Guru Sankramana:ಇಂದಿನಿಂದ ಈ ರಾಶಿಯವರಿಗೆ ಗುರು ಬಲ :ತೆರೆಯುವುದು ಅದೃಷ್ಟದ ಬಾಗಿಲು; ಉದ್ಯೋಗದಲ್ಲಿ ಬಡ್ತಿ, ಸಂಪತ್ತಿನ ಮಳೆ
Guru Sankramana : ಧಾರ್ಮಿಕ ಜ್ಯೋತಿಷ್ಯದಲ್ಲಿ, ಗುರುವನ್ನು ಜ್ಞಾನ, ಸಮೃದ್ಧಿ ಮತ್ತು ಅದೃಷ್ಟದ ಅಂಶ ಎಂದು ಕರೀತಾರೆ. ಜಾತಕದಲ್ಲಿ ಗುರು ಬಲ ಇದ್ದರೆ ಎಲ್ಲ ಕೆಲಸಗಳು ಸಾಂಗವಾಗಿ ನಡೆಯುವುದು. ಮನೆ ಕಟ್ಟುವುದಕ್ಕೆ, ಹೊಸ ಕೆಲಸ ಸಿಗುವುದಕ್ಕೆ ಎಲ್ಲದಕ್ಕೂ ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿರಬೇಕು. ಹಾಗಾಗಿ ಗುರು ಗ್ರಹದ ಸಣ್ಣ ಚಲನೆ ಕೂಡಾ ನಮ್ಮ ಜಾತಕ ಫಲದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಇದೀಗ ಇಂದು ಅಂದರೆ ಸೆಪ್ಟೆಂಬರ್ 3 ರ ಸಂಜೆ 7.02ಕ್ಕೆ, ಗುರು ಗ್ರಹವು ಆಶ್ಲೇಷ ನಕ್ಷತ್ರದ ಮೊದಲ ಪಾದದಿಂದ ಎರಡನೇ ಪಾದಕ್ಕೆ ಸಾಗುತ್ತದೆ. ಗುರುವಿನ ಈ ಸಂಚಾರವು (Jupiter Star Transit) ನಾಲ್ಕು ನಿರ್ದಿಷ್ಟ ರಾಶಿಯವರ ಪ್ರಗತಿಯ ಹಾದಿಗಳನ್ನು ತೆರೆಯುವುದು. ಅವರ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ಅಲ್ಲದೆ, ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ಗುರುವಿನ ಸಂಚಾರದಿಂದ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು :
ವೃಷಭ ರಾಶಿ (Taurus) Guru Sankramana :
ವೃಷಭ ರಾಶಿಯಲ್ಲಿ ಜನಿಸಿದವರಿಗೆ ಗುರುವಿನ (jupiter) ಸಂಚಾರ ತುಂಬಾ ಶುಭವಾಗಿರುವುದು. ಈ ರಾಶಿಯಲ್ಲಿ ಜನಿಸಿದವರು ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಲಾಭಗಳನ್ನು ಅನುಭವಿಸುವ ಸಾಧ್ಯತೆಯಿದೆ. ಧೈರ್ಯ ಹೆಚ್ಚಾಗುವುದು. ಹೊಸ ಪ್ರಯೋಗಗಳಿಗೆ ಕೈ ಹಾಕುವಿರಿ. ಮೊದಲು ಸ್ವಲ್ಪ ಹಿನ್ನೆಡೆಯಾದರೂ ನಂತರ ಯಶಸ್ಸು ಸಿಗುವುದು. ನೀವು ನಿರೀಕ್ಷಿಸುತ್ತಿದ್ದ ಬಡ್ತಿ, ಉನ್ನತ ಸ್ಥಾನಮಾನ ಒಲಿಯುವುದು. ಆದಾಯವೂ ಹೆಚ್ಚಾಗುವುದು. ಹೀಗಾಗೊ ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಸದೃಢವಾಗಿರುವುದು. ಹೊರಗಡೆ ಉಳಿಸಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು.
ಕರ್ಕಾಟಕ ರಾಶಿ (Cancer) Guru Sankramana :
ಕರ್ಕಾಟಕ ರಾಶಿಯವರ ವೃತ್ತಿಜೀವನದ ಪ್ರಮುಖ ಘಟ್ಟ ಇದು. ಹಣಕಾಸಿನ ಸ್ಥಿತಿ ಬಲಗೊಳ್ಳುವುದು. ಕೆಲಸದಲ್ಲಿ ನಿಮ್ಮ ಹೊಸ ಗುರುತನ್ನು ಮೂಡಿಸಿಕೊಳ್ಳುವಿರಿ. ಪ್ರತಿಯೊಂದು ಕೆಲಸದಲ್ಲೂ ನಿಮ್ಮ ಮೇಲಧಿಕಾರಿಗಳ ಬೆಂಬಲ ಸಿಗುವುದು. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರುವುದು. ಅಥವಾ ನೀವು ಹೊಸದಾದ ಮತ್ತು ಪ್ರಮುಖವಾದ ಯೋಜನೆಯ ಭಾಗವಾಗಬಹುದು. ಹಠಾತ್ ಆರ್ಥಿಕ ಲಾಭ ಗಳಿಸುವುದಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುವುದು. ವ್ಯವಹಾರದಲ್ಲಿಯೂ ಹೆಚ್ಚಿನ ಲಾಭವಾಗುವುದು. ಹಳೆಯ ವಿವಾದಗಳು ಬಗೆಹರಿದು ಮನಸ್ಸಿನ ನೆಮ್ಮದಿ ಹೆಚ್ಚಾಗುವುದು.
ಕನ್ಯಾ ರಾಶಿ (Virgo) Guru Sankramana :
ಗುರುವಿನ ಸಂಚಾರವು ಕನ್ಯಾ ರಾಶಿಯವರಿಗೆ ವರದಾನವಾಗಿರಲಿದೆ. ತುಂಬಾ ಸಮಯದಿಂದ ಕೆಲಸದ ಹುಡುಕಾಟದಲ್ಲಿದ್ದರೆ ನಿಮ್ಮ ಹುಡುಕಾಟ ಕೊನೆಯಾಗುವುದು. ನೀವು ಬಯಸಿದ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಹಠಾತ್ ಆರ್ಥಿಕ ಲಾಭವಾಗುವುದು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗುವುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಸಾಲದಿಂದ ಮುಕ್ತಿ ಸಿಗುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ಈ ಸಮಯದಲ್ಲಿ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ ರಾಶಿ (Scorpio) Guru Sankramana :
ಈ ರಾಶಿಯಲ್ಲಿ (zodiac signs) ಜನಿಸಿದವರು ತಮ್ಮ ವೃತ್ತಿಜೀವನದಿಂದ ಲಾಭ ಪಡೆಯುವರು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಹೆಚ್ಚು ಪ್ರಶಂಸೆ ಸಿಗುವುದು. ಆಸ್ತಿ ಅಥವಾ ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವಾಗುವುದು. ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಪೋಷಕರ ಬೆಂಬಲ ಸಿಗುವುದು. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸು ನನಸಾಗಬಹುದು.
ಇನ್ನು ಗುರುವಿನ ಮತ್ತು ಚಂದ್ರನ ಸಂಯೋಗದಿಂದ ಸೆಪ್ಟೆಂಬರ್ 7ಕ್ಕೆ ಕರ್ಕಾಟಕ ರಾಶಿಯಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದಿಂದ ನಾಲ್ಕು ರಾಶಿಯವರಿಗೆ ಅಂದರೆ ಮೇಷ, ಕರ್ಕಾಟಕ, ಕನ್ಯಾ, ತುಲಾ ಮತ್ತು ಧನು ರಾಶಿಯವರಿಗೆ ಹೆಚ್ಚು ಅನುಕೂಲವಾಗುವುದು.


Click it and Unblock the Notifications
