ಬುಧ ಸಂಕ್ರಮಣದಿಂದಾಗಿ ಇಂದಿನಿಂದ ಮುಂದಿನ 20 ದಿನಗಳು ಈ ರಾಶಿಯವರಿಗೆ ಅದೃಷ್ಟ...

ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧ ಗ್ರಹ ಗ್ರಹಗಳಲ್ಲಿ ಅತ್ಯಂತ ವೇಗವಾಗಿ ಚಿಹ್ನೆಯನ್ನು ಬದಲಾಯಿಸುತ್ತದೆ. ಬುಧವು ಬುದ್ಧಿವಂತಿಕೆ, ಮಾತು, ವ್ಯವಹಾರ ಮತ್ತು ಅಧ್ಯಯನಗಳ ಅಂಶವೆಂದು ಪರಿಗಣಿಸಲಾಗಿದೆ. ಈ ಬುಧನು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿದೆ.

ಬುಧ ಇದುವರೆಗೆ ತುಲಾ ರಾಶಿಯಲ್ಲಿ ಸಂಚರಿಸುತ್ತಿತ್ತು. ನವೆಂಬರ್ 6 ರಂದು ಬುಧನು ಮಂಗಳನಿಂದ ಆಳಲ್ಪಟ್ಟ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಬುಧ ವೃಶ್ಚಿಕ ರಾಶಿಯಲ್ಲಿ ಸುಮಾರು 20 ದಿನಗಳ ಕಾಲ ಸಂಚರಿಸಲಿದ್ದು, ನಂತರ ಧನು ರಾಶಿ ಪ್ರವೇಶಿಸಲಿದೆ.

ಬುಧದ ಸ್ಥಾನಗಳಲ್ಲಿ ಬದಲಾವಣೆಗಳಾಗುವಾಗ ಅದರ ಪ್ರಭಾವವು ವೃತ್ತಿ, ಮಾತು ಮತ್ತು ಅಧ್ಯಯನದಲ್ಲಿ ಕಂಡುಬರುತ್ತದೆ. ಬುಧ ವೃಶ್ಚಿಕ ರಾಶಿಗೆ ಸ್ಥಳಾಂತರಗೊಂಡಿರುವುದರಿಂದ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲೂ ಇದರ ಪ್ರಭಾವ ಕಾಣಿಸುತ್ತದೆ. ಈಗ ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರದಿಂದ 12 ರಾಶಿಗಳ ಮೇಲಾಗುವ ಪರಿಣಾಮಗಳು ಯಾವವು ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿ

ಬುಧ ಮೇಷ ರಾಶಿಯ 8ನೇ ಮನೆಗೆ ತೆರಳಲಿದೆ. ಇದು ಮೇಷ ರಾಶಿ ಅವರಿಗೆ ವಿವಿಧ ಮಾರ್ಗಗಳಿಂದ ಉತ್ತಮ ಹಣದ ಲಾಭವನ್ನು ನೀಡುತ್ತದೆ. ಆದರೆ ಮಾತನಾಡುವಾಗ ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಮಾತು ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೌಕರರು ಕಚೇರಿಯಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ನಿಮ್ಮ ಮಾತಿನ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ವ್ಯಾಪಾರದಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಮುಖ್ಯ. ಇಲ್ಲದಿದ್ದರೆ ನಷ್ಟವನ್ನು ಎದುರಿಸಬೇಕಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಬುಧ ವೃಷಭ ರಾಶಿಯ 7ನೇ ಮನೆಗೆ ತೆರಳಲಿದೆ. ಇದು ವೃಷಭ ರಾಶಿ ಅವರಿಗೆ ಕೆಲಸದಲ್ಲಿ ಕಠಿಣ ಪರಿಶ್ರಮದ ಲಾಭವನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ವಿಯಾಗಲು ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹೀಗೆ ಕಷ್ಟಪಟ್ಟು ಕೆಲಸ ಮಾಡಿದರೆ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ವಿವಾಹಿತ ದಂಪತಿಗಳ ಜೀವನವು ಉತ್ತಮವಾಗಿರುತ್ತದೆ. ಪ್ರೀತಿಸುತ್ತಿರುವವರು ಮದುವೆಯಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಮಿಥುನ ರಾಶಿ

ಬುಧ ಮಿಥುನ ರಾಶಿಯ 6ನೇ ಮನೆಗೆ ತೆರಳಲಿದೆ. ಹೀಗಾಗಿ ಈ ಅವಧಿಯಲ್ಲಿ ಈ ರಾಶಿಚಕ್ರದವರು ತಮ್ಮ ಪ್ರತಿಸ್ಪರ್ಧಿಗಳಿಂದಾಗಿ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಜೀವನ ಸ್ಥಿರವಾಗಿರುತ್ತದೆ. ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯದಿರಬಹುದು. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಈ ಸಮಯ ಒತ್ತಡದಿಂದ ತುಂಬಿರುತ್ತದೆ. ಸಂಗಾತಿ ಅಥವಾ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಇದರಿಂದ ಮನೆಯ ಪರಿಸರ ಪ್ರಕ್ಷುಬ್ಧವಾಗಿರುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಬುಧ ಕರ್ಕಾಟಕ ರಾಶಿಯ 5ನೇ ಮನೆಗೆ ತೆರಳಲಿದೆ. ಹೀಗಾಗಿ ಕರ್ಕಾಟಕ ರಾಶಿಯವರು ಪ್ರೇಮ ಜೀವನ ಮತ್ತು ವೃತ್ತಿಪರ ಜೀವನಕ್ಕೆ ಹೆಚ್ಚಿನ ಗಮನ ನೀಡಬೇಕು. ಈ ಸಮಯದಲ್ಲಿ ವ್ಯಾಪಾರದಲ್ಲಿ ಯಾವುದೇ ಪ್ರಗತಿ ಕಂಡುಬರುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುವರು. ಕೆಲವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ವೈಯಕ್ತಿಕ ಜೀವನ ಚೆನ್ನಾಗಿರುತ್ತದೆ. ಆದರೆ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಡೆಯಲು ಸಲಹೆ ನೀಡಲಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಬುಧ ಸಿಂಹ ರಾಶಿಯ 4ನೇ ಮನೆಗೆ ತೆರಳಲಿದೆ. ಹೀಗಾಗಿ ವೃತ್ತಿಪರವಾಗಿ ಈ ರಾಶಿಚಕ್ರದವರು ಉತ್ತಮ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರಿಗಳು ಉತ್ತಮ ಲಾಭ ಗಳಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ. ಕಚೇರಿಯಲ್ಲಿ ನಿಮ್ಮ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ನಿಮಗೆ ಅವಕಾಶಗಳು ಸಿಗುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿ

ಬುಧ ಕನ್ಯಾ ರಾಶಿಯ 3ನೇ ಮನೆಗೆ ತೆರಳಲಿದೆ. ಈ ಕಾರಣದಿಂದಾಗಿ ಕನ್ಯಾ ರಾಶಿಯವರು ತಮ್ಮ ಒಡಹುಟ್ಟಿದವರೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು. ಕನ್ಯಾ ರಾಶಿಯವರು ಕೆಲಸದಲ್ಲಿ ಧೈರ್ಯ ಮತ್ತು ನಿರ್ಭೀತರಾಗಿರುತ್ತೀರಿ. ಉದ್ಯೋಗಿಗಳು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು ಮತ್ತು ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯಬಹುದು. ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಾಣಬಹುದು.

ತುಲಾ ರಾಶಿ

ತುಲಾ ರಾಶಿ

ಬುಧ ತುಲಾ ರಾಶಿಯ 2ನೇ ಮನೆಗೆ ಸಾಗುತ್ತದೆ. ಇದು ಈ ರಾಶಿಚಕ್ರದವರ ವೈಯಕ್ತಿಕ ಜೀವನವನ್ನು ಆಹ್ಲಾದಕರವಾಗಿರಿಸುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಆದರೆ ಈ ಸಮಯದಲ್ಲಿ ಯಾರನ್ನೂ ಗೇಲಿ ಮಾಡಬೇಡಿ. ಇಲ್ಲದಿದ್ದರೆ ಅದು ನಿಮ್ಮ ಖ್ಯಾತಿಯನ್ನು ಹಾಳು ಮಾಡುತ್ತದೆ. ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ನೀವು ಪೂರೈಸಬಹುದು. ನೀವು ನಿಮ್ಮ ಶತ್ರುಗಳನ್ನು ಮತ್ತು ಸವಾಲುಗಳನ್ನು ಬುದ್ಧಿವಂತಿಕೆಯಿಂದ ಜಯಿಸುತ್ತೀರಿ ಮತ್ತು ಗೆಲ್ಲುತ್ತೀರಿ. ವೃತ್ತಿಪರವಾಗಿ ಈ ಅವಧಿಯಲ್ಲಿ ನೀವು ಉತ್ತಮ ಪ್ರಗತಿಯನ್ನು ಕಾಣುವಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಬುಧ ವೃಶ್ಚಿಕ ರಾಶಿಯ ಮೊದಲ ಮನೆಗೆ ತೆರಳಲಿದೆ. ಇದು ವೃಶ್ಚಿಕ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ನಿಮ್ಮ ನಡವಳಿಕೆಯು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ನಿಮ್ಮ ದಿಟ್ಟ ವಿಧಾನ ನಿಮ್ಮ ವಿರೋಧಿಗಳು/ಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಲು ಸಹಾಯ ಮಾಡುತ್ತದೆ. ನಿಮ್ಮ ಶ್ರಮವು ಕೆಲಸದಲ್ಲಿ ಫಲ ನೀಡುತ್ತದೆ. ನೀವು ಮೇಲಧಿಕಾರಿಗಳೊಂದಿಗೆ ಖ್ಯಾತಿಯನ್ನು ಗಳಿಸುವಿರಿ. ಆರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಧನು ರಾಶಿ

ಧನು ರಾಶಿ

ಬುಧ ಧನು ರಾಶಿಯ 12ನೇ ಮನೆಗೆ ತೆರಳಲಿದೆ. ಹೀಗಾಗಿ ಧನು ರಾಶಿಯವರು ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲವರು ವಿದೇಶಕ್ಕೆ ಹೋಗಬಹುದು. MNC ಅಥವಾ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ತುಂಬಾ ಒಳ್ಳೆಯದು. ನಿಮ್ಮ ಪರಿಶ್ರಮದಿಂದ ನೀವು ಚೆನ್ನಾಗಿ ಗಳಿಸುವಿರಿ.

ಮಕರ ರಾಶಿ

ಮಕರ ರಾಶಿ

ಬುಧ ಮಕರ ರಾಶಿಯ 11ನೇ ಮನೆಗೆ ತೆರಳಲಿದೆ. ಆದ್ದರಿಂದ ನೀವು ವೃತ್ತಿಪರವಾಗಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಕರ್ತವ್ಯಗಳನ್ನು ನೀವು ಪೂರೈಸುವಿರಿ. ಸಂಗಾತಿಯ ಮೇಲೆ ಪ್ರೀತಿ ತೋರಿದರೆ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ನಿಮ್ಮ ಶತ್ರುಗಳನ್ನು ಜಯಿಸುತ್ತೀರಿ. ನೀವು ವೈಯಕ್ತಿಕ ಸಂಬಂಧಗಳ ಮೇಲೆ ಕೇಂದ್ರೀಕರಿಸುವುದಿಲ್ಲ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು.

ಕುಂಭ ರಾಶಿ

ಕುಂಭ ರಾಶಿ

ಬುಧ ಕುಂಭ ರಾಶಿಯ 10ನೇ ಮನೆಗೆ ತೆರಳಲಿದೆ. ಇದು ನಿಮಗೆ ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಈ ಅವಧಿಯಲ್ಲಿ ಕೀರ್ತಿ ಲಭ್ಯವಾಗುವುದು. ಆದರೆ ಮಾತನಾಡುವಾಗ ಸೌಜನ್ಯದಿಂದ ಮಾತನಾಡಿ. ನಿಮ್ಮ ಜೀವನ ಸಂಗಾತಿ ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಇದು ನಿಮ್ಮ ಸಂಬಂಧದಲ್ಲಿ ಸಂತೋಷ ಮತ್ತು ವಿಶ್ವಾಸವನ್ನು ತರುತ್ತದೆ.

ಮೀನ ರಾಶಿ

ಮೀನ ರಾಶಿ

ಬುಧ ಮೀನ ರಾಶಿಯ 9ನೇ ಮನೆಗೆ ತೆರಳಿಲಿದೆ. ಮೀನ ರಾಶಿಯ ವಿದ್ಯಾರ್ಥಿಗಳಿಗೆ ಇದು ತುಂಬಾ ಅದ್ಭುತವಾಗಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಮತ್ತು ಲಾಭ ದೊರೆಯುತ್ತದೆ. ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಲಭ್ಯವಿರುವುದರಿಂದ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗಿದೆ. ವೈಯಕ್ತಿಕ ಜೀವನವು ಸಾಮರಸ್ಯ ಮತ್ತು ಸ್ನೇಹಪರವಾಗಿರುತ್ತದೆ. ಸಂಗಾತಿಯ ಮತ್ತು ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲ ಲಭ್ಯವಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+