Horoscope Today: ದಿನ ಭವಿಷ್ಯ ಮಾರ್ಚ್ 4- ಈ ರಾಶಿಯ ಇಷ್ಟಾರ್ಥಗಳೆಲ್ಲವೂ ನೆರವೇರುವ ಸಮಯ
ಮಾರ್ಚ್ 4 ಮಂಗಳವಾರ ಕೆಲ ರಾಶಿಯವರಿಗೆ ಅದ್ಭುತ ದಿನವಾಗಿದೆ. ಈ ದಿನ ಗ್ರಹಗಳ ಸ್ಥಾನ ಹಲವಾರು ರಾಶಿಗಳಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ದಿನಾಂಕದಂದು ಅಶ್ವಿನಿ ನಕ್ಷತ್ರ ಮತ್ತು ಶುಕ್ಲ ಯೋಗದ ಸಂಯೋಜನೆ ನಡೆಯಲಿದೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮಾರ್ಚ್ 4 ಮೇಷ ರಾಶಿಯವರಿಗೆ ವಿಶೇಷವಾಗಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುವ ಸಮಯ ಇದಾಗಿದೆ. ಅಂದುಕೊಂಡಿದ್ದನ್ನು ನೀವು ಸಾಧಿಸುವಿರಿ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬದ ಜವಬ್ದಾರಿ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುವುದು.

ವೃಷಭ ರಾಶಿ
ವೃಷಭ ರಾಶಿಯವರಿಗೆ ಮಾರ್ಚ್ 4 ಅದ್ಭುತವಾಗಿದೆ. ಯಾರೊಂದಿಗೂ ವಾದಕ್ಕೆ ಹೋಗಬೇಡಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಸಂಬಂಧಗಳು ಉತ್ತಮವಾಗಿರುತ್ತವೆ.
ಮಿಥುನ ರಾಶಿ
ಮಾರ್ಚ್ 4 ಮಿಥು ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುವುದು. ಮನಸ್ತಾಪಗಳು ದೂರವಾಗುತ್ತವೆ. ನಿಮ್ಮ ಉತ್ತಮ ಕಾರ್ಯಗಳಿಗೆ ಫಲ ಸಿಗಲಿದೆ. ನಿಮಗೆ ಮಹಿಳಾ ಅಧಿಕಾರಿಯಿಂದ ಬೆಂಬಲ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳಿರುತ್ತವೆ. ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ನೀವು ಕೆಲಸದ ಸ್ಥಳದಲ್ಲಿ ಸೃಜನಶೀಲ ಪ್ರಯತ್ನಗಳನ್ನು ಪ್ರದರ್ಶಿಸುವಿರಿ. ಇದು ಮೆಚ್ಚುಗೆ ಪಡೆಯುತ್ತದೆ. ಕುಟುಂಬದ ಎಲ್ಲ ಸದಸ್ಯರೊಂದಿಗೆ ಹೊರಗೆ ಹೋಗಲು ಸಾಧ್ಯವಾಗುತ್ತದೆ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಮಾರ್ಚ್ 4 ಉತ್ತಮ ಫಲ ನೀಡಲಿದೆ. ಈ ದಿನ ನೀವು ಮಾಡಿದ ಹೂಡಿಕೆ ಫಲ ನೀಡುತ್ತದೆ. ನಿಮ್ಮ ಎಲ್ಲಾ ಕಾರ್ಯಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಅಡೆತಡೆಗಳು ಬರುತ್ತವೆ. ಅದನ್ನು ಎದುರಿಸುವ ಶಕ್ತಿಯನ್ನು ನೀವು ಪಡೆಯುತ್ತೀರಿ. ವೈಯಕ್ತಿಕ ಮತ್ತು ವ್ಯವಹಾರ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮಾರ್ಚ್ 4 ಸಂಬಂಧಗಳಲ್ಲಿ ಆತ್ಮೀಯತೆ ಕಂಡು ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಶೈಕ್ಷಣಿಕ ಪ್ರಯತ್ನಗಳು ಫಲಪ್ರದವಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಮಾನಸಿಕವಾಗಿ ಅತೃಪ್ತರಾಗುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಕನ್ಯಾ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಅತ್ತೆ-ಮಾವರಿಂದ ನೀವು ಒತ್ತಡವನ್ನು ಎದುರಿಸಬಹುದು. ಅದೆಲ್ಲವನ್ನೂ ನಿಭಾಯಿಸಲು ತಾಳ್ಮೆಯಿಂದ ವರ್ತಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಮಾಡಿದ ಪ್ರಯತ್ನಗಳಲ್ಲಿ ಯಶಸ್ಸು ಕಂಡುಬರಲಿದೆ. ಕುಟುಂಬ ಜೀವನದಲ್ಲಿ ಶಾಂತಿ ನೆಲೆಸಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಮಾರ್ಚ್ 4 ಅದ್ಭುತ ದಿನವಾಗಿದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸಗಳು ಫಲಪ್ರದವಾಗುತ್ತವೆ. ಬಡ ಮಕ್ಕಳಿಗೆ ಊಟ ಹಾಕಿ, ಹನುಮಾನ್ ಚಾಲೀಸಾ ಪಠಿಸಿ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಜೀವನ ಸುಖಮಯವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ದೂರದ ಸಂಬಂಧಿಯಿಂದ ನಿಮಗೆ ಬೆಂಬಲ ಸಿಗುವುದು. ವ್ಯವಹಾರ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಈ ದಿನ ತುಂಬಾ ಚೆನ್ನಾಗಿರುತ್ತದೆ.
ಧನು ರಾಶಿ
ವ್ಯವಹಾರದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ವೈಯಕ್ತಿಕ ಸಂಬಂಧಗಳಲ್ಲಿ ಮಾಧುರ್ಯ ಇರುವುದು. ಈ ದಿನ ಮಾಡಿದ ಕೆಲಸ ನಿಮ್ಮ ಕೈ ಹಿಡಿಯಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಮಾರ್ಚ್ 4 ಅದ್ಭುತವಾಗಿದೆ. ನಿಮ್ಮ ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ನಿಮ್ಮ ಮಾತನ್ನು ನಿಯಂತ್ರಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಒತ್ತಡ ಇರಬಹುದು. ಶನಿದೇವನ ಮಂತ್ರವನ್ನು ಹಾಗೂ ಹನುಮಾನ್ ಚಾಲೀಸ್ ವನ್ನು ಈ ದಿನ ಪಠಿಸುವುದು ಉತ್ತಮ ಫಲ ನೀಡುತ್ತದೆ.
ಕುಂಭ ರಾಶಿ
ನಿಮ್ಮ ಪ್ರೀತಿಪಾತ್ರರಿಂದ ನೀವು ಒತ್ತಡವನ್ನು ಎದುರಿಸಬಹುದು. ಆದರೆ ಚಿಂತಿಸಬೇಡಿ. ಎಲ್ಲವೂ ಸರಿ ಹೋಗಲು ಈ ದಿನ ಹನುಮಾನ್ ಚಾಲೀಸ್ ಪಠಿಸಿ. ಆರ್ಥಿಕವಾಗಿ ನೀವು ಉತ್ತಮ ಸ್ಥಿತಿಯಲ್ಲಿರಿ. ಕುಟುಂಬದ ಸದಸ್ಯರೊಬ್ಬರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗುತ್ತೀರಿ. ಅನುಪಯುಕ್ತ ಕೆಲಸಗಳಲ್ಲಿ ತೊಡಗಿಕೊಳ್ಳಬೇಡಿ.
ಮೀನ ರಾಶಿ
ನಿಮ್ಮ ಸಹೋದರ ಸಹೋದರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಸಂಬಂಧಗಳಲ್ಲಿ ನಿಕಟತೆ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications