Monthly Horoscope: ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು, ಹಣದ ಸಮಸ್ಯೆಯೇ ಇರಲ್ಲ, ಈ ರಾಶಿಯವರಿಗೆ ತಿಂಗಳು ಪೂರ್ತಿ ನೆಮ್ಮದಿ

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನದಿಂದ ರಾಶಿಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಗ್ರಹಗಳ ಸ್ಥಾನಗಳು ಪ್ರತಿ ತಿಂಗಳು ಬದಲಾಗುತ್ತವೆ. ಮೇಷದಿಂದ ಮೀನ ರಾಶಿಯವರೆಗೆ ಆಗಸ್ಟ್ ತಿಂಗಳು ಹೇಗಿರುತ್ತದೆ ನೋಡೋಣ.

ಮೇಷ ರಾಶಿ (Aries)

ಆಗಸ್ಟ್ ತಿಂಗಳ ಆರಂಭವು ಮೇಷ ರಾಶಿಯವರಿಗೆ ಸಕಾರಾತ್ಮಕವಾಗಿಯೇ ಇರುವುದು. ಮೊದಲ ಎರಡು ವಾರಗಳವರೆಗೆ ಗ್ರಹ ಸ್ಥಾನಗಳು ಅನುಕೂಲಕರವಾಗಿರುತ್ತವೆ. ಇದರಿಂದಾಗಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಆಸ್ತಿ, ವೃತ್ತಿ ಅಥವಾ ವ್ಯವಹಾರದ ಬಗ್ಗೆ ಒತ್ತಡ ಕಿರಿಕಿರಿ ಇದ್ದರೆ ಎಲ್ಲವೂ ಸರಿ ಹೋಗುವುದು. ಸಂಗಾತಿಯೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶಗಳು ಸಿಗುತ್ತವೆ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರುವುದು. ಹಣ ಮತ್ತು ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಉದ್ಯಮಿಗಳು ತಿಂಗಳ ಆರಂಭದಿಂದಲೇ ಎಚ್ಚರಿಕೆಯಿಂದ ಇರಬೇಕು. ಎಲ್ಲೂ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಹಣ ಕಳೆಸುಕೊಳ್ಳಬೇಕಾಗಬಹುದು.

Monthly Horoscope

ವೃಷಭ ರಾಶಿ (Taurus)

ಆಗಸ್ಟ್ ತಿಂಗಳು ನಿಮಗೆ ಅದೃಷ್ಟವನ್ನು ತರುವುದು. ದುಡ್ಡಿನ ವಿಷಯದಲ್ಲಿ ಈ ತಿಂಗಳು ಶುಭವಾಗಿರುತ್ತದೆ. ಆದಾಯ ಹೆಚ್ಚಾಗುವುದು ಮಾತ್ರವಲ್ಲ ಹಣ ಉಳಿತಾಯ ಮಾಡುವುದರಲ್ಲಿಯೂ ಮುಂದಿರುವಿರಿ. ಸಮಾಜದಲ್ಲಿ ನಿಮಗೆ ಗೌರವ ಸಿಗುತ್ತದೆ. ಆಸ್ತಿ ಖರೀದಿ ಯೋಗವಿದೆ. ನೀವು ಮಾಡುವ ಕೆಲಸಕ್ಕೆ ಕುಟುಂಬ ಸದಸ್ಯರ ಬೆಂಬಲ ಸಿಗುವುದು.ವೈವಾಹಿಕ ಜೀವನದಲ್ಲಿ ನೀವು ಸಂತೋಷವಾಗಿರುತ್ತೀರಿ. ವೃತ್ತಿಜೀವನದಲ್ಲೂ ಉತ್ತಮ ಪ್ರಗತಿ ಪಡೆಯುವ ಸಾಧ್ಯತೆಗಳಿವೆ.

ಮಿಥುನ ರಾಶಿ (Gemini)

ಆಗಸ್ಟ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಉತ್ತಮ ಫಲ ಸಿಗುವ ಸಾಧ್ಯತೆಯಿದೆ. ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಆಧ್ಯಾತ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಉದ್ಯಮಿಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸಾಲದ ಸಮಸ್ಯೆ ನೀಗುವುದು. ಆದರೂ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ಮಟ್ಟಿನ ಏರಿಳಿತಗಳಿರಬಹುದು.

ಕಟಕ ರಾಶಿ (Cancer)

ಆಗಸ್ಟ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆರೋಗ್ಯ ಸುಧಾರಿಸುವುದು. ಮಾನಸಿಕವಾಗಿ ತುಂಬಾ ಸದೃಢರಾಗಿರುವಿರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ. ಆತುರದ ನಿರ್ಧಾರ ಸಮಸ್ಯೆಗೆ ದಾರಿ ಮಾಡಿಕೊಡಬಹುದು.

ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭವಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಉತ್ತಮ ಯಶಸ್ಸನ್ನು ಸಾಧಿಸಬಹುದು.

ಸಿಂಹ ರಾಶಿ (Leo)

ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಈ ಅವಧಿಯಲ್ಲಿ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ನಿರೀಕ್ಷೆಯಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೀತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಮಕ್ಕಳಿಂದ ನಿಮಗೆ ಗೌರವ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಬಹುದು. ಮಾತನಾಡುವಾಗ ಯೋಚಿಸಿ ಪದ ಬಳಕೆ ಮಾಡಿದರೆ ಒಳ್ಳೆಯದು.

ಕನ್ಯಾರಾಶಿ (virgo)

ಆಗಸ್ಟ್ ತಿಂಗಳು ಉತ್ಸಾಹದಿಂದ ಕೂಡಿರುವುದು. ಹೊಸ ಬಟ್ಟೆ, ಆಭರಣ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗಿಗಳಿಗೆ ಬಡ್ತಿ ಅಥವಾ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು.ವೈವಾಹಿಕ ಜೀವನದಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯ ಕೊನೆಯಾಗುವುದು. ಸಂಗಾತಿಯೊಂದಿಗಿನ ಸಂಬಂಧಗಳು ಬಲಗೊಳ್ಳಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು.

ತುಲಾ ರಾಶಿ (Libra)

ಆಗಸ್ಟ್ ತಿಂಗಳು ತುಲಾ ರಾಶಿಯವರಿಗೆ ತುಂಬಾ ಲಾಭದಾಯಕವಾಗಿರುವುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಕುಟುಂಬದ ವಾತಾವರಣ ಸಕಾರಾತ್ಮಕವಾಗಿರುವುದು. ಸ್ನೇಹಿತರು ಮತ್ತು ಸಂಬಂಧಿಕರಿಂದ ಬೆಂಬಲ ಸಿಗುವುದು.

ನಿಮ್ಮ ವೈವಾಹಿಕ ಜೀವನವು ಸಾಮಾನ್ಯವಾಗಿರುತ್ತದೆ. ಮಕ್ಕಳ ಬಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಮಕ್ಕಳ ಸಾಧನೆ ಖುಷಿ ತರಿಸಲಿದೆ. ಪ್ರೇಮ ಸಂಬಂಧಗಳು ಬಲಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಿಗಳು ಮತ್ತು ಉದ್ಯಮಿಗಳು ಉತ್ತಮ ಪ್ರಗತಿ ಕಾಣುವಿರಿ.

ವೃಶ್ಚಿಕ ರಾಶಿ (Scorpio)

ಆಗಸ್ಟ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲ ಸಿಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುವುದು. ಸಂಗಾತಿಯೊಂದಿಗೆ ಉತ್ತಮ ಸಮಸಯ ಕಳೆಯುವಿರಿ. ವಿದ್ಯಾರ್ಥಿಗಳು ಹೆಚ್ಚುಶ್ರಮ ಪಡಬೇಕಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಬಹುದು. ಉದ್ಯಮಿಗಳು ಶಕ್ತಿ ಮೀರಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗುವುದು.

ಧನು ರಾಶಿ (Sagitarius)

ಆಗಸ್ಟ್ ತಿಂಗಳಲ್ಲಿ ಧನು ರಾಶಿಯವರಿಗೆ ಗ್ರಹಗಳ ಪ್ರಭಾವದಿಂದ ವಿಶೇಷ ಲಾಭವಾಗುವ ಸಾಧ್ಯತೆ ಇದೆ. ಉದ್ಯೋಗಿಗಳು ಕಚೇರಿಯಲ್ಲಿ ಗೌರವವನ್ನು ಪಡೆಯುತ್ತಾರೆ. ಉದ್ಯಮಿಗಳಿಗೆ ಪ್ರಯಾಣಗಳಿಂದ ಪ್ರಯೋಜನವಾಗುವುದು. ಬಾಕಿ ಇರುವ ಕೆಲಸ ಪೂರ್ಣವಾಗುವುದು. ವೈವಾಹಿಕ ಜೀವನವು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆಯಿದೆ. ಆರೋಗ್ಯವು ಸುಧಾರಿಸುತ್ತದೆ.

ಮಕರ ರಾಶಿ (Capricorn)

ಆಗಸ್ಟ್ ತಿಂಗಳಲ್ಲಿ ಮಕರ ರಾಶಿಯವರು ತುಂಬಾ ಸಂಯಮದಿಂದಿರಬೇಕು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮಾತುಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಹಣದ ವಿಷಯದಲ್ಲಿ ರಿಸ್ಕ್‌ ತೆಗೆದುಕೊಲ್ಳದೆ ಇರುವುದೇ ಸೂಕ್ತ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ವೈವಾಹಿಕ ಜೀವನವು ಸಂತೋಷದಾಯಕವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.

ಕುಂಭ ರಾಶಿ (Aquarius)

ಆಗಸ್ಟ್ ತಿಂಗಳಲ್ಲಿ ಕುಂಭ ರಾಶಿಯವರು ಆತ್ಮವಿಶ್ವಾಸದಿಂದ ಇರುತ್ತಾರೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಸಂಗಾತಿಯೊಂದಿಗೆ ಸಮಾಲೋಚಿಸುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಚೆನ್ನಾಗಿರುವುದು. ಕುಟುಂಬ ಜೀವನದಲ್ಲಿ ಸಂತೋಷವಿರುವುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವುದು. ಕೆಲಸಕ್ಕಾಗಿ ದೂರದ ಊರಿಗೆ ಪ್ರಯಾಣಿಸಬೇಕಾಗಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ.

ಮೀನ ರಾಶಿ (Pisces)

ಆಗಸ್ಟ್ ಆರಂಭದಲ್ಲಿ ಮೀನ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ಈ ಅವಧಿಯಲ್ಲಿ, ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಲಾಭವಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆಯಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ಬಾಕಿ ಹಣ ವಾಪಸ್‌ ಬರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+