Planet Transit: ಒಟ್ಟೊಟ್ಟಿಗೆ ನಾಲ್ಕು ಗ್ರಹ ಸಂಚಾರ; ಈ ರಾಶಿಯವರಿಗೆ ಬಂಪರ್‌ ಲಾಭ, ಭಾರೀ ಅದೃಷ್ಟ

ಅಕ್ಟೋಬರ್ ತಿಂಗಳು ಆರಂಭವಾಗಿದೆ. ನವರಾತ್ರಿ ಕೂಡಾ ಇದೇ ತಿಂಗಳಲ್ಲಿ ಬರುವುದು. ಇನ್ನು ಗ್ರಹ ಸಂಚಾರ ದೃಷ್ಟಿಯಿಂದಲೂ ಅಕ್ಟೋಬರ್‌ ಅತ್ಯಂತ ಮಹತ್ವದ ಮಾಸ. ಈ ಮಾಸದಲ್ಲಿ ಅನೇಕ ಗ್ರಹಗಳ ಸ್ಥಾನ, ಚಲನೆಯಲ್ಲಿ ಬದಲಾಗುವುದು. ಶುಕ್ರ ಮತ್ತು ಬುಧ ಗ್ರಹ ಹಿಮ್ಮುಖ ಚಲನೆಯಲ್ಲಿದ್ದರೆ, ಮಂಗಳ ಗುರು ಗ್ರಹ ಸಂಯೋಗ ಕೂಡಾ ಆಗುವುದು. ಸ್ವಾತಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುವ ಬುಧ ದಸರಾ ಹೊತ್ತಿನಲ್ಲಿಯೇ ವಿಶಾಖ ನಲ್ಷತ್ರಕ್ಕೆ ಕಾಲಿಡುತ್ತಿದ್ದಾನೆ. ಬುಧನ ಸಂಚಾರದಲ್ಲಿನ ಈ ಬದಲಾವಣೆ ಕೂಡಾ ಎಲ್ಲಾ ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುವುದು.

ಈ ತಿಂಗಳು, ಸೂರ್ಯ ಸಂಚಾರ, ಹಿಮ್ಮುಖ ಶನಿ, ಶುಕ್ರ ಮತ್ತು ಬುಧನ ಸ್ಥಾನದಲ್ಲಿನ ಬದಲಾವಣೆ ನಾಲ್ಕು ರಾಶಿಯವರಿಗೆ ತುಂಬಾ ಫಲ ನೀಡುವುದು. ಇವರ ಅದೃಷ್ಟದ ದಿನಗಳು ಆರಂಭವಾಗುವುದು. ಇದರ ಫಲವಾಗಿ ಕೆಲವು ರಾಶಿಯವರ ಅದೃಷ್ಟ ಹೆಚ್ಚುವುದು. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಹೊಸ ಅವಕಾಶಗಳು ಸಿಗುವುದು. ಜೊತೆಗೆ, ಬಾಕಿ ಉಳಿದಿದ್ದ ಕೆಲಸಗಳು ಸರಾಗವಾಗಿ ನೆರವೇರುವುದು. ಯಶಸ್ಸಿನ ಹಾದಿ ಸುಗಮವಾಗುವುದು.

Lucky Zodiac Signs Of October 2026 Huge Financial Benefits Luck For Gemini Virgo Scorpio And Aquarius

ಅದೃಷ್ಟ ರಾಶಿಗಳು :

ಮಿಥುನ ರಾಶಿ (Gemini) :

ಮಿಥುನ ರಾಶಿಯವರಿಗೆ ಈ ಇಡೀ ತಿಂಗಳು ಹೆಚ್ಚು ಪ್ರಯೋಜನಕಾರಿಯಾಗುವುದು. ವೃತ್ತಿಜೀವನದಲ್ಲಿ ಪ್ರಗತಿಗೆ ಅವಕಾಶಗಳು ಸಿಗುವುದು. ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು. ಆರ್ಥಿಕ ಸ್ಥಿತಿ ಬಲವಾಗುವುದು. ಉದ್ಯಮಿಗಳು ವ್ಯವಹಾರ ವಿಸ್ತರಣೆ ಮಾಡುವ ಬಗ್ಗೆ ಯೋಚಿಸಬಹುದು. ಹೊಸ ಗ್ರಾಹಕರು ಹುಟ್ಟಿಕೊಳ್ಳುವರು. ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಸಾಲಗಳು ತೀರುವುದು. ಕಷ್ಟಗಳು ಪರಿಹಾರವಾಗುವುದು. ಹೆಚ್ಚು ಲಾಭವನ್ನು ನಿರೀಕ್ಷಿಸಬಹುದು. ಆಸ್ತಿ ಖರೀದಿ ಸಾಧ್ಯತೆಯೂ ಇದೆ.

ಕನ್ಯಾರಾಶಿ (Virgo) :

ಈ ತಿಂಗಳು ಕನ್ಯಾ ರಾಶಿಯವರ ಪಾಲಿಗೂ ಅದೃಷ್ಟವನ್ನು ಹೊತ್ತು ತರುವುದು. ಅನಿರೀಕ್ಷಿತವಾಗಿ ಹಣದ ಲಾಭವಾಗುವುದು. ಹೊಸ ಕೆಲಸಕ್ಕೆ ಸೇರಬಹುದು. ಅಥವಾ ಹೊಸ ವ್ಯವಹಾರ ಶುರು ಮಾಡಬಹುದು. ಆದಾಯ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಸಂಪತ್ತಿನಲ್ಲಿ ಹೆಚ್ಚಳವಾಗುವುದು. ಈ ತಿಂಗಳು, ಹೊಸ ಉದ್ಯೋಗಾವಕಾಶ ಒಲಿಯುವುದು. ಪ್ರಗತಿಗೆ ಅವಕಾಶ ಇರುವುದು. ಕೆಲಸದ ವಿಷಯವಾಗಿ ವಿದೇಶ ಪ್ರವಾಸ ಮಾಡುವ ಅವಕಾಶ ಸಿಗಬಹುದು.

ವೃಶ್ಚಿಕ ರಾಶಿ (Scorpio) :

ವೃಶ್ಚಿಕ ರಾಶಿಯವರಿಗೆ ಹೊಸ ಅವಕಾಶ ಸಿಗುವುದು. ವ್ಯಾಪಾರದಲ್ಲಿ ಲಾಭವಾಗುವುದು. ಹಿಂದಿನ ಸಾಲದಿಂದ ಮುಕ್ತಿ ಸಿಗುವುದು. ಹಣದ ಸಮಸ್ಯೆ ಕಡಿಮೆಯಾಗುವುದು. ಕೈ ಹಾಕುವ ಎಲ್ಲಾ ಕೆಲಸ ಬೇಗನೆ ಮುಗಿಯುವುದರ ಜೊತೆಗೆ ಉತ್ತಮ ಫಲ ಕೂಡಾ ಸಿಗುವುದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಅಕ್ಟೋಬರ್‌ನಲ್ಲಿ ಉತ್ತಮ ಅವಕಾಶ ಸಿಗುವುದು. ವೃತ್ತಿಜೀವನದಲ್ಲಿ ಮುಂದಕ್ಕೆ ಬರಲು ಅವಕಾಶ ಸಿಗುವುದು. ಬಡ್ತಿಯ ಅವಕಾಶವೂ ಇದೆ. ಈ ಮೂಲಕ ಉನ್ನತ ಸ್ಥಾನಕ್ಕೆ ಏರುವಿರಿ. ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ. ಮನೆ ನಿರ್ಮಾಣ ಅಥವಾ ಖರೀದಿ ಯೋಗವಿದೆ. ಮಕ್ಕಳ ಸಾಧನೆ ಖುಷಿ ತರುವುದು. ನಿಮ್ಮ ಜಾತಕ ಫಲದ ಪರಿಣಾಮವಾಗಿ ಸಂಗಾತಿಯ ಅದೃಷ್ಟವೂ ಹೆಚ್ಚುವುದು.

ಕುಂಭ ರಾಶಿ (Aquarius) :

ಕುಂಭ ರಾಶಿಯವರ ಸಂತೋಷದ ದಿನಗಳು ಆರಂಭ. ಇಲ್ಲಿವರೆಗೆ ಕಾಡುತ್ತಿದ್ದ ಸಮಸ್ಯೆ ಪರಿಹಾರವಾಗುವುದು. ಅದೃಷ್ಟ ನಿಮ್ಮ ಜೊತೆ ಇರುವುದು. ಪ್ರತೀ ಹಂತದಲ್ಲಿಯೂ ಯಶಸ್ಸು ಸಿಗುವುದು.ಕೆಲಸದಲ್ಲಿ ಇರುವವರು ತಮ್ಮ ಕಠಿಣ ಪರಿಶ್ರಮದ ಫಲ ಪಡೆಯುವರು. ಬಡ್ತಿ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಪೂರ್ವಜರ ಆಸ್ತಿಯಿಂದ ಪ್ರಯೋಜನವಾಗುವುದು. ವಾಹನ ಖರೀದಿ ಭಾಗ್ಯ ಇರುವುದು. ಕಾಡುತ್ತಿದ್ದ ಆರೋಗ್ಯ ಕೂಡಾ ನಿವಾರಣೆಯಾಗುವುದು. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+