Mole Astrology: ಈ 5 ಜಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಅದೃಷ್ಟವೇ ಅದೃಷ್ಟ: ರಾಜಯೋಗದ ಸಂಕೇತವೆಂತೆ!
Mole Astrology : ವ್ಯಕ್ತಿಯ ದೇಹದ ಮೇಲೆ ಕಂಡುಬರುವ ಮಚ್ಚೆಗಳು ಅವುಗಳ ಆಕಾರ, ಬಣ್ಣ ಮತ್ತು ಆ ಮಚ್ಚೆ ದೇಹದ ಯಾವ ಭಾಗದಲ್ಲಿದೆ ಎನ್ನುವ ಆಧಾರದ ಮೇಲೂ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಊಹಿಸಬಹುದು. ಸಾಮುದ್ರಿಕ ಶಾಸ್ತ್ರದ ಮೂಲಕ ಈ ರೀತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದು. ದೇಹದಲಿರುವ ಎಲ್ಲಾ ಮಚ್ಚೆಗಳು ಒಂದೇ ಅರ್ಥವನ್ನು ಹೊಂದಿರುವುದಿಲ್ಲ. ಬೇರೆ ಬೇರೆ ಭಾಗಗಳಲ್ಲಿರುವ ಮಚ್ಚೆಗಳು ಬೇರೆ ಬೇರೆ ರೀತಿಯ ವಿಶೇಷ ಅರ್ಥಗಳನ್ನು ಕೊಡುತ್ತವೆ.
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಹಿಳೆಯ ದೇಹದ ಕೆಲವು ಭಾಗಗಳಲ್ಲಿ ಇರುವ ಮಚ್ಚೆಗಳು ಅಥವಾ ಕೆಂಪು ಚುಕ್ಕೆಗಳನ್ನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಕೆಲವರು ತಮ್ಮ ಮುಖದ ಮೇಲಿರುವ ಇಂಥಹ ಮಚ್ಚೆಗಳನ್ನು ತೆಗೆಸಿ ಬಿಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ನಮ್ಮ ಅದೃಷ್ಟವೇ ಹೊರಟು ಹೋಗುತ್ತದೆ ಎನ್ನುವ ನಂಬಿಕೆಯೂ ಇದೆ.

ಹುಬ್ಬುಗಳ ಮಧ್ಯೆ ಇರುವ ಮಚ್ಚೆ
ಕೆಲವರಿಗೆ ಹುಬ್ಬುಗಳ ಮಧ್ಯೆ ಮಚ್ಚೆ ಇರುತ್ತದೆ. ಇದು ಅದೃಷ್ಟದ ಸಂಕೇತವಂತೆ. ಹುಬ್ಬುಗಳ ನಡುವೆ ಇರುವ ಮಚ್ಚೆ ಅದರಲ್ಲಿಯೂ ಕೆಂಪು ಮಚ್ಚೆ ಇರುವ ಮಹಿಳೆಯರು ಅದೃಷ್ಟವಂತರು ಎನ್ನುತ್ತದೆ ಸಾಮುದ್ರಿಕ ಶಾಸ್ತ್ರ. ಈ ಮಚ್ಚೆಯನ್ನು ರಾಜಯೋಗದ ಸಂಕೇತ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಯಾರ ಹುಬ್ಬುಗಳ ಮಧ್ಯೆ ಮಚ್ಚೆ ಇರುತ್ತದೆಯೋ ಅಂಥಹ ಮಹಿಳೆಯರು ಉನ್ನತ ಹುದ್ದೆಗಳನ್ನು ತಮ್ಮ ಕಿರಿಯ ವಯಸ್ಸಿನಲ್ಲಿಯೇ ತಲುಪುತ್ತಾರೆಯಂತೆ. ಇವರು ಸ್ವಲ್ಪ ಪ್ರಯತ್ನ ಪಟ್ಟರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.
ಹಣೆಯ ಮೇಲೆ ಮಚ್ಚೆಯಿರುವ ಮಹಿಳೆಯರನ್ನು ಸಾಮಾನ್ಯವಾಗಿ ಶ್ರೀಮಂತರೆಂದು ಲೆಕ್ಕ ಹಾಕಲಾಗುತ್ತದೆ. ಈ ಮಹಿಳೆಯರು ಎಲ್ಲೇ ಇರಲಿ, ತವರು ಮನೆಯಾಗಲಿ, ಅತ್ತೆ ಮನೆಯಾಗಲಿ ಇವರಿಗೆ ಸಂಪತ್ತಿನ ಕೊರತೆ ಆಗುವುದೇ ಇಲ್ಲವಂತೆ. ಒಂದರ್ಥದಲ್ಲಿ ಇವರು ಇರುವಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎನ್ನುವುದು ನಂಬಿಕೆ. ಹಣೆಯ ಮೇಲೆ ಮಚ್ಚೆ ಇದ್ದರೆ ಅದು ಅದೃಷ್ಟ ಮತ್ತು ಸಂಪತ್ತಿನ ಸಂಕೇತ.
Mole Astrology:ಎಡ ಕೆನ್ನೆಯ ಮೇಲೆ ಇರುವ ಮಚ್ಚೆ
ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವಂತೆ ಎಡ ಕೆನ್ನೆಯ ಮೇಲೆ ಮಚ್ಚೆ ಇರುವ ಮಹಿಳೆಯರ ಮಾತು ಬಹಳ ಮೃದುವಾಗಿರುತ್ತದೆಯಂತೆ. ಅವರು ತಮ್ಮ ಮಾತಿನ ಮೂಲಕ ಯಾರಿಗೂ ನೋಯಿಸುವುದಿಲ್ಲವಂತೆ. ತಮ್ಮ ಸಿಹಿ ಮಾತುಗಳಿಂದಲೇ ಬೇರೆಯವರನ್ನು ಮೆಚ್ಚಿಸುವ ಸ್ವಭಾವವನ್ನು ಹೊಂದಿರುತ್ತಾರೆಯಂತೆ. ತಮ್ಮ ಮಾತಿನ ಮೂಲಕವೇ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವ ಮಾಡಿಸುವ ತಾಕತ್ತು ಇವರಿಗೆ ಇದೆ ಎಂದು ಹೇಳಲಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಂತಹ ಕ್ಷೇತ್ರಗಳಲ್ಲಿ ಇವರು ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ ಎನ್ನುವುದು ನಂಬಿಕೆ.
ಎದೆ ಭಾಗದಲ್ಲಿರುವ ಮಚ್ಚೆ
ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ಮಹಿಳೆಯರ ಎದೆ ಭಾಗದಲ್ಲಿ ಮಚ್ಚೆ ಇರುವುದೋ ಆ ಮಹಿಳೆಯನ್ನು ಕೂಡಾ ಅದೃಷ್ಟವಂತೆ ಎಂದೇ ಕರೆಯುತ್ತಾರೆ.ಅವರ ಜೀವನದಲ್ಲಿ ಹಣ ಮತ್ತು ಸಂಪತ್ತಿನ ಕೊರತೆ ಇರುವುದಿಲ್ಲ. ಅವರು ಉದ್ಯೋಗ ಮತ್ತು ವ್ಯವಹಾರದಂತಹ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಾರೆ. ಇವರಿಗೆ ಜೀವನದಲ್ಲಿ ಸೋಲು ಎನ್ನುವುದು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಬಲ ಸ್ತನದ ಮೇಲೆ ಕೆಂಪು ಮಚ್ಚೆ
ಬಲ ಸ್ತನದ ಮೇಲೆ ಕೆಂಪು ಮಚ್ಚೆ ಇರುವ ಮಹಿಳೆಯರಿಗೆ ಸಂತಾನಭಾಗ್ಯ ಬಹಳ ಬೇಗನೆ ದೊರೆಯುತ್ತದೆ ಎನ್ನುವುದು ಸಾಮುದ್ರಿಕ ಶಾಸ್ತ್ರದಲ್ಲಿನ ನಂಬಿಕೆ. ಅಂಥಹ ಮಹಿಳೆಯರಿಗೆ ಸಾಮಾನ್ಯವಾಗಿ ಮೊದಲು ಹೆಣ್ಣು ಮಗು ಮತ್ತು ನಂತರ ಗಂಡು ಮಗು ಜನಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ನೆನಪಿರಲಿ, ಇದು ಸಾಮುದ್ರಿಕ ಶಾಸ್ತ್ರದ ಪ್ರಕಾರ ಇರುವ ನಂಬಿಕೆ. ವೈಜ್ಞಾನಿಕವಾಗಿ ಇದು ಸತ್ಯ ಎಂದು ಹೇಳುವುದು ಸಾಧ್ಯವಿಲ್ಲ.


Click it and Unblock the Notifications
