ಅಧಿಕಾಷಾಢ ಮಾಸದ ವಾರದ ಪಂಚಾಂಗ : ಜು.5ರಿಂದ 11

ಜ್ಯೇಷ್ಠ-ಅಧಿಕಾಷಾಢ ಮಾಸದ ಜು.5ರಿಂದ ಜು.11ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Jyeshtha-Adhika Ashada masa - July 5 to July 11 : Rahu Kala, Gulika Kala, Yamaganda Kala

ಜು.5. ರವಿವಾರ : ಧನಿಷ್ಠಾ ನಕ್ಷತ್ರ. ಸಂಕಷ್ಟಿ. ದೂರ ಪ್ರಯಾಣದಿಂದ ಕುಟುಂಬ ವರ್ಗಕ್ಕೆ ಶುಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಜು.6. ಸೋಮವಾರ : ಶತತಾರಾ. ಪುನರ್ವಸು ಮಳೆ ಆರಂಭ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಜು.7. ಮಂಗಳವಾರ : ಪೂರ್ವಾಭಾದ್ರಪದ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಜುಲೈ.8. ಬುಧವಾರ : ಉತ್ತರಾಭಾದ್ರಪದ. ಮನೆ ಕೈ ತೋಟಗಾರಿಕೆ ಮತ್ತು ಜಮೀನಿನ ಕೃಷಿ ಕೆಲಸಕ್ಕೆ ತುಂಬಾ ಶುಭ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಜು.9. ಗುರುವಾರ : ರೇವತಿ. ಜಮೀನಿನಲ್ಲಿ ಸಸಿ ನೆಡಲು ಉತ್ತಮ ದಿನ. ದೂರ ಪ್ರಯಾಣದಿಂದ ಖುಷಿ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಜು.10. ಶುಕ್ರವಾರ : ಅಶ್ವಿನಿ. ಮನೆಯಲ್ಲಿ ಅಥವಾ ತೋಟದಲ್ಲಿ ತೆಂಗಿನಕಾಯಿ ಗಿಡ ನೆಡಲು ಸೂಕ್ತ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಜು.11. ಶನಿವಾರ : ಭರಣಿ. ಎರಡನೇ ಶನಿವಾರ. ಜಾಗತಿಕ ಜನಸಂಖ್ಯೆ ದಿನ. ದೂರ ಪ್ರಯಾಣದಿಂದ ನಷ್ಟ

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಲೇಸು.

ಈ ವಾರದ ಗ್ರಹಗತಿ : ಮಿಥುನ: ಮಂಗಳ+ಸೂರ್ಯ+ಬುಧ. ಕರ್ಕ: ಗುರು. ಸಿಂಹ: ಶುಕ್ರ. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಕುಂಭ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+