Daily Horoscope September 2: ಮಂಗಳನಿಂದ 4 ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ, ಈ ರಾಶಿಯವರಿಗೆ ಸಂಕಷ್ಟ!
Daily Horoscope September 2: ಸೆಪ್ಟೆಂಬರ್ 2 ಕೃಷ್ಣ ಪಕ್ಷದ ಐದನೇ ದಿನವಾಗಿರುತ್ತದೆ. ಇಂದು ಭರಣಿ ನಕ್ಷತ್ರ ಇರುವುದು. ಚಂದ್ರನು ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಇಂದು ಗ್ರಹಗಳ ಸ್ಥಾನಗಳು, ಅನೇಕ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಬಹುದು. ಗ್ರಹ ಮತ್ತು ನಕ್ಷತ್ರಗಳ ಪ್ರಭಾವವು ಉದ್ಯೋಗಗಳು, ವ್ಯವಹಾರ, ಆರ್ಥಿಕ ವಿಷಯಗಳು ಮತ್ತು ಕುಟುಂಬ ಜೀವನದಲ್ಲಿ ಕಂಡುಬರುತ್ತದೆ.
ಮೇಷ ರಾಶಿ (Aries)
ಇಂದು ವ್ಯವಹಾರ ವಿಷಯಗಳಲ್ಲಿ ಹೊಸ ಆಲೋಚನೆಗಳು ಬರಬಹುದು. ನಿಮ್ಮ ಪಾಲಿಗೆ ದಿನವು ಉತ್ತಮವಾಗಿರುವುದು. ಕೆಲವು ಕೆಲಸಗಳಲ್ಲಿ ಸ್ನೇಹಿತರ ಸಲಹೆ ಪ್ರಯೋಜನಕಾರಿಯಾಗಿರುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು.
ವೃಷಭ ರಾಶಿ (Taurus)
ಕೆಲಸದ ನಿಮಿತ್ತ ಇಂದು ನೀವು ಮನೆಯಿಂದ ದೂರ ಹೋಗಬೇಕಾಗಬಹುದು. ಕೋಪದ ಕೈಗೆ ಬುದ್ಧಿ ಕೊಟ್ಟು ಸಂಬಂಧಗಳನ್ನು ಹಾಳು ಮಾಡಬೇಡಿ, ತಾಳ್ಮೆಯಿಂದಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಹಠಾತ್ ಶುಭ ಬದಲಾವಣೆಗಳ ಸಾಧ್ಯತೆ ಇದೆ.

ಮಿಥುನ ರಾಶಿ (Gemini)
ಕಠಿಣ ಸಂದರ್ಭಗಳಲ್ಲಿ ಭಯಪಡುವ ಬದಲು, ತಾಳ್ಮೆಯಿಂದ ಇರಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿ. ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಬಹುದು. ಸಂತೋಷದ ನಿಜವಾದ ಮೌಲ್ಯ ಅರ್ಥವಾಗುವಂಥಹ ಘಟನೆ ನಡೆಯಬಹುದು.
ಕರ್ಕಾಟಕ ರಾಶಿ (Cancer)
ಕೆಲಸ ಕಾರ್ಯಗಳಲ್ಲಿ ನಿಮಗೆ ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು. ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಶೇರ್ ಮಾಡಬೇಡಿ. ಸ್ನೇಹಿತರೊಂದಿಗೆ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳಲೇ ಬೇಡಿ.ಕೆಲವರ ಮಾತಿನಿಂದ ಮನಸ್ಸಿಗೆ ನೋವಾಗಬಹುದು.
ಸಿಂಹ ರಾಶಿ (Leo)
ದಾಂಪತ್ಯ ಜೀವನದಲ್ಲಿ ಮಾಧುರ್ಯ ಇರುವುದು. ಅದೃಷ್ಟ ನಿಮ್ಮ ಕಡೆ ಇರುವುದು. ವ್ಯವಹಾರವನ್ನು ವಿಸ್ತರಿಸುವ ಪ್ರಯತ್ನಕ್ಕೆ ಸ್ವಲ್ಪ ಹಿನ್ನೆಡೆಯಾಗಬಹುದು. ನಿರಂತರ ಸವಾಲು ಕೆಲವು ತೊಂದರೆಗಳನ್ನು ಉಂಟುಮಾಡಬಹುದು. ಧೈರ್ಯ ಹೆಚ್ಚಾಗುವುದು. ಸಮಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದು.
ಕನ್ಯಾ ರಾಶಿ (Virgo)
ಚಿಂತೆಗಳನ್ನು ಬಿಡುವುದು ಜೀವನದಲ್ಲಿ ಉತ್ತಮ ವಿಷಯಗಳನ್ನು ಅನುಭವಿಸುವ ಮೊದಲ ಹೆಜ್ಜೆಯಾಗಿದೆ. ಹಠಾತ್ ಆರ್ಥಿಕ ಲಾಭವಾಗುವುದು. ಹೊಸ ಕೆಲಸದ ಆಫರ್ ಬರುವುದು. ದಿನ ಸಂತೋಷದಿಂದ ಕೂಡಿರುವುದು.
ತುಲಾ ರಾಶಿ (Libra)
ಇಂದು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ನೀವು ಸ್ನೇಹಿತರೊಂದಿಗೆ ಪ್ರವಾಸ ಹೊರಡಬಹುದು. ಕೋಪದ ಮೇಲೆ ನಿಯಂತ್ರಣ ಇರಲಿ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡಬೇಡಿ.
ವೃಶ್ಚಿಕ ರಾಶಿ (Scorpio)
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ನಿಮ್ಮ ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ನಿಮ್ಮ ಪೋಷಕರಿಂದ ನಿಮಗೆ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದ ಸಿಗುವುದು. ಆಸ್ತಿಯಲ್ಲಿ ಹೂಡಿಕೆ ಮಾಡುವುದರಿಂದ ಲಾಭವಾಗುವುದು. ಯಶಸ್ಸು ನಿಮ್ಮ ಬಾಗಿಕು ತಟ್ಟುವುದು.
ಧನು ರಾಶಿ (Sagittarius)
ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ದಿನವು ಒಳ್ಳೆಯದು. ದಿನ ಮುಂದುವರೆದಂತೆ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ನೀವು ಎಷ್ಟೇ ಬ್ಯುಸಿಯಾಗಿದ್ದರೂ ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದು ಒಳ್ಳೆಯದು.
ಮಕರ ರಾಶಿ (Capricorn)
ಹೆಚ್ಚುವರಿ ಕೆಲಸ ಮಾಡುವುದರಿಂದ ಬಾಕಿ ಇರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಉದ್ಯಮಿಗಳು ಇಂದು ತುಂಬಾ ಬ್ಯುಸಿಯಾಗಿರುತ್ತಾರೆ.ಯಾವುದೇ ರೀತಿಯ ವಿವಾದದಲ್ಲಿ ಭಾಗಿಯಾಗಬೇಡಿ.
ಕುಂಭ ರಾಶಿ (Aquarius)
ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಚಿಂತೆಗಳು ಕೊನೆಗೊಳ್ಳಬಹುದು. ಕಷ್ಟಕರ ವಿಷಯಗಳಲ್ಲಿ ಕೂಡಾ ಯಶಸ್ಸು ಸಿಗುವ ಸಾಧ್ಯತೆಗಳಿವೆ.
ಮೀನ ರಾಶಿ (Pisces)
ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಈ ದಿನ ಸಂತೋಷದಿಂದ ಕೂಡಿರುವುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚಾಗುವುದು.


Click it and Unblock the Notifications
