Horoscope Today: ದಿನ ಭವಿಷ್ಯ ಜನವರಿ 15; ಈ ರಾಶಿಯವರಿಗೆ ಕೆಟ್ಟ ದಿನ ಕೊನೆಯಾಗುವ ಸಮಯ
ಜನವರಿ 15 ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಗ್ರಹಗಳ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಇದು ಕೆಲ ರಾಶಿಗಳ ಅದೃಷ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೆಲ ರಾಶಿಗಳಿಗೆ ಈ ದಿನ ಪ್ರಗತಿ, ಹಣ ಮತ್ತು ಸಂತೋಷ ತರಲಿದೆ. ನೀವು ಈ ಅದೃಷ್ಟ ರಾಶಿಗಳಲ್ಲಿ ಒಬ್ಬರಾಗಿದ್ದರೆ ನಿಮ್ಮ ಸಮಯ ಬದಲಾಗಲಿದೆ. ಈ ಬದಲಾವಣೆಯು ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಹಾಗಾದರೆ ಜನವರಿ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಜನವರಿ 15 ಮೇಷ ರಾಶಿಯವರಿಗೆ ವಿಘ್ನವಿನಾಯಕನ ಆಶೀರ್ವಾದ ಸಿಗಲಿದೆ. ಧಾರ್ಮಿಕ ಒಲವು ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಖ್ಯಾತಿ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮೇಷ ರಾಶಿಯವರಿಗೆ ಜನವರಿ 15 ಬಹಳ ವಿಶೇಷವಾದ ದಿನ. ನಿಮ್ಮ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಹೊಸ ಅವಕಾಶ ನಿಮಗೆ ಸಿಗಬಹುದು. ಕೆಲಸದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಹಣದ ಸಮಸ್ಯೆಗಳು ದೂರವಾಗುತ್ತವೆ ಮತ್ತು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಈ ದಿನ ಗಣೇಶನ ಆರಾಧನೆ ಮಾಡಿ.

ವೃಷಭ ರಾಶಿ
ವೃಷಭ ರಾಶಿಯ ಜನರು ಈ ದಿನ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ನಿಮ್ಮ ಹಳೆಯ ಹೂಡಿಕೆಗಳಿಂದ ನಿಮಗೆ ಲಾಭವಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು ಸಂಬಂಧಗಳಲ್ಲಿ ಯಾವುದೇ ತಪ್ಪುಗ್ರಹಿಕೆಯಿದ್ದರೂ ಅದು ಪರಿಹಾರವಾಗಲಿದೆ. ನೀವು ಹೊಸ ಕೆಲಸ ಆರಂಭ ಮಾಡಲು ಇದು ಉತ್ತಮ ಸಮಯ. ಈ ದಿನ ಗಣೇಶ ದೇವನ ಮಂತ್ರವನ್ನು ಪಠಿಸಿ. ಸಂಕಷ್ಟಗಳು ದೂರವಾಗುತ್ತವೆ.
ಮಿಥುನ ರಾಶಿ
ಜನವರಿ 15 ಮಿಥುನ ರಾಶಿಯವರಿಗೆ ವಿಶೇಷವಾಗಿದೆ. ನಿಮ್ಮ ಸಂಗಾತಿಯಿಂದ ಕೆಲಸದಲ್ಲಿ ನಿಮಗೆ ಬೆಂಬಲ ಮತ್ತು ಸಹವಾಸ ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಮನೆಯ ಮುಖ್ಯಸ್ಥರೊಂದಿಗೆ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಶಾಂತವಾಗಿರಲು ಆಧ್ಯಾತ್ಮಿಕತೆಯ ಸಹಾಯ ಪಡೆಯಿರಿ. ಹಸಿದ ಪ್ರಾಣಿ ಪಕ್ಷಿಗಳಿಗೆ ಈ ದಿನ ಆಹಾರ ನೀಡುವುದು ತುಂಬಾ ಶುಭ ಫಲವನ್ನು ನೀಡುತ್ತದೆ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಬುಧವಾರ ಮಿಶ್ರ ದಿನವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಆರ್ಥಿಕ ಲಾಭಗಳು ಸಾಧ್ಯ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಕೆಲಸದಲ್ಲಿ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನಿಮ್ಮ ಸಂಬಂಧಿಕರ ಶುಭ ಸಮಾರಂಭದಲ್ಲಿ ನೀವು ಭಾಗವಹಿಸಬಹುದು. ಈ ದಿನ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ, ಬಡವರಿಗೆ ದಾನ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಜನವರಿ 15 ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ತರಬಹುದು. ನಿಮ್ಮ ಕೆಲಸವನ್ನು ಗುರುತಿಸಿ ನಿಮ್ಮನ್ನು ಗೌರವಿಸಲಾಗುತ್ತದೆ. ಸಾಮಾಜಿಕ ಜೀವನದಲ್ಲಿ ಗೌರವ ಹೆಚ್ಚಾಗುತ್ತದೆ. ಅದು ನಿಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ. ಕನಿಷ್ಠ 14 ಜನರಿಗೆ ದಾನ ಮಾಡಿ. ಇದರಿಂದ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ವಿಷಯಗಳಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಹೆತ್ತವರ ಆಶೀರ್ವಾದದೊಂದಿಗೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಎಲ್ಲಾ ಸಾಧ್ಯತೆಗಳಿವೆ.
ಕನ್ಯಾ ರಾಶಿ
ಜನವರಿ 15 ಬುಧವಾರ ಕನ್ಯಾ ರಾಶಿಯವರಿಗೆ ತುಂಬಾ ಉತ್ತಮವಾಗಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕುಟುಂಬದ ಕೆಲಸದಲ್ಲಿ ನಿರತರಾಗಿರುವುದರಿಂದ ನಿಮ್ಮ ವೈಯಕ್ತಿಕ ಸಂಬಂಧದ ಮೇಲೆ ಇದು ಪರಿಣಾಮ ಬೀರಬಹುದು. ಮಹಿಳೆಯರೊಂದಿಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ಕೆಲಸ ಕಡೆಗೆ ಹೆಚ್ಚು ಗಮನ ಕೊಡಿ. ನಿಮ್ಮವನ್ನು ನೀವು ಸಂತೋಷವಾಗಿಡಿ. ಈ ದಿನ ಮಾಡಿದ ಶುಭ ಕಾರ್ಯಗಳು ಜೀವನದಲ್ಲಿ ಬರುವ ತೊಂದರೆಗಳನ್ನು ನಿವಾರಿಸುತ್ತವೆ.
ತುಲಾ ರಾಶಿ
ತುಲಾ ರಾಶಿಯ ಜನರು ಈ ದಿನದಂದು ಹೂಡಿಕೆಗಳಿಂದ ಲಾಭ ಪಡೆಯುತ್ತಾರೆ. ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಿದ ಹಣ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ನಿಮ್ಮ ಸಂಬಂಧಗಳಲ್ಲಿ ಮೊದಲಿಗಿಂತ ಹೆಚ್ಚು ಪ್ರೀತಿ ಮತ್ತು ತಿಳುವಳಿಕೆ ಇರುತ್ತದೆ. ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇದರಿಂದಾಗಿ ನೀವು ಹೆಚ್ಚು ಶಕ್ತಿಯುತವಾಗಿರುತ್ತೀರಿ.
ವೃಶ್ಚಿಕ ರಾಶಿ
ಈ ದಿನ ವೃಶ್ಚಿಕ ರಾಶಿಯವರು ಪವಿತ್ರಾ ಸ್ನಾನ, ದಾನ ಮತ್ತು ದೇವರ ದರ್ಶನ ಮಾಡುವುದರಿಂದ ಪುಣ್ಯದ ಫಲ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಜನರು ನಿಮ್ಮ ಸ್ವಭಾವದ ಕಡೆಗೆ ಆಕರ್ಷಿತರಾಗುತ್ತಾರೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಕುಟುಂಬದಲ್ಲಿ ಕೆಲವು ವಿವಾಹ ಸಮಾರಂಭಗಳು ನಡೆಯಲಿವೆ. ನೀವು ಗೃಹೋಪಯೋಗಿ ವಸ್ತುಗಳು ಮತ್ತು ಸರಕುಗಳನ್ನು ಖರೀದಿಸಲು ಹೆಚ್ಚು ಹಣ ಖರ್ಚಾಗಬಹುದು. ಇಂದು ಗಣೇಶನನ್ನು ಪೂಜಿಸಿ ಅಗತ್ಯ ಇರುವವರಿಗೆ ಬಿಳಿ ವಸ್ತ್ರ ದಾನ ಮಾಡಿ.
ಧನು ರಾಶಿ
ಜನವರಿ 15 ಧನು ರಾಶಿಯವರಿಗೆ ಆರ್ಥಿಕ ಪ್ರಗತಿ ತರಲಿದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮಕ್ಕಳ ಬಗೆಗಿನ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ನಿಮ್ಮ ಅತ್ತೆ-ಮಾವರಿಂದ ನಿಮಗೆ ಬೆಂಬಲ ಸಿಗುತ್ತದೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಸುವಿಗೆ ಇಂದು ಆಹಾರ ನೀಡಿ, ಮನೆ ದೇವರನ್ನು ಪೂಜಿಸುವುದರಿಂದ ಸಮಸ್ಯೆಗಳಿಲ್ಲ ಜೀವನವನ್ನು ನೀವು ನಡೆಸುವಿರಿ.
ಮಕರ ರಾಶಿ
ಮಕರ ರಾಶಿಯವರಿಗೆ ಜನವರಿ 15 ಬಧವಾರ ಮಿಶ್ರ ಫಲ ನೀಡಲಿದೆ. ಜೀವನದಲ್ಲಿ ಅನಗತ್ಯವಾಗಿ ಓಡಾಡುವುದು ಇರುತ್ತದೆ. ಅನಾರೋಗ್ಯ ಅಥವಾ ಕೆಲಸದ ಒತ್ತಡ ಇರಲಿದೆ. ಆರ್ಥಿಕ ಅಪಾಯಗಳಿಂದ ದೂರವಿರಿ. ಹಸಿದ ಪ್ರಾಣಿಗಳಿಗೆ ಅನ್ನ ನೀಡಿ. 14 ಬಡ ಮಹಿಳೆಯರಿಗೆ ಉಣ್ಣೆಯ ಬಟ್ಟೆಗಳನ್ನು ದಾನ ಮಾಡಿ. ಸಂಪತ್ತು, ಖ್ಯಾತಿ ಮತ್ತು ವೈಭವದಲ್ಲಿ ಹೆಚ್ಚಳವಾಗುತ್ತದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಕಾರಣವಿಲ್ಲದೆ ಯಾರೊಂದಿಗೂ ಸಂಘರ್ಷಕ್ಕೆ ಇಳಿಯಬೇಡಿ, ಇಲ್ಲದಿದ್ದರೆ ನೀವು ನಷ್ಟ ಅನುಭವಿಸುವಿರಿ.
ಕುಂಭ ರಾಶಿ
ಜನವರಿ 15ರಂದು ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಅಗತ್ಯ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಜೀವನೋಪಾಯದ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದು ಮನೆಯಿಂದ ಹೊರಗೆ ಹೋದರೆ ದಿನ ಚೆನ್ನಾಗಿರುತ್ತದೆ. ಹಸಿದ ಪ್ರಾಣಿಗಳಿಗೆ ನೀವು ಸೇವೆ ಮಾಡಿದರೆ ಒಳ್ಳೆಯದು.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ವಿದೇಶ ಪ್ರವಾಸದ ಸೂಚನೆಯನ್ನು ತಂದಿದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ. ಶಿಕ್ಷಣ ಕ್ಷೇತ್ರದ ಸ್ಪರ್ಧೆಯಲ್ಲಿ ನೀವು ಅನಿರೀಕ್ಷಿತ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ಹೆಚ್ಚಾಗಲಿದೆ. ಕೆಟ್ಟ ಜನರಿಂದ ದೂರವಿರಿ. ನೀರಿಗೆ ಒಂದು ಚಿಟಿಕೆ ಅರಿಶಿನ ಸೇರಿಸಿ ಸ್ನಾನ ಮಾಡಿದರೆ, ನಿಮ್ಮ ದಿನ ಚೆನ್ನಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications