Mercury Transit In Scorpio: ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ- ನ.26 ರವರೆಗೆ ಈ 3 ರಾಶಿಯವರು ಎಚ್ಚರದಿಂದಿರಬೇಕು...

ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳು ಹಾಗೆ ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಕಂಡುಬರುತ್ತದೆ. ಆ ಅರ್ಥದಲ್ಲಿ ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ.

ಈ ಬುಧವು ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧದ ಸ್ಥಾನದಲ್ಲಿ ಬದಲಾವಣೆಯಾದಾಗ ಅದರ ಪ್ರಭಾವ ಜೀವನದ ಕೆಲ ಅಂಶಗಳಲ್ಲಿ ಕಂಡುಬರುತ್ತದೆ. ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಬುಧ.

ಈ ಬುಧ ನವೆಂಬರ್ 06ರಂದು ಅವರು ತುಲಾ ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ವೃಶ್ಚಿಕ ರಾಶಿಗೆ ಪ್ರವೇಶಿಸುವ ಬುಧ ನವೆಂಬರ್ 26 ರವರೆಗೆ ಆ ರಾಶಿಯಲ್ಲಿದ್ದು ನಂತರ ಧನು ರಾಶಿಗೆ ತೆರಳುತ್ತದೆ.

ವೃಶ್ಚಿಕ ರಾಶಿಯಲ್ಲಿರುವ ಬುಧ ಕೆಲವರಿಗೆ ಶುಭವಾಗಿದ್ದರೆ ಇನ್ನು ಕೆಲವರಿಗೆ ಅಶುಭವಾಗಿರುತ್ತದೆ. ಹಾಗಾದರೆ ನವೆಂಬರ್ 26 ರವರೆಗೆ ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ಎಂದು ನೋಡೋಣ.

mercury-transit-in-scorpio-on-november-2023

ಮೇಷ ರಾಶಿ

ಬುಧವು ಮೇಷ ರಾಶಿಯ 8ನೇ ಮನೆಯಲ್ಲಿದೆ. ಈ ಕಾರಣದಿಂದಾಗಿ ಮೇಷ ರಾಶಿಯವರ ಆರೋಗ್ಯವು ಸ್ವಲ್ಪ ಕೆಟ್ಟದಾಗಿರುತ್ತದೆ. ಈ ಸಮಯದಲ್ಲಿ ಹಳೆಯ ರೋಗ ನಿಮ್ಮನ್ನು ತೊಂದರೆಗೊಳಿಸುತ್ತದೆ. ಶೀತ ಮತ್ತು ಜ್ವರದಿಂದ ಬಳಲಬಹುದು. ವ್ಯಾಪಾರ ಮತ್ತು ಉದ್ಯಮದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗಮನವನ್ನು ನೀಡಬೇಕು. ಅಲ್ಲದೆ ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ. ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಲು ಸೂಚಿಸಲಾಗುತ್ತದೆ.

mercury-transit-in-scorpio-on-november-2023

ಮಿಥುನ ರಾಶಿ

ಮಿಥುನ ರಾಶಿಯ 6ನೇ ಮನೆಯಲ್ಲಿ ಬುಧ ಇದೆ. ಹೀಗಾಗಿ ಈ ರಾಶಿಯವರಿಗೆ ನವೆಂಬರ್ 26ರವರೆಗೆ ಒಳ್ಳೆಯದಲ್ಲ. ಶತ್ರುಗಳು ತುಂಬಾ ತೊಂದರೆ ಕೊಡುತ್ತಾರೆ. ಸಾಲದ ಹೊರೆ ಅಧಿಕವಾಗಲಿದೆ. ನೀವು ಕೆಲಸದಲ್ಲಿ ಸಾಕಷ್ಟು ಕೆಲಸದ ಹೊರೆಯನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಉದ್ಯೋಗವನ್ನು ಬದಲಾಯಿಸುವ ಉದ್ದೇಶವಿದ್ದರೆ, ಅದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.

mercury-transit-in-scorpio-on-november-2023

ಮೀನ ರಾಶಿ

ಬುಧವು ಮೀನ ರಾಶಿಯ 9ನೇ ಮನೆಯಲ್ಲಿದೆ. ಹೀಗಾಗಿ ಈ ರಾಶಿಗಳಿಗೆ ನವೆಂಬರ್ 26ರವರೆಗೆ ಯಾವುದೇ ಯಶಸ್ಸು ಸಿಗುವುದಿಲ್ಲ. ನಿಮ್ಮ ಕೆಲಸದಲ್ಲಿ ನೀವು ಅನೇಕ ಅಡೆತಡೆಗಳನ್ನು ಎದುರಿಸುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ.

ವೃತ್ತಿ ಮತ್ತು ವ್ಯವಹಾರದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಪ್ರಮುಖ ಹೂಡಿಕೆಗಳನ್ನು ಮಾಡಬೇಡಿ. ನಿಮ್ಮನ್ನು ದೂಷಿಸಬಹುದು. ಒತ್ತಡದಿಂದ ಬಳಲಬಹುದು. ನೀವು ವ್ಯವಹಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕೆಲವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+