Mercury Combust 2024: ವೃಷಭ ರಾಶಿಯಲ್ಲಿ ಬುಧ ದಹನ- ಜೂನ್ 25ರವರೆಗೆ ಈ 3 ರಾಶಿಯವರು ಅದೃಷ್ಟವಂತರು...
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ಗ್ರಹಗಳು ರಾಶಿಯಲ್ಲಿ ಸಂಚಾರ ಮಾಡುವುದು ಮಾತ್ರವಲ್ಲದೆ ಕೆಲ ಬಾರಿ ದಹನವಾಗುತ್ತವೆ.
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧವನ್ನು ಬುದ್ಧಿವಂತಿಕೆ, ಮಾತು, ವ್ಯವಹಾರ, ಅಧ್ಯಯನದ ಅಂಶವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಬುಧವು ಮಿಥುನ, ಕನ್ಯಾ ರಾಶಿಯ ಅಧಿಪತಿಯಾಗಿದೆ. ಅದು ರಾಶಿಯಲ್ಲಿ 27 ದಿನಗಳ ಕಾಲ ಪ್ರಯಾಣಿಸುತ್ತದೆ.
ಪ್ರಸ್ತುತ ಬುಧನು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೇ ರಾಶಿಯಲ್ಲಿ ಅಸ್ತಮವಾಗುತ್ತದೆ. ಅಸ್ತಮಾನದಲ್ಲಿ ಗ್ರಹಗಳು ದುರ್ಬಲವಾಗಿರುತ್ತವೆ. ಹೀಗೆ ಬುಧಗ್ರಹದ ಅಸ್ಥಿತ್ವದಿಂದಾಗಿ ನೀವು ಅಜಾಗರೂಕತೆ ಮತ್ತು ಅಭದ್ರತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದರೆ ವೃಷಭ ರಾಶಿಯಲ್ಲಿ ಬುಧದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಗಳು ಅದೃಷ್ಟಶಾಲಿಯಾಗಲಿವೆ. ಈಗ ಬುಧನು ಅಸ್ತಮಿಸಿದ್ದು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ನೋಡೋಣ.

ಕನ್ಯಾ ರಾಶಿ
ಕನ್ಯಾ ರಾಶಿಯ 9ನೇ ಮನೆಯಲ್ಲಿ ಬುಧ ಅಸ್ತಮಿಸಿದ್ದಾನೆ. ಆದ್ದರಿಂದ ಈ ರಾಶಿಗಳು ಅದೃಷ್ಟದ ಒಲವು ಪಡೆಯುತ್ತವೆ. ವೃತ್ತಿಯ ವಿಷಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಕೆಲವರಿಗೆ ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವಕಾಶವೂ ದೊರೆಯಲಿದೆ.
ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು. ಸಂಬಂಧಗಳ ವಿಷಯದಲ್ಲಿ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಆದಾಗ್ಯೂ ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು.

ವೃಶ್ಚಿಕ ರಾಶಿ
ಬುಧನು ವೃಶ್ಚಿಕ ರಾಶಿಯ 7ನೇ ಮನೆಯಲ್ಲಿ ಅಸ್ತಮಿಸಿದ್ದಾನೆ. ಈ ರಾಶಿಗಳಿಗೆ ಇದು ಒಳ್ಳೆಯದಾಗಲಿದೆ. ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಕೆಲಸದ ಹೊರೆ ಕಡಿಮೆಯಾಗುತ್ತದೆ. ಒತ್ತಡವೂ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.
ಹಣ ಗಳಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಸಾಲದ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ.

ಧನು ರಾಶಿ
ಬುಧನು ಧನು ರಾಶಿಯ 6ನೇ ಮನೆಯಲ್ಲಿ ಅಸ್ತಮಿಸಿದ್ದಾನೆ. ಇದು ಧನು ರಾಶಿಯವರಿಗೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ. ಸ್ವಂತ ಉದ್ದಿಮೆ ಆರಂಭಿಸಿದರೆ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯೊಂದಿಗೆ, ನೀವು ಆರ್ಥಿಕ ಲಾಭವನ್ನು ಸಹ ಪಡೆಯುತ್ತೀರಿ.
ಹಣಕಾಸು ಸ್ಥಿತಿಗತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಈ ಪ್ರವಾಸ ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಅದನ್ನು ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications