Horoscope Today: ದಿನ ಭವಿಷ್ಯ ಫೆಬ್ರವರಿ 25- ಈ ರಾಶಿಗೆ ಆಂಜನೇಯನ ಅನುಗ್ರಹದಿಂದ ಸುವರ್ಣ ಸಮಯ
ಫೆಬ್ರವರಿ 25 ಕೆಲ ರಾಶಿಯವರಿಗೆ ಶುಭ ದಿನವಾಗಿದೆ. ಈ ದಿನ ನಿಮ್ಮ ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಸಿಗುತ್ತದೆ. ಉದ್ಯೋಗ, ವ್ಯವಹಾರ, ಆರ್ಥಿಕ ಲಾಭಗಳು ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುವಿರಿ. ಈ ದಿನದಂದು ದಾನ ಮತ್ತು ಶುಭ ಕಾರ್ಯಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಅಲ್ಲದೆ ಉಪವಾಸ ವ್ರತ ಕೈಗೊಳ್ಳುವುದಕ್ಕೂ ವಿಶೇಷ ಫಲ ಸಿಗಲಿದೆ. ಹಾಗಾದರೆ ಫೆಬ್ರವರಿ 25 ಮಂಗಳವಾರ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಫೆಬ್ರವರಿ 25 ಮೇಷ ರಾಶಿಯವರಿಗೆ ಸಕಲ ಐಶ್ವರ್ಯ ಸಿಗಲಿದೆ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಈ ದಿನ ಕೈಗೊಂಡ ಪ್ರವಾಸ ಸಂತೋಷ ನೀಡಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಇಂದು ಶುಭ ಫಲ ಸಿಗಲಿದೆ.

ವೃಷಭ ರಾಶಿ
ಮಂಗಳವಾರ ವೃಷಭ ರಾಶಿಯವರಿಗೆ ಅಷ್ಟೊಂದು ಉತ್ತಮವಾಗಿಲ್ಲ. ಅಪಾಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಸಂಬಂಧಗಳಲ್ಲಿ ಒತ್ತಡ ಎದುರಿಸುವಿರಿ. ವಿಘ್ನವಿನಾಯಕನ ಆಶೀರ್ವಾದಿಂದ ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಬೆಳಗ್ಗೆ ಬಡವರಿಗೆ ಬಟ್ಟೆ ದಾನ ಮಾಡಿ.
ಮಿಥುನ ರಾಶಿ
ಮಿಥುನ ರಾಶಿಯವರು ಫೆಬ್ರವರಿ 25ರಂದು ವ್ಯವಹಾರದಲ್ಲಿ ಯಶಸ್ಸು ಕಾಣುತ್ತಾರೆ. ನಿಮ್ಮ ಆರೋಗ್ಯ ಸುಧಾರಿಸಲಿದೆ. ಎಲ್ಲವನ್ನೂ ಎದುರಿಸುವ ಶಕ್ತಿಯನ್ನು ನೀವು ಪಡೆಯುವಿರಿ. ಹಣದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಬೆಳಿಗ್ಗೆ ಶನಿದೇವನನ್ನು ಪೂಜಿಸಿ.
ಕರ್ಕಾಟಕ ರಾಶಿ
ನಿಮ್ಮ ಎಲ್ಲಾ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆಹ್ಲಾದಕರ ಪ್ರಯಾಣಕ್ಕೆ ಅವಕಾಶಗಳು ದೊರೆಯುತ್ತವೆ. ಆಸ್ತಿ ವಿಷಯಗಳಲ್ಲಿ ಒತ್ತಡ ಎದುರಿಸುವಿರಿ. ನಿಮ್ಮ ಎಲ್ಲಾ ಪ್ರಯತ್ನಗಳು ನಿಮ್ಮ ಕೈ ಹಿಡಿಯಲಿವೆ. ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ.
ಸಿಂಹ ರಾಶಿ
ಫೆಬ್ರವರಿ 25ರಂದು ಸಿಂಹ ರಾಶಿಯವರಿಗೆ ಮಿಶ್ರ ಫಲ ಸಿಗಲಿದೆ. ನಿಮ್ಮ ಮಾತನ್ನು ನಿಯಂತ್ರಿಸಿ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗಲಿದೆ. ಬೆಳಿಗ್ಗೆ ಸೂರ್ಯನ ಮಂತ್ರವನ್ನು ಪಠಿಸಿ ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸಿ.
ಕನ್ಯಾ ರಾಶಿ
ಈ ದಿನ ಕನ್ಯಾ ರಾಶಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಒತ್ತಡ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಒತ್ತಡ ಉಂಟಾಗಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಬೆಳಿಗ್ಗೆ ಹಸುವಿಗೆ ಆಹಾರ ನೀಡಿ.
ತುಲಾ ರಾಶಿ
ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ನೀವು ಯಾವುದೋ ಭಯದಿಂದ ಬಳಲುತ್ತಿದ್ದರೆ ಆ ಭಯ ದೂರವಾಗಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಯಿಂದ ನೀವು ಒತ್ತಡವನ್ನು ಎದುರಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಹೆಚ್ಚಾಗಲಿದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ನಿಮ್ಮ ಪೋಷಕರ ಸಹಕಾರದಿಂದ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಫೆಬ್ರವರಿ 25ರಂದು ಸಾಮಾಜಿಕ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ. ಲಕ್ಷ್ಮೀದೇವಿಯ ದೆಸೆಯಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕ ಜೀವನ ಸುಧಾರಿಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಈ ದಿನ ಹನುಮಾನ್ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿ.
ಧನು ರಾಶಿ
ಮಂಗಳವಾರ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆಧ್ಯಾತ್ಮದಲ್ಲಿ ನಂಬಿಕೆ ಇರಲಿದೆ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದೆ.
ಮಕರ ರಾಶಿ
ಫೆಬ್ರವರಿ 25 ಮಕರ ರಾಶಿಯವರು ತೆಗೆದುಕೊಂಡ ನಿರ್ಧಾರಗಳು ಉತ್ತಮವಾಗಿರುತ್ತವೆ. ಕುಬೇರ ದೇವನ ಆಶೀರ್ವಾದ ಈ ದಿನ ನಿಮ್ಮ ಮೇಲೆ ಇರಲಿದೆ. ಎಲ್ಲಾ ಸಮಸ್ಯೆಗಳಿಗೆ ಉತ್ತರ ಸಿಗಲಿದೆ. ಈ ದಿನ ಅನಗತ್ಯವಾಗಿ ಓಡಾಡಬೇಕಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಕುಂಭ ರಾಶಿ
ಈ ದಿನ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಕೌಟುಂಬಿಕ ಒತ್ತಡ ದೂರವಾಗಲಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಬೆಳಿಗ್ಗೆ ಶನಿದೇವನ ಮಂತ್ರವನ್ನು ಪಠಿಸಿ. ಹಸಿದ ಪ್ರಾಣಿಗಳಿಗೆ ಆಹಾರ ನೀಡಿ.
ಮೀನ ರಾಶಿ
ಫೆಬ್ರವರಿ 25 ಮಂಗಳವಾರ ಮೀನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಪೂರ್ಣಗೊಳ್ಳುತ್ತವೆ. ವ್ಯವಹಾರದಲ್ಲಿ ಖ್ಯಾತಿ ಪಡೆಯುವಿರಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಈ ದಿನ ಹಸುವಿಗೆ ಆಹಾರ ನೀಡಿ, ಶನಿ ಮಂತ್ರವನ್ನು ಪಠಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications