ಯುಗಾದಿ 2026: ಭಾರತೀಯ ಪಂಚಾಂಗ ಪದ್ಧತಿಯ ಬಗ್ಗೆ ನೀವು ತಿಳಿಯಬೇಕಾದ 50 ಅಪರೂಪದ ಮಾಹಿತಿ ಇಲ್ಲಿದೆ -ಸಂವತ್ಸರ, ಮಾಸ, ತಿಥಿ
ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಂದ ಮೊದಲುಗೊಂಡು ರೈತರ ಕಾರ್ಯ ಚಟುವಟಿಕೆಗಳ ತನಕ ಯಾವಾಗ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ, ಮಳೆ ನಕ್ಷತ್ರಗಳನ್ನು ಅರಿಯಲು ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪಂಚಾಂಗವು ಮುಖ್ಯ ಪಾತ್ರ ವಹಿಸುತ್ತಾ ಬಂದಿದೆ. ಇವತ್ತಿಗೂ ಯುಗಾದಿ ದಿನದಂದು ವರ್ಷಫಲ ಏನಿದೆ ಎಂದು ನೋಡಲಾಗುತ್ತದೆ. ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ (ಬರಹ:ಶ್ರೀನಿವಾಸ ಮಠ).
ಆಯಾ ಸಂವತ್ಸರದಲ್ಲಿ ಯಾರು ಆಡಳಿತ ನಡೆಸುತ್ತಾರೋ (ರಾಜ, ಮಂತ್ರಿ ಸೇರಿದಂತೆ ಮಂತ್ರಿಮಂಡಲದ ರೀತಿಯಲ್ಲಿಯೇ ಇದೂ ಇರುತ್ತದೆ) ಅದರ ಪ್ರಕಾರ ಆ ಸಂವತ್ಸರದಲ್ಲಿ ಯಾವ ಕ್ಷೇತ್ರ ಹೇಗಿರುತ್ತದೆ ಎಂಬುದರ ಮುನ್ನೋಟ ಇದಾಗಿರುತ್ತದೆ. ಅಷ್ಟೇ ಅಲ್ಲ, ರಾಶಿ ಆಧಾರದಲ್ಲಿ ಯಾವ ರಾಶಿಯಲ್ಲಿ ಹುಟ್ಟಿದವರಿಗೆ ಗ್ರಹಗಳ ಗೋಚಾರ ರೀತಿಯಲ್ಲಿ ಏನು ಫಲ, ಯಾವ ರಾಶಿಯವರಿಗೆ ಏನು ಆದಾಯ, ಹೇಗಿದೆ ಆರೋಗ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಪಂಚಾಂಗದಲ್ಲಿ ಮಾಹಿತಿ ಇರುತ್ತದೆ. ಏನಿದು ಪಂಚಾಂಗ ಎಂಬ ಪ್ರಶ್ನೆಗೆ ಸಮಗ್ರವಾಗಿ- ಪ್ರಶ್ನೋತ್ತರದ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗಿದೆ.

ಪಂಚಾಂಗದ ಮೂಲಭೂತ ಅಂಶಗಳು
1. 'ಪಂಚಾಂಗ' ಎಂದರೇನು?
ಐದು ಅಂಗಗಳನ್ನು (ತಿಥಿ, ವಾರ, ನಕ್ಷತ್ರ, ಯೋಗ, ಕರಣ) ಒಳಗೊಂಡಿರುವಂಥದ್ದೇ ಪಂಚಾಂಗ.
2. ತಿಥಿ ಎಂದರೇನು?
ಚಂದ್ರ ಮತ್ತು ಸೂರ್ಯನ ಮಧ್ಯದ ಅಂತರದ ಆಧಾರದ ಮೇಲೆ ನಿರ್ಧಾರವಾಗುವ ಕಾಲಮಾನ.
3. ಒಂದು ಮಾಸದಲ್ಲಿ ಎಷ್ಟು ತಿಥಿಗಳಿವೆ?
ಒಟ್ಟು 30 ತಿಥಿಗಳು (ಶುಕ್ಲ ಪಕ್ಷದ 15 ಮತ್ತು ಕೃಷ್ಣ ಪಕ್ಷದ 15).
4. ವಾರಗಳು ಎಷ್ಟು?
ಏಳು (ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ).
5. ನಕ್ಷತ್ರಗಳು ಒಟ್ಟು ಎಷ್ಟು?
ಅಶ್ವಿನಿಯಿಂದ ರೇವತಿವರೆಗೆ ಒಟ್ಟು 27 ನಕ್ಷತ್ರಗಳು.
6. ಯೋಗಗಳು ಎಷ್ಟು?
ಒಟ್ಟು 27 ಯೋಗಗಳಿವೆ.
7. ಕರಣಗಳು ಎಷ್ಟು?
ಒಟ್ಟು 11 ಕರಣಗಳಿವೆ.
8. ಪಕ್ಷಗಳು ಯಾವುವು?
ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ.
9. ಶುಕ್ಲ ಪಕ್ಷ ಎಂದರೇನು?
ಅಮಾವಾಸ್ಯೆಯ ನಂತರದ ದಿನದಿಂದ ಪೌರ್ಣಮಿವರೆಗಿನ ಚಂದ್ರನು ಬೆಳೆಯುವ (ವೃದ್ದಿ ಆಗುವ) ಕಾಲ.
10. ಕೃಷ್ಣ ಪಕ್ಷ ಎಂದರೇನು?
ಪೌರ್ಣಮಿಯ ನಂತರದ ದಿನದಿಂದ ಅಮಾವಾಸ್ಯೆಯವರೆಗಿನ ಚಂದ್ರನು ಕ್ಷೀಣಿಸುವ ಕಾಲ.
ಇದನ್ನೂ ಓದಿ: ಯುಗಾದಿ ರಾಶಿ ಭವಿಷ್ಯ: ಈ ವರ್ಷ ಮೇಷ ರಾಶಿಯವರಿಗೆ ರಾಜಮರ್ಯಾದೆ, ಪದೋನ್ನತಿ ಹಲವು ಶುಭಫಲ
ಮಾಸಗಳು ಮತ್ತು ನಕ್ಷತ್ರಗಳ ಸಂಬಂಧ
ಮಾಸಗಳ ಹೆಸರು ಆಯಾ ತಿಂಗಳ ಪೌರ್ಣಮಿಯ ದಿನ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಆ ನಕ್ಷತ್ರದ ಹೆಸರಿನಿಂದ ಬಂದಿದೆ.
| ಕ್ರಮ ಸಂಖ್ಯೆ | ಮಾಸದ ಹೆಸರು | ಸಂಬಂಧಿತ ನಕ್ಷತ್ರ |
|---|---|---|
| 11 | ಚೈತ್ರ | ಚಿತ್ತಾ ಅಥವಾ ಚಿತ್ರಾ |
| 12 | ವೈಶಾಖ | ವಿಶಾಖ |
| 13 | ಜ್ಯೇಷ್ಠ | ಜ್ಯೇಷ್ಠಾ |
| 14 | ಆಷಾಢ | ಪೂರ್ವಾಷಾಢ / ಉತ್ತರಾಷಾಢ |
| 15 | ಶ್ರಾವಣ | ಶ್ರವಣ |
| 16 | ಭಾದ್ರಪದ | ಪೂರ್ವಭಾದ್ರ / ಉತ್ತರಭಾದ್ರ |
| 17 | ಆಶ್ವಯುಜ | ಅಶ್ವಿನಿ |
| 18 | ಕಾರ್ತಿಕ | ಕೃತ್ತಿಕಾ |
| 19 | ಮಾರ್ಗಶಿರ | ಮೃಗಶಿರ |
| 20 | ಪುಷ್ಯ | ಪುಷ್ಯ |
| 21 | ಮಾಘ | ಮಖಾ |
| 22 | ಫಾಲ್ಗುಣ | ಪೂರ್ವಫಲ್ಗುಣಿ / ಉತ್ತರಫಲ್ಗುಣಿ |
ಋತುಗಳು ಮತ್ತು ಕಾಲಮಾನ
1. ಒಂದು ವರ್ಷದಲ್ಲಿ ಎಷ್ಟು ಋತುಗಳಿವೆ?
ಒಟ್ಟು 6 ಋತುಗಳು.
2. ವಸಂತ ಋತು ಯಾವಾಗ ಬರುತ್ತದೆ?
ಚೈತ್ರ ಮತ್ತು ವೈಶಾಖ ಮಾಸಗಳಲ್ಲಿ.
3. ಗ್ರೀಷ್ಮ ಋತು ಯಾವ ಮಾಸಗಳಲ್ಲಿ?
ಜ್ಯೇಷ್ಠ ಮತ್ತು ಆಷಾಢ.
4. ವರ್ಷ ಋತು (ಮಳೆಗಾಲ) ಯಾವಾಗ?
ಶ್ರಾವಣ ಮತ್ತು ಭಾದ್ರಪದ.
5. ಶರತ್ ಋತು ಯಾವ ಮಾಸಗಳಲ್ಲಿ ಬರುತ್ತದೆ?
ಆಶ್ವಯುಜ ಮತ್ತು ಕಾರ್ತಿಕ.
6. ಹೇಮಂತ ಋತು ಯಾವಾಗ?
ಮಾರ್ಗಶಿರ ಮತ್ತು ಪುಷ್ಯ.
7. ಶಿಶಿರ ಋತು ಯಾವಾಗ ಬರುತ್ತದೆ?
ಮಾಘ ಮತ್ತು ಫಾಲ್ಗುಣ.
8. ಅಯನಗಳು ಯಾವುವು?
ಉತ್ತರಾಯಣ ಮತ್ತು ದಕ್ಷಿಣಾಯಣ.
9. ಉತ್ತರಾಯಣ ಎಂದರೇನು?
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿ ಉತ್ತರ ದಿಕ್ಕಿನತ್ತ ಸಂಚರಿಸುವ ಕಾಲ.
10. ದಕ್ಷಿಣಾಯಣ ಎಂದರೇನು?
ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ ದಕ್ಷಿಣದತ್ತ ಸಂಚರಿಸುವ ಕಾಲ.
ಇದನ್ನೂ ಓದಿ: ಯುಗಾದಿ ರಾಶಿ ಭವಿಷ್ಯ: ವೃಷಭ ರಾಶಿಯವರಿಗೆ ಮಿಶ್ರಫಲ, ಆದಾಯ ಸ್ಥಿರ, ಖರ್ಚು ಹೆಚ್ಚಾಗುವ ಸೂಚನೆ
ಇತರ ಮುಖ್ಯ ಮಾಹಿತಿಗಳು
1. ಅಧಿಕ ಮಾಸ ಎಂದರೇನು?
ಸೌರ ವರ್ಷ ಮತ್ತು ಚಾಂದ್ರ ವರ್ಷದ ಮಧ್ಯದ ವ್ಯತ್ಯಾಸವನ್ನು ಸರಿಪಡಿಸಲು ಸುಮಾರು ಮೂರು ವರ್ಷಕ್ಕೊಮ್ಮೆ ಬರುವ ಹೆಚ್ಚುವರಿ ಮಾಸ.
2. ಶೂನ್ಯ ಮಾಸ ಎಂದು ಯಾವುದನ್ನು ಕರೆಯುತ್ತಾರೆ?
ಸಾಮಾನ್ಯವಾಗಿ ಆಷಾಢ ಮತ್ತು ಪುಷ್ಯ ಮಾಸಗಳನ್ನು ಶುಭ ಕಾರ್ಯಗಳಿಗೆ ವರ್ಜ್ಯವೆಂದು ಪರಿಗಣಿಸಿ ಶೂನ್ಯ ಮಾಸ ಎನ್ನಲಾಗುತ್ತದೆ.
3. ಸಂವತ್ಸರಗಳು ಎಷ್ಟು?
ಒಟ್ಟು 60 ಸಂವತ್ಸರಗಳು (ಪ್ರಭವದಿಂದ ಅಕ್ಷಯವರೆಗೆ).
4. ಈಗ ನಡೆಯುತ್ತಿರುವ ಸಂವತ್ಸರ ಯಾವುದು?
ವಿಶ್ವಾವಸು ನಾಮ ಸಂವತ್ಸರ (2025-26). ಮುಂದೆ ಬರುವುದು ಪರಾಭವ ಸಂವತ್ಸರ (2026-27)
5. ಯುಗಾದಿ ಹಬ್ಬದ ಪ್ರಾಮುಖ್ಯ ಏನು?
ಇದು ಚಾಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ (ಚೈತ್ರ ಶುಕ್ಲ ಪ್ರತಿಪದೆ).
6 ಸಂಕ್ರಾಂತಿ ಹಬ್ಬದ ವಿಶೇಷವೇನು?
ಪ್ರತಿ ಮಾಸವು ರವಿ ಗ್ರಹ ಯಾವ ರಾಶಿಯಲ್ಲಿ ಇರುತ್ತದೋ ಆ ರಾಶಿಯ ಹೆಸರಿನ ಸಂಕ್ರಾಂತಿ ಬರುತ್ತದೆ. ಆದರೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು (ಸೌರಮಾನದ ಪ್ರಮುಖ ದಿನ) ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಒಟ್ಟು ಸಂಕ್ರಾಂತಿಗಳು ಹನ್ನೆರಡು.
7 ಸೂರ್ಯಗ್ರಹಣ ಎಂದು ಸಂಭವಿಸುತ್ತದೆ?
ಯಾವಾಗಲೂ ಅಮಾವಾಸ್ಯೆಯ ದಿನದಂದೇ ಸಂಭವಿಸುತ್ತದೆ.
8 ಚಂದ್ರಗ್ರಹಣ ಎಂದು ಸಂಭವಿಸುತ್ತದೆ?
ಯಾವಾಗಲೂ ಪೌರ್ಣಮಿ (ಹುಣ್ಣಿಮೆ) ದಿನದಂದೇ ಸಂಭವಿಸುತ್ತದೆ.
9 ಪಂಚಾಂಗ ನೋಡುವ ಮುಖ್ಯ ಉದ್ದೇಶವೇನು?
ಕಾಲದ ಶುಭ-ಅಶುಭ ಅರಿತು, ಹಬ್ಬ ಹರಿದಿನಗಳನ್ನು ಮತ್ತು ಕೃಷಿ ಚಟುವಟಿಕೆಗಳನ್ನು ಯೋಜಿಸಲು ನೋಡಲಾಗುತ್ತದೆ.
| ಕ್ರಮ ಸಂಖ್ಯೆ | ನಕ್ಷತ್ರದ ಹೆಸರು | ಕ್ರಮ ಸಂಖ್ಯೆ | ನಕ್ಷತ್ರದ ಹೆಸರು |
|---|---|---|---|
| 1 | ಅಶ್ವಿನಿ | 15 | ಸ್ವಾತಿ |
| 2 | ಭರಣಿ | 16 | ವಿಶಾಖ |
| 3 | ಕೃತ್ತಿಕಾ | 17 | ಅನುರಾಧ |
| 4 | ರೋಹಿಣಿ | 18 | ಜ್ಯೇಷ್ಠಾ |
| 5 | ಮೃಗಶಿರ | 19 | ಮೂಲಾ |
| 6 | ಆರಿದ್ರಾ | 20 | ಪೂರ್ವಾಷಾಢ |
| 7 | ಪುನರ್ವಸು | 21 | ಉತ್ತರಾಷಾಢ |
| 8 | ಪುಷ್ಯ | 22 | ಶ್ರವಣ |
| 9 | ಆಶ್ಲೇಷ | 23 | ಧನಿಷ್ಠ |
| 10 | ಮಖಾ | 24 | ಶತಭಿಷ |
| 11 | ಪೂರ್ವಫಲ್ಗುಣಿ (ಪುಬ್ಬಾ) | 25 | ಪೂರ್ವಭಾದ್ರ |
| 12 | ಉತ್ತರಫಲ್ಗುಣಿ (ಉತ್ತರಾ) | 26 | ಉತ್ತರಭಾದ್ರ |
| 13 | ಹಸ್ತ | 27 | ರೇವತಿ |
| 14 | ಚಿತ್ತಾ |
ದಕ್ಷಿಣ ಮತ್ತು ಉತ್ತರ ಭಾರತದ ಪಂಚಾಂಗ ವ್ಯತ್ಯಾಸ
1. ಅಮಾಂತ ಪದ್ಧತಿ ಎಂದರೇನು?
ಅಮಾವಾಸ್ಯೆಯ ಅಂತ್ಯಕ್ಕೆ ಮಾಸ ಮುಗಿದು, ಮರುದಿನದಿಂದ ಹೊಸ ತಿಂಗಳು ಆರಂಭವಾಗುವುದು (ದಕ್ಷಿಣ ಭಾರತ).
2. ಪೂರ್ಣಿಮಾಂತ ಪದ್ಧತಿ ಎಂದರೇನು?
ಪೌರ್ಣಮಿಯ ಅಂತ್ಯಕ್ಕೆ ತಿಂಗಳು ಮುಗಿದು, ಮರುದಿನದಿಂದ ಹೊಸ ತಿಂಗಳು ಆರಂಭವಾಗುವುದು (ಉತ್ತರ ಭಾರತ).
3. ಕರ್ನಾಟಕದಲ್ಲಿ ಅನುಸರಿಸುವ ಪದ್ಧತಿ ಯಾವುದು?
ಅಮಾಂತ ಪದ್ಧತಿ (ಶುಕ್ಲ ಪಕ್ಷದಿಂದ ಮಾಸ ಆರಂಭ).
4. ಉತ್ತರ ಭಾರತದವರಿಗೆ ಮಾಸ ಯಾವುದರಿಂದ ಶುರುವಾಗುತ್ತದೆ?
ಕೃಷ್ಣ ಪಕ್ಷದಿಂದ ಉತ್ತರ ಭಾರತದವರಿಗೆ ಮಾಸ ಆರಂಭವಾಗುತ್ತದೆ.
5. ದಕ್ಷಿಣದ ಶುಕ್ಲ ಪಕ್ಷ ಮತ್ತು ಉತ್ತರದ ಶುಕ್ಲ ಪಕ್ಷ ಒಂದೇ ಇರುತ್ತದೆಯೇ?
ಹೌದು, ಇಬ್ಬರಿಗೂ ಶುಕ್ಲ ಪಕ್ಷವು ಒಂದೇ ಸಮಯದಲ್ಲಿ ಬರುತ್ತದೆ ಮತ್ತು ಹೆಸರು ಕೂಡ ಒಂದೇ ಆಗಿರುತ್ತದೆ.
6. ವ್ಯತ್ಯಾಸ ಎಲ್ಲಿ ಬರುತ್ತದೆ?
ಕೃಷ್ಣ ಪಕ್ಷದಲ್ಲಿ ವ್ಯತ್ಯಾಸ ಬರುತ್ತದೆ. ದಕ್ಷಿಣದವರಿಗೆ ಕೃಷ್ಣ ಪಕ್ಷವು ತಿಂಗಳ ದ್ವಿತೀಯಾರ್ಧವಾದರೆ, ಉತ್ತರದವರಿಗೆ ಅದು ಮುಂದಿನ ತಿಂಗಳ ಪ್ರಥಮಾರ್ಧವಾಗಿರುತ್ತದೆ. ಉದಾಹರಣೆಗೆ: ದಕ್ಷಿಣ ಭಾರತದ ಶ್ರಾವಣ ಕೃಷ್ಣ ಪಕ್ಷವು, ಉತ್ತರ ಭಾರತದವರಿಗೆ ಭಾದ್ರಪದ ಕೃಷ್ಣ ಪಕ್ಷವಾಗಿರುತ್ತದೆ.
7. ಸೌರಮಾನ ಪಂಚಾಂಗ ಎಂದರೇನು?
ಸೂರ್ಯನ ರಾಶಿ ಸಂಕ್ರಮಣವನ್ನು ಆಧರಿಸಿದ ಪಂಚಾಂಗ (ತಮಿಳುನಾಡು, ಕೇರಳ, ತುಳುನಾಡು ಭಾಗದಲ್ಲಿ ಪ್ರಚಲಿತ).
8. ಚಾಂದ್ರಮಾನ ಪಂಚಾಂಗ ಎಂದರೇನು?
ಚಂದ್ರನ ಚಲನೆಯನ್ನು ಆಧರಿಸಿದ ಪಂಚಾಂಗ (ಕರ್ನಾಟಕ, ಆಂಧ್ರ, ಮಹಾರಾಷ್ಟ್ರ).
| ಕ್ರಮ ಸಂಖ್ಯೆ | ರಾಶಿಯ ಹೆಸರು | ಚಿಹ್ನೆ |
|---|---|---|
| 1 | ಮೇಷ | ಕುರಿ |
| 2 | ವೃಷಭ | ಎತ್ತು |
| 3 | ಮಿಥುನ | ದಂಪತಿ |
| 4 | ಕರ್ಕಾಟಕ | ಏಡಿ |
| 5 | ಸಿಂಹ | ಸಿಂಹ |
| 6 | ಕನ್ಯಾ | ಕನ್ಯೆ |
| 7 | ತುಲಾ | ತಕ್ಕಡಿ |
| 8 | ವೃಶ್ಚಿಕ | ಚೇಳು |
| 9 | ಧನುಸ್ಸು | ಬಿಲ್ಲುಗಾರ |
| 10 | ಮಕರ | ಮೊಸಳೆ |
| 11 | ಕುಂಭ | ಕೊಡ / ಕುಂಭ |
| 12 | ಮೀನ | ಮೀನು |
ಬರಹ: ಶ್ರೀನಿವಾಸ ಮಠ
ಲೇಖಕರು ಶ್ರೀಗುರುಭ್ಯೋ.ಕಾಮ್ ಜಾಲತಾಣದ ಸಂಪಾದಕರು. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಸಂಪರ್ಕ ಸಂಖ್ಯೆ: 96202 16525.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications