February Horoscope: ಫೆಬ್ರವರಿ ತಿಂಗಳ 12 ರಾಶಿಗಳ ಭವಿಷ್ಯ- ಇವರ ಲವ್ ಸಕ್ಸಸ್
2025ನೇ ವರ್ಷದ ಎರಡನೇ ತಿಂಗಳು ಫೆಬ್ರವರಿ ಇಂದಿನಿಂದ ಆರಂಭವಾಗಿದೆ. ಫೆಬ್ರವರಿ ತಿಂಗಳು ಬಂದರೆ ಪ್ರೇಮಿಗಳ ದಿನ ನೆನಪಿಗೆ ಬರುತ್ತದೆ. ಈ ತಿಂಗಳು ಪ್ರೇಮಿಗಳಿಗೆ ವಿಶೇಷವಾಗಿದೆ. ಹಾಗಾದರೆ ಫೆಬ್ರವರಿಯಲ್ಲಿ ಯಾವ ರಾಶಿಯವರಿಗೆ ಅನುಕೂಲವಾಗಿದೆ? ಯಾವ ರಾಶಿಯವರು ತಮ್ಮ ಪ್ರೀತಿಯಲ್ಲಿ ಯಶಸ್ಸನ್ನು ಸಾಧಿಸುತ್ತಾರೆ? 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಫೆಬ್ರವರಿ 2025 ಮಾಸ ಭವಿಷ್ಯ.
ತಾ.01.02.2025 ರಿಂದ 28.02.2025
ಮಾಸವಿಶೇಷ: 05.02.25: ರಥಸಪ್ತಮಿ. 06.02.25: ಮದ್ವ ನವಮಿ. 26.02.25: ಮಹಾ ಶಿವರಾತ್ರಿ. 14.02.25:ಸೂರ್ಯ ಕುಂಭರಾಶಿಗೆ ಪ್ರವೇಶ.
ದ್ವಾದಶ ರಾಶಿಗಳ ಗೋಚಾರಫಲ

ಮೇಷರಾಶಿ:
ಈಗ ನಿಮಗೆ ಗುರುಬಲ ಇನ್ನೂ ಐದು ತಿಂಗಳು ಇದ್ದು ಎಲ್ಲ ಕೆಲಸಗಳೂ ಸು¯ಭವಾಗಿ ನಡೆಯುತ್ತದೆ, ಶನಿ ಕೂಡ ಮುಂದಿನ ಯುಗಾದಿಯ ವರೆಗೆ ಲಾಭಸ್ಥಾನದಲ್ಲಿ ಇರುವುದರಿಂದ ಹಣದ ಹರಿವೂ ಉತ್ತಮವಾಗಿದೆ. ಈಗ ಕೇತು ಕೂಡ ಆರನೇ ಮನೆಯಲ್ಲಿ ಇದ್ದು ನಿಮಗೆ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಮಾನಸಿಕ ದೈಹಿಕ ಶಕ್ತಿಯನ್ನು ವೃದ್ಧಿ ಪಡಿಸುತ್ತಾನೆ.
ಧೈರ್ಯ ಸಾಹಸ ಕೆಚ್ಚು ಕೊಡುತ್ತಾನೆ. ಶನಿ ಹಾಗೂ ಬುಧ ಲಾಭಸ್ಥಾನದಲ್ಲಿ ಇರುವುದು ಕೂಡ ನಿಮಗೆ ಹೆಚ್ಚು ಬಲವನ್ನು ಲಾಭವನ್ನು ಕೊಡುತ್ತದೆ. ಮಂಗಳ ಸಹ ಮೂರನೇ ಮನೆಗೆ ಹಿಮ್ಮುಖವಾಗಿ ಬಂದು ನಿಮಗೆ ಅಭಿವೃದ್ಧಿಯನ್ನು ತೋರಿಸುತ್ತಿದ್ದಾನೆ. ಈ ತಿಂಗಳು ಗ್ರಹಗತಿಗಳು ನಿಮಗೆ ಅನುಕೂಲಕರವಾಗಿ ಇದೆ. ಮಹತ್ವದ ಬದಲಾವಣೆ ನಿರೀಕ್ಷಿಸಬಹುದು.

ವೃಷಭರಾಶಿ:
ಈಗ ನಿಮಗೆ ರಾಹುವಿನ ಬಲ ಇದೆ. ರಾಹು ಲಾಭಸ್ಥಾನದಲ್ಲಿ ಧನಲಾಭ ನಿರಂತರವಾಗಿ ಕೊಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಶನಿ ಲಾಭಸ್ಥಾನಕ್ಕೆ ಪ್ರವೇಶ ಮಾಡಿ ನಿಮಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ಪ್ರೇಮಿಗಳ ದಿನ ಬರುವ ಫೆಬ್ರವರಿಯಲ್ಲಿ ಯಾರೆಲ್ಲಾ ಲವ್ ಸಕ್ಸಸ್ ಆಗಲಿದೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ತಿಂಗಳು ವೃಷಭ ರಾಶಿಯವರ ಲವ್ ಸಕ್ಸಸ್ ಆಗಲಿದೆ. ಅಂದರೆ ಈ ರಾಶಿಯ ಏಕಾಂಗಿಯಾಗಿರುವವರು ಪ್ರೀತಿಸಿದವರನ್ನೇ ಮದುವೆ ಆಗಲಿದ್ದಾರೆ.
ಈ ತಿಂಗಳು ನಿಮಗೆ ಶುಕ್ರ ಸಹ ರಾಹುವಿನ ಜೊತೆ ಲಾಭಸ್ಥಾನದಲ್ಲಿದ್ದು ಒಳ್ಳೆಯ ಕೀರ್ತಿ ಅಭಿವೃದ್ಧಿ ಧನಲಾಭ ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಈಗಿನಿಂದಲೇ ಸಂಬಂಧಗಳನ್ನು ಹುಡುಕುವುದು ಒಳ್ಳೆಯದು. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಒಂಬತ್ತರಲ್ಲಿ ಸೂರ್ಯ ಇದ್ದು ತಂದೆಯಿಂದ ಲಾಭ ಇದೆ.

ಮಿಥುನರಾಶಿ:
ಈ ಮಾಸ ಪೂರ್ತಿ ನಿಮಗೆ ಗುರುಬಲ ಶನಿಬಲ ಎರಡೂ ಇಲ್ಲ. ಆದರೂ ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಇದರಿಂದ ಒಳ್ಳೆಯಫಲ ನಿರೀಕ್ಷೆ ಇಲ್ಲದಿದ್ದರೂ ಕೆಟ್ಟದ್ದಂತೂ ಆಗುವುದಿಲ್ಲ. ಗುರು 12 ನೇ ಮನೆಯಲ್ಲಿ ಇರುವುದು ಕೊಂಚ ಒತ್ತಡಗಳನ್ನು ಕೊಡುತ್ತದೆ.
ಆದರೆ ಮುಂದಿನ ದಿನಗಳಲ್ಲಿ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಧನಲಾಭ ಅನುಕೂಲ ಇದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ತಾಯಿಗೆ ಅನುಕೂಲ ಇದೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಒಂಬತ್ತನೇ ಮನೆಯಲ್ಲಿ ಬುಧ ಇರುವುದು ನಿಮಗೆ ಮಹಾವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಯಾವುದೇ ಕೆಡುಕು ಸಂಭವಿಸದಂತೆ ದೇವರ ರಕ್ಷೆ ಇರುತ್ತದೆ.

ಕಟಕರಾಶಿ:
ಈಗ ನಿಮಗೆ ಗುರುಬಲ ಇದೆ. ಲಾಭಸ್ಥಾನದಲ್ಲಿ ಇರುವ ಗುರು ನೀವು ಮಾಡುವ ಕೆಲಸಕ್ಕೆಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ಯೋಜನೆಗಳು ಫಲಪ್ರದವಾಗುವ ಹಾಗೆ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ಅಷ್ಟಮ ಶನಿಯಿಂದ ಸಂಪೂರ್ಣ ಬಿಡುಗಡೆ ದೊರೆತು ನೀವು ಸಂಕಟಗಳಿಂದ ಹೊರಬರುತ್ತೀರಿ.
ಈಗಾಗಲೇ ನಿಮಗೆ ಶುಭಸೂಚನೆ ದೊರೆಯುತ್ತಿದೆ. ಮನಸ್ಸಿಗೆ ಆಹ್ಲಾದ ಎನಿಸುತ್ತದೆ. ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಗೆ ಶುಕ್ರನ ಪ್ರವೇಶದಿಂದ ಸುಗ್ರಾಸ ಭೋಜನ, ವಿಹಾರ, ಯಾತ್ರೆ ಮುಂತಾದ ಸತ್ಫಲಗಳು ದೊರೆಯುತ್ತದೆ.

ಸಿಂಹರಾಶಿ:
ನಿಮಗೆ ಈ ಮಾಸ ಪೂರ್ತಿ ಕೊಂಚ ಆತಂಕದ ವಾತಾವರಣ ಇರುತ್ತದೆ. ಆದರೆ ನಿಮ್ಮ ರಾಶಿಯ ಅಧಿಪತಿ ಸೂರ್ಯ ಆರನೇ ಮನೆಯಲ್ಲಿ ಇದ್ದು ನಿಮ್ಮನ್ನು ಹೆಜ್ಜೆಹೆಜ್ಜೆಗೂ ಕಾಪಾಡುತ್ತಾನೆ. ಶ್ರೀರಾಮನ ತಾರಕ ಮಂತ್ರ ಹೇಳಿಕೊಳ್ಳಿ. ಗುರುಬಲ ಇಲ್ಲದಿರುವುದರಿಂದ ಯಾವುದೇ ಯೋಜನೆಗಳನ್ನು ಜಾರಿಮಾಡುವಾಗ ಬಹಳ ಜವಾಬ್ದಾರಿಯಿಂದ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಮುಂದಿನ ದಿನಗಳಲ್ಲಿ ಗುರುಬಲ ದೊರೆತಾಗ ಕೊಂಚ ತಂಗಾಳಿ ಬೀಸಿ ಹಾಯೆನಿಸುತ್ತದೆ. ಮನೆ ದೇವರ ಪ್ರಾರ್ಥನೆ ಪೂಜೆ ಅವಶ್ಯ. ವಿಷ್ಣುಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ. ಏಳನೇ ಮನೆಯಲ್ಲಿ ಬುಧ ಇರುವುದು ನಿಮಗೆ ಶುಭಫಲಗಳನ್ನು ನೀಡುತ್ತದೆ. ಎಂಟನೇ ಮನೆಯಲ್ಲಿ ಇರುವ ಶುಕ್ರನ ಅನುಗ್ರಹ ಸಹ ನಿಮಗಿದೆ. ಲಾಭಸ್ಥಾನದಲ್ಲಿ ಕುಜ ಇದ್ದು ನಿಮ್ಮ ವೃತ್ತಿಯಲ್ಲಿ ಯಶಸ್ಸು ಪ್ರಶಂಸೆ ಗಳಿಸುತ್ತೀರಿ. ನೀವು ಮಾಡುವ ಮಹತ್ಕಾರ್ಯಗಳಿಗೆ ದೇವರ ಅನುಗ್ರಹ ಇದೆ.

ಕನ್ಯಾರಾಶಿ:
ಈಗ ನಿಮಗೆ ಗುರುಬಲ ಶನಿಬಲ ಎಲ್ಲವೂ ಇದೆ. ಈಗ ಸಮಯ ಆಹ್ಲಾದಕರವಾಗಿದೆ, ಆದರೆ ರಾಹು ಕೇತುಗಳ ಪ್ರಭಾವ ನಿಮ್ಮ ರಾಶಿಯ ಮೇಲೆ ಇರುವುದರಿಂದ ಅನಾರೋಗ್ಯ ಕಾಡುತ್ತದೆ. ನಿಮ್ಮ ದೇಹದ ಖಾಸಗಿ ಭಾಗಗಳಲ್ಲಿ ಅಲರ್ಜಿ, ಮೂತ್ರ ಸಂಬಂಧಿ ತೊಂದರೆ ಕಾಣಿಸಿಕೊಳ್ಳಬಹುದು. ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ. ಮುಂದಿನ ದಿನಗಳಲ್ಲಿ ಶನಿಯ ಬದಲಾವಣೆ ಹಾಗೂ ಗುರು ಬದಲಾವಣೆ ನಿಮಗೆ ಅಷ್ಟೊಂದು ಶುಭದಾಯಕವಾಗಿಲ್ಲ.
ಹಾಗಾಗಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಆದರೂ ನಿರ್ಲಕ್ಷ್ಯ ಸಲ್ಲದು. ಮುಂದೆ ರಾಹುವಿನ ಆರನೇ ಮನೆಗೆ ಪ್ರವೇಶ ನಿಮಗೆ ಸ್ವಲ್ಪ ಮಟ್ಟಿಗೆ ವಾತಾವರಣ ತಿಳಿಮಾಡುತ್ತದೆ. ಜೀವನ ಹಗುರ ಎನಿಸುತ್ತದೆ. ಹಣಕಾಸು ಸ್ಥಿತಿ ಸುಧಾರಿಸುತ್ತದೆ. ಈ ತಿಂಗಳ 14 ರ ನಂತರ ಸೂರ್ಯ ಆರನೇ ಮನೆಗೆ ಬರುತ್ತಾನೆ ಆಗ ನಿಮಗೆ ಶುಭಫಲಗಳ ನಿರೀಕ್ಷೆ ಮಾಡಬಹುದು.

ತುಲಾರಾಶಿ:
ಈಗ ನಿಮಗೆ ಗುರು ಅಷ್ಟಮದಲ್ಲಿ ಹಾಗೂ ಶನಿ ಪಂಚಮದಲ್ಲಿ ಇರುವುದು ಬಹಳ ತ್ರಾಸದಾಯಕವಾಗಿದೆ. ಮಾನಸಿಕ ಅಶಾಂತಿ, ಗೃಹಶಾಂತಿಗೆ ಧಕ್ಕೆ ಬಂದಿದೆ. ಬಹಳ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದೀರಿ. ಆದರೆ ಕೆಲವೇ ದಿನಗಳಲ್ಲಿ ಪಂಚಮ ಶನಿಯಿಂದ ಮುಕ್ತಿ ದೊರೆತು ಹಗುರವಾಗುತ್ತೀರಿ. ಇನ್ನೂ ತುಲಾ ರಾಶಿಯವರಿಗೆ ಈ ತಿಂಗಳು ತುಂಬಾ ಶುಭವಾಗಿದೆ. ಈ ತಿಂಗಳಲ್ಲಿ ತುಲಾ ರಾಶಿಯ ಪ್ರೇಮಿಗಳಿಗೆ ತುಂಬಾ ಉತ್ತಮ ಸಮಯ. ಅಂದುಕೊಂಡ ಜೀವನ ಸಂಗಾತಿಯನ್ನು ನೀವು ಪಡೆಯುವಿರಿ. ಪ್ರೇಮಿಗಳಿಗೆ ಮಂಗಳರಕ ತಿಂಗಳು ಇದಾಗಿದೆ.
ಹಾಗೂ ಮುಂದಿನ ದಿನಗಳಲ್ಲಿ ಗುರುವಿನ ಭಾಗ್ಯಸ್ಥಾನ ಪ್ರವೇಶದಿಂದ ಸಕಲ ವಿಷಯದಲ್ಲೂ ಶುಭಫಲಗಳು ಸಿಗಲಿದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಕಾರ್ಯಸಿದ್ದಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಅಧಿಕಾರ ಪ್ರಾಪ್ತಿ, ಆಸ್ತಿ ಕೊಳ್ಳುವುದು ಮುಂತಾದ ಶುಭಫಲಗಳು ದೊರೆಯಲಿದೆ. ಈ ಮಾಸದಿಂದಲೇ ಶುಭಶಕುನಗಳು ಗೋಚರವಾಗುತ್ತದೆ. ಮುಂದೆ ಒಳ್ಳೆಯ ದಿನಗಳು ಖಂಡಿತಾ ಇದೆ.

ವೃಶ್ಚಿಕರಾಶಿ:
ಈಗ ನಿಮಗೆ ಏಳರಲ್ಲಿ ಗುರು ಹಾಗೂ ಲಾಭಸ್ಥಾನದಲ್ಲಿ ಕೇತು ಇದ್ದು ಬಹಳಷ್ಟು ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಹಣದ ಹರಿವು ಕೂಡಾ ಉತ್ತಮವಾಗಿದೆ. ನಿಮ್ಮ ಯೋಜನೆಗಳು ಸಫಲವಾಗಿ ಉತ್ತಮ ಫಲ ನೀಡುತ್ತಿದೆ. ಮೂರನೇ ಮನೆಯಲ್ಲಿ ಸೂರ್ಯ, ನಾಲ್ಕನೇ ಮನೆಯಲ್ಲಿ ಬುಧ, ಐದನೇ ಮನೆಯಲ್ಲಿ ಶುಕ್ರ ಇದ್ದು ಎಲ್ಲ ವಿಷಯಗಳಲ್ಲೂ ನಿಮಗೆ ಜಯಭೇರಿ ಸಿಗುತ್ತದೆ.
ಯಶಸ್ಸಿನ ತುದಿಯಲ್ಲಿ ನಿಂತಿದ್ದೀರಿ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಒಳ್ಳೆಯ ಅವಕಾಶಗಳು ಈಗ ನಿಮಗೆ ಸಿಗುವ ಕಾಲ. ಒಳ್ಳೆಯ ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.

ಧನಸ್ಸುರಾಶಿ:
ಈಗ ನಿಮಗೆ ಶನಿ ಮೂರನೇ ಮನೆಯಲ್ಲಿ, ಗುರು ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಪ್ರಗತಿ ನಿಂತು ನಿಂತು ಮುಂದೆ ಸಾಗುತ್ತದೆ. ಆರನೇ ಮನೆಯ ಗುರುವಿನಿಂದ ಮಾನಸಿಕ ಕ್ಲೇಶ ಇರುತ್ತದೆ. ಮುಂದಿನ ದಿನಗಳಲ್ಲಿ ಗುರುಬಲ ಹಾಗೂ ರಾಹುಬಲ ಬರುತ್ತದೆ ಆಗ ನೀವು ಎಣಿಸಿದ ಕೆಲಸಕಾರ್ಯಗಳಲ್ಲಿ ಜಯ ಯಶಸ್ಸು ಸಿಗುತ್ತದೆ.
ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಾಲ್ಕರಲ್ಲಿ ಶುಕ್ರ, ಮೂರನೇ ಮನೆಯಲ್ಲಿ ಬುಧ ಇರುವುದು ವಾಹನದಿಂದ ಲಾಭ, ಬಂಧುವರ್ಗದವರಿಂದ ಸಹಕಾರ ಸಹಾಯ ಬೆಂಬಲ ಸಿಗುತ್ತದೆ. ವಿದೇಶ ಯಾತ್ರೆ ಮಾಡಬಯಸುವವರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ.

ಮಕರರಾಶಿ:
ಈಗ ಗುರುಬಲ ರಾಹು ಬಲ ಚೆನ್ನಾಗಿದೆ. ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಮುಂದಿನ ದಿನಗಳಲ್ಲಿ ಶನಿ ಸಹ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶವಾಗಿ ಇನ್ನೂ ಹೆಚ್ಚಿನ ಶಕ್ತಿ ಸಾಮಥ್ರ್ಯ ಕೊಟ್ಟು ಕಾಪಾಡುತ್ತಾನೆ.
ಸಾಡೆಸಾತಿಯಿಂದ ಮುಕ್ತರಾಗುತ್ತೀರಿ. ಶನಿ ನಿಮ್ಮ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ದೂರ ಮಾಡುತ್ತಾನೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಅವಕಾಶಗಳು ನಿಮ್ಮಬಳಿ ಅರಸಿ ಬರುತ್ತದೆ. ಶುಭಶಕುನಗಳು ಈಗಿನಿಂದಲೇ ನಿಮ್ಮ ಅನುಭವಕ್ಕೆ ಬರುತ್ತದೆ. ಈ ಮಾಸದಲ್ಲಿ ಎರಡನೇ ಮನೆಯಲ್ಲಿ ಬುಧ, ಮೂರನೇ ಮನೆಯಲ್ಲಿ ಶುಕ್ರ ನಿಮಗೆ ಬೆಂಬಲವಾಗಿದ್ದು ಶುಭಫಲಗಳನ್ನು ನೀಡುತ್ತಾರೆ.

ಕುಂಭರಾಶಿ:
ಈಗ ನಿಮಗೆ ಚತುರ್ಥದಲ್ಲಿ ಇರುವ ಗುರು, ನಿಮ್ಮ ರಾಶಿಯಲ್ಲೇ ಇರುವ ಶನಿಯಿಂದ ಬರೀ ಅಡೆತಡೆಗಳು ನಕಾರಾತ್ಮಕ ಸಂಗತಿಗಳೇ ಕಾಣುತ್ತಿವೆ. ಯಾವ ಕೆಲಸಕ್ಕೆ ಕೈಹಾಕಿದರೂ ಮುಂದುವರೆಯುವುದಿಲ್ಲ. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮಾನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಶನಿ ನಿಮ್ಮ ರಾಶಿಯನ್ನು ಬಿಟ್ಟು ಮುಂದಕ್ಕೆ ಚಲಿಸುತ್ತಾನೆ. ಏಕಾಂಗಿಯಾಗಿರುವ ಕುಂಭ ರಾಶಿಯ ಜನರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ನಡೆಯಬಹುದು. ಇದರಿಂದ ನಿಮ್ಮ ಮನಸ್ಸು ತುಂಬಾ ಸಂತೋಷವಾಗಿರುತ್ತದೆ.
ಆಗ ನಿಮಗೆ ಸಾಡೆಸಾತಿಯ ಕೊನೆಯ ಭಾಗ. ಇದರಲ್ಲಿ ಹೆಚ್ಚು ತೊಂದರೆಗಳು ಇರುವುದಿಲ್ಲ. ಆದರೆ ನೀವು ಅಲ್ಲಿಯವರೆಗೂ ಕಾಯಬೇಕು. ಮುಂಬರುವ ದಿನಗಳಲ್ಲಿ ಗುರುಬಲವೂ ಸಿಗುವವುದರಿದ ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಈ ತಿಂಗಳ ಪೂರ್ತಿ ಎರಡನೇ ಮನೆಯಲ್ಲಿ ಶುಕ್ರ ಇರುವುದು ನಿಮಗೆ ಶುಭಫಲಗಳನ್ನು ಕೊಡುತ್ತದೆ. 12 ರ ನಂತರ ಬುಧ ನಿಮ್ಮ ರಾಶಿಯನ್ನು ಪರವೇಶಿಸುವುದರಿಂದಲೂ ನಿಮಗೆ ಶುಭಫಲಗಳು ಇವೆ.

ಮೀನರಾಶಿ:
ಈಗ ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದು ಬಹಳ ಕಷ್ಟನಷ್ಟ ಅನುಭವಿಸುತ್ತಿದ್ದೀರಿ. ಗುರುಬಲವೂ ಈಗ ಸಧ್ಯಕ್ಕೆ ಇರುವುದಿಲ್ಲ. ಈಗ ಮೂರನೇ ಮನೆಯಲ್ಲಿ ಇರುವ ಗುರು ಅಲ್ಪ ಭಾಗ್ಯಗಳನ್ನು ಕೊಡುತ್ತಾನೆ. ಕೌಟುಂಬಿಕ ಜೀವನ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ಮುಂದೆ ಕೇತು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ. ಮೀನ ರಾಶಿಯ ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ತುಂಬಾ ಶುಭವಾಗಿದೆ. ನೀವು ಪ್ರೇಮಿಗಳಾಗಿದ್ದರೆ ನಿಮ್ಮ ಪ್ರೇಮ ಜೀವನ ಸುಖಕರವಾಗಿರುತ್ತದೆ.
ಏನೇ ಆದರೂ ಸಾಡೆಸಾತಿ ಶನಿ ನಿಮಗೆ ಜೀವನ ನಿಧಾನವಾಗಿ ಸಾಗುವಂತೆ ಮಾಡುತ್ತಾನೆ. ಮನೆಯಲ್ಲಿ ಮಕ್ಕಳ ಹಿರಿಯರ ಆರೋಗ್ಯ ಗಮನಿಸಿ. ಯಾವುದೇ ಕೆಲಸ ಕೊಂಚ ಯೋಚಿಸಿ ಮುಂದಡಿ ಇಡಿ. ಯಾವುದೇ ನಿರ್ಧಾರಗಳನ್ನು ಸರಿಯಾಗಿ ವಿವೇಚಿಸಿ ತೆಗೆದುಕೊಳ್ಳಿ. ಮನೆದೇವರ ದರ್ಶನ ಮಾಡಿಬನ್ನಿ. ಸವಾಲುಗಳನ್ನು ದೈರ್ಯದಿಂದ ಎದುರಿಸಿ. ಈಗ ಧೈರ್ಯ ಮತ್ತು ಸಹನೆಯೇ ನಿಮ್ಮ ಬಲ.












Click it and Unblock the Notifications