Get Updates
Get notified of breaking news, exclusive insights, and must-see stories!

February 2022 horoscope: ಫೆಬ್ರವರಿ 2022 ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?

ಫೆಬ್ರವರಿ ಆಗಮಿಸಲು ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಇವೆ. ಪ್ರತಿಯೊಬ್ಬರಿಗೂ ಮುಂದಿನ ತಿಂಗಳು ತಮಗೆ ಹೇಗಿರಲಿದೆ ಎನ್ನುವ ಯೋಚನೆ ಇರುತ್ತದೆ. ಮುಂದಿನ ತಿಂಗಳು ಆರ್ಥಿಕ ಮಟ್ಟ ಸುಧಾರಿಸುತ್ತಾ? ಕಂಕಣ ಭಾಗ್ಯ ಕೂಡಿ ಬರುತ್ತಾ? ಹೀಗೆ ಆರೋಗ್ಯ, ಸಂಪತ್ತು, ಕೌಟುಂಬಿಕ ಜೀವನದ ಬಗ್ಗೆ ತಿಳಿಯುವ ಆಸಕ್ತಿ ಹೆಚ್ಚಾಗಿರುತ್ತದೆ. ಹಾಗಾದ್ರೆ ಫೆಬ್ರವರಿ ತಿಂಗಳು ದ್ವಾದಶಿ ರಾಶಿಯವರ ಭವಿಷ್ಯ ಹೇಗಿರಲಿದೆ? ಎಂದು ತಿಳಿಯೋಣ.

ಸಂತೋಷ, ಪ್ರೀತಿ ಮತ್ತು ಹಣದ ಗ್ರಹವಾದ ಶುಕ್ರ ಈಗ ನೇರವಾಗಿದೆ. ಸಂದೇಶ ಮತ್ತು ಸಂವಹನದ ಗ್ರಹವಾದ ಬುಧವು ಫೆಬ್ರವರಿ 3 ರಂದು ನೇರವಾಗಿರುತ್ತದೆ. ಇದು ಈ ತಿಂಗಳಲ್ಲಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಫೆಬ್ರವರಿಯಲ್ಲಿ ಮಾತ್ರವಲ್ಲ, ಮುಂದಿನ ಕೆಲವು ತಿಂಗಳುಗಳಲ್ಲೂ ಇದನ್ನು ನೋಡಬಹುದು. ಇದು ಹೆಚ್ಚು ಬದಲಾವಣೆಯ ವರ್ಷವನ್ನು ಸೂಚಿಸುತ್ತದೆ. ಹೆಚ್ಚು ಮೋಜನ್ನು ತರುತ್ತದೆ.

ನಕ್ಷತ್ರಗಳ ಜೋಡಣೆಗಾಗಿ ನೀವು ಕಾಯುತ್ತಿದ್ದರೆ, ಫೆಬ್ರವರಿ 4 ಮತ್ತು ಫೆಬ್ರವರಿ 17 ರ ನಡುವಿನ ಇದು ಸಂಭವಿಸುತ್ತದೆ. ಈ ಸಮಯದಲ್ಲಿ, ಬ್ರಹ್ಮಾಂಡವು ಅವಕಾಶದಿಂದ ತುಂಬಿರುತ್ತದೆ. ಇದು ಕೆಲವು ಅಮೂಲ್ಯ ಗುರಿಗಳನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ. ಚಾಲನೆ ಮತ್ತು ಮಹತ್ವಾಕಾಂಕ್ಷೆಯ ಗ್ರಹವಾದ ಮಂಗಳವು ಆಕಾಶದಲ್ಲಿರುವ ಇತರ ಗ್ರಹಗಳೊಂದಿಗೆ ಕೆಲವು ನಕ್ಷತ್ರಿಕ ಸಂಪರ್ಕಗಳನ್ನು ರೂಪಿಸುವ ಮೂಲಕ ನಮಗೆ ಸಹಾಯ ಮಾಡುತ್ತದೆ.

ಮೇಷ ರಾಶಿ

ಮೇಷ ರಾಶಿ

ಫೆಬ್ರವರಿ ತಿಂಗಳು ಅತ್ಯಂತ ಉತ್ತಮವಾದ ತಿಂಗಳಾಗಿದೆ. ಮಂಗಳ ಗ್ರಹ ​​ಪ್ರಬಲ ಸ್ಥಾನದಲ್ಲಿದೆ. ಇದು ಶಕ್ತಿ ನೀಡುವುದರೊಂದಿಗೆ, ಗುರಿಗಳನ್ನು ಸಾಧಿಸಲು ಅನುಕೂಲಕರವಾಗಿದೆ. ಒಂಟಿಯಾಗಿರುವವರು ಈ ತಿಂಗಳು ಪ್ರೇಮದಲ್ಲಿ ಆಸಕ್ತಿ ಹೊಂದಬಹುದು. ಈ ತಿಂಗಳು ಹುಟ್ಟಿಕೊಳ್ಳುವ ಸಂಬಂಧ ಗಟ್ಟಿಯಾಗಿರುತ್ತದೆ. ನೀವು ಸೃಜನಾತ್ಮಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ಈ ತಿಂಗಳ ಹುಣ್ಣಿಮೆಯು ನಿಮಗೆ ಹೆಚ್ಚಿನ ಬೆಂಬಲ ನೀಡುತ್ತದೆ. ಫೆಬ್ರವರಿ 8, ಫೆಬ್ರುವರಿ 16 ಮತ್ತು ಫೆಬ್ರವರಿ 23 ಉತ್ತಮ ದಿನಗಳಾಗಿವೆ.

ವೃಷಭ ರಾಶಿ

ವೃಷಭ ರಾಶಿ

ನಿಮ್ಮ ಗ್ರಹದ ಅಧಿಪತಿ ಶುಕ್ರ ಗ್ರಹ ಹಿಮ್ಮೆಟ್ಟುವುದರಿಂದ ಜೀವನವು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತದೆ. ಫೆಬ್ರವರಿಯ ಮೊದಲಾರ್ಧವು ವೃತ್ತಿಗೆ ಸಂಬಂಧಿಸಿದ ಎಲ್ಲಾ ಕಲಿಕೆಗಳಿಗೆ ಸೂಕ್ತ ಸಮಯವಾಗಿದೆ. ಈ ತಿಂಗಳ ಹುಣ್ಣಿಮೆಯು ಒಂಟಿಯಾಗಿರುವವರಿಗೆ ಮದುವೆಯ ಭಾಗ್ಯ ತಂದುಕೊಡಬಹುದು ಅಥವಾ ಪ್ರೀತಿ ಹುಟ್ಟಬಹುದು. ಹುಣ್ಣಿಮೆಯ ಚಂದ್ರ ಆಸೆಗಳನ್ನು ಈಡೇರಿಸುತ್ತಾನೆ. ಫೆಬ್ರವರಿ 16, ಫೆಬ್ರವರಿ 17, ಮತ್ತು ಫೆಬ್ರವರಿ 24 ರಂದು ಕನಸುಗಳನ್ನು ನನಸಾಗಿಸುವತ್ತ ಗಮನಹರಿಸಲು ಅತ್ಯುತ್ತಮ ದಿನಗಳಾಗಿವೆ.

ಮಿಥುನ ರಾಶಿ

ಮಿಥುನ ರಾಶಿ

ನಿಮ್ಮ ಗ್ರಹಗಳ ಅಧಿಪತಿ ಬುಧನು ನೇರವಾಗಿ ಮಕರ ರಾಶಿಯಲ್ಲಿ ಸಾಗುತ್ತಾನೆ. ಇದು ಜನವರಿಯಲ್ಲಿ ಮಾಡಿಕೊಂಡ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಸೂಕ್ತವಾಗಿದೆ. ಫೆಬ್ರವರಿ 14 ರಂದು ಬುಧವು ಮಕರರಾಶಿಗೆ ಪ್ರವೇಶಿಸುತ್ತದೆ. ಇದು ಭವಿಷ್ಯದಲ್ಲಿ ಅದ್ಭುತವಾದ ಶಕ್ತಿಯನ್ನು ನೀಡುತ್ತದೆ. ನೀವು ಸೃಜನಶೀಲರಾಗಿದ್ದರೆ ಮತ್ತು ನಿಮ್ಮ ವ್ಯಾಪಾರಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರೆ, ಈ ತಿಂಗಳ ಹುಣ್ಣಿಮೆಯು ಮರುಬ್ರಾಂಡ್ ಮಾಡಲು ಅಥವಾ ಕೆಲವು ಪಾಲುದಾರಿಕೆಗಳನ್ನು ಲಾಕ್ ಮಾಡಲು ಉತ್ತಮ ಸಮಯವಾಗದೆ. ಅದು ಮುಂದಿನ ವರ್ಷದಲ್ಲಿ ಹೆಚ್ಚಿನ ಗಮನವನ್ನು ಸೆಳೆಯಲು ನಿಮಗೆ ಸಹಾಯ ಮಾಡುತ್ತದೆ.

ಕರ್ಕಟಕ ರಾಶಿ

ಕರ್ಕಟಕ ರಾಶಿ

ಪ್ರೇಮಿಗಳು ಈ ತಿಂಗಳು ಹೆಚ್ಚು ಆತ್ಮೀಯರಾಗುತ್ತಾರೆ. ಜನವರಿ ತಿಂಗಳಲ್ಲಿ ಪಾಲುದಾರಿಕೆಯ ಮೂಲಕ ಸಾಕಷ್ಟು ಹೂಡಿಕೆ ಮಾಡಿರುವವರಿಗೆ ಫೆಬ್ರವರಿಯಲ್ಲಿ ಫಲಸಿಗಬಹುದು. ಬ್ಯಾಂಕ್ ಖಾತೆಯಲ್ಲಿ ಹೆಚ್ಚಳ ಅಥವಾ ಹೆಚ್ಚಿನ ಹಣವನ್ನು ಪಡೆಯುವ ಸಾಧ್ಯತೆ ಸಹ ಇದೆ. ನೀವು ಕೋಚಿಂಗ್ ಅಥವಾ ತರಗತಿಗೆ ಸೇರಲು ಬಯಸಿದರೆ, ಫೆಬ್ರವರಿ 18 ರಿಂದ ಉತ್ತಮ ಸಮಯವಾಗಿದೆ. ಮೀನ ರಾಶಿಯಲ್ಲಿ ಸೂರ್ಯನು ಹೊಸದನ್ನು ಕಲಿಯುವ ಮೂಲಕ ನಿಮ್ಮ ಮನಸ್ಸನ್ನು ವಿಸ್ತರಿಸಲು ಸಹಾಯ ಮಾಡಬಹುದು.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಕೆಲವು ಪ್ರಮುಖ ಸಂಬಂಧಗಳಲ್ಲಿ ಸಮಯ ಕಳೆಯಬಹುದು. 2022ರಲ್ಲಿ ನೀವು ಮಾಡಲು ಯೋಚಿಸಿದ ಕೆಲಸಗಳನ್ನು ತರಬೇತಿ ಅಥವ ಪರಿಣಿತರಿಂದ ಮಾಹಿತಿ ಪಡೆದು ಮಾಡುವುದಕ್ಕೆ ಈ ತಿಂಗಳ ಮೊದಲಾರ್ಧವು ಸೂಕ್ತವಾಗಿದೆ. ಹುಣ್ಣಿಮೆ ಕಳೆದ ನಂತರ ಪ್ರತಿಫಲಗಳು ತ್ವರಿತವಾಗಿ ಬರುತ್ತವೆ. ಇದು ನಿಮಗೆ ಉತ್ತಮವಾದ ಸಮಯವಾಗಿರುತ್ತದೆ. ಆದ್ದರಿಂದ ಯಾವುದೇ ಯೋಜನೆಗಳನ್ನು ಮರೆಮಾಡುವ ತಪ್ಪನ್ನು ಮಾಡಬೇಡಿ. ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸಿದ ನಂತರ, ತಿಂಗಳ ನಾಲ್ಕು ವಾರಗಳ ಅವಧಿಯಲ್ಲಿ ಸ್ವಲ್ಪ ವಿಶ್ರಾಂತಿ ಮತ್ತು ಜೀವನದ ಒತ್ತಡವನ್ನು ನಿವಾರಿಸುವುದರಿಂದ ಪ್ರಯೋಜನ ಪಡೆಯುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಮುಂಬರುವ ತಿಂಗಳು ಉತ್ತಮವಾಗಿದೆ. ಬುಧ ಹಿಮ್ಮುಖವಾಗಿ ಚಲಿಸುವುದರಿಂದ ಕೈಗೊಂಡ ಕಾರ್ಯಗಳು ಕೊಂಚ ಸಾಕಷ್ಟು ವಿಳಂಬವಾಗುತ್ತವೆ. ನೀವು ಒಬ್ಬಂಟಿಯಾಗಿದ್ದು ಮದುವೆಯ ಬಗ್ಗೆ ಯೋಚಿಸುತ್ತಿದ್ದರೆ ಈ ತಿಂಗಳು ನಿಮಗೆ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ. ಪ್ರೇಮ ವಿಚಾರ ಹಂಚಿಕೊಳ್ಳಲೂ ಇದು ಉತ್ತಮ ತಿಂಗಳಾಗಿದೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ. ಯೋಗ ಮಾಡುವುದು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಉತ್ತಮ.

ತುಲಾ ರಾಶಿ

ತುಲಾ ರಾಶಿ

ಈ ತಿಂಗಳು ನಿಮಗೆ ಹೊಸ ಜೀವನವನ್ನು ನೀಡುತ್ತದೆ. ಫೆಬ್ರವರಿ 16 ರಂದು ಹುಣ್ಣಿಮೆಯ ಚಂದ್ರನು ಆಕಾಶದಲ್ಲಿ ಉದಯಿಸುತ್ತಿದ್ದಂತೆ ಸೂರ್ಯನು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆ ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ. ಆದ್ದರಿಂದ ಮುಂಬರುವ ವರ್ಷದಲ್ಲಿ ನೀವು ಅಭಿವೃದ್ಧಿಪಡಿಸಲು ಬಯಸುವ ಯಾವುದೇ ಹೊಸ ಯೋಜನೆಗಳನ್ನು ಈ ತಿಂಗಳು ಪ್ರಾರಂಭಿಸುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಫೆಬ್ರವರಿ ನಿಮಗಾಗಿ ಹೊಸ ಜೀವನವನ್ನು ನೀಡುತ್ತದೆ. ನಿಮ್ಮನ್ನು ಪ್ರೋತ್ಸಾಹಿಸುವ ಸಮಯ ಇದು. ನೀವು ಅಂದುಕೊಂಡ ಕಾರ್ಯಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. 2023 ರ ಬೇಸಿಗೆ ಬರುವ ಹೊತ್ತಿಗೆ ನೀವು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗುತ್ತೀರಿ. ನಿಮ್ಮ ಜೀವನದಲ್ಲಿ ಬದಲಾಗಬೇಕಾದ ವಿಷಯಗಳಿಂದ ಬದಲಾಗಿ. ನಿಜವಾದ ಮಾರ್ಗದೊಂದಿಗೆ ನಡೆಯಲು ಈಗಿನಿಂದಲೇ ಪ್ರಯತ್ನಿಸಿ. ಈ ತಿಂಗಳು ನೀವು ಬದಲಾಗಲು ಉತ್ತಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿದೆ.

ಧನು ರಾಶಿ

ಧನು ರಾಶಿ

ಫೆಬ್ರವರಿ ನಿಮಗಾಗಿ ಹೊಸ ಆರಂಭಗಳಿಂದ ತುಂಬಿದೆ. ನೀವು ಸಂವಹನದಲ್ಲಿ ಕೆಲಸ ಮಾಡುತ್ತಿದ್ದರೆ, ಈ ತಿಂಗಳ ಅಮಾವಾಸ್ಯೆಯು ನಿಮ್ಮ ಸಾಮಾಜಿಕ ಮಾಧ್ಯಮದ ಉಪಸ್ಥಿತಿಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕತೆಗೆ ಹೊಸ ಆರಂಭ ಸಿಗಲಿದೆ. ಈ ತಿಂಗಳ ಹುಣ್ಣಿಮೆಯ ಸಮಯದಲ್ಲಿ ಶುಕ್ರ ಹಿಮ್ಮೆಟ್ಟುತ್ತದೆ. ಈ ವೇಳೆ ನಿಮ್ಮ ಮನೆ ಮತ್ತು ಕುಟುಂಬ ಎಲ್ಲಾ ರೀತಿಯ ಆಶೀರ್ವಾದಗಳನ್ನು ಪಡೆಯುತ್ತದೆ.

ಮಕರ ರಾಶಿ

ಮಕರ ರಾಶಿ

ಇದು ನಿಮಗೆ ಬಿಡುವಿಲ್ಲದ ತಿಂಗಳು. ಜೊತೆಗೆ ಉತ್ತಮವಾಗಿದೆ. ಫೆಬ್ರವರಿ 8, ಫೆಬ್ರವರಿ 16 ಮತ್ತು ಫೆಬ್ರವರಿ 17 ಅತ್ಯುತ್ತಮ ದಿನಗಳಾಗಿರುತ್ತವೆ. ನೀವು ಎಲ್ಲಾ ರೀತಿಯ ಸಂವಹನ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತೀರಿ. ಪುಸ್ತಕವನ್ನು ಬರೆಯಲು ಒಳ್ಳೆಯ ತಿಂಗಳು ಇದಾಗುತ್ತದೆ. ಅಥವಾ ಬೇರೆ ಉದ್ಯೋಗ ಆರಂಭಿಸಲು ಬಯಸಿದರೆ ಇದು ಉತ್ತಮ ಸಮಯವಾಗಿರುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಇದು ಒಂದು ಉತ್ತಮ ತಿಂಗಳಾಗಿದೆ. ಈ ತಿಂಗಳ ಅಮಾವಾಸ್ಯೆಯು ಮುಂದಿನ ವರ್ಷದ ನಿಮ್ಮ ಉದ್ದೇಶಗಳನ್ನು ಈಡೇರಿಸಲು ಅತ್ಯುತ್ತಮ ದಿನವಾಗಿದೆ. ಫೆಬ್ರವರಿ 14 ರಂದು ಬುಧ ನಿಮ್ಮ ರಾಶಿಯನ್ನು ಪ್ರವೇಶಿಸುತ್ತದೆ. ನಿಮ್ಮ ಮಾನಸಿಕ ಚುರುಕುತನವನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಗ್ಯಾಬ್ ಉಡುಗೊರೆಯನ್ನು ನೀಡುತ್ತದೆ. ಈ ತಿಂಗಳ ಹುಣ್ಣಿಮೆಯು ನಿಮ್ಮ ದಾರಿಯಲ್ಲಿ ಸ್ವಲ್ಪ ತೀವ್ರತೆಯನ್ನು ತರಬಹುದು. ಇದು ಹಣ, ಸೃಜನಾತ್ಮಕ ಯೋಜನೆಗಳಿಗೆ ಸಹಕಾರಿಯಾದ ತಿಂಗಳಾಗಿದೆ.

Recommended Video

    Tata Group ಗೆ ಸೇರಿದ ಏರ್ ಇಂಡಿಯಾ ವಿಮಾನದಲ್ಲಿ ಏನೆಲ್ಲಾ ವಿಶೇಷತೆಗಳಿದೆ? | Oneindia Kannada
    ಮೀನ ರಾಶಿ

    ಮೀನ ರಾಶಿ

    ನಿಮ್ಮ ಆಂತರಿಕ ಜೀವನವು ಶ್ರೀಮಂತವಾಗಿರುತ್ತದೆ ಮತ್ತು ಮುಂದಿನ ನಾಲ್ಕು ತಿಂಗಳುಗಳಲ್ಲಿ ನೀವು ಏನೇ ಮಾಡಿದರೂ ಸಕಾರಗೊಳ್ಳುತ್ತದೆ. ಫೆಬ್ರವರಿ 17 ಸಹ ನಿಮಗೆ ಆಹ್ಲಾದಕರವಾದ ಆಶ್ಚರ್ಯವನ್ನು ತರುವಂತಹ ದಿನವಾಗಿದೆ. ಫೆಬ್ರವರಿ 18 ರಂದು ಸೂರ್ಯನು ನಿಮ್ಮ ರಾಶಿಯನ್ನು ಪ್ರವೇಶಿಸಿದ ನಂತರ, ನಿಮ್ಮ ಕನಸುಗಳನ್ನು ನನಸಾಗಿಸಲು ಪ್ರೋತ್ಸಾಹ ಸಿಗಲಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+