Guru Pushya Yoga 2023: ಗಜಗೇಸರಿ, ಗುರು ಪುಷ್ಯ ಯೋಗದಿಂದಾಗಿ ಈ 3 ರಾಶಿಯವರಿಗೆ ಹೊಸ ವರ್ಷದ ಆರಂಭ ತುಂಬಾ ವಿಶೇಷ..
ಪ್ರತಿಯೊಂದು ಗ್ರಹವು ಕಾಲ ಕಾಲಕ್ಕೆ ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ಹಾಗೆ ಬದಲಾದಾಗಾ ಅದು ಕೆಲವೊಮ್ಮೆ ಶುಭ ಅಥವಾ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ.
ವೈದಿಕ ಜ್ಯೋತಿಷ್ಯದಲ್ಲಿ ಶುಭ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಗುರು ಪ್ರಸ್ತುತ ಮೇಷ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದೆ. ಈ ಸಂದರ್ಭದಲ್ಲಿ 2023ರ ಕೊನೆಯ ದಿನವಾದ ಡಿಸೆಂಬರ್ 31ರಂದು ಗುರು ಗ್ರಹ ಮೇಷರಾಶಿಯಲ್ಲಿ ವಕ್ರ ನಿವರ್ತಿಯಲ್ಲಿ ಸಂಚರಿಸಲಿದೆ.
ಗುರು ವಕ್ರ ನಿವೃತಿಯು ವರ್ಷದ ಕೊನೆಯ ದಿನದಂದು ಸಂಭವಿಸುವುದರಿಂದ, ಹೊಸ ವರ್ಷ 2024 ರಲ್ಲಿ ಅನೇಕ ರಾಶಿಗಳ ಜೀವನವು ಸಂತೋಷದಿಂದ ಕೂಡಿರುತ್ತದೆ. ಇದರೊಂದಿಗೆ ಗುರು ವಕ್ರ ನಿವರ್ತಿ ಪಡೆಯುವ ಸಮಯದಲ್ಲಿ ಗಜಕೇಸರ ರಾಜಯೋಗ ರೂಪುಗೊಳ್ಳುತ್ತದೆ. ಇದರೊಂದಿಗೆ ಗುರು ಪುಷ್ಯಯೋಗವು ರೂಪುಗೊಳ್ಳುತ್ತದೆ. ಪರಿಣಾಮವಾಗಿ 2024ರ ಆರಂಭವು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿದೆ. ಹಾಗಾದರೆ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮೇಷ ರಾಶಿ
ಗುರು ಗ್ರಹ ಮೇಷ ರಾಶಿಯ ಮೊದಲ ಮನೆಯಲ್ಲಿ ವಕ್ರ ನಿವೃತಿ ಪಡೆಯುತ್ತದೆ. ಹಾಗೆಯೇ ಮೇಷ ರಾಶಿಯವರಿಗೆ 2024ರ ಆರಂಭವು ಉತ್ತಮವಾಗಿರುತ್ತದೆ. ಏಕೆಂದರೆ ಗಜಕೇಸರಿ ಮತ್ತು ಗುರು ಪುಷ್ಯ ಯೋಗದಿಂದ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಉದ್ಯೋಗಿಗಳು ತಮ್ಮ ಕಚೇರಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ಕೆಲವರಿಗೆ ಹೊಸ ಜವಾಬ್ದಾರಿಗಳು ಬರಬಹುದು. ಉದ್ಯಮಿಗಳು ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುತ್ತಾರೆ. ವ್ಯಾಪಾರಿಗಳು ಹೊಸ ಒಪ್ಪಂದಗಳನ್ನು ಪಡೆಯುತ್ತಾರೆ ಅದು ಅವರಿಗೆ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ಆಧ್ಯಾತ್ಮದಲ್ಲಿ ನಿಮಗೆ ಆಸಕ್ತಿ ಹೆಚ್ಚಲಿದೆ.

ಸಿಂಹ ರಾಶಿ
ಸಿಂಹ ರಾಶಿಯ 9ನೇ ಮನೆಯಲ್ಲಿ ಗುರು ವಕ್ರ ನಿವೃತ್ತಿಯನ್ನು ಪಡೆಯುತ್ತಾನೆ. ಇದರೊಂದಿಗೆ ಈ ಮನೆಯಲ್ಲಿ ಗಜಗೇಸರಿ ಯೋಗ ಕೂಡಿಬರುವುದರಿಂದ 2024ರ ಆರಂಭದಲ್ಲಿ ಜೀವನದಲ್ಲಿ ಬಹುಕಾಲದ ಸಮಸ್ಯೆಗಳು ಕೊನೆಗೊಳ್ಳಲಿವೆ. ತಂದೆಯೊಂದಿಗಿನ ಜಗಳ ಕೊನೆಗೊಳ್ಳುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಗುರು ಪುಷ್ಯ ಯೋಗದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿ. ಬಹಳಷ್ಟು ಹಣವನ್ನು ಉಳಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಕುಟುಂಬ ಸಂಬಂಧಗಳು ಸಿಹಿಯಾಗಿರುತ್ತವೆ.

ಧನು ರಾಶಿ
ಧನು ರಾಶಿಯ 5 ನೇ ಮನೆಯಲ್ಲಿ ಗುರು ವಕ್ರ ನಿವೃತ್ತಿ ಪಡೆಯಲಿದೆ. ಈ ಮನೆಯಲ್ಲಿ ಗಜಗೇಸರಿ ರಾಜಯೋಗವು ರೂಪುಗೊಳ್ಳುವುದರಿಂದ 2024ರ ಹೊಸ ವರ್ಷದ ಆರಂಭದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ. ಇದು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ನೀವು ಅನೇಕ ಕೆಲಸಗಳಲ್ಲಿ ಯಶಸ್ವಿಯಾಗುತ್ತೀರಿ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳಲಿವೆ. ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು. 2024 ವಿದ್ಯಾರ್ಥಿಗಳಿಗೆ ಉತ್ತಮ ಆರಂಭವಾಗಿರಲಿದೆ. ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ಮುಖ್ಯವಾಗಿ ನೀವು ಸಾಲದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications