Horoscope on July 28: ಸರ್ವಾರ್ಥ ಸಿದ್ಧಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ: ಹರಿದು ಬರುವುದು ಹಣ, ಕೆಲಸದಲ್ಲಿ ಜಯ
Horoscope on July 28: ಇಂದಿನ ದಿನವು ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಮೇಷ ರಾಶಿ
ಉಲ್ಲಾಸದಿಂದಲೇ ದಿನದ ಆರಂಭವಾಗುವುದು. ನೀವು ನಡೆದುಕೊಳ್ಳುವ ರೀತಿ ಜನರಿಗೆ ಇಷ್ಟವಾಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ನಿರೀಕ್ಷೆಗೂ ಮೀರಿ ಹಣ ಸಿಗುವುದು.ಗೌರವ ಹೆಚ್ಚಾಗುವುದು. ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡುವುದು.

ವೃಷಭ ರಾಶಿ
ನಿಮ್ಮ ಪಾಳಿನ ಅದೃಷ್ಟದ ದಿನ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗುವುದು. ವ್ಯಾಪಾರ ವ್ಯವಹಾರ ವಿತರಿಸುವ ಯೋಚನೆ ಇದ್ದರೆ ಮುಂದುವರಿಯಬಹುದು. ವಾಹನ ಚಲಾಯಿಸುವಾಗ ಜಾಗೃತೆ ಇರಲಿ.
ಮಿಥುನ ರಾಶಿ
ಹೊಸ ಹೊಸ ಅವಕಾಶಗಳು ಎದುರಾಗುವುದು. ಅಂದುಕೊಂಡ ಕೆಲಸ ಸಾಧಿಸುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ವಿದ್ಯಾರ್ಥಿಗಳಿಗೆ ಜಯ ಸಿಗುವುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಕರ್ಕಾಟಕ ರಾಶಿ
ಸಂತೋಷದಿಂದ ಕೂಡಿದ ದಿನವಾಗಿರುವುದು. ಸಿಹಿ ಸುದ್ದಿ ಸಿಗುವುದು. ಉದ್ಯಮಿಗಳಿಗೆ ಹೊಸ ಡೀಲ್ ಸಿಗುವುದು. ಹೆಚ್ಚಿನ ಲಾಭ ಗಳಿಸಲು ಸುವರ್ಣಾವಕಾಶವಿದು. ಇಂದು ಆಂಜನೇನ ಪೂಜೆ ಮಾಡುವ ಮೂಲಕ ಕೆಲಸದಲ್ಲಿ ಯಶಸ್ಸು ಸಾಧಿಸಿಕೊಳ್ಳಬಹುದು.
ಸಿಂಹ ರಾಶಿ
ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಗದಿದ್ದರೂ ಭವಿಷ್ಯದಲ್ಲಿ ನಿಮಗೆ ನೆರವಾಗುವುದು. ಅನಗತ್ಯವಾಗಿ ಯೋಚಿಸಬೇಡಿ. ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಖರ್ಚುಗಳನ್ನು ನಿಯಂತ್ರಿಸುವ ಅಗತ್ಯ ಇದೆ.
ಕನ್ಯಾ ರಾಶಿ
ಭವಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದವರಿಗೆ ಒಳ್ಳೆಯ ಸುದ್ದಿ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಒಳ್ಳೆಯ ದಿನ.
ತುಲಾ ರಾಶಿ
ನಿಮ್ಮ ನಿರೀಕ್ಷೆಯಂತೆ ಹಣದ ನೆರವು ಸಿಗುವುದು. ಆರ್ಥಿಕ ಸಂಕಷ್ಟಕ್ಕೆ ಸ್ವಲ್ಪ ಪರಿಹಾರ ಸಿಗುವುದು. ಕಚೇರಿಯಲ್ಲಿ ಯಾರೊಂದಿಗೂ ಜಗಳಕ್ಕೆ ಇಳಿಯಬೇಡಿ. ಮಾತು ಹಿಡಿತದಲ್ಲಿದ್ದರೆ ತಾಳ್ಮೆಯಿದ್ದರೆ ಒಳ್ಳೆಯದು. ಮಕ್ಕಳಿಂದ ಸಂತೋಷ ಹೆಚ್ಚಾಗುವುದು.
ವೃಶ್ಚಿಕ ರಾಶಿ
ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಮನೆಯ ಸೌಕರ್ಯಗಳಿಗೆ ಹೆಚ್ಚು ಖರ್ಚು ಮಾಡಬೇಕಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹೊಸ ಯೋಜನೆಗಳನ್ನು ಸುಲಭದಲ್ಲಿಯೇ ಪೂರ್ಣಗೊಳಿಸುವಿರಿ.
ಧನು ರಾಶಿ
ನಿಮಗೆ ಅನುಕೂಲಕರ ದಿನವಾಗಲಿದೆ. ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗುವುದು. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮಾತಿಗೆ ಮನ್ನಣೆ ಸಿಗುವುದು. ವೈವಾಹಿಕ ಜೀವನ ಸಂತೋಷದಿಂದ ಕೂಡಿರುವುದು.
ಮಕರ ರಾಶಿ
ದಿನವಿಡೀ ಕೆಲಸದಲ್ಲಿ ಮುಳುಗಿ ಹೋಗುವಿರಿ. ಮಾನಸಿಕ ಒತ್ತಡ ಹೆಚ್ಚಾಗುವುದು. ವಾದಗಳಿಂದ ದೂರವಿರಬೇಕು. ನಿಮ್ಮದಲ್ಲದ ವಿಚಾರದಲ್ಲಿ ಮೂಗು ತೂರಿಸಬೇಡಿ. ಸಂಗಾತಿಯ ಜೊತೆ ಮನಸ್ತಾಪ ಉಂಟಾಗಬಹುದು. ಆರೋಗ್ಯವು ಅತ್ಯುತ್ತಮವಾಗಿರುತ್ತದೆ.
ಕುಂಭ ರಾಶಿ
ನಿಮ್ಮ ಗೌರವ ಹೆಚ್ಚಾಗುವ ದಿನ. ಮಾಡುವ ಎಲ್ಲಾ ಕೆಲಸದಲ್ಲಿಯೂ ಜಯ ಸಿಗುವುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಕ್ಕೆ ಈವತ್ತು ಮುಕ್ತಿ ಸಿಗುವುದು. ಕುಟುಂಬದೊಂದಿಗೆ ಸಮಯವನ್ನು ಕಳೆಯುವಿರಿ.
ಮೀನ ರಾಶಿ
ಇಂದು ನಿಮಗೆ ಅದ್ಭುತವಾದ ದಿನವಾಗಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಒಳ್ಳೆಯ ದಿನ. ಅತ್ತೆ ಸೊಸೆಯ ನಡುವೆ ಭಿನ್ನಾಭಿಪ್ರಾಯ ಮೂಡಿ ಮನೆಯ ವಾತಾವರಣ ಹಾಳಾಗಬಹುದು.


Click it and Unblock the Notifications
