Get Updates
Get notified of breaking news, exclusive insights, and must-see stories!

ವೃಷಭ ರಾಶಿ ಯುಗಾದಿ ವರ್ಷ ಭವಿಷ್ಯ; ಆರೋಗ್ಯ ಜೋಪಾನ, ಖರ್ಚಿನ ಮೇಲೆ ಇರಲಿ ಹಿಡಿತ

ವೃಷಭ ರಾಶಿಯವರದ್ದು ಸ್ಥಿರ ಮನಸ್ಥಿತಿ. ಒಂದು ಸಲ ಒಂದು ತೀರ್ಮಾನ ತೆಗೆದುಕೊಂಡರೆ ನಂತರ ಅದನ್ನು ಬದಲಿಸುವುದು ಕಷ್ಟ. ಕೃತಿಕಾ (2, 3, 4ನೇ ಪಾದ), ರೋಹಿಣಿ (4 ಪಾದ) ಮತ್ತು ಮೃಗಶಿರ (1 ಮತ್ತು 2ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದರು ವೃಷಭ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 6, ಇವರಿಗೆ ಬಿಳಿ ಶುಭ ಬಣ್ಣ, ದಕ್ಷಿಣ ಶುಭ ದಿಕ್ಕು. ಲಕ್ಷ್ಮೀದೇವಿಯ ಆರಾಧನೆ ವೃಷಭ ರಾಶಿಯವರಿಗೆ ಶ್ರೇಯಸ್ಕರ.

ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ: ವೃಷಭ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.

ವೃಷಭ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)

ಆದಾಯ: 12
ವ್ಯಯ: 13
ರಾಜಮರ್ಯಾದೆ: 5
ಅವಮಾನ: 4

ಪರಾಭವ ನಾಮ ಸಂವತ್ಸರವು ವೃಷಭ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡುವ ವರ್ಷವಾಗಿರುತ್ತದೆ. ಆದಾಯ ಸ್ಥಿರವಾಗಿದ್ದರೂ ಖರ್ಚುಗಳು ಹೆಚ್ಚಾಗುವ ಸೂಚನೆ ಕಂಡುಬರುತ್ತದೆ. ಮನೆ, ವಾಹನ, ಕುಟುಂಬದ ಅಗತ್ಯಗಳು ಅಥವಾ ವೈದ್ಯಕೀಯ ಕಾರಣಗಳಿಂದ ಅನಿವಾರ್ಯ ವೆಚ್ಚಗಳು ಸಂಭವಿಸಬಹುದು. ಆದ್ದರಿಂದ ಹಣಕಾಸು ಯೋಜನೆಗೆ ಹೆಚ್ಚು ಗಮನ ಹರಿಸುವುದು ಒಳಿತು.

Ugadi 2026

ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಬಹುದು. ವರ್ಗಾವಣೆ ಅಥವಾ ಹುದ್ದೆಯ ಬದಲಾವಣೆ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿದ್ದರೆ ಪ್ರಗತಿ ಸಾಧ್ಯ. ವ್ಯಾಪಾರಸ್ಥರಿಗೆ ಧೈರ್ಯ ಮತ್ತು ಸಮಚಿತ್ತತೆ ಇದ್ದರೆ ನಿಧಾನವಾದರೂ ಸ್ಥಿರ ಲಾಭ ದೊರೆಯುತ್ತದೆ. ಹಳೆಯ ಸ್ನೇಹಿತರು ಅಥವಾ ಪರಿಚಿತರ ಸಹಾಯದಿಂದ ಒಂದು ಪ್ರಮುಖ ಕಾರ್ಯ ಯಶಸ್ವಿಯಾಗಬಹುದು.

ಆಸ್ತಿ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ದಾಖಲೆ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಆರೋಗ್ಯದ ವಿಷಯದಲ್ಲಿ ಜೀರ್ಣಕ್ರಿಯೆ, ಕಂಠ ಅಥವಾ ಕಫ ಸಂಬಂಧಿತ ತೊಂದರೆಗಳು ಕಾಣಬಹುದು; ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರ ಮುಖ್ಯ. ಕುಟುಂಬದಲ್ಲಿ ಸಹಕಾರ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಅಗತ್ಯ. ಧಾರ್ಮಿಕ ಯಾತ್ರೆ, ಪುಣ್ಯ ಕಾರ್ಯಗಳು ಅಥವಾ ದೇವಾಲಯ ದರ್ಶನದಿಂದ ಮನಶಾಂತಿ ಲಭಿಸುತ್ತದೆ. ಶಾಂತಿ, ಸಹನೆ ಮತ್ತು ನಿಯಂತ್ರಿತ ವ್ಯವಹಾರದಿಂದ ಈ ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಒಟ್ಟಾರೆ ಸವಾಲುಗಳಿದ್ದರೂ ಸಮತೋಲನದಿಂದ ನಡೆದುಕೊಂಡರೆ ಉತ್ತಮ ಫಲ ಸಿಗುವ ಸಂವತ್ಸರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+