Horoscope Today: ದಿನ ಭವಿಷ್ಯ ಜನವರಿ 21- ಈ ರಾಶಿಗೆ ಆಂಜನೇಯನ ಆಶೀರ್ವಾದದಿಂದ ಸಕಲ ಸೌಕರ್ಯ ಪ್ರಾಪ್ತಿ
ಜ್ಯೋತಿಷ್ಯ ಶಾಸ್ತ್ರದ ಮೂಲಕ ಜನವರಿ 21 ಮಂಗಳವಾರ 12 ರಾಶಿಗಳ ಭವಿಷ್ಯವನ್ನು ತಿಳಿಯಬಹುದು. ಈ ದಿನ ಗ್ರಹ ಹಾಗೂ ನಕ್ಷತ್ರಗಳ ಸ್ಥಾನ ಕೆಲ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ವ್ಯವಹಾರದಲ್ಲಿ ಬೆಳವಣಿಗೆ, ವ್ಯಾಪಾರದಲ್ಲಿ ವೃದ್ಧಿ, ಧನಲಾಭ ಸಿಗುವುದು. ಮಾತ್ರವಲ್ಲದೆ ಸುಕರ್ಮ ಮತ್ತು ಧೃತಿ ಯೋಗದ ಶುಭ ಫಲವನ್ನು ಕೆಲ ರಾಶಿಯವರು ಪಡೆಯಲಿದ್ದಾರೆ. ಹಾಗಾದರೆ ಈ ದಿನದ ಅದೃಷ್ಟ ರಾಶಿಗಳು ಯಾವುವು? ಯಾವ ರಾಶಿಯವರ ಮೇಲೆ ಆಂಜನೇಯನ ಆಶೀರ್ವಾದ ಇರಲಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಗೆ ಜನವರಿ 21 ಆರ್ಥಿಕ ಸ್ಥಿತಿ ಬಲಗೊಳ್ಳುವ ಸಮಯವಾಗಿದೆ. ಮೇಷ ರಾಶಿಯವರಿಗೆ ಈ ದಿನ ಉದ್ಯೋಗದಲ್ಲಿ ಬಡ್ತಿ, ಸಂಪತ್ತು ಹೆಚ್ಚಳ, ಆರೋಗ್ಯ ಸುಧಾರಣೆ ಜೊತೆಗೆ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ.

ವೃಷಭ ರಾಶಿ
ವೃಷಭ ರಾಶಿಗೆ ಜನವರಿ 21 ಸಾಕಷ್ಟು ಶುಭ ಫಲ ನೀಡಲಿದೆ. ಈ ದಿನದ ಅದೃಷ್ಟ ರಾಶಿಯಲ್ಲಿ ವೃಷಭ ರಾಶಿ ಕೂಡ ಒಂದಾಗಿದೆ. ಅಲ್ಲದೆ ಆಂಜನೇಯನ ನೆಚ್ಚಿನ ರಾಶೀ ಕೂಡ ಇದಾಗಿದೆ. ಚಂದ್ರ ಮತ್ತು ಕೇತುವಿನ ಸಂಯೋಗ ಈ ದಿನ ಕೊಂಚ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾತಿನಲ್ಲಿ ಮಾಧುರ್ಯ ಇರುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಬೇಡಿ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಆಹ್ಲಾದಕರವಲ್ಲದ ಪ್ರಯಾಣದ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಂತೋಷ ಕಡಿಮೆಯಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಆದರೆ ಲಾಭ ಕಡಿಮೆ ಇರಬಹುದು.
ಕರ್ಕಾಟಕ ರಾಶಿ
ಈ ಕರ್ಕಾಟಕ ರಾಶಿಯವರಿಗೆ ಮಂಗಳವಾರ ಮಿಶ್ರ ದಿನವಾಗಿದೆ. ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಕುಟುಂಬದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ನೀವು ಕೆಲವು ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಸಿಂಹ ರಾಶಿ
ಜನವರಿ 21ರಂದು ಸಿಂಹ ರಾಶಿಯವರಿಗೆ ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಖರ್ಚು ಹೆಚ್ಚಳವಾಗಲಿದೆ. ವ್ಯವಹಾರದಲ್ಲಿ ಹೆಚ್ಚು ಶ್ರಮಿಸುವಿರಿ. ಸರ್ಕಾರದಿಂದ ಹಣಕಾಸಿನ ಬೆಂಬಲ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಗಳು ಯಶಸ್ವಿಯಾಗುವ ಸಮಯವಿದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಆದರೆ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಉದ್ಯೋಗದಲ್ಲಿ ಒತ್ತಡ, ಕುಟುಂಬದಲ್ಲಿ ಸಮಸ್ಯೆ, ಸ್ನೇಹಿತರೊಂದಿಗೆ ಜಗಳ ಕಡಿಮೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ತುಂಬಾ ಉತ್ತಮವಾಗಿ ಇರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸು ಚಂಚಲವಾಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ಮಂಗಳವಾರ ವೃಶ್ಚಿಕ ರಾಶಿಯವರು ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವರು. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಸಹೋದರರು ಮತ್ತು ಸಂಗಾತಿಯಿಂದ ನಿಮಗೆ ಉದ್ಯೋಗದಲ್ಲಿ ಬೆಂಬಲ ಸಿಗುತ್ತದೆ. ದಾಂಪತ್ಯದಲ್ಲಿ ಸುಖ, ಕುಟುಂಬದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ ಹೆಚ್ಚಾಗುವುದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಧನು ರಾಶಿ
ಜನವರಿ 21ರಂದು ಧನು ರಾಶಿಯವರಿಗೆ ಸಂಪತ್ತು, ಖ್ಯಾತಿ ಹೆಚ್ಚಳವಾಗುತ್ತದೆ. ಆತ್ಮಗೌರವ ಹೆಚ್ಚಾವುದು. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಆರ್ಥಿಕ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ಪ್ರಯತ್ನಗಳು ಫಲ ನೀಡಲಿವೆ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಹಸುವಿಗೆ ಆಹಾರ ನೀಡಿ.
ಮಕರ ರಾಶಿ
ನಿಮ್ಮ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಸರ್ಕಾರದಿಂದ ಸಾಲ ಸಿಗುತ್ತದೆ. ನಿಮ್ಮ ಅಧಿಕಾರಿ ಅಥವಾ ಮನೆಯ ಮುಖ್ಯಸ್ಥರಿಂದ ನೀವು ಒತ್ತಡವನ್ನು ಎದುರಿಸಬೇಕಾಗುತ್ತದೆ. ಮನಸ್ಸು ಚಿಂತೆಗೊಳಗಾಗಬಹುದು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ಸೂರ್ಯನಿಗೆ ಪೂಜೆ ಮಾಡಿ. ಶನಿಯ ಮಂತ್ರವನ್ನು ಪಠಿಸಿ.
ಕುಂಭ ರಾಶಿ
ಜನವರಿ 21ರಂದು ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ನಿಮ್ಮ ತಂದೆಯಿಂದ ಆಶೀರ್ವಾದ ಪಡೆದು ಮನೆಯಿಂದ ಹೊರಡಿ. ಆಂಜನೇಯನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ. ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮೀನ ರಾಶಿ
ಸರ್ಕಾರ ಮತ್ತು ಅಧಿಕಾರದಿಂದ ಬೆಂಬಲ ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುವುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications