಂಭವ ಇದೆ. ಮನಸ್ಸಿಗೆ ಘಾಸಿ ಆಘಾತ ಆಗುವ ಸಂಗತಿಗಳು ನಡೆಯುತ್ತದೆ. ಕುಟುಂಬದಲ್ಲಿ ಏರುಪೇರುಗಳು ಒಬ್ಬರಿಗೊಬ್ಬರು ವಿಶ್ವಾಸ ಇಲ್ಲದೆ ಇರುವುದು ಜಗಳ ಮನಸ್ತಾಪ ನಡೆಯುತ್ತದೆ. ದತ್ತಾತ್ರೇಯನ ಸ್ಮರಣೆ ಮಾಡಿ. ದತ್ತ ದೇವಾಲಯ ಅಥವಾ ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿಬನ್ನಿ.
ದೀನರಿಗೆ ಬಡಬಗ್ಗರಿಗೆ ಸಹಾಯ ಮಾಡಿ. ಕಡಲೆ ಬೇಳೆಯನ್ನು ದಕ್ಷಿಣೆ ಸಮೇತ ದಾನಕೊಡಿ. ಎರಡನೇ ಮನೆಯಲ್ಲಿ ರಾಹು ಇರುವುದು ನಿಮಗೆ ಕುಟುಂಬ ಸೌಖ್ಯಕ್ಕೆ ಧಕ್ಕೆಯಾಗುತ್ತದೆ. ಕಾಳಹಸ್ತೀಶ್ವರನ ದರ್ಶನ ಮಾಡಿಬನ್ನಿ. ಈಗ ಸದ್ಯಕ್ಕೆ ಮೂರನೇ ಮನೆಯಲ್ಲಿ ಕುಜ ಹಾಗೂ ನಾಲ್ಕನೇ ಮನೆಯಲ್ಲಿ ಶುಕ್ರ ಇರುವುದು ಅಲ್ಪಸ್ವಲ್ಪ ಸಮಧಾನಕ್ಕೆ ಕಾರಣವಾಗುತ್ತದೆ. ಯಾರೊಂದಿಗೂ ವಾಗ್ವಾದ ಮಾಡಬೇಡಿ. ನಿಮ್ಮ ಸಮಸ್ಯೆಗಳಿಗೆ ತಾಳ್ಮೆಯಿಂದ ಕೂತು ಪರಿಹಾರ ಹುಡುಕಿ. ದುಡುಕಬೇಡಿ.

ಮೀನ ರಾಶಿಯ ಮಾಸ ಭವಿಷ್ಯ
ನಿಮಗೂ ಕುಂಭರಾಶಿಯವರಿಗೂ ಹೆಚ್ಚು ವ್ಯತ್ಯಾಸಗಳೇನೂ ಇಲ್ಲ. ನೀವೂ ಸಹ ಸಾಡೆಸಾತಿಯ ಪ್ರಭಾವದಲ್ಲಿ ಇದ್ದೀರಿ. ನಿಮಗೆ ಇನ್ನೂ ಆರು ವರ್ಷ ಕಳೆಯ ಬೇಕು. ಈಗ ಗಂಭೀರ ಸಮಯವೇ ಆಗಿದೆ. ಯಾವುದೇ ಕೆಲಸ ಕಾರ್ಯಗಳನ್ನು ಯೋಚಿಸಿ ಮುಂದುವರೆಸಿ. ಮುಖ್ಯವಾದ ತೀರ್ಮಾನಗಳನ್ನು ಮುಂದೂಡಿ. ನಿಮಗೆ ರಾಶಿಯಲ್ಲೇ ರಾಹು ಇದ್ದಾನೆ, ಹಾಗೂ ಏಳನೇ ಮನೆಯಲ್ಲಿ ಕೇತು ಇದ್ದಾನೆ. ಹಾಗಾಗಿ ನಿಮ್ಮ ಹಾಗೂ ನಿಮ್ಮ ಜೀವನ ಸಂಗಾತಿಯ ಬಗ್ಗೆ ಎಚ್ಚರಿಕೆ ಕಾಳಜಿ ವಹಿಸಿ. ಆರೋಗ್ಯದಲ್ಲಿ ಸಣ್ಣ ಏರುಪೇರು ಕಂಡರೂ ವೈದ್ಯರಿಗೆ ತೋರಿಸಿ ಅವರ ಸಲಹೆಯಂತೆ ನಡೆದುಕೊಳ್ಳಿ.
ಮನೆಯಲ್ಲಿ ಅಶಾಂತಿ ಇರುತ್ತದೆ. ಯಾವ ಮನಸ್ತಾಪವನ್ನೂ ಬೆಳೆಸಲು ಹೋಗಬೇಡಿ. ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಬರುತ್ತದೆ. ಇದನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ವೃತ್ತಿ ಕ್ಷೇತ್ರದಲ್ಲಿ ಒತ್ತಡಗಳು ಇರುತ್ತದೆ. ಮೇಲಾಧಿಕಾರಿಗಳ ಆಗ್ರಹಕ್ಕೆ ಪಾತ್ರರಾಗದಂತೆ ಚಾಣಾಕ್ಷತೆಯಿಂದ ವರ್ತಿಸಿ. ವಿವಾಹಕಕ್ಕಾಗಿ ಎದುರು ನೋಡುತ್ತಿರುವವರಿಗೆ ಈಗ ವಿವಾಹ ಭಾಗ್ಯ ಇಲ್ಲ. ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮಾರುವುದು ಎಲ್ಲದರಲ್ಲೂ ವಿಘ್ನಗಳು ಎದುರಾಗುತ್ತದೆ. ಭಯ ಬೇಡ. ಯೋಚಿಸಿ ಮುಂದುವರೆಯಿರಿ. ವ್ಯಯಸ್ಥಾನದಲ್ಲಿ ಇರುವ ಶನಿ ಅಪಾರ ಖರ್ಚುವೆಚ್ಚಗಳನ್ನು ಕೊಡುತ್ತಾನೆ. ಗಾಬರಿಯಾಗಬೇಡಿ ಸಾಡೆಸಾತಿ ನಡೆಯುವಾಗ ಅವಶ್ಯಕ ಅನಾವಶ್ಯಕ ಖರ್ಚುಗಳು ಬರುವುದು ಸಹಜ. ನಿಮ್ಮ ಆಯವ್ಯಯ ನೋಡಿಕೊಂಡು ಹೆಜ್ಜೆಯಿಡಿ. ಹಸುವಿಗೆ ಆಹಾರ ಕೊಡುವುದು, ದತ್ತಸ್ತವನ ಪಠಣ, ಹನುಮಾನ್ ಚಾಲೀಸಾ ಪಠಣ ಇವು ನಿಮಗೆ ಕೊಂಚ ನೆಮ್ಮದಿ ಕೊಡುತ್ತದೆ.
-
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications