ರಾಶಿ ನಕ್ಷತ್ರಗಳು ಮಾತ್ರವಲ್ಲ ಕಾಲ್ಬೆರಳುಗಳೂ ನುಡಿಯುತ್ತವೆ ಭವಿಷ್ಯ: ನಿಮ್ಮ ಬೆರಳುಗಳೂ ಹೀಗಿವೆಯಾ?
Future Prediction By Toes: ಸಾಂಪ್ರದಾಯಿಕ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ದೇಹದ ಪ್ರತಿಯೊಂದು ಭಾಗದ ಆಕಾರ ಮತ್ತು ರಚನೆಯು ವ್ಯಕ್ತಿಯ ಅದೃಷ್ಟ, ಜೀವನ ಮತ್ತು ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಬಹಿರಂಗಪಡಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರ ಕೈ ಕಾಲುಗಳಲ್ಲಿ ಐದು ಬೆರಳುಗಳು ಇರುತ್ತವೆ ನಿಜ, ಆದರೆ ಅವುಗಳ ರಚನೆ ಒಂದೇ ರೀತಿ ಇರುವುದಿಲ್ಲ. ಜ್ಯೋತಿಷ್ಯದಲ್ಲಿ ರಾಶಿ ನಕ್ಷತ್ರಗಳ ಆಧಾರದಲ್ಲಿ ವ್ಯಕ್ತಿಯ ಭವಿಷ್ಯ ಹೇಳಲಾಗುತ್ತದೆ. ಆದರೆ, ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಾಲ್ಬೆರಳುಗಳ ರಚನೆಯನ್ನು ಆಧರಿಸಿ ಒಬ್ಬರ ಅದೃಷ್ಟ, ಯಶಸ್ಸು ಮತ್ತು ವೈವಾಹಿಕ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಉತ್ತಮ ಆಕಾರದ ಕಾಲ್ಬೆರಳುಗಳು ಸಮೃದ್ಧ ಮತ್ತು ಸುಗಮ ಜೀವನವನ್ನು ಸೂಚಿಸುತ್ತವೆ ಎನ್ನಲಾಗಿದೆ. ಆದರೆ ಕಾಲ್ಬೆರಳಿನ ಅನಿಯಮಿತ ಲಕ್ಷಣಗಳು ಹೆಚ್ಚಾಗಿ ಹೋರಾಟಗಳು ಮತ್ತು ಜೀವನದ ಕಷ್ಟಗಳಿಗೆ ಕಾರಣವಾಗುತ್ತವೆ.
ಕಾಲ್ಬೆರಳಿನ ಉದ್ದ ಮತ್ತು ಅದೃಷ್ಟ
ನಿಮ್ಮ ಕಾಲ್ಬೆರಳುಗಳ ಗಾತ್ರವು ನಿಮ್ಮ ಯೋಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತವೆ. ಉದಾಹರಣೆಗೆ, ಹೆಬ್ಬೆರಳು ಉದ್ದವಾಗಿದ್ದು, ನಿಮ್ಮ ತೋರುಬೆರಳು ಚಿಕ್ಕದಾಗಿದ್ದರೆ, ಆ ವ್ಯಕ್ತಿಯು ಹೆಚ್ಚಾಗಿ ಬೇರೊಬ್ಬರ ಪ್ರಭಾವದಡಿಯಲ್ಲಿಯೇ ಬದುಕುತ್ತಿರುತ್ತಾನೆ. ಅವರು ಸ್ವಂತ ವ್ಯವಹಾರ ನಡೆಸಬೇಕು ಎಂದು ಎಷ್ಟೇ ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಅವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೇ ಇಲ್ಲ. ಇವರ ಯೋಚನೆಯೂ ಕೂಡಾ ಸೀಮಿತ ವ್ಯಾಪ್ತಿಯಲ್ಲಿಯೇ ಇರುವುದು. ಬಹಳ ಬೇಗ ಸೋಲೋಪ್ಪಿಕೊಳ್ಳುವ ಸ್ವಭಾವ ಇವರದ್ದಾಗಿರುವುದು.

ತೋರುಬೆರಳು ಮಧ್ಯದ ಬೆರಳಿಗಿಂತ ಚಿಕ್ಕದಾಗಿದ್ದರೆ:
ಒಂದು ವೇಳೆ ನಿಮ್ಮ ಕಾಲಿನ ಎರಡನೇ ಬೆರಳು ಮಧ್ಯದ ಬೆರಳಿಗಿಂತ ಚಿಕ್ಕದಾಗಿದ್ದರೆ ಜೀವನ ಸಂಗಾತಿ ಆರ್ಥಿಕವಾಗಿ ಬಲಶಾಲಿಯಾಗಿರುವುದಿಲ್ಲವಂತೆ. ಹಣಕಾಸಿನ ಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ದಾಂಪತ್ಯದಲ್ಲಿ ಸೀಮಿತ ಸೌಕರ್ಯಗಳಿರುವುದು. ಮದುವೆಯ ನಂತರ ಐಶಾರಾಮ ಜೀವನ ಸಿಗುವುದು ಎಂದು ಬಯಸಿದರೆ ಅದು ಸಾಧ್ಯವಾಗುವುದಿಲ್ಲ. ಅಲ್ಲದೆ ಸಂಗಾತಿಯ ಜೊತೆಗೆ ಆಗಾಗ ಭಿನ್ನಾಭಿಪ್ರಾಯಗಳು ಎದುರಾಗುತ್ತಾ ಇರುವುದು. ಒಟ್ಟಾರೆ ದಾಂಪತ್ಯ ಜೀವನ ಅಷ್ಟೊಂದು ಸುಖಕರವಾಗಿರುವುದಿಲ್ಲ.
ಮದುವೆ ಮತ್ತು ಸಂತೋಷ
ಚಿಕ್ಕ ಕಾಲ್ಬೆರಳು ವೈವಾಹಿಕ ಸಾಮರಸ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಅದು ಅದರ ಪಕ್ಕದಲ್ಲಿರುವ ಕಾಲ್ಬೆರಳಿಗಿಂತ ಚಿಕ್ಕದಾಗಿದ್ದರೆ, ನಿಮ್ಮ ಸಂಗಾತಿಯು ನೀವು ಬಯಸಿದ ಮಟ್ಟದಲ್ಲಿ ಸೌಕರ್ಯ ಮತ್ತು ಸಂತೋಷವನ್ನು ಒದಗಿಸದೇ ಇರಬಹುದು. ಇದು ವೈವಾಹಿಕ ಜೀವನದಲ್ಲಿ ಅತೃಪ್ತಿಗೆ ಕಾರಣವಾಗುವುದು.
ಕೊನೆಯ ಕಾಲ್ಬೆರಳು ಪಕ್ಕದ ಬೆರಳಿಗಿಂತ ಉದ್ದವಾಗಿದ್ದರೆ, ಅದು ಅತ್ಯಂತ ಅದೃಷ್ಟದ ಚಿಹ್ನೆಯಂತೆ. ಅಂತಹ ವ್ಯಕ್ತಿಗಳು ನಿರಂತರ ಅದೃಷ್ಟ, ಸಂಪತ್ತು ಮತ್ತು ಯಶಸ್ಸನ್ನು ಆಕರ್ಷಿಸುತ್ತಾರೆ ಎನ್ನಲಾಗಿದೆ. ಅವರು ಜೀವನ ಪೂರ್ತಿ ಸ್ಥಿರ ಮತ್ತು ಆರಾಮದಾಯಕ ಜೀವನವನ್ನು ಆನಂದಿಸುತ್ತಾರೆಯಂತೆ.
ಕೊನೆಯ ಎರಡು ಕಾಲ್ಬೆರಳುಗಳು ಸಮಾನ ಉದ್ದವಾಗಿದ್ದರೆ ಅಂಥವರು ಮಕ್ಕಳ ಮೂಲಕ ಸಂತೋಷವನ್ನು ಪಡೆಯುತ್ತಾರೆಯಂತೆ. ಇವರು ಸದಾ ತೃಪ್ತಿಕರ ಜೀವನವನ್ನು ಆನಂದಿಸುತ್ತಾರೆಯಂತೆ. ಈ ವೈಶಿಷ್ಟ್ಯವು ಆರೋಗ್ಯ ಅಥವಾ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಸೂಚಿಸುತ್ತದೆ.
ಅಪರೂಪದ ಚಿಹ್ನೆಗಳು
ಹೆಬ್ಬೆರಳು ಸೇರಿದಂತೆ ಎಲ್ಲಾ ಕಾಲ್ಬೆರಳುಗಳು ಸಮಾನ ಉದ್ದವಾಗಿದ್ದರೆ ಅದನ್ನು ಅಸಾಧಾರಣ ಚಿಹ್ನೆ ಎಂದು ಹೇಳಲಾಗುವುದು. ಇವರ ಜೀವನದ ಮೊದಲ ಹಂತ ಕಷ್ಟ ನೋವುಗಳಿಂದ ಕೂಡಿರಬಹುದು. ಆದರೆ ನಂತರದ ದಿನಗಳಲ್ಲಿ ಯಶಸ್ಸು ಒಲಿದು ಬರುವುದು. ಅಂತಹ ಜನರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವರು. ಪ್ರಭಾವಿ ನಾಯಕರು, ಉದ್ಯಮಿಗಳು ಅಥವಾ ಪ್ರಸಿದ್ಧ ವ್ಯಕ್ತಿಗಳಾಗಿ ಹೊರ ಹೊಮ್ಮುವರು. ಅವರ ಜೀವನವು ಐಷಾರಾಮದಿಂದ ಕೂಡಿರುವುದು.
ಈ ನಂಬಿಕೆಗಳು ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳನ್ನು ಆಧರಿಸಿವೆ. ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ ಇದನ್ನು ವೈಜ್ಞಾನಿಕವಾಗಿ ನೋಡುವ ಪರಿಗಣಿಸುವ ಬದಲು ಸಾಂಕೇತಿಕವಾಗಿ ನೋಡಬೇಕು.


Click it and Unblock the Notifications
