• search

2018ರಲ್ಲಿ ಕರ್ನಾಟಕದಲ್ಲಿ ಗೋಧ್ರಾ ಮಾದರಿ ದುರಂತ, ಭಾರತ- ಪಾಕ್ ಯುದ್ಧ!

By ಪ್ರಕಾಶ್ ಅಮ್ಮಣ್ಣಾಯ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    2018ರಲ್ಲಿ ಬಾರಿ ಅಪಾಯಗಳ ಸೂಚನೆ | ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ | Oneindia Kananda

    ಇದು ಯುದ್ಧದ ಮುನ್ಸೂಚನೆ. ಆತ್ಮರಕ್ಷಣೆಗಾಗಿ ಭಾರತ ನಡೆಸುವ ಮಹಾನ್ ಹೋರಾಟಕ್ಕೆ ಇಡೀ ಜಗತ್ತೇ ಸಾಕ್ಷಿಯಾಗುವ ಕಾಲ ಘಟ್ಟ ಅದು. ಮುಂದಿನ ಒಂದು ವರ್ಷದ ನಂತರ ಅಂದರೆ 2019ಕ್ಕೆ ಎದುರಾಗುವ ಆ ಸನ್ನಿವೇಶಕ್ಕೆ ಪೂರಕವಾಗಿ ಒಂದೊಂದೇ ಘಟನೆಗಳು ನಡೆಯುತ್ತಾ ಸಾಗುತ್ತಿವೆ. ಅದಕ್ಕೆ ಉದಾಹರಣೆ ಸಹಿತ ವಿವರಿಸಲಾಗಿದೆ.

    ಪಾಕಿಸ್ತಾನದ ಉದ್ಧಟತನ ದಿನದಿನಕ್ಕೂ ಹೆಚ್ಚುತ್ತಿರುವುದು, ಹಫೀಜ್ ಸಯೀದ್ ಅಲ್ಲಿನ ಚುನಾವಣೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿರುವುದು ಇವೆಲ್ಲವೂ ಆ ದೇಶಕ್ಕೆ ಬೀಳುವ ದೊಡ್ಡ ಹೊಡೆತದ ಮುನ್ಸೂಚನೆ. ಸದ್ಯಕ್ಕೆ ಧನು ರಾಶಿಯಲ್ಲಿ ಶನಿಯಿದ್ದು, ಮುಂದಿನ ವರ್ಷದ ಕೊನೆ ಭಾಗದ ಹೊತ್ತಿಗೆ ಪಾಕಿಸ್ತಾನದ ಜತೆಗಿನ ಯುದ್ಧವನ್ನು ಸೂಚಿಸುತ್ತಿದೆ.

    ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ

    ಪಾಕಿಸ್ತಾನದ ಸೇನಾ ನಿರ್ಧಾರಗಳನ್ನು ಉಗ್ರಗಾಮಿಗಳೇ ತೆಗೆದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಲಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಸ್ವಯಂ ರಕ್ಷಣೆಗಾಗಿ ದಂಡ ಕೈಗೆತ್ತಿಕೊಳ್ಳುವುದು ಭಾರತಕ್ಕೆ ಅನಿವಾರ್ಯ ಆಗುತ್ತದೆ. ಆಗ ದೇಶದ ಬೆಂಬಲಕ್ಕೆ ಅಮೆರಿಕ, ರಷ್ಯಾದಂಥ ರಾಷ್ಟ್ರಗಳು ನಿಲ್ಲಲಿದ್ದು, ಇಸ್ಲಾಮಾಬಾದ್ ಎಂಬುದೊಂದು ಇತ್ತೇ ಎಂದು ಪ್ರಶ್ನೆ ಮಾಡುವ ಸ್ಥಿತಿ ತಲುಪುತ್ತದೆ.

    ಅಣು ಸ್ಥಾವರಗಳು ಉಗ್ರಗಾಮಿಗಳ ಹಿಡಿತಕ್ಕೆ

    ಅಣು ಸ್ಥಾವರಗಳು ಉಗ್ರಗಾಮಿಗಳ ಹಿಡಿತಕ್ಕೆ

    ಪಾಕಿಸ್ತಾನದ ಅಣು ಸ್ಥಾವರಗಳು, ಯುದ್ಧ ಸಲಕರಣೆಗಳು ಮೇಲೆ ಉಗ್ರಗಾಮಿಗಳ ಹಿಡಿತಕ್ಕೆ ಸಿಗುತ್ತವೆ. ಅಂಥ ಸನ್ನಿವೇಶದಲ್ಲಿ ಮೊದಲ ಅಪಾಯ ಎದುರಾಗುವುದು ಭಾರತಕ್ಕೆ. ಆಗ ರಾಷ್ಟ್ರ ರಕ್ಷಣೆ ಸಲುವಾಗಿ ದುಷ್ಟ ಕೂಟವನ್ನು ನಾಮಾವಶೇಷ ಮಾಡುವುದು ಅನಿವಾರ್ಯ ಆಗುತ್ತದೆ. ಆ ಪ್ರಯತ್ನದಲ್ಲಿ ಇಸ್ಲಾಮಾಬಾದ್ ಗೆ ದೊಡ್ಡ ಹಾನಿಯಾಗುತ್ತದೆ.

    ಅಗ್ನಿ ಅವಘಡ ಸಾಧ್ಯತೆ

    ಅಗ್ನಿ ಅವಘಡ ಸಾಧ್ಯತೆ

    ಇನ್ನು ನಾಲ್ಕು ತಿಂಗಳಲ್ಲಿ ವೃಷಭ ರಾಶಿಗೆ ಕುಜನ ಪ್ರವೇಶ ಆಗುವುದರಿಂದ ದೇಶ- ವಿದೇಶದ ಹಲವೆಡೆ ಅಗ್ನಿ ಅವಘಡಗಳು ಸಂಭವಿಸುತ್ತವೆ. ಅಷ್ಟೇ ಅಲ್ಲ, ಹಲವು ಅನಾಹುತಗಳನ್ನು ಅದು ಸೂಚಿಸುತ್ತದೆ. ಗ್ರಹಗಳ ಸ್ಥಿತಿಯಿಂದ ಆಗುವ ಪರಿಣಾಮ ಇದಾದ್ದರಿಂದ ತಪ್ಪಿಸಲು ಅಸಾಧ್ಯ.

    ಕರ್ನಾಟಕದಲ್ಲಿ ಗೋಧ್ರಾ ಮಾದರಿ ದುರಂತ

    ಕರ್ನಾಟಕದಲ್ಲಿ ಗೋಧ್ರಾ ಮಾದರಿ ದುರಂತ

    ಕರ್ನಾಟಕದ ಬಗ್ಗೆ ಹೇಳುವುದಾದರೆ ಗುಜರಾತ್ ನ ಗೋಧ್ರಾದಲ್ಲಿ2002ರಲ್ಲಿ ಸಂಭವಿಸಿದಂಥ ದುರಂತವೊಂದು ಸಂಭವಿಸಲಿದ್ದು, ವಿದೇಶದಲ್ಲಿದ್ದು ದುಷ್ಕೃತ್ಯ ನಡೆಸುತ್ತಿರುವ ಶಕ್ತಿಗಳ ಕೈ ಇದರ ಹಿಂದೆ ಇರಲಿದೆ. ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡುವ ಪ್ರಯತ್ನಗಳು ಆಗಲಿದ್ದು, ಈ ಬಗ್ಗೆ ಎಚ್ಚರ ವಹಿಸಿದರೂ ಪ್ರಯೋಜನ ಆಗುವಂತೆ ಕಾಣುತ್ತಿಲ್ಲ.

    ಕಾಂಗ್ರೆಸ್ ನೊಳಗೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ

    ಕಾಂಗ್ರೆಸ್ ನೊಳಗೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ

    ರಾಜಕಾರಣ ವಿಚಾರ ಹೇಳುವುದಾದರೆ ಮುಂದಿನ ವಿಧಾನಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ನೊಳಗೆ ಅಸಮಾಧಾನದ ಬೆಂಕಿ ಹೊತ್ತಿಕೊಳ್ಳಲಿದೆ. ಅದರಿಂದ ಸಿಟ್ಟಾಗುವ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ನಿಂದಲೇ ಹೊರಬರುವ ಅಥವಾ ಪಕ್ಷದಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka will witness Godhra kind of riot in 2018 and at the end of 2019 there is a war between India and Pakistan, astrology prediction by well known astrologer Prakash Ammannaya from Kapu, Udupi.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more