Kedar Rajyoga 2024: 500 ವರ್ಷಗಳ ನಂತರ ಕೇದಾರ ರಾಜಯೋಗ: ಈ 3 ರಾಶಿಯವರ ಲೈಫ್ ಬಿಂದಾಸ್

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸಿದಾಗ ಕೆಲವೊಮ್ಮೆ ಅದೇ ರಾಶಿಯಲ್ಲಿ ಮತ್ತೊಂದು ಗ್ರಹ ಸಂಚಾರ ಮಾಡಬಹುದು. ಹೀಗೆ ಹಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಚಾರ ಮಾಡಿದಾಗ ಹಲವು ಯೋಗಗಳು ರೂಪಗೊಳ್ಳುತ್ತವೆ. ಅದರ ಪರಿಣಾಮ ಎಲ್ಲಾ ರಾಶಿಗಳಲ್ಲೂ ಕಂಡು ಬರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ಯೋಗಗಳು ಹಲವು ವರ್ಷಗಳ ನಂತರ ರೂಪಗೊಳ್ಳುತ್ತವೆ. ಹೀಗೆ ರೂಪುಗೊಂಡ ಯೋಗಗಳು ಇನ್ನಷ್ಟು ಪ್ರಭಾವ ಬೀರುತ್ತವೆ. ಇಂತಹ ಯೋಗಗಳ ಪರಿಣಾಮ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಸುಮಾರು 500 ವರ್ಷಗಳ ನಂತರ ಕೇದಾರ ರಾಜಯೋಗ ರೂಪುಗೊಂಡಿದೆ.

4 ರಾಶಿಗಳಲ್ಲಿ 7 ಗ್ರಹಗಳು ಇದ್ದಾಗ ಕೇದಾರ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರದವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಲವು ರಾಶಿಚಕ್ರದ ಜನರು ಹಠಾತ್ ಲಾಭ ಮತ್ತು ಅದೃಷ್ಟವನ್ನು ಪಡೆಯುತ್ತಾರೆ. ಈಗ ಯಾವ ರಾಶಿಯವರಿಗೆ ಕೇದಾರ ರಾಜಯೋಗದಿಂದ ಪ್ರಯೋಜನ ಸಿಗಲಿದೆ ಎಂದು ನೋಡೋಣ.

kedar rajyog after 500 years these zodiac signs get more benefits in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಕೇದಾರ ರಾಜಯೋಗ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ. ಏಕೆಂದರೆ ಮಂಗಳ, ಶುಕ್ರ ಮತ್ತು ಬುಧ ಗ್ರಹಗಳು ಮೇಷ ರಾಶಿಯವರ ಅದೃಷ್ಟದ ಮನೆಯಲ್ಲಿದ್ದಾರೆ. ಹಾಗೆಯೇ ಸೂರ್ಯ ಮತ್ತು ಶನಿ ದೇವರನ್ನು ಅತ್ಯುತ್ತಮ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ಈ ರಾಶಿಚಕ್ರದವರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.

ಕೆಲವರು ಹೊಸ ಆದಾಯವನ್ನು ಗಳಿಸಬಹುದು. ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಜೊತೆಗೆ ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದ ಆಸೆಗಳು ಈಡೇರುತ್ತವೆ. ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ.

kedar rajyog after 500 years these zodiac signs get more benefits in kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಕೇದಾರ ರಾಜಯೋಗ ಮಂಗಳಕರವಾಗಿದೆ. ಮಿಥುನ ರಾಶಿಯವರಿಗೆ ಕೇದಾರ ರಾಜಯೋಗ ಬಹಳ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಅವಿವಾಹಿತರು ಮದುವೆಯಾಗಬಹುದು. ಅಂದುಕೊಂಡಂತ ಬಾಳ ಸಂಗಾತಿಯನ್ನು ಪಡೆಯಬಹುದು.

ಮಿಥುನ ರಾಶಿಯ ಪ್ರೇಮಿಗಳ ಪ್ರೀತಿಯನ್ನು ಪೋಷಕರು ಸ್ವೀಕರಿಸುತ್ತಾರೆ. ಈ ಅವಧಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಮಿಥುನ ರಾಶಿಯ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬಹುದು. ಈ ಯೋಗದ ಅವಧಿಯಲ್ಲಿ ಬಹುಕಾಲದ ಆಸೆಗಳು ಈಡೇರುತ್ತವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ.

kedar rajyog after 500 years these zodiac signs get more benefits in kannada

ತುಲಾ ರಾಶಿ

ತುಲಾ ರಾಶಿಯವರಿಗೆ ಕೇದಾರ ರಾಜಯೋಗ ಶುಭ ಫಲಿತಾಂಶವನ್ನು ನೀಡಲಿದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಕ್ರೀಡಾ ಪಟುಗಳು ಮತ್ತು ಕಲಾ ಕ್ಷೇತ್ರದಲ್ಲಿರುವವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನಮಾನ ಸಿಗುವ ಸಾಧ್ಯತೆ ಇದೆ.

ಕೆಲವರು ಅನಿರೀಕ್ಷಿತ ಹಣವನ್ನು ಪಡೆಯಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಯೋಗದ ಅವಧಿಯಲ್ಲಿ ನಿಮಗೆ ಉತ್ತಮ ಉದ್ಯೋಗ ದೊರೆಯುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+