Horoscope Today: ದಿನ ಭವಿಷ್ಯ ಜನವರಿ 12; ಈ ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರು
ಜನವರಿ 12ರಂದು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಕೆಲವು ರಾಶಿಗಳಿಗೆ ಇದರಿಂದ ಒಳಿತಾಗಲಿದೆ. ಭಾನುವಾರ ಸೂರ್ಯ ದೇವರನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನ ಕೆಲವು ರಾಶಿಯವರಿಗೆ ಹೊಸ ಉದ್ಯೋಗ ಅವಕಾಶಗಳು ಸಿಗಲಿವೆ. ಜೊತೆಗೆ ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಕುಟುಂಬ ಮತ್ತು ಸಂಬಂಧಗಳಲ್ಲಿ ಸಂತೋಷ ಹೆಚ್ಚಾಗಲಿದೆ. ಹಾಗಾದರೆ ಜನವರಿ 12ರಂದು ಸೂರ್ಯ ದೇವನ ಕೃಪೆ ಯಾವ ರಾಶಿಯ ಮೇಲಿದೆ? 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಜನವರಿ 12 ತುಂಬಾ ಶುಭ ದಿನವಾಗಿದೆ. ಈ ದಿನ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುವ ಹೊಸ ಅವಕಾಶಗಳು ಸಿಗಬಹುದು. ಹಣಕಾಸಿನ ವಿಷಯಗಳಲ್ಲಿಯೂ ಲಾಭದ ಸಾಧ್ಯತೆ ಇದೆ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಅದು ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಆತ್ಮವಿಶ್ವಾಸ ಹಾಗೂ ಕುಟುಂಬದ ಪ್ರತಿಷ್ಠೆ ಹೆಚ್ಚಾಗಲಿದೆ. ಈ ದಿನ ಬೆಳಿಗ್ಗೆ ಸೂರ್ಯ ದೇವನನ್ನು ಭಕ್ತಿಯಿಂದ ಪೂಜಿಸುವುದರಿಂದ ಪಾಪಗಳು ದೂರವಾಗುತ್ತವೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಜನವರಿ 12 ಮಂಗಳಕರ ದಿನವಾಗಿದೆ. ಮುಖ್ಯವಾಗಿ ಈ ದಿನ ತುಂಬಾ ರಿಲ್ಯಾಕ್ಸ್ ಮೂಡ್‌ನಲ್ಲಿ ನೀವು ಇರುವಿರಿ. ಕುಟುಂಬಸ್ಥರೊಂದಿಗೆ ಹಿತವಾದ ಸಮಯವನ್ನು ಆನಂದಿಸುವಿರಿ. ನಿಮ್ಮ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ವ್ಯವಹಾರದ ಖ್ಯಾತಿ ಹೆಚ್ಚಾಗುತ್ತದೆ. ಈ ದಿನ ಸೂರ್ಯ ಮಂತ್ರವನ್ನು ಪಠಿಸಿ, ದೇವಸ್ಥಾನಕ್ಕೆ ಭೇಟಿ ತುಪ್ಪದ ದೀಪ ಬೆಳಗಿಸಿ. ಇದರಿಂದ ನಿಮ್ಮ ಶತ್ರು ಕಾಟ ದೂರವಾಗುತ್ತದೆ.
ಮಿಥುನ ರಾಶಿ
ಜನವರಿ 12 ಮಿಥುನ ರಾಶಿಯವರಿಗೆ ಸಂತೋಷದ ದಿನವಾಗಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗಲಿದೆ. ಒಡಹುಟ್ಟಿದವರು ಅಥವಾ ನೆರೆಹೊರೆಯವರೊಂದಿಗೆ ವಾದಗಳು ಉಂಟಾಗಬಹುದು. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತವೆ. ಸರ್ಕಾರದಿಂದ ಬೆಂಬಲ ದೊರೆಯಲಿದೆ. ವ್ಯವಹಾರ ವಿಷಯಗಳಲ್ಲಿ ಪ್ರಗತಿ ಇರುತ್ತದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ಅಥವಾ ಆಹಾರವನ್ನು ನೀಡಿ. ಸೂರ್ಯದೇವನ ಮಂತ್ರವನ್ನು ಪಠಿಸಿ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಈ ದಿನ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಸಾಮಾಜಿಕ ಖ್ಯಾತಿಗೆ ಕಳಂಕ ಬರಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆರ್ಥಿಕ ನಷ್ಟವಾಗುವ ಸಾಧ್ಯತೆಗಳಿವೆ. ಧಾರ್ಮಿಕ ನಾಯಕನ ಆದೇಶಗಳನ್ನು ಪಾಲಿಸಿ ಇಲ್ಲದಿದ್ದರೆ ಉದ್ಯೋಗದಲ್ಲಿ ನಷ್ಟವಾಗುತ್ತದೆ. ಸೂರ್ಯದೇವನ ಮಂತ್ರವನ್ನು ಪಠಿಸಿ ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ ಪೂಜೆ ಮಾಡಿ ದೀಪ ಬೆಳಗಿಸಿ.
ಸಿಂಹ ರಾಶಿ
ಈ ದಿನ ಸಿಂಹ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಹಲವಾರು ಹೊಸ ಉದ್ಯೋಗಕ್ಕಾಗಿ ಆಫರ್‌ಗಳು ಬರುತ್ತವೆ. ನಿಮಗೆ ವ್ಯವಹಾರದಲ್ಲಿ ಕುಟುಂಬದ ಸದಸ್ಯರಿಂದ ಬೆಂಬಲ ಸಿಗುತ್ತದೆ. ಆದರೆ ಸಂಬಂಧಿಕರು ಅಥವಾ ನೆರೆಹೊರೆಯವರಿಂದ ಒತ್ತಡ ಎದುರಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಸಂಗಾತಿಯಿಂದ ನೀವು ತುಂಬಾ ಸಂತೋಷವಾಗಿರುತ್ತೀರಿ. ಬೆಳಿಗ್ಗೆ ಸೂರ್ಯ ದೇವರಿಗೆ ವಿಶೇಷ ಪೂಜೆಯನ್ನು ಮಾಡಿ ಕೈಲಾದಷ್ಟು ಸಹಾಯ ಮಾಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರ ಫಲ ಸಿಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗಬಹುದು. ಕುಟುಂಬದ ಜವಾಬ್ದಾರಿಗಳು ನಿಮಗೆ ಅಧಿಕವಾಗುತ್ತವೆ. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಈ ದಿನ ಬುಧ ಗ್ರಹದ ಮಂತ್ರವನ್ನು ಪಠಿಸಿ, ಅನಾಥರಿಗೆ ಸಹಾಯ ಮಾಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಉತ್ತಮ ಫಲ ಸಿಗಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುವ ದಿನವಿದು. ಸೂರ್ಯನ ಆಶೀರ್ವಾದಿಂದ ವಿರೋಧಿಗಳು ನಾಶವಾಗುತ್ತಾರೆ. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ವ್ಯಾಪಾರ ಮತ್ತು ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಶನಿ ಮಂತ್ರವನ್ನು ಪಠಿಸಿ. ಬಡವರಿಗೆ ಅಗತ್ಯ ಇರುವ ವಸತುಗಳನ್ನು ದಾನ ಮಾಡಿ. ಇದರಿಂದ ನಿಮ್ಮ ಪುಣ್ಯದ ಫಲ ದ್ವಿಗುಣವಾಗುತ್ತದೆ.
ವೃಶ್ಚಿಕ ರಾಶಿ
ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಅತ್ತೆ-ಮಾವನ ಮನೆಯಲ್ಲಿ ನಿಮ್ಮ ಮೇಲೆ ಗೌರವ ಹಾಗೂ ನಂಬಿಕೆ ಹೆಚ್ಚಾಗುತ್ತದೆ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಅದು ಪ್ರಯೋಜನಕಾರಿಯಾಗಿರುತ್ತದೆ. ಈ ದಿನ ನೀವು ಪ್ರವಾಸ ಹೋಗಬಹುದು. ನಿಮ್ಮ ಎಲ್ಲಾ ಕಾರ್ಯಗಳು ಸೂರ್ಯ ದೇವನ ಆಶೀರ್ವಾದದಿಂದ ಅಡೆತಡೆ ಇಲ್ಲದೆ ನೆರವೇರುತ್ತವೆ. ಈ ದಿನ ಸೂರ್ಯ ದೇವನನ್ನು ಶ್ರದ್ಧೆಯಿಂದ ಪೂಜಿಸಿ ಸೂರ್ಯ ನಮಸ್ಕಾರವನ್ನು ಮಾಡಿ.
ಧನು ರಾಶಿ
ಜನವರಿ 12 ಧನು ರಾಶಿಯವರಿಗೆ ಶುಭ ದಿನವಾಗಿದೆ. ನಿಮ್ಮ ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಶುಭ ಹಾರೈಕೆ ನಿಮ್ಮ ಮೇಲೆ ಸದಾ ಉಳಿಯಲಿದೆ. ಹೀಗಾಗಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುವುದು ಒಳ್ಳೆಯದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕುಟುಂಬದ ಸದಸ್ಯರಿಂದ ನಿಮಗೆ ಒತ್ತಡ ಎದುರಾಗಬಹುದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಪ್ರಯಾಣದ ವೇಳೆ ನಿಧಾನವಾಗಿ ಚಾಲನೆ ಮಾಡಿ. ಸೂರ್ಯ ದೇವನ ಮಂತ್ರವನ್ನು ಪಠಿಸಿ. ಬಡವರಿಗೆ ಸಹಾಯ ಮಾಡಿ.
ಮಕರ ರಾಶಿ
ಜನವರಿ 12 ಮಕರ ರಾಶಿಯವರಿಗೆ ತುಂಬಾ ಶುಭ ಫಲವನ್ನು ನೀಡಲಿದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಸಹೋದರ ಸಹೋದರಿಯರಿಂದ ನಿಮಗೆ ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬೆಳಿಗ್ಗೆ ಸೂರ್ಯ ದೇವರಿಗೆ ನೈವೈದ್ಯವನ್ನು ಅರ್ಪಿಸಿ ಪೂಜಿಸಿ. ಹಸುವಿಗೆ ಆಹಾರ ನೀಡಿ. ನಿಮ್ಮ ಸಮಸ್ಯೆಗಳು ಪರಿಹಾರವಾಗಿ ಅಗತ್ಯ ಇರುವವರಿಗೆ ಮಾತ್ರ ವಸ್ತ್ರ ದಾನ ಮಾಡಿ.
ಕುಂಭ ರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ವಿರೋಧಿಗಳು ಸೋಲುತ್ತಾರೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ವಿಷಯಗಳನ್ನು ಬಲಪಡಿಸಲು ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಶನಿದೇವನನ್ನು ಪೂಜಿಸಿ. ಸಂಜೆ ಸೂರ್ಯ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ.
ಮೀನ ರಾಶಿ
ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳು ಅಥವಾ ಶಿಕ್ಷಣದ ಕಾರಣದಿಂದಾಗಿ ನೀವು ಚಿಂತೆ ಮಾಡುತ್ತೀರಿ. ಆರೋಗ್ಯ ಶೀಘ್ರವಾಗಿ ಸುಧಾರಿಸುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ ಮತ್ತು ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ಹಸುವಿಗೆ ಸೇವೆ ಮಾಡಿದರೆ, ನಿಮಗೆ ವಿಶೇಷ ಆಶೀರ್ವಾದಗಳು ಸಿಗುತ್ತವೆ. ಗುರುವಿನ ಬೀಜ ಮಂತ್ರವನ್ನು ಪಠಿಸಿ.
(ಗಮನಿಸಿ: ಮೇಲೆ ನೀಡಿರುವ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications