Daily Horoscope Aug 25: ಈ ರಾಶಿಯವರ ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ; ಕುಟುಂಬದಲ್ಲಿ ಸಂಭ್ರಮ, ಕೆಲಸ ಕಾರ್ಯದಲ್ಲಿ ಯಶಸ್ಸು
Daily Horoscope Aug 25: ಇಂದು ಶುಕ್ಲ ಪಕ್ಷ ತ್ರಯೋದಶಿ ತಿಥಿ. ಉತ್ತರ ಆಷಾಢ ನಕ್ಷತ್ರ ರಾತ್ರಿ 10.51ರವರೆಗೆ ಇರುವುದು. ಬೆಳಿಗ್ಗೆ 7.40 ರಿಂದ ಸೌಭಾಗ್ಯ ಯೋಗ ಇರುವುದು. ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವನ್ನು ಅವಲಂಬಿಸಿ, ಇವತ್ತು ಎಲ್ಲಾ ರಾಶಿಯವರು ಬೇರೆ ಬೇರೆ ರೀತಿಯ ಫಲವನ್ನು ಪಡೆಯುವರು. ಕೆಲವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಕ್ಕರೆ ಇನ್ನು ಕೆಲವರು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು.
ಮೇಷ ರಾಶಿ (Aries)
ಇಂದು ನಿಮಗೆ ಉತ್ತಮ ದಿನವಾಗಿರುವುದು. ನಿಮ್ಮ ಕೆಲಸದ ನೀತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುವರು. ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವಿರಿ. ಯಾರೊಂದಿಗೂ ಜಗಳಕ್ಕೆ ಹೋಗಬೇಡಿ, ವಾದಕ್ಕೆ ಇಳಿಯಬೇಡಿ. ನೀವಂದುಕೊಂಡಂತೆಯೇ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವಿರಿ.

ವೃಷಭ ರಾಶಿ (Taurus)
ಸಂತೋಷದಿಂದಲೇ ದಿನದ ಆರಂಭವಾಗುವುದು. ಮನಸ್ಸಿಗೆ ಶಾಂತಿ ಸಿಗುವುದು. ಸಂಬಂಧಿಕರಿಂದ ಒಳ್ಳೆಯ ಸುದ್ದಿ ಬರುವುದು. ಸಂತೋಷ ಹೆಚ್ಚಾಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಎಲ್ಲಾ ಪ್ರಮುಖ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ.
ಮಿಥುನ ರಾಶಿ (Gemini)
ನಿಮ್ಮ ಮಾತೇ ನಿಮಗೆ ವರದಾನವಾಗಿರುವುದು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ಕೆಲಸ ಕಾರ್ಯಗಳಲ್ಲಿ ಶೀಘ್ರವೇ ಯಶಸ್ಸು ಸಿಗುವುದು. ಇವತ್ತು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಲಾಭ ತರುವುದು.
ಕರ್ಕಾಟಕ ರಾಶಿ (Cancer)
ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಇವತ್ತು ಪೂರ್ಣವಾಗುವುದು. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇದು ನಿಮ್ಮ ಕೆಲಸವನ್ನು ಹಾಳುಮಾಡಬಹುದು. ಸ್ನೇಹಿತರಿಂದ ಉತ್ತಮ ಸಲಹೆ ಸಿಗುವುದು.
ಸಿಂಹ ರಾಶಿ (Leo)
ನೀವು ಮಾಡುವ ಕೆಲಸಕ್ಕೆ ಗೌರವ ಸಿಗುವುದು. ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಉಳಿತಾಯದತ್ತ ಗಮನ ಕೊಡಿ. ವ್ಯಾಪಾರ, ವ್ಯವಹಾರ ನಿರೀಕ್ಷೆಯಂತೆ ಮುಂದುವರಿಯುವುದು. ಹೊಸ ಕೆಲಸದ ಅವಕಾಶ ಸಿಗುವುದು. ಸಂಗಾತಿಯ ಬೆಂಬಲ ಇರುವುದು.
ಕನ್ಯಾ ರಾಶಿ (Virgo)
ಇಂದು ಅನುಕೂಲಕರ ದಿನವಾಗಿರುವುದು. ಸರ್ಕಾರಿ ಉದ್ಯೋಗದಲ್ಲಿರುವವರು ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಾದಗಳಿಂದ ದೂರ ಇರುವುದು ಒಳ್ಳೆಯದು. ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುವುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ತುಲಾ ರಾಶಿ (Libra)
ನಿಮಗೆ ಉತ್ತಮ ದಿನವಾಗಿರುವುದು. ಮನಸ್ಸಿನ ಗೊಂದಲಕ್ಕೆ ಉತ್ತರ ಸಿಗುವುದು. ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಂಬಿಕೆ ಇರಲಿ. ಹಠಾತ್ ಆರ್ಥಿಕ ಲಾಭವಾಗುವುದು. ಯಾರೊಂದಿಗೂ ನಿಮ್ಮ ರಹಸ್ಯವನ್ನು ಶೇರ್ ಮಾಡಬೇಡಿ.
ವೃಶ್ಚಿಕ ರಾಶಿ (Scorpio)
ಇಂದು ನಿಮಗೆ ಲಾಭದಾಯಕ ದಿನವಾಗಿರುವುದು. ಕೈ ಹಾಕುವ ಕೆಲಸದಲ್ಲಿ ಯಶಸ್ಸು ಸಿಗುವುದು. ಈ ದಿನ ತಾಳ್ಮೆ ಬಹಳ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚು ಶ್ರಮಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವರು. ವ್ಯವಹಾರದಲ್ಲಿನ ಸಮಸ್ಯೆಗಳು ಕೊನೆಯಾಗುವುದು.
ಧನು ರಾಶಿ (Sagitarius)
ಹೊರಗಿನವರು ನಿಮ್ಮ ವಿಷಯದಲ್ಲು ಮೂಗು ತೂರಿಸದಂತೆ ನೋಡಿಕೊಳ್ಳಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಯಾರಿಗೂ ಸಾಲ ನೀಡಬೇಡಿ. ಅತಿಯಾದ ಕೆಲಸದ ಹೊರೆ ಒತ್ತಡಕ್ಕೆ ಕಾರಣವಾಗಬಹುದು. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುವುದು.
ಮಕರ ರಾಶಿ (Capricorn)
ಇಂದು ನಿಮಗೆ ಒಳ್ಳೆಯ ದಿನವಾಗಿರುವುದು. ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗುವುದು. ಹೊಸ ಕೆಲಸ ಶುರು ಮಾಡಬೇಕು ಎಂದಿದ್ದರೆ ಇದೇ ಸರಿಯಾದ ಸಮಯ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಸಂತೋಷ ತರುವುದು.
ಕುಂಭ ರಾಶಿ (Aquarius)
ಕುಟುಂಬ ಸಂತೋಷ ಹೆಚ್ಚುವುದು. ಕೆಲಸದ ಬಗ್ಗೆ ನೀವು ಕಂಡ ಕನಸುಗಳು ನನಸಾಗುವುದು. ಮನೆಯಲ್ಲಿ ಶಾಂತಿಯುತ ವಾತಾವರಣ ಇರುವುದು. ಮನಸ್ಸಿನ ಉಲ್ಲಾಸ ಹೆಚ್ಚಾಗುವುದು. ಯಶಸ್ಸಿನತ್ತ ಹೆಜ್ಜೆ ಹಾಕುವಿರಿ.
ಮೀನ ರಾಶಿ (Pisces)
ಮೀನ ರಾಶಿಯವರಿಗೆ ಇಂದು ಒಳ್ಳೆಯ ಸಮಯ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು. ನಿಂತು ಹೋಗಿರುವ ಕೆಲಸ ವೇಗ ಪಡೆಯುವುದು. ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವುದು. ಸಂಗಾತಿಯೊಂದಿಗೆ ಉತ್ತಮ ಸಮಸಯವನ್ನು ಕಳೆಯುವಿರಿ.


Click it and Unblock the Notifications
