Horoscope Today: ದಿನ ಭವಿಷ್ಯ ಜನವರಿ 13; ಈ ರಾಶಿಯವರಿಗೆ ಸತ್ಕರ್ಮದಿಂದ ಪುಣ್ಯದ ಫಲ

ಜನವರಿ 13 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನದಂದು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು. ಈ ರಾಶಿಯವರು ವೃತ್ತಿಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹೊಸ ಉದ್ಯೋಗ ಅವಕಾಶಗಳು ಲಭ್ಯವಿರುತ್ತವೆ. ಅದೃಷ್ಟ ಸಂಪೂರ್ಣವಾಗಿ ಕೆಲ ರಾಶಿಯವರ ಕಡೆ ಇರುತ್ತದೆ. ನೀವು ಕಷ್ಟಪಟ್ಟು ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಈ ದಿನ ನಿಮಗೆ ಸಂತೋಷವನ್ನು ತರಲಿದೆ. ಹಾಗಾದರೆ ಜನವರಿ 13 ಯಶಸ್ಸಿನ ಬಾಗಿಲು ತೆರೆಯಲಿರುವ ರಾಶಿಗಳು ಯಾವುವು? 12 ರಾಶಿಗಳ ಸೋಮವಾರದ ಭವಿಷ್ಯ ಹೇಗಿದೆ? ಯಾರಿಗೆ ಶಿವ ದೇವನ ಆಶೀರ್ವಾದ ಸಿಗಲಿದೆ? ಎಂದು ತಿಳಿಯೋಣ.

ಮೇಷ ರಾಶಿ

ಜನವರಿ 13 ರಂದು ಮೇಷ ರಾಶಿಯವರಿಗೆ ಯಶಸ್ಸಿನ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದರಲ್ಲಿ ಯಶಸ್ಸನ್ನು ಪಡೆಯುವಿರಿ. ಉದ್ಯೋಗಿಗಳಿಗೆ ಬಡ್ತಿ ಅಥವಾ ಹೊಸ ಅವಕಾಶ ಸಿಗಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಿಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಸೃಜನಶೀಲ ಕೆಲಸಗಳು ನಿಮ್ಮ ಕೈ ಹಿಡಿಯಲಿವೆ. ಶಿವನ ನೆಚ್ಚಿನ ರಾಶಿಗಳಲ್ಲಿ ಮೇಷ ರಾಶಿ ಕೂಡ ಒಂದಾಗಿದ್ದು ಈ ದಿನ ಶಿವ ಲಿಂಗಪೂಜೆ ಮಾಡಿ. ಬಡವರಿಗೆ ಸಹಾಯ ಮಾಡಿ.

horoscope today january 13 this zodiac sign get lot of money of blessings of lord shiva

ವೃಷಭ ರಾಶಿ

ವೃಷಭ ರಾಶಿಚಕ್ರದ ಜನರಿಗೆ ಈ ದಿನ ಆರ್ಥಿಕವಾಗಿ ತುಂಬಾ ಉತ್ತಮವಾಗಿರುತ್ತದೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಬಯಸಿದರೆ, ಇದು ಅದಕ್ಕೆ ಉತ್ತಮ ಸಮಯ. ನಿಮ್ಮ ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಹಳೆಯ ಬಾಕಿ ಇರುವ ಕೆಲಸಗಳು ಸಹ ಪೂರ್ಣಗೊಳ್ಳಬಹುದು. ಈ ದಿನ ಬೆಳಗ್ಗೆ ಶಿವ ಮಂತ್ರವನ್ನು ಪಠಣ ಮಾಡಿ.

ಮಿಥುನ ರಾಶಿ

ಜನವರಿ 13 ರಂದು ಮಿಥುನ ರಾಶಿಯವರ ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಗೌರವ ಅಧಿಕವಾಗಲಿದೆ. ತಂದೆಯಿಂದ ಬೆಂಬಲ ಸಿಗಲಿದೆ. ವ್ಯವಹಾರದಲ್ಲಿ ನಿಮಗೆ ತೊಂದರೆಗಳು ಎದುರಾಗಬಹುದು. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಬೆಳಿಗ್ಗೆ ಶಿವನನ್ನು ಪೂಜಿಸಿ. ಅದರಿಂದ ನಿಮ್ಮ ಮನಸ್ಸು ತುಂಬಾ ಅದ್ಭುತವಾಗಿರುತ್ತದೆ.

ಕರ್ಕಾಟಕ ರಾಶಿ

ಕಟಕ ರಾಶಿಯವರಿಗೆ ಈ ದಿನ ಉತ್ತಮವಾಗಿರುವುದಿಲ್ಲ. ಸಂಬಂಧಗಳಲ್ಲಿ ವಿರೋಧಿಗಳು ಹೆಚ್ಚಾಗುತ್ತವೆ. ನಿಮ್ಮ ಮಕ್ಕಳು ಅಥವಾ ಕುಟುಂಬದ ಯಾವುದೇ ಸದಸ್ಯರ ಕಾರಣದಿಂದಾಗಿ ನೀವು ಒತ್ತಡಕ್ಕೊಳಗಾಗಬಹುದು. ನಿಮ್ಮ ಧಾರ್ಮಿಕ ಗುರುವಿನ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ. ಬಡವರಿಗೆ ಬಟ್ಟೆ ದಾನ ಮಾಡಿ.

ಸಿಂಹ ರಾಶಿ

ಈ ದಿನ ಸಿಂಹ ರಾಶಿಯವರಿಗೆ ಹೊಸ ಜವಾಬ್ದಾರಿಗಳು ಸಿಗಲಿದೆ. ಇದು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಬಾಗಿಲು ತೆರೆಯುತ್ತದೆ. ನೀವು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ದಿನ ಅದಕ್ಕೆ ಶುಭವಾಗಿದೆ. ನೀವು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಅನುಭವಿಸುವಿರಿ, ಇದು ನಿಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕನ್ಯಾ ರಾಶಿ

ಸೋಮವಾರ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಬೆಳಿಗ್ಗೆ ಶಿವಲಿಂಗಕ್ಕೆ ಬೊಲ್ವಪತ್ರೆಯನ್ನು ಇಟ್ಟು ಪೂಜೆ ಮಾಡಿ. ಇದರಿಂದ ಶುಭ ಫಲಗಳನ್ನು ನೀವು ಪಡೆಯುವಿರಿ.

ತುಲಾ ರಾಶಿ

ಈ ದಿನ ತುಲಾ ರಾಶಿಯವರಿಗೆ ಮಿಶ್ರವಾಗಿರುತ್ತದೆ. ನೀವು ಯಾವುದೋ ಭಯದಿಂದ ಬಳಲುತ್ತಿರುತ್ತೀರಿ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗಾತಿಯಿಂದ ಕೆಲಸದಲ್ಲಿ ಲಾಭವನ್ನು ಪಡೆಯುವಿರಿ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ಅಗತ್ಯ ಇರುವವರಿಗೆ ಬಿಳಿ ಬಟ್ಟೆಗಳನ್ನು ದಾನ ಮಾಡಿ ಮತ್ತು ಶಿವ ಮಂತ್ರವನ್ನು ಜಪಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ತುಂಬಾ ಶುಭವಾಗಿರುತ್ತದೆ. ಜನವರಿ 13 ರಂದು ಅದೃಷ್ಟ ರಾಶಿಗಳಲ್ಲಿ ವೃಶ್ಚಿಕ ರಾಶಿಯೂ ಕೂಡ ಒಂದು. ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಒಂದು ನಿರ್ದಿಷ್ಟ ಗುರಿಯ ಮೇಲೆ ಕೆಲಸ ಮಾಡುತ್ತಿದ್ದರೆ, ಈಗ ಅದನ್ನು ಸಾಧಿಸುವ ಸಮಯ. ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಿಂದ ನೀವು ಸಂತೋಷವಾಗಿರುತ್ತೀರಿ.

ಧನು ರಾಶಿ

ಜನವರಿ 13 ರಂದು ಅದೃಷ್ಟ ರಾಶಿಗಳಲ್ಲಿ ಧನು ರಾಶಿ ಒಂದಾಗಿದ್ದು ಈ ದಿನ ಶಿವ ದೇವನ ಆಶೀರ್ವಾದ ಸಿಗಲಿದೆ. ಈ ದಿನ ಸೋಮವಾರ ಕುಟುಂಬ ಸಂತೋಷದಲ್ಲಿ ಹೆಚ್ಚಳವಾಗಲಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಬಹುನಿರೀಕ್ಷಿತ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಬಡವರಿಗೆ ದಾನ ಮಾಡಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿ. ಇದರಿಂದ ಪಾಪಗಳು ದೂರವಾಗುತ್ತವೆ.

ಮಕರ ರಾಶಿ

ಮಕರ ರಾಶಿಯವರಿಗೆ ಶಿವನ ವಾರ ಸೋಮವಾರ ಅಷ್ಟೊಂದು ಅದ್ಭುತವಾಗಿರುವುದಿಲ್ಲ. ಮಾನಸಿಕ ಒತ್ತಡ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಆದರೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ವಿರೋಧಿಗಳು ಸೋಲುತ್ತಾರೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ಶಿವನಿಗೆ ಪೂಜೆ ಸಲ್ಲಿಸಿ ಬಡವರಿಗೆ ಆಹಾರ ನೀಡಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಕುಂಭ ರಾಶಿ

ಕುಂಭ ರಾಶಿಯವರು ಜನವರಿ 13 ರಂದು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಶತ್ರುಗಳು ಹೆಚ್ಚಾಗುತ್ತಾರೆ. ಮನೆಯಲ್ಲಿ ಶಾಂತಿ ಇರುವುದಿಲ್ಲ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಮತ್ತು ಸಹವಾಸ ಸಿಗುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ಒತ್ತಡ ಇರುತ್ತದೆ. ಹೀಗಾಗಿ ಸೋಮವಾರ ಶಿ ದೇವಸ್ಥಾನಕ್ಕೆ ಭೇಟಿ ಮಾಡಿ ಪೂಜಿಸಿ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ಮೀನ ರಾಶಿ

ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದಲ್ಲಿ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಆಧ್ಯಾತ್ಮದಲ್ಲಿ ಅಸಕ್ತಿ ಹೆಚ್ಚಾಗುತ್ತದೆ. ಆರೋಗ್ಯ ಸುಧಾರಿಸಲಿದೆ. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನುಟ್ಟು ಪೂಜಿಸಿ.

(ಗಮನಿಸಿ: ಮೇಲೆ ನೀಡಿರುವ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+