ಕಾರ್ತಿಕ ಮಾಸದ ಪಂಚಾಂಗ : ನವೆಂಬರ್ 22ರಿಂದ 28
ಕಾರ್ತಿಕ ಮಾಸದ ನವೆಂಬರ್ 22ರಿಂದ 28ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ನ.22. ರವಿವಾರ : ಉತ್ತರಾಭಾದ್ರಪದ ನಕ್ಷತ್ರ. ಏಕಾದಶಿ. ತುಳಸಿ ವಿವಾಹ. ವಿಶ್ವ ಅಂಗವಿಕಲರ ದಿನ. ಹೊಸ ಕೊಟ್ಟಡಕ್ಕೆ ಪಾಯ ಹಾಕಲು ಶುಭ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ನ.23. ಸೋಮವಾರ : ರೇವತಿ. ನೂತನ ವಾಹನ ಖರೀದಿಸಲು ಶುಭ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ನ.24. ಮಂಗಳವಾರ : ಅಶ್ವಿನಿ. ಎಲ್ಲ ಕೆಲಸ ಕಾರ್ಯಗಳಿಗೂ ಶುಭ. ಅಮೃತಸಿದ್ಧಿಯೋಗ. ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ನ.25. ಬುಧವಾರ : ಭರಣಿ, ಕೃತ್ತಿಕಾ. ಗೌರಿ ಹುಣ್ಣಿಮೆ. ಗುರುನಾನಕದೇವ ಜಯಂತಿ. ಕಾರ್ತಿಕ ಸ್ನಾನದ ಕೊನೆಯ ದಿನ. ದೂರ ಪ್ರಯಾಣದಿಂದ ಅಲ್ಪ ಲಾಭ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ನ.26. ಗುರುವಾರ : ರೋಹಿಣಿ. ಕೃಷ್ಣ ಪಕ್ಷ ಆರಂಭ. ಭಾರತ ಸಂವಿಧಾನ ದಿನ. ಬಂಗಾರದ ದಾಗೀನು ಕೊಳ್ಳಲು ಶುಭ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ನ.27. ಶುಕ್ರವಾರ : ಮೃಗಶಿರಾ. ಕಚೇರಿಯ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಲು ಶುಭ. ಹೊಸ ವಿದ್ಯಾರಂಭಕ್ಕೆ ಉತ್ತಮ. ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ನ.28. ಶನಿವಾರ : ಆರಿದ್ರಾ. ಕನಕದಾಸ ಜಯಂತಿ. ಸರಕಾರಿ ರಜೆ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ರವಿವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ರವಿವಾರ, ಸೋಮವಾರ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಬುಧವಾರದವರೆಗೆ ಮಾಡಿಕೊಳ್ಳುವುದು ಉತ್ತಮ.
ಈ ವಾರದ ಗ್ರಹಗತಿ : ಸಿಂಹ : ಗುರು. ಕನ್ಯಾ : ಶುಕ್ರ+ಮಂಗಳ+ರಾಹು. ವೃಶ್ಚಿಕ: ನೀಚಶನಿ+ರವಿ+ಬುಧ.. ಮೀನ : ಕೇತು+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ).












Click it and Unblock the Notifications