ನಂಬಿದವರಿಂದ ಮೋಸವಾಗುವುದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ ದ್ವಾದಶ ರಾಶಿಗಳ ನಿತ್ಯ ಭವಿಷ್ಯ

Horoscope May 26: ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಮಂಗಳವಾರ ರಾಹುಕಾಲವು ಮಧ್ಯಾಹ್ನ 3:00 ರಿಂದ ಸಂಜೆ 4:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಹಣ ಮತ್ತು ಆಸ್ತಿ ವಿಚಾರದಲ್ಲಿ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ಅವು ಜಗಳವಾಗಿ ಬದಲಾಗಬಹುದು. ಸಕಾರಾತ್ಮಕವಾಗಿರಿ. ಯಾವುದೇ ಕಾರಣಕ್ಕೂ ಯಾರೊಂದಿಗಿಗೂ ಜಗಳಕ್ಕೆ ಹೋಗಬೇಡಿ. ಎಲ್ಲವೂ ನೀವು ಅಂದುಕೊಂಡದ್ದಕ್ಕಿಂತ ವಿರುದ್ಧವಾಗಿಯೇ ನಡೆಯುವುದು.

Horoscope May 26

ವೃಷಭ ರಾಶಿ:

ಮೇಲಾಧಿಕಾರಿಗಳು ಮತ್ತು ಅಧಿಕಾರದಲ್ಲಿರುವ ವ್ಯಕ್ತಿಗಳು ಕೆಲಸದ ಹೆಸರಿನಲ್ಲಿ ನಿಮ್ಮನ್ನು ಟೀಕಿಸಬಹುದು. ಅಥವಾ ನಿಮ್ಮನ್ನು ಕೀಳು ಮಟ್ಟದಲ್ಲಿ ಕಾಣಬಹುದು. ಅತ್ಯುತ್ತಮ ಹಣ ಗಳಿಕೆಯ ಅವಕಾಶವಿದೆ. ತಾಳ್ಮೆಯಿದ್ದರೆ ಗೆಲುವುದು ಸಿಗುವುದು.

ಮಿಥುನ ರಾಶಿ:

ನಿಮ್ಮ ವ್ಯಕ್ತಿತ್ವವನ್ನು ನೀವೇ ರೂಪಿಸಬೇಕು. ನೀವು ಪರಿಶ್ರಮಪಟ್ಟರೆ ಮಾತ್ರ ನಿಮಗೆ ಯಶಸ್ಸು ಸಿಗುವುದು. ನಂಬಿದವರಿಂದ ಮೋಸ ಹೋಗುವಿರಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ.

ಕಟಕ ರಾಶಿ:

ಇಂದು ಸ್ನೇಹಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಿ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ವಿಶೇಷವಾಗಿ ಆಸ್ತಿ ಹಂಚಿಕೆ ಅಥವಾ ಹಣಕಾಸಿನ ಬಗ್ಗೆ ಎಚ್ಚರಿಕೆ ಅಗತ್ಯ. ಕೌಟುಂಬಿಕ ಸಮಸ್ಯೆಗಳಿಂದ ಗೊಂದಲ ಉಂಟಾಗಬಹುದು.

ಸಿಂಹ ರಾಶಿ:

ಮಾತನಾಡುವಾಗ ಆಡುವ ಮಾತಿನ ಬಗ್ಗೆ ನಿಗಾ ಇರಲಿ. ಯೋಚಿಸಿ ಶಬ್ದಗಳನ್ನು ಬಳಸಿ. ನಿಮ್ಮ ಮಾತುಗಳು ಆಕ್ರಮಣಕಾರಿಯಾಗದೆ ಇದ್ದರೆ ಒಳ್ಳೆಯದು. ಸ್ನೇಹಿತರ ಸಹಾಯ ಸಿಗುವುದು.

ಕನ್ಯಾರಾಶಿ:

ಇಂದು ರಾಜಕೀಯ, ಧರ್ಮ ಮತ್ತು ಜನಾಂಗೀಯ ಸಮಸ್ಯೆಗಳಂತಹ ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಸಾಂದರ್ಭಿಕ ಚರ್ಚೆಯು ಬೇಗನೆ ಕಹಿ ವಾದಕ್ಕೆ ಕಾರಣವಾಗಬಹುದು. ಅದೃಷ್ಟವಶಾತ್, ಅಧಿಕಾರದಲ್ಲಿರುವ ವ್ಯಕ್ತಿಗಳ ಬೆಂಬಲ ನಿಮಗಿರುವುದು.

ತುಲಾ ರಾಶಿ:

ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಎದುರಾಗುವುದು. ನಿಮ್ಮ ಪರವಾಗಿ ಯಾರೂ ನಿಲ್ಲುವುದಿಲ್ಲ. ಕಚೇರಿಯಲ್ಲಿ ಒಂಟಿ ಎನ್ನುವ ಭಾವ ನಿಮ್ಮನ್ನು ಕಾಡಬಹುದು. ಆಸ್ತಿ ಹಂಚಿಕೆ ನಿಮ್ಮವರ ಮಧ್ಯೆಯೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವುದು.

ವೃಶ್ಚಿಕ ರಾಶಿ:

ನಿಮಗೆ ಹತ್ತಿರವಿರುವವರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣ, ಪ್ರವಾಸದಿಂದ ಮನಸ್ಸಿಗೆ ಸಂತೋಷ ಸಿಗುವುದು. ಪ್ರೇಮ ಸಂಬಂಧ ಉತ್ತಮವಾಗಿರುವುದು. ಸಂಗಾತಿಯಿಂದ ಉತ್ತಮ ಉಡುಗೊರೆ ಸಿಗಬಹುದು.

ಧನು ರಾಶಿ:

ಲವಲವಿಕೆಯಿಂದ ಇರುವುದು ಮುಖ್ಯ. ನಿಮ್ಮ ದಿನ ಉತ್ತಮವಾಗಿರಬೇಕಾದರೆ ಸಕಾರಾತ್ಮಕ ಆಲೋಚನೆಗಳನ್ನು ನಿಮ್ಮದಾಗಿಸಿಕೊಳ್ಳಿ. ಕಚೇರಿಯಲ್ಲಿ ವಾತಾವರಣ ನಿಮ್ಮ ಪರವಾಗಿ ಇರುವುದು.

ಮಕರ ರಾಶಿ:

ಸಮಯ ನಿಮ್ಮ ಪರವಾಗಿ ಇರುವುದು. ನೀವು ಏನೇ ಮಾಡಿದರೂ ಯಶಸ್ಸು ಸಿಗುವುದು. ಮಕ್ಕಳೊಂದಿಗೆ ತಾಳ್ಮೆಯಿಂದಿರಿ. ಸಂಗಾತಿಯೊಂದಿಗೆ ವಾದಕ್ಕೆ ಇಳಿಯಬೇಡಿ. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

ಕುಂಭ ರಾಶಿ:

ಕುಟುಂಬದಲ್ಲಿ ಸಣ್ಣ ಪುಟ್ಟ ಜಗಳಗಳು ಉಂಟಾಗುವುದು. ಮನೆಯ ಕೆಲಸ ಕಾರ್ಯಗಳಲ್ಲಿ ಕೈಲಾದಷ್ಟು ಸಹಾಯ ಮಾಡಿ. ಮಕ್ಕಳೊಂದಿಗಿನ ಸಂಬಂಧಗಳು ಸಕಾರಾತ್ಮಕವಾಗಿರುತ್ತವೆ. ಕಲಾವಿದರಿಗೆ ದಿನ ಅನುಕೂಲಕರವಾಗಿರಲಿದೆ.

ಮೀನ ರಾಶಿ:

ಮನೆ ದುರಸ್ತಿ ಕಾರ್ಯ ನಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಮಕ್ಕಳೊಂದಿಗೆ ವಿಹಾರಕ್ಕೆ ತೆರಳುವಿರಿ. ಮನೆಯಲ್ಲಿ ಅನುಕೂಲಕರ ವಾತಾವರಣ ಇರುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+