Gaja Kesari Yoga : ಈ ರಾಶಿಯವರಿಗೆ ಗಜಕೇಸರಿ ಯೋಗ : ಹರಿಯುವುದು ಹಣದ ಹೊಳೆ, ರಾಜವೈಭೋಗ
Gaja Kesari Yoga : ವೈದಿಕ ಜ್ಯೋತಿಷ್ಯದಲ್ಲಿ, ಅನೇಕ ಯೋಗಗಳು ಬರುತ್ತವೆ. ಅವುಗಳ ಪೈಕಿ ಗಜಕೇಸರಿ ಯೋಗಕ್ಕೆ ವಿಶೇಷ ಮಹತ್ವವಿದೆ. ಚಂದ್ರ ಮತ್ತು ಗುರುಗಳ ಸಂಯೋಗದಿಂದ ರೂಪುಗೊಳ್ಲೂವ ಯೋಗವೇ ಈ ಗಜಕೇಸರಿ ಯೋಗ. ಇದನ್ನು ಅತ್ಯಂತ ಶುಭ ಯೋಗ ಎಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಈ ಶುಭ ಯೋಗವಿದೆಯೋ ಅವರು ಅತ್ಯಂತ ಅದೃಷ್ಟವಂತರು ಎನ್ನುವುದು ನಂಬಿಕೆ. ಅವರು ಜೀವನದಲ್ಲಿ ಎಲ್ಲಾ ಸೌಕರ್ಯಗಳು ಮತ್ತು ಐಷಾರಾಮಿಗಳನ್ನು ಪಡೆಯುತ್ತಾರೆ. ಜನ್ಮಾಷ್ಟಮಿಯ ಮೂರು ದಿನಗಳ ನಂತರ ಅಂದರೆ ಸೆಪ್ಟೆಂಬರ್ 7ಕ್ಕೆ ಕರ್ಕಾಟಕ ರಾಶಿಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುವುದು. ಈ ಯೋಗದಿಂದ ನಾಲ್ಕು ರಾಶಿಯವರಿಗೆ ಹೆಚ್ಚು ಅನುಕೂಲವಾಗುವುದು.
ಈ ರಾಶಿಯವರಿಗೆ ಅದೃಷ್ಟ ಹೊತ್ತು ತರುವುದು ಗಜಕೇಸರಿ ಯೋಗ
Gaja Kesari Yoga: ಮೇಷ ರಾಶಿ (Aries): ಮೇಷ ರಾಶಿಯವರಿಗೆ ಗಜಕೇಸರಿ ಯೋಗ ತುಂಬಾ ಶುಭವಾಗಿರುವುದು.ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಹೊಸ ಉದ್ಯೋಗದ ಅವಕಾಶ ಸಿಗುವುದು. ಹಳೆಯ ಕೆಲಸದಲ್ಲಿ ಬಡ್ತಿಯ ಭಾಗ್ಯವೂ ಇದೆ. ಹೊಸ ಉದ್ಯಮಕ್ಕೆ ಕೈ ಹಾಕಬಹುದು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗುವುದು. ವ್ಯವಹಾರದಲ್ಲಿ ದೊಡ್ಡಮಟ್ಟದ ಲಾಭವಾಗುವ ನಿರೀಕ್ಷೆಯೂ ಇದೆ. ವಿದೇಶದಲ್ಲಿ ಉದ್ಯೋಗ ಮಾಡುವ ನಿಮ್ಮ ಕನಸು ನಸಾಗುವುದು.

Gaja Kesari Yoga: ಕರ್ಕಾಟಕ ರಾಶಿ (Cancer) :ಕರ್ಕಾಟಕ ರಾಶಿಯವರಿಗೆ ಕೂಡಾ ಗಜಕೇಸರಿ ಯೋಗವು ಅತ್ಯಂತ ಶುಭವಾಗಿರುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಜೀವನದಲ್ಲಿ ಅತ್ಯುತ್ತಮ ಫಲಿತಾಂಶ ಸಿಗುವುದು. ಪ್ರೇಮ ಸಂಬಂಧಗಳು ಬಲಗೊಳ್ಳುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುವುದು. ಐಷಾರಾಮಿ ಜೀವನ ಒಲಿದು ಬರುವುದು. ಬೇರೆ ಬೇರೆ ಮೂಲಗಳಿಂದ ಹಣ ಒಲಿದು ಬರುವ ಸಾಧ್ಯತೆ ಇದೆ. ಹಠಾತ್ ಆರ್ಥಿಕ ಲಾಭವಾಗುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು.
Gaja Kesari Yoga: ಕನ್ಯಾ ರಾಶಿ (Virgo) :ಕನ್ಯಾ ರಾಶಿಯವರಿಗೂ ಗಜಕೇಸರಿ ಯೋಗದಿಂದ ಹೆಚ್ಚಿನ ಅನುಕೂಲವಾಗುವುದು. ಆರ್ಥಿಕ ಯಶಸ್ಸು ಸಿಗುವುದು. ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಹೊಸ ಉದ್ಯೋಗದ ಲಕ್ಷಣಗಳು ಕಂಡುಬರುವುದು. ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ಹೂಡಿಕೆಗಳಿಂದ ದೊಡ್ಡ ಮಟ್ಟದ ಲಾಭವಾಗುವುದು. ಹೊಸ ವ್ಯವಹಾರ ಆರಂಭಿಸಬಹುದು. ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು.
Gaja Kesari Yoga:ತುಲಾ ರಾಶಿ (Libra) : ತುಲಾ ರಾಶಿಯವರಿಗೆ ಗಜಕೇಸರಿ ಯೋಗದ ಅವಧಿಯಲ್ಲಿ (Gaja Kesari Yoga,)ದೊಡ್ಡ ಮಟ್ಟದ ಧನ ಲಾಭವಾಗುವುದು. ಮನೆ ನಿರ್ಮಾಣ ಅಥವಾ ಖರೀದಿ ಬಗ್ಗೆ ಯೋಚಿಸಬಹುದು. ಜೀವನದ ಐಷಾರಾಮಿಗಳು ಹೆಚ್ಚಾಗುವುದು. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿಯೂ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ಬಯಸಿದ ಉದ್ಯೋಗ ಒದಗಿ ಬರುವುದು. ಮಕ್ಕಳಿಂದಲೂ ಶುಭ ಸುದ್ದಿಯನ್ನೇ ಕೇಳುವಿರಿ.
Gaja Kesari Yoga: ಧನು ರಾಶಿ (Sagittarius): ಧನು ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು ಸಿಗುವುದು. ಹಿಂದೆಂದೂ ಕಾಣದ ಯಶಸ್ಸು ಸಾಧಿಸುವಿರಿ. ಹಣದ ವಿಚಾರದಲ್ಲಿಯೂ ನೀವೇ ಅದೃಷ್ಟವಂತರು. ದೊಡ್ಡ ಮಟ್ಟದ ಪ್ರಗತಿ ಸಾಧಿಸುವಿರಿ. ಹಿಂದಿನ ಸೋಲುಗಳೆಲ್ಲಾ ಗೆಲುವಾಗಿ ಬದಲಾಗುವುದು. ಕಷ್ಟಗಳು ಕಳೆದು ಗೆಲುವು ನಿಮ್ಮದಾಗುವುದು. ಕೆಲಸದಲ್ಲಿ ಹೊಸ ಅವಕಾಶಗಳು ಸಿಗುವುದು. ಬಡ್ತಿಗೆ ಅವಕಾಶವಿದೆ. ವ್ಯಾಪಾರ ವಹಿವಾಟುಗಳಲ್ಲಿಯೂ ಲಾಭವಾಗುವುದು.
ಚಂದ್ರ ಮತ್ತು ಗುರು ಬಲವನ್ನು ಹೆಚ್ಚಿಸಲು ಏನು ಮಾಡಬೇಕು ?
ಚಂದ್ರನನ್ನು ಬಲಪಡಿಸಲು, ಸೋಮವಾರದಂದು ಹಾಲು, ಅಕ್ಕಿ ಅಥವಾ ಬಿಳಿ ಬಟ್ಟೆಗಳನ್ನು ದಾನ ಮಾಡಿ. ಚಂದ್ರ ದೇವರ ಮಂತ್ರವಾದ ಓಂ ಶ್ರಮ ಶ್ರೀಂ ಶ್ರೌಂ ಸಹ ಚಂದ್ರಾಯ ನಮಃ"ವನ್ನು ಪ್ರತಿದಿನ 108 ಬಾರಿ ಪಠಿಸಿ. ಗುರು ಗ್ರಹವನ್ನು ಬಲಪಡಿಸಲು, ಹಳದಿ ಬಣ್ಣದ ಸಿಹಿತಿಂಡಿಗಳು ಅಥವಾ ಆಹಾರವನ್ನು ನಿರ್ಗತಿಕರಿಗೆ ದಾನ ಮಾಡಿ. ಓಂ ಬೃಮ್ ಬೃಹಸ್ಪತೇ ನಮಃ ಎಂದು ಪಠಿಸಿ.


Click it and Unblock the Notifications
