ಕಾರ್ತಿಕ-ಮಾರ್ಗಶಿರ ಮಾಸದ ಪಂಚಾಂಗ : ಡಿಸೆಂಬರ್ 6ರಿಂದ 12

ಕಾರ್ತಿಕ-ಮಾರ್ಗಶಿರ ಮಾಸದ ಡಿಸೆಂಬರ್ 06ರಿಂದ 12ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Kartik-Margashira masa - Dec 06 to 12 : Rahu Kala, Gulika Kala, Yamaganda Kala

ಡಿ.6. ರವಿವಾರ : ಹಸ್ತಾ ನಕ್ಷತ್ರ. ಏಕಾದಶಿ. ಎಲ್ಲ ಕೆಲಸ ಕಾರ್ಯಗಳಿಗೂ ಉತ್ತಮ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಡಿ.7. ಸೋಮವಾರ : ಚಿತ್ತಾ. ಸೇನಾ ಪಡೆ ಧ್ವಜ ದಿನಾಚರಣೆ. ಹೊಸ ಉದ್ಯೋಗ ಅಥವಾ ಕೆಲಸ ಆರಂಭಿಸಲು ಉತ್ತಮ. ವಧು ನಿಶ್ಚಯಕ್ಕೆ ಶುಭ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಡಿ.8. ಮಂಗಳವಾರ : ಸ್ವಾತಿ. ಧನ್ವಂತರಿ ಜಯಂತಿ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಡಿ.9. ಬುಧವಾರ : ವಿಶಾಖಾ. ದೂರ ಪ್ರಯಾಣದಿಂದ ಯಶಸ್ಸು.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಡಿ.10. ಗುರುವಾರ : ಅನುರಾಧಾ. ಮಾನವ ಹಕ್ಕು ದಿನಾಚರಣೆ. ಹೊಸ ಬಟ್ಟೆ, ಬಂಗಾರದ ದಾಗೀನು ಕೊಳ್ಳಲು ಉತ್ತಮ. ದೂರ ಪ್ರಯಾಣದಿಂದ ಸಂತಸ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಡಿ.11. ಶುಕ್ರವಾರ : ಜ್ಯೇಷ್ಠಾ. ಛಟ್ಟಿ ಅಮವಾಸ್ಯೆ. (ಗುರುವಾರ ಡಿ.10 ರ ಮಧ್ಯಾಹ್ನ 3-26ಕ್ಕೆ ಆರಂಭ, ಡಿ.11ರಂದು ಮಧ್ಯಾಹ್ನ 3-59ಕ್ಕೆ ಮುಕ್ತಾಯ). ಸತ್ಯಸಾಯಿ ಬಾಬಾ ಜನ್ಮದಿನ. ದೂರ ಪ್ರಯಾಣದಿಂದ ಯಶಸ್ಸು.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಡಿ.12. ಶನಿವಾರ : ಮೂಲಾ. ಮಾರ್ಗಶಿರ ಮಾಸ ಮತ್ತು ಶುಕ್ಲ ಪಕ್ಷ ಆರಂಭ. ಎರಡನೇ ಶನಿವಾರ. ಸರಕಾರಿ ರಜೆ. ಕೃಷಿ ಚಟುವಟಿಕೆಗಳಿಗೆ ಸೂಕ್ತ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ರವಿವಾರ, ಸೋಮವಾರ, ಮಂಗಳವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.

ಈ ವಾರದ ಗ್ರಹಗತಿ : ಸಿಂಹ : ಗುರು. ಕನ್ಯಾ : ರಾಹು+ಮಂಗಳ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ).. ತುಲಾ :ಶುಕ್ರ. ವೃಶ್ಚಿಕ: ನೀಚಶನಿ+ರವಿ. ಧನುಸ್ಸು : ಬುಧ. ಮೀನ : ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+