July 2025 Horoscope: ಜುಲೈ ತಿಂಗಳು ಈ ರಾಶಿಯವರಿಗೆ ಗಜ ಕೇಸರಿ ಯೋಗ; ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ
2025 ಜುಲೈ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. ಇದು ವಿಶೇಷ ಮಾಸ.. ಜುಲೈ 7 ರಂದು ಮೊಹರಂ ಕಡೇ ದಿನ ಹಾಗೂ ಜುಲೈ 10 ರಂದು ಬುದ್ದ ಪೂರ್ಣಿಮಾ, ಜುಲೈ 17 ರಂದು ಸೂರ್ಯ ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. 29.07.2025ರಂದು ನಾಗರ ಪಂಚಮಿ ಇದೆ. 01.07.2025 ರಿಂದ 31.07.2025ರವರೆಗೆ ಒಟ್ಟಾರೆ ಗ್ರಹಗಳ ಸಂಚಾರ ಹನ್ನೆರಡು ರಾಶಿಗಳ ಆರ್ಥಿಕ, ವೃತ್ತಿ, ಕೌಟುಂಬಿಕ, ಹಣಕಾಸಿನ ಸಮಸ್ಯೆ, ಪ್ರೀತಿ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಈಗ ತಿಳಿಯೋಣ.
ಮೇಷರಾಶಿ
ಸಾಡೇಸಾತಿ ಶುರುವಾಗಿರುವುದರಿಂದ ಎಲ್ಲ ಕೆಲಸಗಳು ನಿಧಾನ, ಪ್ರಗತಿ ಕಡಿಮೆ. ಮೂರನೇ ಮನೆಯ ಗುರು ಸಹ ಅಲ್ಪ ಫಲವನ್ನು ನೀಡುತ್ತಾನೆ. ಆದರೆ ರಾಹು 11 ನೇ ಮನೆ ಲಾಭಸ್ಥಾನಕ್ಕೆ ಪ್ರವೇಶವಾಗಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗುತ್ತದೆ. ಯಾವೂದೋ ಊಹಿಸದ ಮೂಲದಿಂದ ಹಣದ ಸಹಾಯ ಒದಗಿ ಬರುತ್ತದೆ. ಹೊಸ ಪ್ರಾಜೆಕ್ಟ್ ಗಳು ಸಿಗುತ್ತವೆ. ಶೇರ‍್ಸ್ ನಲ್ಲಿ ಹಣ ಹೂಡಿದ್ದರೆ ಲಾಭ ಬರುತ್ತದೆ. ಸೂರ್ಯ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಇರುವುದರಿಂದ ಸರ್ಕಾರಿಕ್ಕೆ ಸಂಬಂಧಪಟ್ಟ ಕೆಲಸಗಳು ಹಗುರವಾಗತ್ತದೆ. ಸರ್ಕಾರದಿಂದ ಲಾಭ ಇದೆ. ಶನಿ ಹನ್ನೆರಡನೇ ಮನೆಗೆ ಬಂದಿರುವುದರಿಂದ ಖರ್ಚುಗಳು ಹೆಚ್ಚು. ಆದಷ್ಟು ಯೋಚಿಸಿ ವಿವೇಚನೆಯಿಂದ ಮುಂದುವರೆಯಿರಿ. ಬುಧ ನಾಲ್ಕನೇ ಮನೆಯಲ್ಲಿ ಶುಕ್ರ ಎರಡನೇ ಮತ್ತು ಮೂರನೇ ಮನೆಯಲ್ಲಿ ಇದ್ದು ನಿಮಗೆ ರಕ್ಷೆ ಇದೆ. ಕೊಂಚ ಸುಖ ನೆಮ್ಮದಿಯ ದಿನಗಳನ್ನು ಪ್ರಸಾದಿಸುತ್ತಾರೆ. ಈ ತಿಂಗಳ ಕೊನೆಗೆ ಕುಜ ಆರನೇ ಮನೆಗೆ ಬಂದಾಗ ನಿಮಗೆ ಇನ್ನಷ್ಟು ಒಳ್ಳೆಯ ಫಲಗಳಿವೆ. ಸಾಡೆಸಾತಿ ಪರಿಹಾರಕ್ಕಾಗಿ ಹನುಮಂತನ ಪ್ರಾರ್ಥನೆ ಮಾಡಿ. ಹನುಮಾನ್ ಚಾಲೀಸಾ ಓದಿ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ಮುಂದುವರೆಯಿರಿ.

ವೃಷಭರಾಶಿ
ಈಗ ನಿಮಗೆ ಗುರುಬಲ ಶನಿಬಲ ಎರಡೂ ಇದೆ. ಅಭಿವೃದ್ಧಿ ಇದೆ. ರಾಹು ಹತ್ತನೇ ಮನೆಯ ಪ್ರವೇಶದಿಂದ ಲಾಭ ಇಲ್ಲದಿದ್ದರೂ ನಷ್ಟವೇನೂ ಇಲ್ಲ. ಆದರೆ ಶನಿ ಲಾಭಸ್ಥಾನದಲ್ಲಿ ಇದ್ದು ಧನಲಾಭ ಕಾರ್ಯ ಸಫಲತೆ ಕೊಡುತ್ತಾನೆ. ಪ್ರಗತಿ ಚೆನ್ನಾಗಿ ಇರುತ್ತದೆ. ಈ ತಿಂಗಳಲ್ಲಿ ಶುಕ್ರ ನಿಮ್ಮ ರಾಶಿಯಲ್ಲಿ ಹಾಗೂ ಎರಡನೇ ಮನೆಯಲ್ಲಿ ಸಂಚರಿಸುತ್ತಾ ನಿಮಗೆ ಸುಖಭಾಗ್ಯಗಳನ್ನು ಕೊಡುತ್ತಾನೆ. ಗುರು-ಶುಕ್ರ ಎರಡೂ ಗ್ರಹಗಳೂ ನಿಮ್ಮ ಯಶಸ್ಸು ಅಭಿವೃದ್ಧಿಗೆ ಕಾರಣರಾಗುತ್ತಾರೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಬುಧ ಮೂರನೇ ಮನೆಯಲ್ಲಿ ಸಹ ನಿಮಗೆ ಶುಭಫಲ ನೀಡುತ್ತಾನೆ. ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಕೌಟುಂಬಿಕಸೌಖ್ಯ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ. ಕಾರ್ಯಸಿದ್ಧಿ ಕಾರ್ಯ ಸಫಲತೆ ಕಾಣುವಿರಿ.
ಮಿಥುನರಾಶಿ
ಶುಭಫಲಗಳನ್ನು ಪಡೆಯಲು ನೀವು ಇನ್ನೂ ಕಾಯಬೇಕು. ಆದರೆ ಬುಧ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಇರುವದರಿಂದ ವೃತ್ತಿಯಲ್ಲಿ ವ್ಯಾಪಾರದಲ್ಲಿ ಲಾಭಗಳು ಒಳ್ಳೆಯ ಸಂಗತಿಗಳು ಜರುಗುತ್ತವೆ. ಧನಲಾಭ ಚೆನ್ನಾಗಿದೆ. ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಆದರೆ ಪ್ರಭಲ ಗ್ರಹಗಳಾದ ಗುರುಬಲ ಶನಿಬಲ ರಾಹುವಿನ ಬಲ ಯಾವುದೂ ಇಲ್ಲ. ಆದರೆ ಕೇತು ಮೂರನೇ ಮನೆಯಲ್ಲಿ ನಿಮಗೆ ಪರಾಕ್ರಮ, ಶಕ್ತಿ ಹಾಗೂ ಧನಲಾಭವನ್ನೂ ಕೊಡುತ್ತಾನೆ. ಶುಕ್ರ ನಿಮ್ಮಾರಾಶಿಯಲ್ಲೇ ಈ ಮಾಸಪೂರ್ತಿ ಇದ್ದು ನಿಮಗೆ ಶುಭವನ್ನುಂಟು ಮಾಡುತ್ತಾನೆ. ಬಡ್ತಿ ಸಮೇತ ವರ್ಗಾವಣೆ, ಅಥವಾ ಒಳ್ಳೆಯ ಸ್ಥಾನಮಾನ ಪದವಿ ನಿರೀಕ್ಷೆ ಮಾಡಬಹುದು. ವಾಹನಯೋಗ ಇದೆ. ಗುರು ನಿಮ್ಮ ರಾಶಿಗೇ ಬಂದಿದ್ದಾನೆ. ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಶುಭಕಾರ್ಯಕ್ಕೆ ಖರ್ಚು ಮಾಡುತ್ತೀರಿ. ವೃಥಾ ಅಲೆದಾಟ, ದೈಹಿಕ ಶ್ರಮ ಕಡಿಮೆಯಾಗುತ್ತದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಕುಜ ಕೇತು ಒಟ್ಟಿಗೆ ಮೂರನೇ ಮನೆಯಲ್ಲಿ ಇರುವುದರಿಂದ ಶತ್ರುಗಳು ದೂರವಾಗುತ್ತಾರೆ. ಆರೋಗ್ಯವೂ ಸುಧಾರಿಸುತ್ತದೆ.
ಕಟಕರಾಶಿ
ನಿಮ್ಮ ರಾಶಿಯಲ್ಲೇ ಬುಧ ಇರುವುದು ಕೊಂಚಮಟ್ಟಿನ ಆರಾಮ ನೀಡುತ್ತದೆ. ಅಷ್ಟಮಶನಿಯಿಂದ ಮುಕ್ತಿ ಸಿಕ್ಕಿದೆ. ಶನಿ ಈಗ ನವಮಸ್ಥಾನದಲ್ಲಿ ಇದ್ದಾನೆ. ಧರ್ಮದಲ್ಲಿ ಮನಸ್ಸು ನೀಡುತ್ತಾನೆ. ಧರ್ಮಕಾರ್ಯಗಳನ್ನು ಮಾಡಿಸುತ್ತಾನೆ ಅದಕ್ಕೆ ಸರಿಯಾಗಿ ಗುರು ಸಹ 12 ನೇ ಮನೆಗೆ ಬಂದಿರುವುದು ನೀವು ಸಾಧು ಸಂತರ ಸೇವೆ ಮಾಡುವುದು ದೇವರ ಕಾರ್ಯ ಧರ್ಮಕಾರ್ಯ ಮಾಡುವುದನ್ನು ಸೂಚಿಸುತ್ತದೆ. ಶುಕ್ರ ಸಹ 12ನೇ ಮನೆಯಲ್ಲಿ ಇರುವುದು ಖರ್ಚುಗಳನ್ನೇ ತೋರಿಸುತ್ತದೆ. ರಾಹು ಈಗ ಎಂಟನೇ ಮನೆಯಲ್ಲಿ ಇದ್ದಾನೆ. ಪಾಪಗ್ರಹಗಳು ಎಂಟನೇ ಮನೆಯಲ್ಲಿ ಇದ್ದರೆ ತೊಂದರೆ ಇಲ್ಲ. ಆದರೂ ಊಟ ತಿಂಡಿ ವಿಷಯದಲ್ಲಿ ಅಪಥ್ಯವಾಗದಂತೆ ಎಚ್ಚರಿಕೆ ವಹಿಸಿ. ಕೇತು ಎರಡನೇ ಮನೆಗೆ ಬರುತ್ತಾನೆ. ಕೌಟುಂಬಿಕವಾಗಿ ಕೊಂಚ ಅಶಾಂತಿ ಇರುತ್ತದೆ. ಈ ತಿಂಗಳ ಕೊನೆಗೆ ಕುಜ ಮೂರನೇ ಮನೆಗೆ ಬಂದಾಗ ನಿವiಗೆ ಕೊಂಚ ಆರಾಮ ಆಗುತ್ತದೆ. ಈ ಮಾಸ ನಿಮಗೆ ಮಿಶ್ರಫಲ. ಯಾರೊಡನೆಯೂ ವಾದವಿವಾದಕ್ಕೆ ಹೋಗಬೇಡಿ. ಮನೆದೇವರ ಪ್ರಾರ್ಥನೆ ಮಾಡಿ.
ಸಿಂಹರಾಶಿ
ಗುರು-ಶುಕ್ರ ಲಾಭಸ್ಥಾನದಲ್ಲಿ ಇದ್ದು ಧನಲಾಭ ಚೆನ್ನಾಗಿದೆ. ನಿಮಗೆ ಅಷ್ಟಮ ಶನಿಪ್ರಭಾವದಿಂದ ಖರ್ಚುಗಳೂ ಹೆಚ್ಚು ಇರುತ್ತದೆ. ಕೊಂಚ ಕಿರಿಕಿರಿ ಆತಂಕದ ವಾತಾವರಣ, ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ಹರಿವಿಗೂ ಖರ್ಚಿಗೂ ತಾಳೆಯಾಗದೆ ಏರುಪೇರಿನ ಪರಿಸ್ಥಿತಿ ಎದುರಾಗಬಹುದು. ಗುರು ಲಾಭಸ್ಥಾನಕ್ಕೆ ಪ್ರವೇಶ ಮಾಡಿರುವುದರಿಂದ ಎಲ್ಲವನ್ನೂ ಸಂಭಾಳಿಸುವ ಚೈತನ್ಯ ಕೊಡುತ್ತಾನೆ. ಸಾಕಷ್ಟು ಪರಿಹಾರಗಳು ನಿಮ್ಮ ಕಣ್ಣಮುಂದೆ ಕಾಣಿಸುತ್ತದೆ. ಲಾಭದ ಗುರು ನಿಮಗೆ ಅನೇಕ ಭಾಗ್ಯಗಳನ್ನೂ ಸೌಖ್ಯಗಳನ್ನೂ ಕೊಡುತ್ತಾನೆ. ಬುಧ ಸೂರ್ಯ 12 ನೇ ಮನೆಯಲ್ಲಿ ಸಂಚರಿಸುವುದರಿಂದ ಅಷ್ಟೇನೂ ಲಾಭ ಕೊಡುವುದಿಲ್ಲ. ರಾಹು ಏಳನೆ ಮನೆಯಲ್ಲಿ ಕೇತು ನಿಮ್ಮ ರಾಶಿಯಲ್ಲೇ ಇದ್ದಾರೆ. ಮಂಗಳನೂ ನಿಮ್ಮ ರಾಶಿಯಲ್ಲಿ ಈ ತಿಂಗಳ ಕೊನೆಯ ವರೆಗೂ ಇರುತ್ತಾನೆ. ರಾಹುವಿನ ದೃಷ್ಟಿ ಮಂಗಳನ ಮೇಲಿರುವುದು ನಿಮಗೆ ಅಷ್ಟು ಒಳ್ಳೆಯದಲ್ಲ. ಜಾಗರೂಕರಾಗಿರಿ. ದೃಷ್ಟಿ ದೋಷ, ಉಸಿರಾಟ, ಅಲರ್ಜಿ, ಫಂಗಲ್ ಇನಫೆಕ್ಷನ್, ಬ್ಯಾಕ್ಟೀರಿಯಲ್ ಇನಫೆಕ್ಷನ್ ಬರಬಹುದು. ಕೈಕಾಲಿಗೆ ಪೆಟ್ಟು ಬೀಳಬಹುದು. ಸುಭ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ.
