ಈ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಆಗುವುದು ಲಾಭ : ನಿಮ್ಮ ದಿನ ಹೇಗಿರಲಿದೆ ನೋಡಿ ನಿತ್ಯ ಭವಿಷ್ಯದಲ್ಲಿ
Horoscope May 5: ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಮಂಗಳವಾರ ರಾಹುಕಾಲವು ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರುತ್ತದೆ. ಮೇ 3 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಕೆಲಸದಲ್ಲಿ ಅಧಿಕಾರಿಗಳೊಂದಿಗೆ ವಾದಗಳು ನಡೆಯುವ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಒತ್ತಡ ಸ್ಥಿತಿ ನಿರ್ಮಾಣವಾಗುವುದು. ಆದಾಯದಲ್ಲಿ ನಿರೀಕ್ಷಿತ ಹೆಚ್ಚಳವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ:
ಅಂದುಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುವುದು.ಆದಾಯ ಹೆಚ್ಚಾಗುವುದು.ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.
ಮಿಥುನ ರಾಶಿ:
ಕೆಲಸದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಇತರರಿಗಿಂತ ಮುಂದಿರುವಿರಿ. ವೃತ್ತಿ ಮತ್ತು ವ್ಯವಹಾರವು ಲಾಭದಾಯಕವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಇರುತ್ತದೆ.
ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು.
ಕರ್ಕಾಟಕ ರಾಶಿ:
ಆರ್ಥಿಕ ಪರಿಸ್ಥಿತಿ ನಿರೀಕ್ಷೆಯಂತೆ ಸುಧಾರಿಸುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಒಂದು ಹೆಜ್ಜೆ ಮೇಲಕ್ಕೆ ಹೋಗುವ ಅವಕಾಶವಿದೆ. ಆರೋಗ್ಯವು ಉತ್ತಮವಾಗಿರುತ್ತದೆ.
ಸಿಂಹ ರಾಶಿ:
ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ವೃತ್ತಿ ಮತ್ತು ವ್ಯವಹಾರವು ಯಾವುದೇ ಹಿನ್ನಡೆಯಿಲ್ಲದೆ ಮುಂದುವರಿಯುತ್ತದೆ. ಪ್ರಯಾಣ ಮಾಡುವಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಕನ್ಯಾ ರಾಶಿ:
ಕೆಲಸದ ಹೊರೆ ಹೆಚ್ಚಾಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಒತ್ತಡವಿರುತ್ತದೆ. ಯೋಜಿಸಿದ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳುತ್ತವೆ. ಆರ್ಥಿಕ ಲಾಭಗಳಾಗುವುದು. ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು.
ತುಲಾ ರಾಶಿ:
ಆದಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಯಾವುದೇ ಹಿನ್ನಡೆ ಇರುವುದಿಲ್ಲ. ವೈಯಕ್ತಿಕ ಸಮಸ್ಯೆಗಳು ಬಗೆಹರಿಯುತ್ತವೆ. ಒಡಹುಟ್ಟಿದವರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.
ವೃಶ್ಚಿಕ ರಾಶಿ:
ಹೆಚ್ಚುವರಿ ಆದಾಯಕ್ಕಾಗಿ ಮಾಡುವ ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಕೆಲಸದ ಹೊರೆ ಹೆಚ್ಚಾದರೂ, ಪ್ರತಿಫಲ ಸಿಗುವುದು.
ಧನು ರಾಶಿ:
ವೃತ್ತಿ ಮತ್ತು ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ಆದಾಯ ಸ್ಥಿರವಾಗಿರುತ್ತದೆ. ಅನಿರೀಕ್ಷಿತ ವೆಚ್ಚಗಳು ನಿಮ್ಮ ಮೇಲೆ ಬೀಳುತ್ತವೆ. ಸ್ನೇಹಿತರ ಸಹಕಾರದಿಂದ ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುವುದು.
ಮಕರ ರಾಶಿ:
ಕೆಲಸದ ಹೊರೆ ಹೆಚ್ಚಾಗುತ್ತದೆ. ವೃತ್ತಿಪರ ಜೀವನ ಸುಗಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಮನಸ್ಸಿನ ಆಸೆ ಅನಿರೀಕ್ಷಿತವಾಗಿ ಈಡೇರುವುದು.
ಕುಂಭ ರಾಶಿ:
ವೃತ್ತಿ ಮತ್ತು ಉದ್ಯೋಗಗಳಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುವುದು. ಆರ್ಥಿಕ ಪ್ರಯತ್ನಗಳಲ್ಲಿ ಪ್ರಗತಿಯಾಗುವುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.
ಮೀನ ರಾಶಿ:
ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದು. ಕೆಲವು ಪ್ರಮುಖ ಪ್ರಯತ್ನಗಳಲ್ಲಿ ನೀವು ಬಯಸಿದ ಫಲಿತಾಂಶ ಸಿಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications