Mercury Moon Conjunction 2024: ಸಿಂಹದಲ್ಲಿ ಬುಧ-ಚಂದ್ರ ಸಂಯೋಜನೆ: ಇಂದಿನಿಂದ ಈ 3 ರಾಶಿಯವರಿಗೆ ಖುಲಾಯಿಸುತ್ತೆ ಅದೃಷ್ಟ

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳು ಸಂಚಾರ ಮಾಡುವಾಗ ಇತರ ಗ್ರಹಗಳೊಂದಿಗೆ ಸಂಚಾರ ಮಾಡುತ್ತವೆ. ಗ್ರಹಗಳು ಈ ರೀತಿಯಾಗಿ ಒಟ್ಟಿಗೆ ಪ್ರಯಾಣಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ.

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜಕುಮಾರ ಬುಧ ಪ್ರಸ್ತುತ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದೆ. ಆಗಸ್ಟ್ 5ರಂದು ಚಂದ್ರ ಗ್ರಹ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಹೀಗಾಗಿ ಸಿಂಹ ರಾಶಿಯಲ್ಲಿ ಬುಧ ಮತ್ತು ಚಂದ್ರನ ಸಂಯೋಜನೆಯು ಸಂಭವಿಸುತ್ತದೆ. ಸಿಂಹರಾಶಿಯಲ್ಲಿ ಬುಧ ಮತ್ತು ಚಂದ್ರ ಸಂಯೋಗವಾಗುವುದರಿಂದ, ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ.

ಈ ಸಂಯೋಜನೆಯು 3 ರಾಶಿಗಳಿಗೆ ತುಂಬಾ ಅದೃಷ್ಟವನ್ನು ತರಲಿದೆ. ವ್ಯಾಪಾರದಲ್ಲಿ ಸುಧಾರಣೆ ಮತ್ತು ಆರ್ಥಿಕ ಸ್ಥಿತಿಯೂ ಸಹ ಇರುತ್ತದೆ. ಈಗ ಸಿಂಹ ರಾಶಿಯಲ್ಲಿ ಬುಧ ಮತ್ತು ಚಂದ್ರ ಒಟ್ಟಿಗೆ ಸಾಗುವುದರಿಂದ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂದು ತಿಳಿಯೋಣ.

Mercury moon conjunction in leo on 05 august 2024 these zodiac signs luck will shine in kannada

ಮೇಷ ರಾಶಿ

ಸಿಂಹ ರಾಶಿಯಲ್ಲಿ ಬುಧ ಮತ್ತು ಚಂದ್ರ ಮೇಷ ರಾಶಿಯವರಿಗೆ ಅದ್ಬುತ ಫಲಿತಾಂಶ ನೀಡಲಿದೆ. ಮೇಷ ರಾಶಿಯ 5 ನೇ ಮನೆಯಲ್ಲಿ ಬುಧ ಮತ್ತು ಚಂದ್ರನ ಸಂಯೋಗ ನಡೆಯಲಿದೆ. ಹೀಗಾಗಿ ಈ ರಾಶಿಯವರಿಗೆ ಮಕ್ಕಳ ಮೂಲಕ ಒಳ್ಳೆಯ ಸುದ್ದಿ ಸಿಗಲಿದೆ.

ಮೇಷ ರಾಶಿಯವರ ಮಾತು ಆಹ್ಲಾದಕರವಾಗಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಅದ್ಭುತ ಸಮಯವಾಗಿದೆ. ಕೆಲವರು ಅನಿರೀಕ್ಷಿತ ಹಣವನ್ನೂ ಪಡೆಯುತ್ತಾರೆ. ನೀವು ಪ್ರೀತಿಯಲ್ಲಿ ಬಿದ್ದರೆ, ಆ ಪ್ರೀತಿ ಯಶಸ್ವಿಯಾಗುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲವು ಹೊಸ ಜವಾಬ್ದಾರಿಗಳು ಸಿಗಲಿವೆ. ಧನಲಾಭವನ್ನು ಪಡೆಯುತ್ತಾರೆ.

Mercury moon conjunction in leo on 05 august 2024 these zodiac signs luck will shine in kannada

ಕರ್ಕಾಟಕ ರಾಶಿ

ಬುಧ ಮತ್ತು ಚಂದ್ರನ ಸಂಯೋಗ ಕರ್ಕ ರಾಶಿಯವರಿಗೆ ಮಂಗಳಕರ ಸಮಯವಾಗಿದೆ. ಇದು ಕರ್ಕಾಟಕ ರಾಶಿಯವರ 2ನೇ ಮನೆಯಲ್ಲಿ ಸಂಭವಿಸುತ್ತದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಸ್ನೇಹಿತರು ಮತ್ತು ತಾಯಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ಕರ್ಕಾಟಕ ರಾಶಿಯವರು ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ಕಚೇರಿಯಲ್ಲಿ ಉದ್ಯೋಗಿಗಳು ಪ್ರಗತಿಯನ್ನು ಕಾಣುತ್ತಾರೆ. ಉದ್ಯಮಿಗಳಿಗೆ ಲಾಭ ದೊರೆಯುವ ಸಾಧ್ಯತೆ ಇದೆ. ಬಹುಕಾಲದ ಆಸೆಗಳು ಈಡೇರುತ್ತವೆ. ನಿಮ್ಮ ಮಾತು ಇತರರನ್ನು ಮೆಚ್ಚಿಸುತ್ತದೆ. ಅನೇಕ ಪ್ರಮುಖ ಕೆಲಸಗಳನ್ನು ಮಾತಿನ ಮೂಲಕ ಪೂರ್ಣಗೊಳಿಸಬಹುದು.

Mercury moon conjunction in leo on 05 august 2024 these zodiac signs luck will shine in kannada

ಧನು ರಾಶಿ

ಸಿಂಹ ರಾಶಿಯಲ್ಲಿ ಬುಧ ಮತ್ತು ಚಂದ್ರ ಸಂಯೋಗ ಧನು ರಾಶಿಯ 9 ನೇ ಮನೆಯಲ್ಲಿ ಸಂಭವಿಸುತ್ತದೆ. ಹೀಗಾಗಿ ಮುಂದಿನ 2 ದಿನ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಉದ್ಯೋಗಿಗಳು ಮತ್ತು ಉದ್ಯಮಿಗಳು ನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ.

ಅಲ್ಲದೆ ಧನು ರಾಶಿಯವರ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಹೆಸರು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಅದೃಷ್ಟದಿಂದಾಗಿ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ನೀವು ಬಹಳಷ್ಟು ಹಣವನ್ನು ಉಳಿಸಬಹುದು. ಹೊಸ ಆಸ್ತಿ ಮತ್ತು ವಾಹನ ಖರೀದಿಸಲು ಅವಕಾಶವಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+