ಕನ್ಯಾರಾಶಿ
ರಾಹು ಆರನೇ ಮನೆಯಲ್ಲಿ ಬಹುಲಾಭ ಕೊಡುತ್ತಾನೆ. ಧನಾಗಮನ ಉತ್ತಮವಾಗಿದೆ. ಆದರೆ ಈಗ ನಿಮಗೆ ಗುರುಬಲ ಇಲ್ಲ. ಶನಿ ಏಳನೇ ಮನೆಯಲ್ಲಿ ಇದ್ದಾನೆ. ಶನಿಬಲ ಗುರುಬಲ ಎರಡೂ ಇಲ್ಲದಿರುವುದರಿಂದ ವೈಯುಕ್ತಿಕ ಬೆಳವಣಿಗೆ ಕಡಿಮೆ. ಅನಾರೋಗ್ಯ ಕಾಡಬಹುದು. ಶನಿ ಒತ್ತಡಗಳನ್ನು ಕೊಡುತ್ತಾನೆ ಹಾಗೂ ಕೋಪ ಸಿಡುಕು ಅಸಹನೆ ಮುಂತಾದ ಸ್ವಭಾವ ಹೆಚ್ಚು ಮಾಡುತ್ತಾನೆ. ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗಿರುವುದರಿಂದ ಚರ್ಮದ ಅಲರ್ಜಿಗಳು ಆಗಿದ್ದರೆ ಕಡಿಮೆಯಾಗುತ್ತದೆ. ಗುರುವಿನ ಹತ್ತನೇ ಮನೆಯ ಪ್ರವೇಶ ಸ್ಥಾನಮಾನ ಬದಲಾವಣೆಯನ್ನು ತೋರಿಸುತ್ತದೆ. ಪದಚ್ಯುತಿಯೂ ಆಗಬಹುದು. ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. ಹನ್ನೊಂದನೇ ಮನೆಯಲ್ಲಿ ಸೂರ್ಯ ಹಾಗೂ ಬುಧ ಇದ್ದು ನಿಮಗೆ ಕೊಂಚಮಟ್ಟಿನ ಆರಾಮ ಸಿಗುತ್ತದೆ. 12 ನೇ ಮನೆಗೆ ಕುಜನ ಪ್ರವೇಶವಾದಾಗ ರಾಹು ಕುಜನ ದೃಷ್ಟಿ ಒಳ್ಳೆಯದಲ್ಲ. ಸುಭ್ರಹ್ಮಣ್ಯ ಜಪ ಮಾಡಿಸಿ
ತುಲಾರಾಶಿ
ಇಲ್ಲಿಯವರೆಗೆ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಗುರು ಒಂಬತ್ತನೇ ಮನೆಗೆ ಪ್ರವೇಶ ಮಾಡಿರುವುದರಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಅನೇಕ ಅವಕಾಶಗಳು ನಿಮ್ಮ ಮುಂದೆ ಬರುತ್ತದೆ. ನಿಂತು ಹೋಗಿದ್ದ ಕೆಲಸಗಳೆಲ್ಲ ಸರಸರನೆ ಮುಂದುವರೆಯುತ್ತದೆ. ವೃತ್ತಿಯಲ್ಲಿ ಮಹತ್ತರ ಬದಲಾವಣೆ ಇದೆ. ಪದವಿ ಬಡ್ತಿ ಅಧಿಕಾರ ಪ್ರಾಪ್ತಿ ಇದೆ. ಬಹಳ ದಿನಗಳಿಂದ ಕಂಗೆಡಿಸುತ್ತಿದ್ದ ಸಮಸ್ಯೆಗಳು ಈಗ ಪರಿಹಾರ ಕಾಣುತ್ತದೆ. ಶನಿ ಕೂಡ ಪಂಚಮ ದಿಂದ ಷಷ್ಠಕ್ಕೆ ಬಂದಿದ್ದಾನೆ. ಆರನೇ ಮನೆಯ ಶನಿ ಬಹಳ ಉಪಕಾರಿ. ಹಣಕಾಸು ಸ್ಥಿತಿ ಸುಗಮವಾಗುತ್ತದೆ. ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ಸಹಾ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಹತ್ತನೇ ಮನೆಯಲ್ಲಿ ಬುಧ, ಎಂಟನೇ ಮನೆಯಲ್ಲಿ ಶುಕ್ರ ಸಹ ಶುಭಫಲಗಳನ್ನು ನೀಡುತ್ತಾರೆ. ಎಲ್ಲ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶ ಇದೆ. ವಿದೇಶಪ್ರವಾಸ/ಪ್ರಯಾಣಕ್ಕೆ ಅನುಕೂಲಗಳು ಒದಗಿ ಬರುತ್ತವೆ.
ವೃಶ್ಚಿಕರಾಶಿ
ಗುರು ಶುಕ್ರ ಎಂಟನೇ ಮನೆಗೆ ಬಂದಿದ್ದಾರೆ. ಎಟರ ಶುಕ್ರ ಶುಭಕಾರಕನಾದರೂ ಗುರು ಶುಭಕಾರಕನಲ್ಲ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸಗಳು ಕಾಣಬಹುದು. ಪಂಚಮ ಶನಿ ಪ್ರಾರಂಭವಾಗಿದೆ. ಒತ್ತಡಗಳು ಇರುತ್ತದೆ. ನಿಮ್ಮ ತಪ್ಪಿಲ್ಲದಿದ್ದರೂ ತಲೆ ತಗ್ಗಿಸುವ ಸಂದರ್ಭಗಳು ಬರಬಹುದು. ಪ್ರವಾಹಕ್ಕೆ ಎದುರಾಗಿ ಈಜುವ ಪರಿಸ್ಥಿತಿ ನಿರ್ಮಾಣವಾಗಬಹುದು. ಯಾವ ಬಲವಾದ ಗ್ರಹಬಲವೂ ಈಗ ನಿಮಗೆ ಕಾಣುತ್ತಿಲ್ಲ. ಹಣಕಾಸಿನ ಸ್ಥಿತಿ ಕೊಂಚ ಇಳಿಯಬಹುದು. ನಿಮ್ಮ ಯೋಜನೆಗಳು ನಿಮ್ಮ ಅನಿಸಿಕೆಯಂತೆ ನಡೆಯದೆ ಇರಬಹುದು. ವಿಳಂಬವಾಗಬಹುದು. ಒಂತ್ತನೇ ಮನೆಯಲ್ಲಿ ಬುಧ ಕೊಂಚಮಟ್ಟಿನ ಆರಾಮ ನೀಡುತ್ತಾನೆ. ಕಾರ್ಯಕ್ಷೇತ್ರದಲ್ಲಿ ನಿಧಾನ ಪ್ರಗತಿ. ಒಳ್ಳೆಯ ಅವಕಾಶಗಳು ಮುಂದೆ ಮುಂದೆ ಹೋಗುತ್ತವೆ. ಕೈಗೆ ಸಿಕ್ಕಿದರೂ ಸಿಗದಂತೆ ತಪ್ಪಿಸಿಕೊಳ್ಳುತ್ತದೆ. ನಮಗೆ ಕಾಣದಂತೆ ಎಲ್ಲೋ ಹೊಡೆತ ಬೀಳುತ್ತದೆ. ಸಂಬಂಧಗಳಲ್ಲಿ ಕಿರಿಕಿರಿ ಶುರುವಾಗಬಹುದು. ಸಾಕಷ್ಟು ಖರ್ಚುಗಳು ಇವೆ. ಶನಿ ಸವಾಲುಗಳನ್ನು ಕೊಡುತ್ತಾನೆ, ಹನುಮಾನ್ ಚಾಲೀಸ ಪಠಿಸಿ.
ಧನಸ್ಸುರಾಶಿ
ಈಗ ನಿಮಗೆ ಮೂರನೇ ಮನೆಯಲ್ಲಿ ರಾಹು ಹಾಗೂ ನಾಲ್ಕನೇ ಮನೆಯಲ್ಲಿ ಶನಿ, ಗುರು ಏಳನೇ ಮನೆಯಲ್ಲಿ ಇದ್ದಾರೆ. ಸಂಪೂರ್ಣ ಗುರುಬಲ ಇದೆ. ಈಗ ಪರಿಸ್ಥಿತಿ ನಿಮ್ಮ ಹಿಡಿತಕ್ಕೆ ಬರುತ್ತಿದೆ. ಬುಧ ಎಂಟನೇ ಮನೆಯಲ್ಲಿ ಶುಕ್ರ ಏಳನೇ ಮನೆಯಲ್ಲಿ ಇದ್ದಾರೆ. ಸೂರ್ಯ ಕೂಡ ಎಂಟನೇ ಮನೆಯಲ್ಲಿ ಇರುತ್ತಾನೆ. ಇದು ಕೊಂಚ ನೆಗೆಟಿವ್ ಆದರೂ ಗುರುಬಲ ಇರುವುದರಿಂದ ನೀವು ಯಾವುದನ್ನು ಬೆಟ್ಟದ ಹಾಗಿರುವ ಕಷ್ಟ ಎಂದು ತಿಳಿದಿದ್ದೀರೋ ಅದು ಹತ್ತಿಯಂತೆ ಹಗುರವಾಗಿ ಹಾರಿಹೋಗುತ್ತದೆ. ಮೂರನೇ ಮನೆಯ ರಾಹು ಧನಾಗಮನ ಉತ್ತಮ ಪಡಿಸುತ್ತಾನೆ.. ಹಣಕಾಸಿನ ಸ್ಥಿತಿ ಸುಗಮವಾಗುತ್ತದೆ. ಹಾಗೂ ಧೈರ್ಯ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಸಂಗಾತಿ ಯಿಂದ ಸಹಾಯ ಬೆಂಬಲ ಪಡೆಯುತ್ತೀರಿ. ವಿದೇಶ ಯಾತ್ರೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ. ಕೋರ್ಟು ವ್ಯಾಜ್ಯಗಳಲ್ಲಿ ಜಯ ಸಿಗುತ್ತದೆ.
ಮಕರರಾಶಿ
ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ತರುತ್ತದೆ. ಕೀರ್ತಿ ಯಶಸ್ಸು ನಿಮ್ಮ ಹೆಗಲೇರಲಿದೆ. ಹಣಕಾಸಿನ ಸ್ಥಿತಿ ಸುಗಮವಾಗಲಿದೆ. ನಿಮ್ಮ ವಿರೋಧಿಗಳು ಕೂಡ ಈಗ ಸ್ನೇಹಹಸ್ತ ಚಾಚುತ್ತಾರೆ. ಅಪರಿಚಿತರು ಸಹ ಸಹಾಯ ಮಾಡುವ ಕಾಲ. ದೇವರ ಅನುಗ್ರಹ ದೊರೆತು ಎಲ್ಲ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ಆದೆ ಗುರು ಆರನೇ ಮನೆಯಲ್ಲಿ ಇದ್ದಾನೆ, ಇದು ಕೊಂಚ ಇಕ್ಕಟ್ಟಿನ ಪರಿಸ್ಥಿತಿ ತರಬಹುದು. ಆದರೂ ಶನಿಯ ಬಲದಿಂದ ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ಹೊಸ ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುಬಲ ಇಲ್ಲದೆ ನಿಧಾನವಾಗುತ್ತದೆ. ಆರೋಗ್ಯ ಜೋಪಾನ. ಎರಡನೇ ಮನೆಗೆ ರಾಹು ಬಂದಿರುವುದರಿಂದ ಹಣಕಾಸು ಸ್ಥಿತಿ ಉತ್ತಮಗೊಳ್ಳಲಿದೆ. ಏಳನೇ ಮನೆಯಲ್ಲಿ ಬುಧ ಇದ್ದು ನಿಮಗೆ ಕೊಂಚಮಟ್ಟಿನ ರಕ್ಷೆ ಸಿಗುತ್ತದೆ.
ಕುಂಭರಾಶಿ
ಗುರುವಿನ ಐದನೇ ಮನೆ ಪ್ರವೇಶ ವೈಯುಕ್ತಿಕ ಬೆಳವಣಿಗೆಗೆ ಸಹಾಯವಾಗಲಿದೆ. ಇದುವರೆಗೂ ಚತುರ್ಥದ ಗುರುವಿನಿಂದ ವಿನಾಕಾರಣ ನೋವು ಅಪಮಾನಗಳನ್ನುಅನುಭವಿಸಿದ್ದೀರಿ. ಯಾವ ಕೆಲಸಕ್ಕೆ ಕೈಹಾಕಿದರೂ ನಿಂತಲ್ಲೇ ನಿಲ್ಲುತ್ತಿತ್ತು. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳಿಂದ ನೊಂದಿದ್ದೀರಿ. ಈಗ ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶ ಮಾಡಿದ್ದಾನೆ. ಸಂಪೂರ್ಣ ಗುರುಬಲ ಇದೇ ಕಾರಣದಿಂದ ಅನೇಕ ಶುಭಫಲಗಳು ದೊರೆಯಲಿದೆ. ಸಾಡೆಸಾತಿಯ ಕೊನೆಯ ಹಂತದಲ್ಲಿ ಇದ್ದೀರಿ. ಈಗ ಅಷ್ಟೇನೂ ನಿಮಗೆ ತ್ರಾಸದಾಯಕವಲ್ಲ ಆದರೂ ತಕ್ಕಮಟ್ಟಿನ ಎಚ್ಚರಿಕೆಯಲ್ಲಿ ಇರಿ. ಒತ್ತಡಗಳಿಂದ ದೂರವಾಗುತ್ತೀರಿ. ಕತ್ತಿನ ಮೇಲೆ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಐದನೇ ಮನೆಯಲ್ಲಿ ಶುಕ್ರ ಆರನೇ ಮನೆಯಲ್ಲಿ ಬುಧ ಸಹ ಒಳ್ಳಡಯ ಫಲಗಳನ್ನು ಕೊಡುತ್ತಾರೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಕೊಂಚ ಎಚ್ಚರಿಕೆ ವಹಿಸಿ. ವಿಷವಸ್ತುಗಳಿಂದ ಅಪಾಯವಾಗಬಹುದು.
ಮೀನರಾಶಿ
ಈಗ ಸಾಡೆಸಾತಿಯ ಎರಡನೇ ಭಾಗದಲ್ಲಿ ಇದ್ದೀರಿ. ಹಾಗಾಗಿ ಹೆಚ್ಚಿಗೆ ಏನೂ ನಿರೀಕ್ಷೆ ಇಲ್ಲ. ಇದ್ದಂತೆ ನಡೆದುಕೊಂಡು ಹೋದರೆ ಅದೇ ಅದೃಷ್ಟ. ಆದರೆ ರಾಹು ನಿಮ್ಮ ರಾಶಿಯಿಂದ ಕುಂಭಕ್ಕೆ ಪ್ರವೇಶವಾಗಿದ್ದಾನೆ. ಇದು ನಿಮಗೆ ಆರೋಗ್ಯದಲ್ಲಿ ಚೇತರಿಕೆ ಕೊಡುತ್ತದೆ. ಕೇತು ಆರನೇ ಮನೆಗೆ ಪ್ರವೇಶವಾಗಿದ್ದಾನೆ. ಇದರಿಂದ ಹಣಕಾಸು ಸ್ಥಿತಿ ಸುಧಾರಿಸುತ್ತದೆ. ವೈರಲ್ ಇನಫೆಕ್ಷನ್, ಉಸಿರಾಟದ ತೊಂದರೆ ಅಲರ್ಜಿ ಇವೆಲ್ಲ ನಿವಾರಣೆ ಆಗುತ್ತದೆ. ಕುಜ ಸಹ ಆರನೇ ಮನೆಗೆ ಪ್ರವೇಶವಾಗಿ ಈ ತಿಂಗಳ ಕೊನೆವರೆಗೂ ಇರುತ್ತಾನೆ. ನಿಮಗೆ ಇನ್ನಷ್ಟು ಶುಭಫಲಗಳು ಇವೆ. ಶುಕ್ರ ನಾಲ್ಕನೇ ಮನೆಯಲ್ಲಿ , ಬುಧ ಐದನೇ ಮನೆಯಲ್ಲಿ ಇದ್ದಾರೆ. ಇದೂ ಕೂಡ ನಿಮಗೆ ಬಲ ಕೊಡುತ್ತದೆ. ಕೆಲವು ಶುಭ ಸಂಗತಿಗಳಿಂದ ನಿಮಗೆ ಸಂತೋಷ ಸಿಗುತ್ತದೆ. ಗುರು ಈಗ ನಾಲ್ಕನೇ ಮನೆಗೆ ಪ್ರವೇಶ ಮಾಡಿರುವುದರಿಂದ ಕೊಂಚ ಒತ್ತಡದ ಜೀವನ. ಕೌಟುಂಬಿಕ ನಿರ್ವಹಣೆ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ಏನೇ ಆದರೂ ಯಾವುದೇ ಕೆಲಸ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ. ಸಹನೆ ಸಮಾಧಾನ ನಿಮ್ಮ ಮಂತ್ರವಾಗಿರಲಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications