Mercury Venus Influence: ಈ 4 ರಾಶಿಯ ಜನರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವರು
ಜನರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ನೀವು ಆಗಾಗ್ಗೆ ಕೇಳಿರಬಹುದು. ಮೊದಲ ನೋಟದಲ್ಲೇ ಪ್ರೀತಿ ಬಾಣದಂತೆ ನೇರವಾಗಿ ನುಗ್ಗಿ ಹೃದಯವನ್ನು ಪ್ರವೇಶಿಸುತ್ತದೆ. ಆದರೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವುದರ ಹಿಂದೆ ಗ್ರಹಗಳ ಪಾತ್ರ ದೊಡ್ಡದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಹಾಗಾದರೆ ಯಾವ ರಾಶಿಯವರು ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬೀಳುತ್ತಾರೆ? ಹಾಗೇ ಯಾವ ಗ್ರಹಗಳ ಕಾರಣದಿಂದಾಗಿ ಜನರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ತಿಳಿಯೋಣ. ಬುಧ ಮತ್ತು ಶುಕ್ರ ಗ್ರಹ ಆಕರ್ಷಣೆಯ ಗ್ರಹಗಳಾಗಿವೆ. ಈ ಗ್ರಹಗಳು ಪ್ರೀತಿಯಲ್ಲಿ ಬೀಳಲು ಕಾರಣವೆಮದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಎರಡು ಗ್ರಹಗಳ ಕಾರಣದಿಂದಾಗಿ ಜನರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ.
ಬುಧ ಗ್ರಹಗಳ ರಾಜಕುಮಾರವಾಗಿದ್ದು ಕೆಲ ರಾಶಿಗಳ ಮೇಲೆ ಪ್ರಭಾವ ಹೊಂದಿದೆ. ಶುಕ್ರನು ಆಕರ್ಷಣೆಯ ಅಧಿಪತಿಯಾಗಿದ್ದು, ಈ ಗ್ರಹದ ಪ್ರಭಾವ ಇರುವ ರಾಶಿಯವರು ಆಕರ್ಷಣೆಯನ್ನು ಮೆಚ್ಚುತ್ತಾರೆ. ಇವರು ಬಹುಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಜ್ಯೋತಿಷ್ಯದಲ್ಲಿ, ಅಂತಹ ನಾಲ್ಕು ವಿಶೇಷ ರಾಶಿಗಳು ಇವೆ. ಅವರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.

ವೃಷಭ ರಾಶಿಯವರು ತಾಳ್ಮೆಯಿಂದ ಇರಲಾರರು
ವೃಷಭ ರಾಶಿಯ ಅಧಿಪತಿ ಶುಕ್ರ. ಇದು ಪ್ರೀತಿಯ ಗ್ರಹವೂ ಆಗಿದೆ. ಆದ್ದರಿಂದ ಈ ರಾಶಿಚಕ್ರದ ಹೆಚ್ಚಿನ ಜನರು ಮೊದಲ ನೋಟದಲ್ಲೇ ತಮ್ಮ ಹೃದಯವನ್ನು ನೀಡುತ್ತಾರೆ. ಅವರ ಮನಸ್ಸಿಗೆ ಬಂದದ್ದೆಲ್ಲವನ್ನೂ ಅವರು ಮಾತನಾಡುತ್ತಾರೆ. ಹೃದಯದ ವಿಷಯಗಳಲ್ಲಿ, ಅವರು ತಾಳ್ಮೆಯಿಂದಿರಲು ಮತ್ತು ಏಕಪಕ್ಷೀಯವಾಗಿ ಪ್ರೀತಿಯಲ್ಲಿ ಬೀಳಲು ಸಾಧ್ಯವಾಗುವುದಿಲ್ಲ.
ಶುಕ್ರ ಗ್ರಹದ ಗುಣಗಳಂತೆ, ಈ ರಾಶಿಚಕ್ರ ಚಿಹ್ನೆಗಳ ಜನರು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಅವರು ಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಜನರು ಸಾಕಷ್ಟು ಸ್ಥಿರ ಮತ್ತು ನಡವಳಿಕೆಯಲ್ಲಿ ಸಮತೋಲನವನ್ನು ಹೊಂದಿರುತ್ತಾರೆ ಮತ್ತು ಇತರರನ್ನು ಪ್ರೇರೇಪಿಸುವಲ್ಲಿ ಯಾವಾಗಲೂ ಮುಂದಿರುತ್ತಾರೆ.

ಮಿಥುನ ರಾಶಿಯ ಜನರು ಪ್ರೀತಿಯ ವಿಷಯಗಳಲ್ಲಿ ಸೂಕ್ಷ್ಮ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಆದ್ದರಿಂದ ಈ ರಾಶಿಚಕ್ರದ ಜನರಿಗೆ ಪ್ರೀತಿಯಲ್ಲಿ ಯಾವುದೇ ಸ್ಪರ್ಧೆಯಿಲ್ಲ. ಮಿಥುನ ರಾಶಿಯವರು ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಸೂಕ್ಷ್ಮವಾಗಿರುತ್ತಾರೆ.
ಮಿಥುನ ರಾಶಿಯವರು ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನು ನೋಡುತ್ತಾರೆ. ಅವರ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಯಾರನ್ನಾದರೂ ಪ್ರೀತಿಸುತ್ತಾರೆ. ಮಿಥುನ ರಾಶಿಯವರಿಗೆ ಪ್ರೀತಿ ಎಂದರೆ ಕೇವಲ ಅನುಭವವಲ್ಲ, ಜೀವನ. ಹೀಗಾಗಿ ಇತರ ಜನರು ಅವರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ.

ಕನ್ಯಾ ರಾಶಿಯವರು ಪ್ರೀತಿಯಲ್ಲಿ ಹುಚ್ಚರು
ಬುಧನು ಕನ್ಯಾ ರಾಶಿಯ ಅಧಿಪತಿ ಆಗಿರುವುದರಿಂದ ಕನ್ಯಾ ರಾಶಿಯವರು ಪ್ರೀತಿಯ ವಿಷಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅವರು ಯಾರನ್ನಾದರೂ ಇಷ್ಟಪಟ್ಟರೆ ಅವರು ಆ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ಹುಚ್ಚರಾಗಿರುತ್ತಾರೆ.
ಯಾವಾಗಲೂ ಆ ವ್ಯಕ್ತಿಯ ಆಲೋಚನೆಗಳಲ್ಲಿ ಮುಳುಗುತ್ತಾರೆ. ಮೊದಲ ನೋಟದಲ್ಲಿ ಯಾರನ್ನಾದರೂ ತಮ್ಮದೇ ಎಂದು ಒಪ್ಪಿಕೊಳ್ಳುತ್ತಾರೆ. ಸಂತೋಷ ಅಥವಾ ದುಃಖದ ಕ್ಷಣಗಳಾಗಿರಲಿ ಅವರು ಯಾವಾಗಲೂ ನಮ್ಮ ಸಂಗಾತಿಯನ್ನು ಬೆಂಬಲಿಸುತ್ತಾರೆ.

ತುಲಾ ರಾಶಿಯವರು ಪ್ರೀತಿಯಲ್ಲಿ ಭಾವುಕ
ತುಲಾ ರಾಶಿಯ ಅಧಿಪತಿ ಶುಕ್ರ. ಆದ್ದರಿಂದ ತುಲಾ ರಾಶಿಯ ಜನರು ಮುಕ್ತವಾಗಿ ಬದುಕಲು ಇಷ್ಟಪಡುತ್ತಾರೆ. ಅವರು ಗುಂಪಿನಲ್ಲಿ ವಜ್ರವನ್ನು ಕಂಡುಕೊಳ್ಳುತ್ತಾರೆ. ತಮ್ಮ ಮನಸ್ಸಿನಲ್ಲಿ ಪ್ರೀತಿಯ ಕಲ್ಪನೆಯನ್ನು ಮಾಡಿಕೊಳ್ಳುವರು.
ಆದ್ದರಿಂದ ಅವರು ಆ ಕಲ್ಪನೆಗೆ ಹೊಂದಿಕೆಯಾಗುವವರನ್ನು ಕಂಡುಕೊಂಡರೆ ಅವರು ಸುಲಭವಾಗಿ ಭಾವುಕರಾಗುತ್ತಾರೆ. ತುಲಾ ರಾಶಿಯವರ ಕಣ್ಣುಗಳಲ್ಲಿ ವಿಭಿನ್ನ ಹೊಳಪು ಕಂಡುಬರುತ್ತದೆ. ಅದು ಅವರ ಪ್ರೀತಿಯನ್ನು ತೋರಿಸುತ್ತದೆ.












Click it and Unblock the Notifications