Simha Rashi Bhavishya 2025: ಸಿಂಹ ರಾಶಿ 2025ನೇ ವರ್ಷ ಭವಿಷ್ಯ- ಯೋಗಗಳ ಸುರಿಮಳೆ: ಭರ್ಜರಿ ಧನಲಾಭ

1-1-2025ರಿಂದ 31-12-2025ರವರೆಗೆ ಅಂದರೆ 365 ದಿನಗಳು ಸಿಂಹ ರಾಶಿಯವರ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯೋಣ. ಸಿಂಹ ರಾಶಿಯವರಿಗೆ ಮುಂದಿನ ವರ್ಷ ಲಾಭವನ್ನು ತಂದು ಕೊಡುತ್ತದೆ. ಧನಕಾರಕ, ಯೋಗಕಾರಕ ಬುಧ ಸಿಂಹ ರಾಶಿಯವರಿಗೆ ವಿಪರೀತ ಧನವನ್ನು ತಂದುಕೊಡುತ್ತಾನೆ.

ಸಿಂಹರಾಶಿಯವರಿಗೆ ಲಾಭಾಧಿಪತಿ ಮಿಥುನ ರಾಶಿಯಾಗಿರುತ್ತದೆ. ಲಾಭಾಧಿಪತಿ ಬುಧ ಹಾಗೂ ಮಿಥುನ ಸಿಂಹ ರಾಶಿಯವರಿಗೆ ನಿರೀಕ್ಷೆಗೂ ಹೆಚ್ಚು ಲಾಭವನ್ನು ನೀಡುತ್ತಾರೆ. ಇದರಿಂದಾಗಿ 2025ನೇ ವರ್ಷ ಸಿಂಹ ರಾಶಿಯವರಿಗೆ ಅದ್ಭುತವಾಗಿರುತ್ತದೆ. ದಾಯಾದಿಗಳಿಂದ ಬರಬೇಕಾದ ಹಣ ಆಸ್ತಿ ನಿಮ್ಮ ಕೈ ಸೇರುತ್ತದೆ. ಯಾರಿಗಾದರೂ ಸಾಲ ನೀಡಿದ್ದರೆ ಆ ಹಣ ನಿಮಗೆ ವಾಪಸ್ ಬರುತ್ತದೆ. ಶ್ರಮವಿಲ್ಲದೇ ನಿಮ್ಮತ್ತ ಧನಲಕ್ಷ್ಮೀ ಆಗಮನವಾಗಲಿದೆ.

Leo yearly prediction 2025 simha rashi varshika bhavishya- job family financial love horoscope

ಕಳೆದ ಹಲವು ವರ್ಷಗಳಿಂದ ಸರ್ಕಾರಿ ನೌಕರರಿಗೆ ಪ್ರಮೋಷನ್ ಆಗದೇ ಇರುವುದು, ಮೇಲಾಧಿಕಾರಿಗಳಿಂದ ತುಂಬಾ ಕಿರಿಕಿರಿಯಾಗುವುದು ಇಂತಹ ಘಟನೆಗಳೆಲ್ಲವೂ ಕೂಡ ಯಾರ ಕಿರಿಕಿರಿ ಇಲ್ಲದೆ ನಿಮ್ಮಿಂದ ದೂರವಾಗುತ್ತವೆ. ಸಿಂಹ ರಾಶಿಯ ನಾಟಿ ವೈದ್ಯರಿಗೆ ಅಲ್ಲದೆ ಆಯುರ್ವೇದ ಗಿಡ ಮೂಲಿಕೆಗಳನ್ನು ಸಂರಕ್ಷಣೆ ಮಾಡುವಂತವರಿಗೆ ಲಾಭವಿದೆ.

ಅಷ್ಟೇ ಅಲ್ಲದೆ ಜೀವನದಲ್ಲಿ ಅನೇಕ ಸಮಸ್ಯೆಗಳು, ಅನೇಕ ರೀತಿಯ ತೊಂದರೆಗಳು ಎದುರಾಗುತ್ತಿದ್ದರೂ ಕೂಡ ಅದೆಲ್ಲವೂ ದೂರವಾಗಿ ಸಿಂಹ ರಾಶಿಯವರಿಗೆ ಮುಂಬರುವ ವರ್ಷ ಧನಾಗಮನ ಉಂಟಾಗುತ್ತದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಿ ವ್ಯವಹರಿಸುವವರಿಗೆ ಹಣದ ಅರಿವು ಹೆಚ್ಚಾಗುತ್ತದೆ.

ಸಿಂಹ ರಾಶಿಯವರಿಗೆ ಯೋಗಗಳ ಸುರಿಮಳೆ

ಮುಂಬರುವ ವರ್ಷದಲ್ಲಿ ಧನಪ್ರಾಪ್ತಿ ಮಹಾಯೋಗ, ಗುರು ಮಂಗಲ ಯೋಗ, ಗಜಕೇಸರಿ ಯೋಗ, ಬುಧಾಧಿತ್ಯ ಯೋಗ ಇವೆಲ್ಲವೂ ಕೂಡ ಸಿಂಹರಾಶಿಯವರಿಗಿದೆ. ಇದರೊಂದಿಗೆ ವಿವಾಹ ಯೋಗವೂ ಇದ್ದು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಕೂಡಿ ಬರಲಿದೆ. ಅಲ್ಲದೆ ಮುಂದಿನ ವರ್ಷ ಸಾಲಭಾದೆಗಳು ನಿವಾರಣೆಯಾಗುತ್ತವೆ. ಯಂತ್ರೋಪಕರಣಗಳು, ಆಟೋ ಮೋಬೈಲ್ ವ್ಯವಹಾರ ದ್ವಿಗುಣ ಲಾಭವನ್ನು ನೀಡುತ್ತದೆ. ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಹಣವನ್ನು ನೀವು ಪಡೆಯುವಿರಿ.

Leo yearly prediction 2025 simha rashi varshika bhavishya- job family financial love horoscope

ಅಲ್ಲದೆ ಸಾಲ ಕೂಡ ದೂರವಾಗುತ್ತದೆ. ಮುಂದಿನ ವರ್ಷ ಸಿಂಹ ರಾಶಿಯವರಿಗೆ ಎಲ್ಲದರಿಂದಲೂ ಅನುಕೂಲಕರವಾಗಿರುತ್ತದೆ. ಸಿಂಹ ರಾಶಿಯವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ಸಂಬಳ ಹೆಚ್ಚಾಗಿರುವ ಕೆಲಸ ಸಿಗುತ್ತದೆ. ಹೆಚ್ಚು ಶ್ರಮ ಪಡುತ್ತೇನೆ ಎನ್ನುವರಿಗೆ ಭಗವಂತನ ಆಶೀರ್ವಾದಿಂದ ಹೆಚ್ಚಿನ ಸಂಬಳವಿರುವ ಉದ್ಯೋಗ ಸಿಗಲಿದೆ.

ಸಿಂಹ ರಾಶಿಯವರಿಗೆ ಅದೃಷ್ಟದ ದಿಕ್ಕು

ಸಿಂಹ ರಾಶಿಯವರಿಗೆ ಅದೃಷ್ಟದ ದಿಕ್ಕು ಪಶ್ಚಿಮ ದಿಕ್ಕು ಆಗಿದೆ. ಈ ದಿಕ್ಕು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಈ ದಿಕ್ಕನ್ನು ಕಡೆಗಣಿಸಬೇಡಿ. ಸ್ವಚ್ಚವಾಗಿಡಿ. ಪೂಜೆ ವೇಳೆ ಈ ದಿಕ್ಕಿಗೂ ಆರತಿ ಮಾಡಿ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಈಡೇರುತ್ತದೆ.

ಅದೃಷ್ಟ ಸಂಖ್ಯೆ

ಸಿಂಹ ರಾಶಿಯವರಿಗೆ ಅದೃಷ್ಟ ಸಂಖ್ಯೆ 1, 14, 26 ಆಗಿದೆ. ಇದು ಮುಂಬರುವ ವರ್ಷದ ಸಿಂಹ ರಾಶಿಯವರಿಗೆ ಶುಭ ಸಂಖ್ಯೆಯಾಗಿದೆ. ಒಟ್ಟಿನಲ್ಲಿ ಸಿಂಹ ರಾಶಿಯವರಿಗೆ ಈ ವರ್ಷ ಹರ್ಷವನ್ನು ತರಲಿದೆ.

ಸಿಂಹ ರಾಶಿಯವರಿಗೆ ಮಾರ್ಚ್‌ವರೆಗೆ ಶನಿ ಕಾಟವಿಲ್ಲ. ಆನಂತರ ಗುರು ಬಲ ಇರುವುದರಿಂದ ಎಲ್ಲಾ ಸಂಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಇರುತ್ತದೆ. ಸಾಧಾರಾಣವಾದ ಶೈಕ್ಷಣಿಕ ಜೀವನ ನಡೆಸುವಿರಿ. ಪ್ರೀತಿ ಪ್ರೇಮ ವೈವಾಹಿಕ ಜೀವನದಲ್ಲಿ ಕಲಹಗಳು ಇದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಕಿರಿಕಿರಿ ಇದ್ದರೂ ಕೂಡ ನೀವು ಅದನ್ನು ಸರಳವಾಗಿ ತೆಗೆದುಕೊಳ್ಳುವಿರಿ. ಅದನ್ನು ಸರಿ ಹೊಂದಿಸುವ ಶಕ್ತಿ ನಿಮಗಿರುತ್ತದೆ.

ಪರಿಹಾರಗಳು

*ಮಘಾ ನಕ್ಷತ್ರದಲ್ಲಿ ಹುಟ್ಟಿದವರು- ಪ್ರತೀ ದಿವ ಬಿಳಿ ಎಕ್ಕದ ಗಿಡಕ್ಕೆ ಪೂಜೆಯನ್ನು ಮಾಡಿ. ಇದು ಸಿಗಲಿಲ್ಲ ಅಂದರೆ ಬಿಳಿ ಎಕ್ಕದ ಬೇರು ಅಥವಾ ಗಣಪತಿಯನ್ನು ತಂದು ಪೂಜೆಯನ್ನು ಮಾಡಿ.

*ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರು ಪ್ರತಿ ನಿತ್ಯವೂ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಬೇಕು.

*ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರು ಪ್ರತಿ ನಿತ್ಯವೂ ಸಹ ಪೂರ್ವಕ್ಕೆ ಅಭಿಮುಖವಾಗಿ 'ಓಂ ಶ್ರೀ ವಾರಾಹಿ ದೇವ್ಯಯಿ ನಮ:' ಈ ಮಂತ್ರವನ್ನು ಪಠಣ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+