Gajakesari Rajyoga 2024: ಗಜಕೇಸರಿ ರಾಜಯೋಗದಿಂದ ಈ ರಾಶಿಯವರ ಕೌಟುಂಬಿಕ ಜೀವನ ಸುಖಮಯ

ಚಂದ್ರ ವೇಗವಾಗಿ ರಾಶಿಯವನ್ನು ಬದಲಾಯಿಸುವ ಗ್ರಹವಾಗಿದೆ. ಹೀಗೆ ಚಂದ್ರ ಗ್ರಹವು ವೇಗವಾಗಿ ರಾಶಿಯನ್ನು ಬದಲಾಯಿಸುವುದರಿಂದ ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ. ಈ ಸಂಚಾರದ ವೇಳೆ ಚಂದ್ರ ಗ್ರಹವು ಇತರ ಗ್ರಹಗಳೊಂದಿಗೆ ಸೇರಿ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಸುತ್ತದೆ.

ಈ ರೀತಿಯಲ್ಲಿ ರೂಪುಗೊಂಡ ಯೋಗಗಳು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಆ ರೀತಿಯಲ್ಲಿ ಚಂದ್ರನು ಗುರು ಗ್ರಹದೊಂದಿಗೆ ಸಂಚರಿಸಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗವು ಶುಭ ಯೋಗವಾಗಿರುವುದರಿಂದ ಕೆಲವರು ಈ ಯೋಗದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅಂತಹ ಗಜಕೇಸರಿ ರಾಜಯೋಗ ಡಿಸೆಂಬರ್ 21ರಂದು ಮೇಷ ರಾಶಿಯಲ್ಲಿ ಗುರು ಚಂದ್ರನ ಸಂಯೋಗದಿಂದ ಉಂಟಾಗುತ್ತದೆ. ಇನ್ನೆರಡು ದಿನಗಳ ಕಾಲ ಈ ರಾಜಯೋಗ ಮುಂದುವರಿಯಲಿದೆ.

ಈ ಮಂಗಳಕರವಾದ ರಾಜಯೋಗ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಈಗ ಮೇಷ ರಾಶಿಯಲ್ಲಿ ರೂಪುಗೊಂಡ ಗಜಗೇಸರಿ ರಾಜಯೋಗದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ರಾಶಿಯವರು ಯಾರೆಂದು ನೋಡೋಣ.

Jupiter moon conjunction make gajkesari rajyog these zodiac signs will get money in kannada

ಮೇಷ ರಾಶಿ

ಮೇಷ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗ ರಚನೆಯಾಗಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಯೋಜಿತ ಕಾರ್ಯಗಳು ಪೂರ್ಣಗೊಳ್ಳಲಿವೆ.

ಮೇಷ ರಾಶಿಯವರ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರಿಗಳು ಹೊಸ ಒಪ್ಪಂದವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಕೆಲಸಗಾರರ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಕೆಲವರಿಗೆ ಬಡ್ತಿ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ.

Jupiter moon conjunction make gajkesari rajyog these zodiac signs will get money in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯ 10ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರಚನೆಯಾಗುತ್ತದೆ. ಹೀಗಾಗಿ ಈ ರಾಶಿಯವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ, ಈ ಅವಧಿಯಲ್ಲಿ ನೀವು ಉತ್ತಮ ಉದ್ಯೋಗಾವಕಾಶಗಳನ್ನು ಕಾಣಬಹುದು. ಈ ಯೋಗ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲ ನೀಡುತ್ತವೆ. ನೀವು ವೃತ್ತಿಪರವಾಗಿ ಉತ್ತಮ ಲಾಭ ಮತ್ತು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ.

Jupiter moon conjunction make gajkesari rajyog these zodiac signs will get money in kannada

ಕುಂಭ ರಾಶಿ

ಕುಂಭ ರಾಶಿಯ 11ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರಚನೆಯಾಗುತ್ತದೆ. ಇದು ನಿಮ್ಮ ಒಡಹುಟ್ಟಿದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶವನ್ನು ನೀಡುತ್ತದೆ. ಈ ಸಮಯದಲ್ಲಿ ಅತಿಯಾದ ಖರ್ಚು ಮಾಡುವುದನ್ನು ತಪ್ಪಿಸುವುದು ಸೂಕ್ತ. ಉದ್ಯೋಗಿಗಳು ಉತ್ತಮ ಯಶಸ್ಸು ಮತ್ತು ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ. ಅವಿವಾಹಿತರಿಗೆ ಒಳ್ಳೆಯ ವರ ಸಿಗುತ್ತಾರೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ತಂದೆ ಮತ್ತು ಗುರುಗಳ ಸಹಾಯದಿಂದ ನೀವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+