Daily Horoscope September 03: ಈ ದಿನ 4 ರಾಶಿಯವರಿಗೆ ಅದೃಷ್ಟ, ವ್ಯವಹಾರದಲ್ಲಿ ದೊಡ್ಡ ಲಾಭ, ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ!

Daily Horoscope September 03: ಇಂದು ಕೃಷ್ಣ ಪಕ್ಷದ ಏಳನೇ ದಿನವಾಗಿರುತ್ತದೆ. ಕೃತ್ತಿಕಾ ನಕ್ಷತ್ರದ ಪ್ರಭಾವವು ದಿನವಿಡೀ ಇರುತ್ತದೆ. ಬೆಳಿಗ್ಗೆ 7:26 ರ ನಂತರ ಚಂದ್ರನು ವೃಷಭ ರಾಶಿಗೆ ಸಾಗುತ್ತಾನೆ. ಇಂದು ಗುರು ಮತ್ತು ವಿಷ್ಣುವಿನ ಆಶೀರ್ವಾದದೊಂದಿಗೆ, ವ್ಯಾಘಾತ ಯೋಗ, ಬುಧಾದಿತ್ಯ ಯೋಗ ಮತ್ತು ಸುನಫ ಯೋಗದ ಪ್ರಭಾವವಿರುವುದು. ಇಂದಿನ ನಿತ್ಯ ಭವಿಷ್ಯ ಹೇಗಿದೆ ನೋಡೋಣ..

ಮೇಷ ರಾಶಿ (Aries)

ಇಂದು ಆಕ್ಟಿವ್‌ ಆಗಿ ಇರುವಿರಿ. ಒಲಿದು ಬರುವ ಅವಕಾಶಗಳನ್ನು ಬಳಸಿಕೊಳ್ಳಲು ಸಿದ್ಧರಾಗಿರಿ. ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಉದ್ಯೋಗಿಗಳಿಗೆ ಅವರ ಸಾಮರ್ಥ್ಯಗಳನ್ನು ಪರೀಕ್ಷಿಸುವ ಹೊಸ ಜವಾಬ್ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುವುದು. ಹಳೆಯ ವಿಷಯದ ಬಗ್ಗೆ ಮನೆಯಲ್ಲಿ ಜಗಳ ಉಂಟಾಗಬಹುದು. ಆದಾಯದ ಮೂಲಗಳು ಬಲವಾಗಿರುವುದು. ಆದರೂ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ.

Daily Horoscope September 03 Good Luck 4 Zodiac Signs Big Business Gains Govt Job Opportunities

ವೃಷಭ ರಾಶಿ (Taurus)

ಉದ್ಯಮಿಗಳಿಗೆ ಇದು ಲಾಭದಾಯಕ ದಿನ. ನಿಂತು ಹೋಗಿರುವ ವ್ಯವಹಾರ ಯೋಜನೆಗಳನ್ನು ಮತ್ತೆ ಆರಂಭಿಸಲು ಇದು ಸರಿಯಾದ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುವುದು. ಬಹಳ ದಿನಗಳಿಂದ ಕೈ ಸೇರದೆ ಇರುವ ಹಣ ಮತ್ತೆ ವಾಪಸ್‌ ಬರುವುದು. ಆರ್ಥಿಕ ಪರಿಸ್ಥಿತಿ ಬಲವಾಗಿರುವುದು. ಆರೋಗ್ಯವು ಅತ್ಯುತ್ತಮವಾಗಿರುವುದು.

ಮಿಥುನ ರಾಶಿ (Gemini)

ನಿಮ್ಮ ಬುದ್ಧಿವಂತಿಕೆಯಿಂದ ಕಚೇರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ವಿದ್ಯಾರ್ಥಿಗಳು ಹೊಸ ತಂತ್ರಗಳನ್ನು ಬಳಸುವ ಮೂಲಕ ಯಶಸ್ಸು ಸಾಧಿಸುವರು. ಹಿರಿಯರ ಬೆಂಬಲವು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು. ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಹಣದ ಹರಿವು ಉತ್ತಮವಾಗಿರುವುದು.

ಕಟಕ ರಾಶಿ (Cancer)

ಸಾಮಾನ್ಯಕ್ಕಿಂತ ಹೆಚ್ಚು ಶ್ರಮಿಸಬೇಕಾಗುವುದು. ಅನುಭವಿ ವ್ಯಕ್ತಿಯೊಂದಿಗೆ ಸಮಾಲೋಚಿಸಿದ ನಂತರವೇ ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಠಿಣ ಪರಿಶ್ರಮದಿಂದ ಕಚೇರಿಯಲ್ಲಿ ಸಕಾರಾತ್ಮಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ದಿನವು ಅನುಕೂಲಕರವಾಗಿರುವುದು. ಹಿರಿಯರ ಮಾರ್ಗದರ್ಶನದಿಂದ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು. ಯಾರಿಗೂ ಸಾಲ ನೀಡಬೇಡಿ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ.

ಸಿಂಹ ರಾಶಿ (Leo)

ವ್ಯವಹಾರ ವಿಸ್ತರಣೆ ಮಡಲು ಸೂಕ್ತ ದಿನ. ಹೊಸ ತಂತ್ರಗಳಲ್ಲಿ ಕೆಲಸ ಮಾಡಲು ಸಮಯವು ತುಂಬಾ ಅನುಕೂಲಕರವಾಗಿರುವುದು. ಉದ್ಯೋಗಿಗಳಿಗೆ ಪ್ರಮುಖ ಜವಾಬ್ದಾರಿ ಸಿಗುವುದು. ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುವ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುವರು. ವೈವಾಹಿಕ ಜೀವನ ಸಾಮರಸ್ಯದಿಂದ ಇರುವುದು. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವುದು. ಆರ್ಥಿಕ ಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳುವುದು.

ಕನ್ಯಾರಾಶಿ (Virgo)

ವ್ಯವಹಾರದಲ್ಲಿ ಹೊಸ ಆದಾಯದ ಅವಕಾಶಗಳು ಸಿಗುವುದು. ಹಳೆಯ ವ್ಯವಹಾರ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುವುದು. ಕುಟುಂಬದೊಂದಿಗೆ ಸಂತೋಷಕರ ಸಮಯವನ್ನು ಕಳೆಯುವಿರಿ. ಪ್ರೀತಿ ಸಂಗಾತಿಯೊಂದಿಗಿನ ನಂಬಿಕೆ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿರುವುದು. ಆರೋಗ್ಯ ಉತ್ತಮವಾಗಿರುವುದು.

ತುಲಾ ರಾಶಿ (Libra)

ಹೊಸ ವ್ಯಾಪಾರ ಸಂಪರ್ಕಗಳು ಹುಟ್ಟಿಕೊಳ್ಳುವುದು. ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವಾಗುವುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಅವಕಾಶಗಳು ಸಿಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಏಕಾಗ್ರತೆ ಇರುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ.

ವೃಶ್ಚಿಕ ರಾಶಿ (Scorpio)

ಕೆಲಸದಲ್ಲಿ ಹಠಾತ್ ಹೆಚ್ಚುವರಿ ಜವಾಬ್ದಾರಿಗಳು ಸಿಗುವುದು. ಪಾಲುದಾರರು ಅಥವಾ ಸಹೋದ್ಯೋಗಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.ಮಾತಿನ ಮೇಲೆ ಹಿಡಿತವಿರಲಿ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು. ಕೆಲವು ಅನಿರೀಕ್ಷಿತ ವೆಚ್ಚಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳಬಹುದು.

ಧನು ರಾಶಿ (Sagittarius)

ವ್ಯಾಪಾರ ವಿಸ್ತರಣೆಯ ಯೋಜನೆಗಳು ಮುಂದುವರಿಯುವುದು. ಹೊಸ ಹೂಡಿಕೆಗಳನ್ನು ಮಾಡುವ ಮೊದಲು ಮಾರುಕಟ್ಟೆ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುವುದು ಮುಖ್ಯ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅತ್ಯುತ್ತಮ ಅವಕಾಶಗಳು ಸಿಗುವುದು. ಕುಟುಂಬ ಸದಸ್ಯರು ನಿಮ್ಮ ನಿರ್ಧಾರಗಳನ್ನು ಬೆಂಬಲಿಸುವರು. ಪರಸ್ಪರ ಗೌರವ ಮತ್ತು ಪ್ರೀತಿ ಹೆಚ್ಚಾಗುವುದು. ದೈಹಿಕ ಶಕ್ತಿಯ ಮಟ್ಟಗಳು ಹೆಚ್ಚಿರುತ್ತವೆ.

ಮಕರ ರಾಶಿ (Capricorn)

ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ನಿಂತು ಹೋಗಿದ್ದ ಕೆಲಸಗಳು ವೇಗವನ್ನು ಪಡೆಯುವುದು. ಸಂಶೋಧನೆ ಮತ್ತು ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗುವುದು. ಮನೆಯಲ್ಲಿನ ವಾತಾವರಣವು ಶಾಂತಿಯುತವಾಗಿರುವುದು. ಹಣದ ಸಮಸ್ಯೆಗಳು ಬಗೆಹರಿಯುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರೋಗ್ಯವು ಸಾಮಾನ್ಯವಾಗಿರುವುದು.

ಕುಂಭ ರಾಶಿ (Aquarius)

ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವಾಗುವುದು. ಹೊಸ ಸಂಪರ್ಕಗಳು ವ್ಯವಹಾರದ ಬೆಳವಣಿಗೆಯನ್ನು ಹೆಚ್ಚಿಸುವುದು. ನಿಮ್ಮ ಸೃಜನಶೀಲ ಚಿಂತನೆಗೆ ಮೆಚ್ಚುಗೆ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವರು. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಬಲವಾದ ಸಾಮರಸ್ಯ ಇರುವುದು. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗುವುದು.

ಮೀನ ರಾಶಿ (Pisces)

ಅನಿರೀಕ್ಷಿತವಾಗಿ ಹಣದ ಲಾಭವಾಗುವುದು. ಕೆಲಸದ ಒತ್ತಡ ಹೆಚ್ಚಾಗುವುದು. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಕುಟುಂಬದ ಸದಸ್ಯರೊಬ್ಬರಿಗೆ ನಿಮ್ಮ ಸಹಾಯದ ಅಗತ್ಯವಿರುವುದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಉಳಿತಾಯಕ್ಕೆ ಆದ್ಯತೆ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+