Get Updates
Get notified of breaking news, exclusive insights, and must-see stories!

August Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಆಗಸ್ಟ್‌ ತಿಂಗಳು ಸುವರ್ಣ ಕಾಲ..ದಿಢೀರ್‌ ಧನಲಾಭ

ಕ್ರೋಧಿ ನಾಮ ಸಂವತ್ಸರದ ದಕ್ಷಿಣಾಯನ ಗ್ರೀಷ್ಮ /ವರ್ಷ ಋತು ಆಷಾಢ ಮಾಸ ಬಹುಳ ದ್ವಾದಶಿಯಿಂದ ಶ್ರಾವಣ ಬಹುಳ ತ್ರಯೋದಶಿಯವರೆಗೆ ಮಾಸ ಭವಿಷ್ಯ

ಮಾಸ ವಿಶೇಷ

  • 05-08-2024-ಶ್ರಾವಣ ಮಾಸ ಆರಂಭ
  • 09-08-2024-ನಾಗರಪಂಚಮಿ
  • 15-08-2024-ಸ್ವಾತಂತ್ರ್ಯ ದಿನಾಚರಣೆ
  • 16-08-2024-ವರಮಹಾಲಕ್ಷ್ಮಿ ಹಬ್ಬ
  • 17-08-2024- ಸೂರ್ಯ ಸಿಂಹರಾಶಿಗೆ ಪ್ರವೇಶ
  • 22-08-2024-ಕಟಕಕ್ಕೆ ವಕ್ರ ಬುಧ
  • 26-08-2024-ಕನ್ಯಾ ರಾಶಿಗೆ ಶುಕ್ರನ ಪ್ರವೇಶ
  • 26-08-2024-ಮಿಥುನ ರಾಶಿಗೆ ಕುಜನ ಪ್ರವೇಶ
  • 26-08-2024- ಗೋಕುಲಾಷ್ಠಮಿ/ ಶ್ರೀಕೃಷ್ಣ ಜಯಂತಿ

ಮೇಷ ರಾಶಿಯ ಮಾಸ ಭವಿಷ್ಯ

ಮೇಷ ರಾಶಿಯ ಮಾಸ ಭವಿಷ್ಯ

ಈ ತಿಂಗಳ ಪೂರ್ತಿ ಗುರು ಎರಡನೇ ಮನೆಯಲ್ಲಿ ಹಾಗೂ ೨೭ರ ವರೆಗೂ ಕುಜನೂ ಎರಡನೇ ಮನೆಯಲ್ಲಿ ಬಹಳ ಶುಭಫಲಗಳನ್ನು ಕೊಡುತ್ತಾರೆ. ೨೭ ರ ನಂತರ ಕುಜ ಮೂರನೇ ಮನೆಗೆ ಪ್ರವೇಶ ಮಾಡುತ್ತಾನೆ. ಇದು ನಿಮಗೆ ಇನ್ನಷ್ಟು ಶಕ್ತಿಯನ್ನು ಪರಾಕ್ರಮವನ್ನು ಕೊಡುತ್ತದೆ. ನಾಲ್ಕನೇ ಮನೆಯಲ್ಲಿ ಬುಧ ಐದನೇ ಮನೆಯಲ್ಲಿ ಶುಕ್ರ ಈ ತಿಂಗಳು ನಿಮಗೆ ಬಹಳ ಅನುಕೂಲಕರವಾಗಿದೆ. ಶನಿ ಲಾಭಸ್ಥಾನದಲ್ಲಿ ನಿಮಗೆ ಹಣಕಾಸಿನ ಹಾಗೂ ನಿಮ್ಮ ಯೋಜನೆಗಳಿಗೆ ನೆರವು ನೀಡಲು ಸಿದ್ಧನಾಗಿದ್ದಾನೆ.

ನಿಮ್ಮ ದಶಾ ಭುಕ್ತಿ ನೋಡಿಕೊಳ್ಳಿ. ದಶಾ ಭುಕ್ತಿಯೂ ಒಳ್ಳೆಯದಿದ್ದರೆ ಗೋಚಾರದ ಶುಭಫಲಗಳು ಸೇರಿ ನಿಮಗೆ ಯಶಸ್ಸಿನ ಹಾದಿ ಮೂಡುತ್ತದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಮನೆಯಲ್ಲಿ ಸುಖ ಸಂತೋಷದ ವಾತಾವರಣ ಇರುತ್ತದೆ. ವೃತ್ತಿಯಲ್ಲಿ ಖುಷಿ ಇದೆ. ಬಡ್ತಿ ದೊರೆಯಬಹುದು. ನಿಮಗೆ ನೀಡಲಾದ ಟಾರ್ಗೆಟ್ ಮುಗಿಸಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ.

ವೃಷಭ ರಾಶಿಯ ಮಾಸ ಭವಿಷ್ಯ

ವೃಷಭ ರಾಶಿಯ ಮಾಸ ಭವಿಷ್ಯ

ಈಗ ಗುರು ಹಾಗೂ ಕುಜ ನಿಮ್ಮ ರಾಶಿಯಲ್ಲೇ ಇದ್ದಾರೆ. ಬುಧ ಶುಕ್ರರು ಈ ತಿಂಗಳ ಪೂರ್ತಿ ಮೂರು ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಾರೆ. ಸೂರ್ಯ ೧೭ ರವರೆಗೂ ಮೂರನೇ ಮನೆಯಲ್ಲಿದ್ದು ಪರಾಕ್ರಮವನ್ನೂ ಧನವನ್ನೂ ಕೊಡುತ್ತಾನೆ. ಬುಧ ಶುಕ್ರರೂ ನಿಮಗೆ ಅನುಕೂಲವನ್ನು ಒದಗಿಸಿಕೊಡುತ್ತಾರೆ. ವಾಹನದಿಂದ ಲಾಭ ಇದೆ. ಕಂಪ್ಯೂಟರ್ ಗಣಿತ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ. ಕಲಾವಿದರಿಗೆ ಬಹಳ ಒಳ್ಳೆಯ ಸುದ್ದಿಗಳು ಇವೆ. ರಾಜಕೀಯ ನಾಯಕರಿಗೆ ಸಮಭಾಗ. ಅನುಕೂಲ ಅನಾನುಕೂಲ ಎರಡೂ ಇದೆ. ಆದರೆ ಈ ರಾಶಿಯವರಿಗೆ ಲಾಭ ಸ್ಥಾನದಲ್ಲಿ ರಾಹು ಇರುವುದರಿಂದ ಧೈರ್ಯ ಪರಾಕ್ರಮ ಹೆಚ್ಚ ಇರುತ್ತದೆ. ಮತ್ತು ಧನಲಾಭ ಇದೆ. ನೀವು ನಿರೀಕ್ಷಿಸದ ಮೂಲದಿಂದ ಧನಲಾಭ ಇರುತ್ತದೆ. ಏನೇ ಅಡಚಣೆಗಳಿದ್ದರೂ ಎದುರಿಸಿ ಮುಂದೆ ಹೋಗುವ ಛಾತಿ ಇದೆ.

ಮಿಥುನ ರಾಶಿಯ ಮಾಸ ಭವಿಷ್ಯ

ಮಿಥುನ ರಾಶಿಯ ಮಾಸ ಭವಿಷ್ಯ

ಈಗ ಗುರು ಹಾಗೂ ಕುಜ ನಿಮ್ಮ ರಾಶಿಯಿಂದ ೧೨ನೇ ಮನೆಯಲ್ಲಿ ಇದ್ದಾರೆ, ಭೂಮಿಗೆ ಸಂಬಂಧ ಪಟ್ಟ ವ್ಯವಹಾರವನ್ನು ಮುಂದೂಡಿ. ಈಗ ಅದಕ್ಕೆ ಸಕಾಲವಲ್ಲ. ಎರಡನೇ ಮನೆಯಲ್ಲಿ ೧೭ ರ ವರೆಗೂ ಸೂರ್ಯ ಇರುತ್ತಾನೆ. ಮನೆಯಲ್ಲಿ ಮನಸ್ಸಿನಲ್ಲಿ ಕೊಂಚ ಅಶಾಂತಿ ಇರುತ್ತದೆ. ೧೭ ರ ನಂತರ ಸೂರ್ಯ ಮೂರನೇ ಮನೆಗೆ ಹೋದಾಗ ನಿಮಗೆ ಶಕ್ತಿ ಧೈರ್ಯ ಮತ್ತು ಅನುಕೂಲಗಳು ಇವೆ. ಸರ್ಕಾರದಿಂದ ಲಾಭ ಇದೆ. ಧನಲಾಭ ಇದೆ.

ಮೂರನೇ ಮನೆಯಲ್ಲಿ ಬುಧಶುಕ್ರರು ಈ ಮಾಸ ಪೂರ್ತಿ ಇರುತ್ತಾರೆ. ಇದೂ ಕೂಡ ನಿಮಗೆ ಶುಭವನ್ನು ತರುತ್ತದೆ. ಈ ತಿಂಗಳು ನಿಮಗೆ ಖರ್ಚು ಹೆಚ್ಚು. ಶುಭಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಜಾಗ ಬದಲಾವಣೆ ಸಾಧ್ಯತೆ ಇದೆ. ಇದರಿಂದ ನಿಮಗೆ ಅನುಕೂಲಗಳೆ ಇರುತ್ತದೆ. ಒಳ್ಳೆಯ ಬದಲಾವಣೆಗೆ ಸಿದ್ಧರಾಗಿರಿ. ನಾಲ್ಕನೇ ಮನೆಯಲ್ಲಿ ಕೇತು ಇರುವುದು ತಾಯಿಗೆ ಒತ್ತಡವನ್ನು ತೋರಿಸುತ್ತದೆ. ಬಾಕಿಯಂತೆ ಈ ತಿಂಗಳು ನಾರ್ಮಲ್ ಆಗಿ ಇದೆ.

ಕಟಕ ರಾಶಿಯ ಮಾಸ ಭವಿಷ್ಯ

ಕಟಕ ರಾಶಿಯ ಮಾಸ ಭವಿಷ್ಯ

ಈಗ ಗುರು ಲಾಭ ಸ್ಥಾನದಲ್ಲಿ ಇದ್ದಾನೆ. ಯಾವುದೇ ರೀತಿಯ ಭಯ ಶಂಕೆ ಬೇಡ. ಗುರು ಇರುವುದೇ ಕಾಪಾಡಲು. ಗುರು ಬಲ ಇದ್ದಾಗ ಎಲ್ಲ ಕಷ್ಟಗಳು ಹತ್ತಿಯಂತೆ ಹಾರಿಹೋಗುತ್ತದೆ. ಅಷ್ಠಮ ಶನಿಯ ಪ್ರಭಾವ ಇದ್ದರೂ ಗುರುಬಲ ಇರುವುದರಿಂದ ಏನೂ ಭಯ ಇಲ್ಲ. ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಬುಧಶುಕ್ರ ಇರುವುದು ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರುತ್ತದೆ. ಹಣದ ಹರಿವು ಉತ್ತಮವಾಗಿದೆ.

ಆರೋಗ್ಯ ಸುಧಾರಿಸುತ್ತದೆ. ಮೂರನೇ ಮನೆಯಲ್ಲಿ ಕೇತು ಇರುವುದು ನಿಮ್ಮ ಧನಬಲವನ್ನೇ ಅಲ್ಲದೆ ಧೈರ್ಯ ಪರಾಕ್ರಮ ಕೊಡುತ್ತದೆ. ಕಷ್ಟಗಳ ಸಮಯದಲ್ಲಿ ಅದನ್ನು ಎದುರಿಸಿ ನಿಲ್ಲುವ ಛಾತಿಯನ್ನು ಕೊಡುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಬಡ್ತಿ ಇದೆ. ವಿದೇಶ ಪ್ರಯಾಣಯೋಗ ಇದೆ. ವೃತ್ತಿಯಲ್ಲಿ ಯಶಸ್ಸು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇದೆ. ಹೊಸಹೊಸ ಯೋಜನೆಗಳು ನಿಮ್ಮ ಮುಂದೆ ಬರುತ್ತದೆ. ಅಭಿವೃದ್ಧಿ ಆಗುವಂತೆ ಎಲ್ಲ ಅವಕಾಶ ಈಗ ನಿಮ್ಮೆಡೆಗೆ ಬರುತ್ತದೆ. ಅದರ ಲಾಭ ಪಡೆದುಕೊಳ್ಳಿ.

ಸಿಂಹ ರಾಶಿಯ ಮಾಸ ಭವಿಷ್ಯ

ಸಿಂಹ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಎಲ್ಲ ಗ್ರಹಗಳು ವ್ಯತಿರಿಕ್ತವಾಗಿದೆ. ೨೩ನೇ ರಾಖಿನವರೆಗೂ ಬುಧಶೂಕ್ರರು ನಿಮ್ಮ ರಾಶಿಯಲ್ಲೇ ಇರುತ್ತಾರೆ. ೨೩ ರಂದು ಬುಧ ವಕ್ರಗತಿಯಲ್ಲಿ ಕಟಕಕ್ಕೆ ಬರುತ್ತಾನೆ. ೧೭ ರ ನಂತರ ಸೂರ್ಯ ನಿಮ್ಮ ರಾಶಿಗೇ ಬರುತ್ತಾನೆ. ಗುರು ಮಂಗಳ ಹತ್ತನೇ ಮನೆಯಲ್ಲಿ ಇದ್ದಾರೆ. ಶನಿ ಏಳನೇ ,ಮನೆಯಲ್ಲಿ ಇದ್ದಾನೆ. ಇವು ಯಾವುದೂ ನಿಮಗೆ ಅನುಕೂಲಕರವಾಗಿಲ್ಲ. ಕಿರಿಕಿರಿಗಳು ಮಾನಸಿಕ ವೇದನೆ ಅಪವಾದ ಒತ್ತಡಗಳು ಇರುತ್ತದೆ. ಹಣ ಖರ್ಚಾದರೂ ಸುಖವಿಲ್ಲ. ಮನಸ್ಸಿಗೆ ಕೋಪತಾಪಗಳು ಇರುತ್ತವೆ. ಯಾವುದರಲ್ಲೂ ಮನಸ್ಸಿಲ್ಲದೆ ಎಲ್ಲವೂ ಅರ್ಧಂಬರ್ಧ ಕೆಲಸ ಅರೆ ಮನಸ್ಸು ಹೀಗೆ ಇರುತ್ತದೆ. ಎರಡನೇ ಮನೆಯಲ್ಲಿ ಕೇತು ಇರುವುದು ಕೂಡ ಕುಟುಂಬದಲ್ಲಿ ಅಶಾಂತಿ ತೋರಿಸುತ್ತದೆ. ಅನಾರೋಗ್ಯಕಾಡಬಹುದು. ಎಚ್ಚರಿಕೆಯಿಂದ ಇರಿ. ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಅಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ.

ಕನ್ಯಾ ರಾಶಿಯ ಮಾಸ ಭವಿಷ್ಯ

ಕನ್ಯಾ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಪರ್ವ ಕಾಲ. ಒಳ್ಳೆಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಗುರು ಒಂಬತ್ತನೇ ಮನೆಯಲ್ಲಿ ಕುಜನೊಂದಿಗೆ ಇದ್ದಾನೆ. ಗುರುಮಂಗಳ ಯೋಗವಾಗಿದೆ. ಇದು ನಿಮಗೆ ಭೂಮಿಗೆ ಸಂಬಂಧಪಟ್ಟ ತಗಾದೆಗಳನ್ನು ಬಗೆಹರಿಸುತ್ತದೆ. ಹೊಸ ಭೂಮಿ ಕೊಳ್ಳುವಂಥ ಅವಾಕಾಶಗಳನ್ನು ಕೊಡುತ್ತದೆ. ಭೂಮಿಯಿಂದ ಆದಾಯ ಇದೆ. ಶನಿ ಆರನೇ ಮನೆಯಲ್ಲಿ ಇರುವುದರಿಂದ ಹಣಕಾಸಿನ ಹರಿವು ಬಹಳ ಉತ್ತಮವಾಗಿರುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ.

ಅವಿವಾಹಿತರಿಗೆ ವಿವಾಹಯೋಗ ಇದೆ. ಉದ್ಯೋಗದಲ್ಲಿ ಬಡ್ತಿ ಯಶಸ್ಸು ಇದೆ. ಕಲಾವಿದರಿಗೆ ಗೌರವ ಮನ್ನಣೆ ದೊರೆಯುತ್ತದೆ. ಕನ್ಯಾರಾಶಿಯ ರಾಜಕೀಯ ನಾಯಕರಿಗೆ ಅವರು ಬಯಸಿದ ಅಧಿಕಾರ ದೊರೆಯುವ ಸಾಧ್ಯತೆ ಇದೆ. ವಿದೇಶ ಪ್ರಯಾಣ ಯೋಗ ಇದೆ. ಹೂಡಿಕೆಗಳಲ್ಲಿ ಹಣ ತೊಡಗಿಸಿರುವರಿಗೆ ಅಧಿಕ ಲಾಭ ಇದೆ. ಯಾವುದೇ ಕೆಲಸಗಳನ್ನು ಅಡೆತಡೆ ಇಲ್ಲದೆ ಮಾಡಿಕೊಳ್ಳುವ ಒಂದು ಸಾಹಸ ಈಗ ನಿಮ್ಮಲ್ಲಿ ಇರುತ್ತದೆ.

ತುಲಾ ರಾಶಿಯ ಮಾಸ ಭವಿಷ್ಯ

ತುಲಾ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಎಂಟನೇ ಮನೆಯಲ್ಲಿ ಗುರು ಮಂಗಳ ಇದ್ದಾರೆ ಎಂಟನೇ ಮನೆಯಲ್ಲಿ ಇರುವುದು ಅಷ್ಟೇನೂ ಶುಭಕರವಿಲ್ಲದಿದ್ದರೂ ಗುರು ಮಂಗಳ ಮಿತ್ರರಾಗಿರುವುದರಿಂದ ಯಾವುದೇ ತೀವ್ರ ತೊಂದರೆ ಮಾಡಲಾರರು. ಈಗ ನಿಮಗೆ ಆರನೇ ಮನೆಯಲ್ಲಿ ರಾಹು ಇದ್ದಾನೆ. ಇದೊಂದೇ ಈಗ ನಿಮಗೆ ಬಲ ಧೈರ್ಯ ಕೊಡುವ ಗ್ರಹ. ಎಲ್ಲ ಅಡೆತಡೆಗಳನ್ನೂ ಮುರಿದು ಮುಂದಕ್ಕೆ ಹೋಗುವ ಶಕ್ತಿಯನ್ನು ರಾಹು ಕೊಡುತ್ತಾನೆ. ಈ ತಿಂಗಳ ೧೭ರ ನಂತರ ಸೂರ್ಯ ಲಾಭಸ್ಥಾನಕ್ಕೆ ಬರುತ್ತಾನೆ. ಸೂರ್ಯನ ಜೊತೆಗೆ ಶುಕ್ರ-ಬುಧ ಇರುತ್ತಾರೆ. ಲಾಭಸ್ಥಾನದಲ್ಲಿ ಯಾವುದೇ ಗ್ರಹ ಇದ್ದರೂ ಹಣವನ್ನೂ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಶಕ್ತಿಯನ್ನೂ ಕೊಡುತ್ತಾರೆ. ಈ ತಿಂಗಳ ಮಧ್ಯದಿಂದ ಕೊನೆಯವರೆಗೂ ಸೂರ್ಯ ಹಾಗೂ ಶುಕ್ರ ಲಾಭಸ್ಥಾನದಲ್ಲಿ ಇರುವುದರಿಂದ ನಿಮಗೆ ಈ ತಿಂಗಳು ಯಾವುದೇ ಅಡಚಣೆ ಬರುವುದಿಲ್ಲ. ಈ ತಿಂಗಳು ಸರಾಗವಾಗಿ ಕಳೆಯುತ್ತದೆ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ

ವೃಶ್ಚಿಕ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಸಂಪೂರ್ಣ ಗುರುಬಲ ಇದೆ. ಗುರು ಏಳನೇ ಮನೆಯಲ್ಲಿ ನಿಮ್ಮ ರಾಶಿಯ ಅಧಿಪತಿ ಕುಜನೊಟ್ಟಿಗೆ ಇದ್ದು ನಿಮ್ಮ ರಾಶಿಯನ್ನು ನೇರವಾಗಿ ಎರಡೂ ಗ್ರಹಗಳು ವೀಕ್ಷಿಸುವುದರಿಂದ ನಿಮಗೆ ಡಬಲ್ ಶಕ್ತಿ. ಮಾಸದ ಮಧ್ಯಭಾಗದಿಂದ ಹತ್ತನೇ ಮನೆಯಲ್ಲಿ ಸೂರ್ಯ ಶುಕ್ರ ಇರುತ್ತಾರೆ. ಬುಧನೂ ಸಹ ಒಂಬತ್ತು ಹತ್ತನೇ ಮನೆಯಲ್ಲಿಯೇ ಸಂಚರಿಸುತ್ತಾನೆ. ಇದು ನಿಮಗೆ ಶುಭಯೋಗ ಕೊಡುತ್ತದೆ. ವೃತ್ತಿ ಸಂಬಂಧವಾಗಿ ಪ್ರಯಾಣ ಮಾಡುತ್ತೀರಿ.

ಅವಿವಾಹಿತರಿಗೆ ವಿವಾಹಯೋಗ ಇದೆ. ವೃತ್ತಿಯಲ್ಲಿ ಯಶಸ್ಸು ಮೇಲಾಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ವಾಹನದಿಂದ ನಷ್ಟ ಹಾಗೂ ತಾಯಿಯ ಆರೋಗ್ಯಕ್ಕೆ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಐದನೇ ಮನೆಯಲ್ಲಿ ರಾಹು ಇರುವುದರಿಂದ ಮಕ್ಕಳಿಂದ ಮನಸ್ಸಿಗೆ ನೋವಾಗಬಹುದು. ಲಾಭಸ್ಥಾನದಲ್ಲಿ ಕೇತು ಇದ್ದಾನೆ. ಇರು ನಿಗೆ ಹಣದ ಹರಿವನ್ನು ಉತ್ತಮಪಡಿಸಿ ಶತ್ರುಗಳನ್ನು ನಿಗ್ರಹಿಸುತ್ತದೆ. ಈ ಮಾಸ ನಿಮಗೆ ಹೆಚ್ಚು ಶುಭಫಲಗಳನ್ನೇ ನೀಡುತ್ತದೆ. ಬದುಕಿನಲ್ಲಿ ಒಂದು ಆರೋಗ್ಯಕರ ತಿರುವು ಎದುರಾಗುತ್ತದೆ.

ಧನಸ್ಸು ರಾಶಿಯ ಮಾಸ ಭವಿಷ್ಯ

ಧನಸ್ಸು ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗುರುಬಲ ಇಲ್ಲದಿರುವುದರಿಂದ ಯಾವುದೇ ಮೂಲೆಯಿಂದ ಅಪಾಯ ಎದುರಾಗಬಹುದು. ವಿಶೇಷವಾಗಿ ರಾಜಕೀಯ ರಂಗದಲ್ಲಿ ಇರುವವರಿಗೆ ಅಪಾಯಗಳು ತಪ್ಪಿದ್ದಲ್ಲ. ಆರೋಪಣೆ ದೂಷಣೆ ಅಪಮಾನ ಅಧಿಕಾರ ತ್ಯಾಗ ಇವೆಲ್ಲವೂ ಇದೆ. ಯಾವುದೇ ಆಘಾತ ಎದುರಾದರೂ ವಿಧಿಲಿಖಿತ ಎಂದು ಹೆಚ್ಚು ವಿರೋಧಿಸದೆ ವಿಧಿಗೆ ತಲೆಬಾಗಿ. ಇದು ನಿಮಗೆ ಮುಂದೆ ಶುಭಯೋಗವನ್ನೂ ತಂದುಕೊಡುತ್ತದೆ. ಹಣದ ಹರಿವು ಉತ್ತಮವಾಗಿದೆ.

ರಾಜಕೀಯ ರಂಗದವರಲ್ಲದೆ ಸಾಮಾನ್ಯರಿಗೂ ಕೌಟುಂಬಿಕವಾಗಿ ಅಪವಾದ ಕಿರಿಕಿರಿ ತಪ್ಪಿದ್ದಲ್ಲ. ನೀವು ಮಾಡದೇ ಇರುವ ತಪ್ಪಿಗೂ ಬೆಲೆ ತೆರಬೇಕಾಗುತ್ತದೆ. ೨೩ರ ವರೆಗೂ ಬುಧ ಶುಕ್ರ ಭಾಗ್ಯಸ್ಥಾನದಲ್ಲಿ ಇದ್ದು ನಿಮಗೆ ಶ್ರೇಯಸ್ಸನ್ನು ಯಶಸ್ಸನ್ನೂ ಕೊಡುತ್ತಾರೆ. ಕೇತು ಹತ್ತನೇ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ನೀವೇ ಬಯಸಿದರೂ ವೃತ್ತಿಯಲ್ಲಿ ಬದಲಾವಣೆ ಕಷ್ಟವಾಗುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ತಾಯಿಯೊಂದಿಗೆ ವಿರಸ ಇರುತ್ತದೆ. ಮೂರನೇ ಮನೆಯ ಶನಿ ನಿಮಗೆ ಒಂದು ಹಣದ ಮೊತ್ತವನ್ನು ಕೊಡಿಸುತ್ತಾನೆ. ಯಾವುದೋ ಮೂಲದಿಂದ ಹಣ ಹರಿದು ಬರುತ್ತದೆ.

ಮಕರ ರಾಶಿಯ ಮಾಸ ಭವಿಷ್ಯ

ಮಕರ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಎಲ್ಲ ವಿಧದಲ್ಲೂ ಅನುಕೂಲಕರ ಸಮಯ. ಇಷ್ಟು ದಿನ ಸಾಡೆಸಾತಿ ಶನಿಯಿಂದ ಕಷ್ಟಪಟ್ಟಿರುವ ನಿಮಗೆ ಈಗ ಶನಿಕಾಟದಿಂದ ಬಿಡುಗಡೆಯಾಗುವ ಸಮಯ. ಹಾಗಾಗಿ ನೀವು ಸಾಡೆಸಾತಿ ಸಮಯದಲ್ಲಿ ಏನು ಕಳೆದುಕೊಂಡಿದ್ದರೋ ಅದನ್ನು ೯೦% ಮರಳಿ ಪಡೆಯುವ ಸಮಯ. ಗ್ರಹಗತಿಗಳು ಈಗ ನಿಮ್ಮ ಪರವಾಗಿ ಇದೆ. ಐದನೇ ಮನೆಯಲ್ಲಿ ಗುರು ನಿಮಗೆ ಅನೇಕ ಒಳ್ಳೆಯ ಅವಕಾಶಗಳು ಬರಲು ಕಾರಣವಾಗುತ್ತಾನೆ. ಹಣದ ಹರಿವನ್ನು ಉತ್ತಮಪಡಿಸುತ್ತಾನೆ.

ಜೀವನಕ್ಕೆ ಬೇಕಾದ ದ್ರವ್ಯವನ್ನು ಒದಗಿಸಿ ಕೊಡುವಲ್ಲಿ ಸಹಕಾರ ತೋರುತ್ತಾನೆ. ಮೂರನೇ ಮನೆಯಲ್ಲಿರುವ ರಾಹು ಸಹ ನಿಮಗೆ ಹಣದ ಬಲವನ್ನು ವೃದ್ಧಿಮಾಡುತ್ತಾನೆ. ನಾನಾ ಮೂಲಗಳಿಂದ ಧನಸಹಾಯ ಒದಗಿ ಬರುತ್ತದೆ. ಮನೆಯಲ್ಲಿ ಸಂತಸ ಸಂಭ್ರಮದ ವಾತಾವರಣ ಇರುತ್ತದೆ. ಶುಭಕಾರ್ಯ ನಡೆಯುವ ಸೂಚನೆಗಳು ಗೋಚರಿಸುತ್ತದೆ. ಹೊಸ ಉದ್ಯೋಗ ಉದ್ಯೋಗದಲ್ಲಿ ಬಡ್ತಿ ಮೊದಲಾದ ಸದವಕಾಶಗಳು ಈಗ ನಿಮ್ಮ ಗಮನಕ್ಕೆ ಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ.

ಕುಂಭ ರಾಶಿಯ ಮಾಸ ಭವಿಷ್ಯ

ಕುಂಭ ರಾಶಿಯ ಮಾಸ ಭವಿಷ್ಯ

ಈಗ ಸ್ವಲ್ಪ ಗಂಭೀರ ಸಮಯ ನಿಮಗೆ. ಗುರು ನಾಲ್ಕನೇ ಮನೆಯಲ್ಲಿ ಇರುವಾಗ ವಿಧ ವಿಧ ಅಪವಾದಗಳು, ಎಂದೋ ನೀವು ಮಾಡಿದ್ದ ತಪ್ಪು ಇಂದು ಮುನ್ನೆಲೆಗೆ ಬಂದು ನಿಮ್ಮ ಮರ್ಯಾದೆಗೆ ಧಕ್ಕೆ ತರುವುದು, ಅಧಿಕಾರ ಕಳೆದುಕೊಳ್ಳುವುದು, ಹಣಕಾಸಿನ ಅಡಚಣೆ ಹೀಗೆ ನಾನಾವಿಧದ ಮಾನಸಿಕ ಕಿರಿಕಿರಿ ಅನುಭವಿಸುತ್ತೀರಿ. ಆರೋಗ್ಯಕ್ಕೂ ಧಕ್ಕೆ ಒದಗಬಹುದು.

ಕೌಟುಂಬಿಕವಾಗಿಯೂ ಅಶಾಂತಿ ಇರುತ್ತದೆ. ನೀವು ಸಾಡಸಾತಿ ಶನಿಯ ಮಧ್ಯಭಾಗದಲ್ಲಿ ಇದ್ದೀರಿ. ಹೀಗಾಗಿ ನೀವು ಬಹಳಷ್ಟು ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತಾಯಿಯ ಆರೋಗ್ಯಕ್ಕೆ ಧಕ್ಕೆ ಇದೆ. ಈಗ ೧೭ ನೇ ತಾರೀಖಿನವರೆಗೂ ಸೂರ್ಯ ಆರನೇ ಮನೆಯಲ್ಲಿ ಇರುತ್ತಾನೆ ಆಲ್ಲಿಯ ವರೆಗೂ ಕೊಂಚ ಪರಿಸ್ಥಿತಿ ಎದುರಿಸುವ ಧೈರ್ಯ ಸಾಹಸಗಳು ಇರುತ್ತದೆ ಹಾಗೂ ಸರ್ಕಾರದಿಂದ ಲಾಭ ಇರುತ್ತದೆ. ಒಟ್ಟಾರೆ ಈ ತಿಂಗಳು ನಿಮಗೆ ಶುಭ ಫಲ ಕಡಿಮೆ. ದತ್ತಾತ್ರೇಯ ಸ್ತೋತ್ರ ಪಠಿಸಿ. ಕಡಲೆ ಬೇಳೆಯನ್ನು ದಕ್ಷಿಣೆ ಸಮೇತ ದಾನ ಮಾಡಿ.

ಮೀನ ರಾಶಿಯ ಮಾಸ ಭವಿಷ್ಯ

ಮೀನ ರಾಶಿಯ ಮಾಸ ಭವಿಷ್ಯ

ನೀವು ಸಹ ಸಾಡೆಸಾತಿಯ ಪ್ರಭಾವದಲ್ಲಿ ಇದ್ದೀರಿ. ನಿಮ್ಮದು ಇನ್ನೂ ಮೊದಲನೆಯ ಭಾಗ, ಹಾಗಾಗಿ ಕಷ್ಟಗಳು ತೊಂದರೆಗಳು ಕಠಿಣವಾಗಿ ಇರುತ್ತದೆ. ನೀವು ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಬೇಕು, ಪ್ರತಿ ಶನಿವಾರ ಹನುಮಾನ್ ಗುಡಿಗೆ ಹೋಗಬೇಕು. ಯಾರೊಡನೆಯೂ ಜಗಳ ವಾದವಿವಾದ ಬೇಡ. ವಾದ ಮಾಡಿದರೆ ಜಯವೂ ನಿಮ್ಮದಾಗದು ಮತ್ತು ವೃಥಾ ಅಪವಾದವನ್ನೂ ಹೊರೆಸಬಹುದು.

ಸಾಡೆಸಾತಿ ಸಮಯದಲ್ಲಿ ಬಹಳಷ್ಟು ವ್ಯತಿರಿಕ್ತ ಪರಿಣಾಮಗಳು ಎದುರಾಗುತ್ತದೆ. ಇದು ನಿಮ್ಮ ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕಿಯನ್ನು ಉಳಿಸಿಬಿಡುತ್ತದೆ. ಹಾಗಾಗಿ ಯಾವುದೇ ನಿರ್ಧಾರ ಮಾಡುವಾಗ ಸರಿಯಾಗಿ ಯೋಚನೆ ಮಾಡಿ ಮುಂದುವರೆಯಿರಿ. ಮೈಮರೆಯಬೇಡಿ, ಯಾರನ್ನೂ ಅತಿಯಾಗಿ ನಂಬಬೇಡಿ. ನಿಮ್ಮ ಕೆಲಸ ನೀವು ಪ್ರಾಮಾಣಿಕತೆಯಿಂದ ಮಾಡಿ. ಗುರುಬಲ ಇಲ್ಲದಿದ್ದರೂ ಶನಿಯ ಪ್ರಭಾವ ಇದ್ದರೂ ಬಾಕಿ ಗ್ರಹಗಳಿಂದ ಕೊಂಚಮಟ್ಟಿನ ಅನುಕೂಲ ಇದೆ. ಹುಲ್ಲುಕಡ್ಡಿ ಆಸರೆಯಂತೆ ಕಾಪಾಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+